ನಮ್ಮೂರ ಸರಕಾರವೆಂದರೇ, ನಮ್ಮ ಗ್ರಾಮ ಪಂಚಾಯತಿ

4.25

ಗಾಂಧೀಜಿಯವರ ರಾಮ ರಾಜ್ಯ ಅಥವಾ ಗ್ರಾಮ ರಾಜ್ಯದ ಕನಸಿನಂತೆ ನಮ್ಮನ್ನಾಳುವ ಪ್ರಭುಗಳು ಎಂದು ಹೇಳುವ ಎರಡು ಹಂತದ ಸರಕಾರದ ಪ್ರತಿನಿಧಿಗಳಲ್ಲಿ ಕೆಲವು ಪ್ರಮಾಣಿಕರ ಪ್ರಯತ್ನದಿಂದ ಕೇಂದ್ರಿಕೃತವಾದ ಅಧಿಕಾರವನ್ನು ಸಂವಿಧಾನದ ತಿದ್ದುಪಡಿಯೊಂದಿಗೆ ವಿಕೇಂದ್ರಿಕಣಗೊಳಿಸಿ ಗ್ರಾಮೀಣ ಭಾರತದಲ್ಲಿ ಮೂರು ಹಂತದ ಪಂಚಾಯತ್ ಅಥವಾ ಸ್ಥಳಿಯ ಸರಕಾರವನ್ನು ಕೆಳಹಂತದಲ್ಲಿ ಜಾರಿಗೆ ತಂದಿರುವುದು ಪ್ರಜಾಪ್ರಭುತ್ವ ರಾಷ್ಟ್ರದ ಹೆಗ್ಗಳಿಕೆ ಹಾಗೂ ಪ್ರಶಂಸನಿಯವಾಗಿದೆ. ಸಂವಿಧಾನದ 73, 74 ನೇ ತಿದ್ದುಪಡಿಯು ವೀಕೆಂದ್ರಿರಣ ಹಾಗೂ ಸ್ಥಳಿಯ ಸರಕಾರ ಅಥವಾ ಗ್ರಾಮೀಣ ಭಾರತದ ಬಗ್ಗೆ ಕಳಕಳಿಯಿರುವ ಬುದ್ದಿವಂತರು,ಹೋರಾಟಗಾರರು,ಸಮಾಜವಾದಿಗಳು, ಇತರ ಗ್ರಾಮೀಣ ಕಳಕಳಿಯಿರುವರು ಅಧಿಕಾರ ವಿಕೇಂದ್ರಿಕರಣದ ಜೋತೆಗೆ ಆರ್ಥಿಕ ವಿಕೇಂದ್ರಿಕರಣ ಹಂಚಿಕೆಯಾಗಲಿ ಎನ್ನುವ ನಿಲುವಿಗೆ ಸ್ವಲ್ಪಮಟ್ಟಿಗೆ ರಾಜ್ಯ ಹಾಗೂ ಕೇಂದ್ರಸರಕಾರಗಳು ಸ್ಥಳಿಯ ಸಂಸ್ಥೆಗಳಿಗೆ ಹಣಹಂಚಿಕೆಗಾಗಿ ಹಣಕಾಸು ಆಯೋಗಗಳನ್ನು ರಚಿಸಿ ಅದರನ್ವಯ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮೂರು ಹಂತದ ಪಂಚಾಯತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದು ಗಾಂಧೀಜಿಯವರ ರಾಮರಾಜ್ಯದ ಕನಸಿನೆಡೆಗೆ ನಮ್ಮ ಸರಕಾರಗಳು ಇಟ್ಟ ಉತ್ತಮ ಹೆಜ್ಜೆಯಾಗಿದೆ. ಸದರಿ ಮೂರು ಹಂತಗಳ ಪಂಚಾಯತ ವ್ಯವಸ್ಥೆಯಲ್ಲಿ ಸ್ಥಳಿಯ ಸರಕಾರವೆಂದು ಗುರುತಿಸಲ್ಪಡುವ ಗ್ರಾಮ ಪಂಚಾಯತಿಗೆಳಿಗೆ 1993 ರ ಪಂಚಾಯತ್ ರಾಜ್ ಕಾಯಿದೆಯನ್ವಯ ಹಾಗೂ  ನಮ್ಮ ರಾಜ್ಯ ಸರಕಾರ ಪಂಚಾಯತ್ ರಾಜ್ ಕಾಯಿದೆಯ ತಿದ್ದುಪಡಿಗಾಗಿ ಮಾಜಿ ಸ್ಪೀಕರ್, ಹಾಲಿ ಶಾಸಕರಾದ  ಶ್ರೀ ರಮೇಶಕುಮಾರ ನೆತೃತ್ವದ ಪಂಚಾಯತ ರಾಜ್ ಕಾಯಿದೆ ತಿದ್ದುಪಡಿ ಸಮೀತಿಯ ವರದಿಯಲ್ಲಿನ ಕೆಲವು ಅಂಶಗಳನ್ನು ತೆಗೆದುಕೊಂಡು ಸಮಯಾನುಸಾರ ಚುನಾವಣೆಯನ್ನು ನಡೆಸಿ ಇಂದು ದಿನಾಂಕ:05-06-2015 ರಂದು ಮತ ಎಣಿಕೆಯನ್ನು ಮುಗಿಸಲಾಯಿತು. ಇನ್ನೇನು ಅಧ್ಯಕ್ಷರ/ಉಪಾಧ್ಯಕ್ಷರ ಮಿಸಲಾತಿ ನಿಗದಿಪಡಿಸಿ ಚುನಾವಣೆ ಮೂಲಕ ಆಯ್ಕೆಯೊಂದೆ ಬಾಕಿಯಿರುವ ವಿಷಯವಾಗಿದೆ. ನಮ್ಮ ದೇಶದಲ್ಲಿ ನನಗೆ ಗೊತ್ತಿರುವ ಮಟ್ಟಿಗೆ ಅಧಿಕಾರಯುತವಾಗಿ ಕಾನೂನುಗಳನ್ನು,ಆದೇಶಗಳನ್ನು ರಚಿಸಿ ಆದೇಶ ಹೊರಡಿಸಿ ಜಾರಿಗೆ ತರುವ ಅಧಿಕಾರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಇದೆ ಆದರೇ ಹಣಕಾಸು ವಿಷಯದಡೆಗೆ ನೋಡಿದಾಗ ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೆ ಇರುವ ಆರ್ಥಿಕ ಅಧಿಕಾರದನ್ವಯ ಗ್ರಾಮ ಪಂಚಾಯತಿಯ ಎಲ್ಲಾ ಹಣಕಾಸು ವ್ಯವಹಾರಗಳ ಪ್ರಕಾರ ಬಿಲನ್ನು ಪಾಸುಮಾಡಿ ಚಕ್ ಗಳಿಗೆ ಸಹಿಮಾಡುವ ಅಧಿಕಾರವಿರುವುದು ಕೇವಲ ಗ್ರಾಮ ಪಂಚಾಯತಿಗ ಅಧ್ಯಕ್ಷರಿಗೆ ಮಾತ್ರ  ಆರ್ಥಿಕ ವಿಕೇಂದ್ರಿಕರಣಕ್ಕೆ ಹಿಡಿದ ಕನ್ನಡಿಯಾಗಿದೆ. ಮೇಲೆ ತಿಳಿಸಿದ ರೀತಿಯಲ್ಲಿಯೇ ಸದ್ಯ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಾಗಿದೆ.

