ನನ್ನ ಹಾಡು ನನ್ನದು....

ನನ್ನ ಹಾಡು ನನ್ನದು....

೧)
ಬಾಳಿದರೂ ನಿನ್ನೊಡನೆ
ಬಾಡಿದರೂ ನಿನ್ನೊಡನೆ
ಒಡಲ ಹೊಕ್ಕಿ ನೋಡು
ಕಡಲ ಪ್ರೇಮ ನನ್ನಲ್ಲಿ ಉಕ್ಕುತಿದೆ

೨)
ಬದುಕಿನಲಿ ತುಳಿದಿಹೆನು
ಕೆಲವು ಹೆಜ್ಜೆ
ಅಗಾಗ ನೋಡುತ ಹಿಂದೆ
ನೊಂದೆ ಬೆಂದೆ
ಎದ್ದೆ ಬಿದ್ದೆ
ಆದರೂ ಗುರಿ ಒಂದೆ
ಸಾಗಬೇಕು ಮುಂದೆ

೩)

ಕನಸು ಕಾಣಬೇಕು
ನನಸಾಗುತ್ತದೆಯೆಂದಲ್ಲ
ಮನಸು ಹಸನಾಗುವುದೆಂಬ
ಬಯಕೆಯಿಂದ

೪)

ಆಳುವವರು ಉಳ್ಳವರ
ಕೈಗೊಂಬೆಯಾಗಿರಲು
ಇಲ್ಲದವರ ಅಳುವ
ಕೇಳುವವರಾರಯ್ಯ ಕೇಳಾ ಭರತೇಶ

೫)

ದೂರದ ಊರಲ್ಲಿ
ಹಸಿರಿನ ಹೊಲದಲ್ಲಿ
ತಂಪಾದ ಗಾಳೀಲಿ
ತೇಲಿಹೋದೆ ನಾ
ನನ್ನವಳ ಜೊತೆಯಲ್ಲಿ

Rating
No votes yet

Comments