ನಮನ-೦೬: ಸಬ್ ವೇ ಮತ್ತು ನಮ್ಮ ಕವಿತೆಗಳು

ನಮನ-೦೬: ಸಬ್ ವೇ ಮತ್ತು ನಮ್ಮ ಕವಿತೆಗಳು

ಬಿಳಿಯದಿರಲೆ, ಗೋಧಿಯದೆ?

ಎಂದೆನುತ ಸೆಳೆದ ಅ ಬ್ರೆಡ್ಡಿನೆದೆ

ಸೀಳುತ್ತ...

 

ಸೀಳಿನಲಿ ಮಾಂಸ ಮಡ್ಡಿ,

ಬೇಡದಿರೆ ಕಾಳು ಕಡ್ಡಿ

ತುಂಬುತ್ತ...

 

ಚೀಸಿನಲಿ, ಸಾಸಿನಲಿ

ಕೆನೆಬಣ್ಣ ರ್‍ಯಾಂಚಿನಲಿ

ನೆನೆಸುತ್ತ...

 

ಒಂದಡಿಯ ಸಬ್ ವೇಯನು

ಅಡ್ಡಡ್ಡ ಸಿಗಿಯುವುದನು

ನೋಡುತ್ತ...

 

ನಿಂತಾಗ ನೆನಪಾಗುವುದು, ನಮ್ಮ ಕವಿತೆಗಳು!!!

 

(ಸೂಚನೆ:

೧. ಇಲ್ಲಿ ಲೋದ್ಯಾಶಿ ಯವರ ಲೋಹಿತಂತ್ರಾಂಶ ಬಳಸಿದ್ದೇನೆ.

೨. ಸಬ್ ವೇ ಸ್ಯಾಂಡ್ ವಿಚ್ ಬಗ್ಗೆ http://en.wikipedia.org/wiki/Subway_(restaurant) ಇಲ್ಲಿ ವಿವರಗಳಿವೆ.)

 

Rating
No votes yet

Comments