ನಮ್ಮ ರಾಜ್ಯ ಸರಕಾರವು ಎರಡು ಹಂತಗಳಲ್ಲಿ ಚುನಾವಣೆಯನ್ನು ಘೋಷಣೆಮಾಡಿದಾಗ ಹಾಲಿ ರಾಜ್ಯ ಸರಕಾರವು ಸೇರಿ ಪ್ರತಿಪಕ್ಷಗಳು ನಮ್ಮ ಪ್ರತಿನಿದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅರಿಸಿತನ್ನಿ ಎನ್ನುವ ಸಂದೇಶವನ್ನು ಎಲ್ಲಾ ಪಕ್ಷಗಳ ಮುಖಂಡರು ಅನೇಕ ಸಭೆ ಸಮಾರಂಬಗಳಲ್ಲಿ ಜಗಜಾಹಿರಪಡಿಸಿದರು, ವಾಸ್ತವವಾಗಿ ಗ್ರಾಮ ಪಂಚಾಯತಿ ಚುನಾವಣೆ ಪಕ್ಷರಹಿತವಾದ ಚುನಾವಣೆಯಾಗಿದೆ ನಮ್ಮ ಚುನಾವಣಾ ಅಯೋಗ ಶಿಸ್ತುಬದ್ಧವಾಗಿ ಚುನಾವಣೆಯನ್ನು ನಡೆಸಿತು ಆದರೇ ನಮ್ಮ ಪಕ್ಷದ ಬೆಂಬಲಿತ ಅಬ್ಯರ್ಥಿಗಳನ್ನು ಆಯ್ಕೆಮಾಡಿ ತನ್ನಿ ಎಂದು ಬಹುತೇಕ ಎಲ್ಲಾ ಸಂಸದರು ಹಾಗೂ ಶಾಸಕರು ಹೇಳಿಕೆ ನೀಡಿದರು ಹಲವು ಕಡೆ ಚುನಾಣೆಗೆ ಸ್ಪರ್ದಿಸದೆ ಅವಿರೋದ ಆಯ್ಕೆಯಾಗಬೇಕಾದರೆ ಆಯಾ ಗ್ರಾಮದ ಮುಖಂಡರು ಹೇಳಿದಷ್ಟು ಮೊತ್ತವನ್ನು ಗ್ರಾಮದ ದೇಗುಲಕ್ಕೆ ಅಥವಾ ಇನ್ನಾವುದೋ ಸಂಸ್ಥೆಗೆ ಹರಾಜು ಹಾಕುವ ಮೂಲಕ ವಿಕೇಂದ್ರಿಕರಣ ವ್ಯವಸ್ಥೆ ಹರಣಮಾಡಲಾಯಿತು. ಕೆಲವು ಕಡೆ ಶಾಸಕರ ರಾಜಿ ಪಂಚಾಯತಿಯ ಮೂಲಕ ಎರಡು ಬಣಗಳಿಗೆ ಹಂಚಿಕೆ ಮಾಡಿ ಅವಿರೋದ ಅಯ್ಕೆ ಮಾಡಿಕೊಳ್ಳಿ ಎನ್ನುವ ಸಲಹೆಯಂತೆ ನಂತರ ಇನ್ನಾರೋ ಸ್ಪರ್ದಿಸದಲ್ಲಿ ಅವರಿಗೆ ಇಂತಿಷ್ಟು ಹಣವನ್ನು ನೀಡಿ ನಾಮಪತ್ರ ಹಿಂತೆಗೆದುಕೊಳ್ಳುವಲ್ಲಿ ಸಫಲಾರಾದರು ಒಂದಂತು ಸತ್ಯ ಸಣ್ಣ ಸಣ್ಣ ಗ್ರಾಮಗಲ್ಲಿ ಚುನಾವಣೆಯಿಂದ ಎಂಥೆಂತಾ ವೈಷಮ್ಯಗಳಾಗುತ್ತವೇಂದರೇ ಆಸ್ತಿಗಾಗಿ,ಹಣಕ್ಕಾಗಿ,ಮಹಿಳೆಯರ ವಿಷಯದಲ್ಲಾಗುವ ಕೋಲೆಗಳಂತೆ ಗ್ರಾಮ ಪಂಚಾಯತ ಚುನಾವಣೆಗಾಗಿ ಹುಟ್ಟಿಕೊಂಡ ವೈಷಮ್ಯದಿಂದ ಇಲ್ಲು ಕೂಡಾ ಕೋಲೆಯಲ್ಲಿ ಅಂತ್ಯವಾದ ಘಟನೆಗಳು ಅನೇಕ ಮೊನ್ನೆಯ ಚುನಾವಣಾ ಪೂರ್ವದಲ್ಲಿ ಚುನಾವಣಾ ಪ್ರಕ್ರಿಯೇಯಲ್ಲಿಯ ಅವಧಿಯಲ್ಲಿ ರಾಜ್ಯದ ಹಲವುಕಡೆ ಅಮಾಯಕರ ಕೋಲೆಗಳಾದವು ಇಲ್ಲಿ ಸೂಕ್ಷಮವಾಗಿ ಗಮನಿಸಿದಾಗ ಕಾರಣಗಳು ಹಲವಾರು ಇರಬಹುದು ಚುನಾವಣೆಯೇ ಜಗಳಕ್ಕೆ ವೇದಿಕೆಯಾಗಿರುವದು ಮಾತ್ರ ಸತ್ಯ. ನಮ್ಮ ರಾಜ್ಯದಲ್ಲಿ ಸುಮಾರು 1 ಲಕ್ಷ ಗ್ರಾಮ ಪಂಚಾಯತ ಸದಸ್ಯರನ್ನು ಈ ಚುನಾಣೆ ಮೂಲಕ ನಾವು ಅಯ್ಕೆ ಮಾಡುಬೇಕಾಗಿರುವುದು ಪಟ್ಟಣ ಮತ್ತು ನಗರಗಳನ್ನು ಹೊರತುಪಡಿಸಿ ರಾಜ್ಯ ಗ್ರಾಮೀಣರ ಕೆಲಸವಾಗಿದೆ. 1 ಲಕ್ಷ ಜನ ಸದಸ್ಯರಲ್ಲಿ ಕೆಲವರು ನ್ಯಾಯಯುತವಾಗಿ ಮತ್ತು ಕೆಲವರು ವ್ಯಕ್ತಿಗತವಾಗಿ ಉತ್ತಮ ಕೆಲಸಗಳನ್ನು ನಿರ್ವಹಿಸುವದರೊಂದಿಗೆ ಆಯ್ಕೆಯಾಗಿರಬಹುದು ಬಹುತೆಕ ಉಳಿದ ಸದಸ್ಯರುಗಳು ಹಣ-ಹೆಂಡ-ಜೋತೆಗೆ ಆಯ್ಕೆಯಾಗಿ ಬಂದಮೇಲೆ ಮಾಡುವ ಸುಳ್ಳು ಬರವಸೆಯೊಂದಿಗೆ ಆಯ್ಕೆಯಾಗಿ ಬಂದಿರುತ್ತಾರೆ. ಇಂಥವರಿಂದ ನಾವು ನೀರಿಕ್ಷಸಿದ ಯಾವುದೆ ಕೆಲಸ ಕಾರ್ಯಗಳು ಆಗದೇ ಹೋದಾಗ ನಾವುಗಳು ಹಲವರನ್ನು ಶಪಿಸುತ್ತಾ ಐದು ವರ್ಷಗಳವರೆಗೆ ದಿನದೂಡುತ್ತೇವೆ.

