ನಮನ-೦೨: ಒಂದು ಕೊಲೆ..
ಮೊನ್ನೆ ನನ್ನಿಂದ ಒಂದು ಅಪಚಾರ ನಡೆದು ಹೋಯಿತು.
ಜೀವನದಲ್ಲಿ ಮೊದಲ ಬಾರಿ ನಾನೊಂದು ಕೊಲೆ ಮಾಡಿದೆ.
ಮೊನ್ನೆ ತಲೇಲಿ ಏನೊ ತುಂಬ್ಕೊಂಡು, ಕಾರಿನಲ್ಲಿ ಮನೆಗೆ ಬರ್ತಾ ಇರಬೇಕಾದ್ರೆ, ಒಂದು ಅಳಿಲು ಓಡೊಡಿ ಬಂದು ನನ್ನ ಕಾರಿನ ಹಿಂದಿನ ಚಕ್ರಕ್ಕೆ ಸಿಲುಕಿತು.
ಏನೋ ಓಡಿ ಬಂದುದು ನನಗೆ ಅರಿವಾಯಿತು,
ಆದರೆ ಅದು ಕಾರಿನಡಿ ಸಿಕ್ಕಿ ಸಾಯಬಹುದು ಅಂತ ಅನಿಸಿರಲಿಲ್ಲ.
ಕಾರು ವಾಪಾಸು ತಿರುಗಿಸಿ ಏನಂತ ನೋಡಲು ಹೋದೆ
ಬೇಜಾರಾಗಿ ಬಿಟ್ಟಿತ್ತು.
ಯಾರದಾದರೂ ಬೆಕ್ಕೊ, ನಾಯಿಯೋ ಆಗಿದ್ದರೆ, ಏನಾಗಬಹುದು ಎಂಬ ಹೆದರಿಕೆ,
ಇನ್ನೂ ಸತ್ತಿರದಿದ್ದರೆ, ನೀರೇನಾದರೂ ಸುರಿದು ಬದುಕಿಸುವ ಪ್ರಯತ್ನ ಮಾಡಬಹುದೇನೋ ಅನ್ನೋ ಆಶೆ,
ಹಾವೇನಾದರೂ ಆದರೆ, ಎಲ್ಲರಿಂದ ಮುಚ್ಚಿಡಬೇಕಾದ ಅನಿವಾರ್ಯತೆ (ಇಲ್ಲದಿದ್ದರೆ, ಅದರ ಸಂಸ್ಕಾರದ ಖರ್ಚು ನಮ್ಮ ತಲೆಗೆ ಬರುತ್ತೆ)
ಎಲ್ಲ ತುಂಬಿಕೊಂಡು ಹೋಗಿ ನೋಡಿದರೆ, ಅಳಿಲು ಪ್ರಾಣ ಬಿಟ್ಟಾಗಿತ್ತು ಅನಿಸ್ತು.
ಮರುದಿನ ನಮ್ಮ ಸ್ನೇಹಿತರು ಕೇಳಿದ್ರು, 'ಸಂಸ್ಕಾರ ಆಯ್ತೇನ್ರಿ?'.
ನಾ ಹೇಳ್ದೆ, '೫೦% ಆಗಿದೆ.. ಉಳಿದದ್ದು ಇವತ್ತು ಆಗಿರುತ್ತೆ...'
ಎರಡು ದಿನಗಳಲ್ಲಿ ಅದರ ಸಂಸ್ಕಾರಾನೂ ಆಗ್ಬಿಡ್ತು.
ಹೋಗೋ ಬರೋ ವಾಹನಗಳೆಲ್ಲ ಅದರ ದೇಹಾನ ಮಾಯ ಮಾಡಿಬಿಟ್ಟವು.
ಸತ್ತ ಅಳಿಲಿನ ಮುಖ ಇನ್ನೂ ಕಾಡುತ್ತಿದೆ.
ಇತೀ,
ಉಉನಾಶೆ - ಜುಲೈ ೯, ೨೦೦೬ - ೦೨:೫೮ ಪೂರ್ವಾಹ್ನ