(ಮುಂದುವರೆಯುವುದು)

Taxonomy upgrade extras: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ. ಎಂತಹ ಉತ್ತಮ ವ್ಯವಸ್ಥೆಯಾದರೂ ಜನರಲ್ಲಿ ತಿಳುವಳಿಕೆ, ಜಾಗೃತಿ ಮೂಡದಿದ್ದರೆ ವಿಫಲವಾಗುತ್ತದೆ. ಮುಂದುವರೆಸಿರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರವರೆ ನನ್ನ ಲೇಖನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಿರಿ ಅದೆ ತೆರನಾಗಿ ಲೇಖನ ಮುಂದುವರೆಸಲು ಸೂಚಿಸಿದ್ದಕ್ಕೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಮರೇಶ್ ಅವರೇ ನಿಮ್ಮ ಬರಹಕ್ಕೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಶ್ರೀಯುತ ಕವಿ ನಾಗರಾಜ್ ಸಾರ್ ಅವರು ನಿವೃತ್ತ ತಹಸೀಲ್ದಾರರು. ಅವರಿಗೆ ಈ ಪಂಚಾಯಿತಿ ಅಧಿಕಾರ ವ್ಯಾಪ್ತಿ -ಯೋಜನೆ ಇತ್ಯಾದಿ ಇತ್ಯಾದಿಗಳಲ್ಲಿ ಅನುಭವ ಇದೆ. ಇನ್ನೂ ನಿಮ್ಮ್ ಬರಹ ಪಂಚಾಯಿತಿಗಳ ಕಾರ್ಯ ವೈಖರಿ ಅವುಗಳ ಉಗಮ -ಉಪಯುಕ್ತತೆ ಬಗ್ಗೆ ಸರಳ ನಿರೂಪಣೆ ಹಿಡಿಸಿತು.
ಮೊನ್ನೆ ನಡೆದ ಚುನಾವಣೆಗಿಂತ ಮುಂಚೆ ಹಲವು ಚುನಾವಣೆಗಳಲ್ಲಿ ಇದು ಪಕ್ಷ ರಹಿತ ವ್ಯಕ್ತಿ ಕೇಂದ್ರಿತ ಸ್ಪರ್ಧೆ ಆಗಿತ್ತು, ಆದ್ರೆ ಯಾವಾಗ ಕೇಂದ್ರ ಸರ್ಕಾರ ವರ್ಷಕ್ಕೆ 3 ಕೋಟಿ ಪ್ರತಿ ಗ್ರಾ ಪಂಚಾಯಿತಿಗೆ ಮತ್ತು ರಾಜ್ಯ ಸರ್ಕಾರ 5 ವರ್ಷ ಅದ್ಯಕ್ಷ ಅವಧಿ ಮಾಡಿದರೋ ಆಗಲೇ ಪಕ್ಷಗಳು -ಅಧಿಕಾರ ದಾಹಿಗಳು ಹಳ್ಳಿಗಳಿಗೆ ನುಗ್ಗಿ ಹಳ್ಳಿ ಜನರ ಮನೋಭಾವನೆ ಕಹಿ ಮಾಡಿದ್ರು.. ಲಕ್ಷ ಲಕ್ಷ ಮನೆ ಶೌಚಾಲಯ ಆಗಿವೆ ಆಗುತ್ತಿವೆ ಎನ್ನುವರು-ಒಮ್ಮೆ ಯಾವ್ದಾರ ಹಳ್ಳಿಗಳಿಗೆ ಭೇಟಿ ಕೊಟ್ಟರೂ ತಿಳಿಯುತ್ತೆ..ಅದರ ಹಣ ಏನಾಯ್ತು ಅಂತ...!! ಅವ್ಯವಹಾರ ತಡೆಯಲು ಪಿ ಡಿ ಓ ,ಒಂಬುಡ್ಸ್‌ಮನ್,ಜಿ ಪಿ ಎಸ್ ಏನೇನೆಲ್ಲ ಮಾಡಿದರೂ ಅದು ಕಸ್ಟ ಸಾಧ್ಯ ಆಗಿದೆ.. ಇನ್ನೂ ಯಾರಾದರೂ ವಿದ್ಯಾವಂತರು ಧೈರ್ಯ ಮಾಡಿ ಆರ್ ಟಿ ಐ ಅರ್ಜಿ ಹಾಕಿ(ಅದ್ರಲ್ಲಿ ವಿಳಾಸ ಫೋನು ನಂಬರ್ ಕಡ್ಡಾಯವಾಗಿ ಕೊಡಬೇಕು) ಅವ್ಯವಹಾರ ಬಯಲಿಗೆ ಎಳೆದು ಪತ್ರಿಕೆಯಲ್ಲಿ ಹಾಕಿದರೆ ಅವರ ಕಥೆ ಗೋವಿಂದಾ ಗೋವಿಂದ-ಅದ್ಕೆ ಮೊನ್ನೆ ನಡೆದ ಕೊಪ್ಪಳದ ಯಲ್ಲ ಲಿಂಗನ ಘಟನೆ ನೆನಪಿಸಿಕೊಳ್ಳಿ. ಒಮ್ಮೊಮ್ಮೆ ಅನ್ನಿಸುತ್ತೆ ಹಳ್ಳಿಗಳು ಉದ್ಧಾರ ಆಗಲು ಗ್ರಾಮ ಪಂಚಾಯಿತಿ ಬದಲಿಗೆ ಸರ್ಕಾರವೇ ನೇರವಾಗಿ ಜಿಲ್ಲಾ ತಾಲೂಉಕು ಪಂಚಾಯ್ತಿಗಳ ಮೂಲಕ ಆಡಳಿತಾಧಿಕಾರಿ ನೇಮಿಸಿ ಆಡಳಿತ ನಡೆಸಬಹುದಲ್ಲ ಅಂತ..
ಮುಂದಿನ ಭಾಗಗಳ ನಿರೀಕ್ಷೆಯಲ್ಲಿ
ನನ್ನಿ
ಶುಭವಾಗಲಿ
\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟ ಸರ್ ಕವಿ ನಾಗರಾಜರವರ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು ತಾವು ನೀಡಿದ ಪ್ರತಿಕ್ರಿಯೆಯು ಉತ್ತಮವಾಗಿದೆ ನನ್ನ ಲೇಖನದಲ್ಲಿನ ನಿರಾಶವಾದವನ್ನು ಆಶವಾದಿಯನ್ನಾಗಿಸಲು ಕವಿನಾಗರಾಜ ಸರ್ ತಿಳಿಸಿದಂತೆ ಜನರಿಗೆ ವ್ಯವಸ್ಥೆಯ ಬಗ್ಗೆ ಜಾಗೃತಿ ಹಾಗೂ ಅರಿವುಮಾಡಿಸು ಪ್ರಯತ್ನವಾಗಿದೆಯೆಂದು ತಿಳಿಸಿದ್ದಾರೆ ಮಾನ್ಯರೆ ಕವಿನಾಗರಾಜ ಸರವರು ಹಾಗೂ ತಮ್ಮ ಗಮನಕ್ಕೆ ತರುತ್ತಾ ಜನಸಾಮಾನ್ಯರು ಹಾಗೂ ಸ್ಥಳಿಯ ಸಂಸ್ಥೆಗಳ ಚುನಾಯಿತ ಪ್ರತಿನಿದಿಗಳಿಗೆ ಅರಿವು ಹಾಗೂ ಜಾಗೃತಿಮೂಡಿಸುವದಕ್ಕಾಗಿಯೇ ಒಂದು ವಿಕೇಂದ್ರಿಕರಣ ವ್ಯವಸ್ಥೆಗಳ ನಿರ್ಮಾತೃಗಳಲ್ಲಿ ಒಬ್ಬರಾದ ದಿವಂಗತ ಮಾನ್ಯ ಶ್ರೀ ಅಬ್ದುಲ್ ನಜೀರಸಾಬರ ಹೆಸರಿನಲ್ಲಿ ಅರ್ಹ ಪ್ರತಿಭಾವಂತರು ತಜ್ಞರುಗಳನೊಳಗೊಂಡ ಒಂದು ಸಂಸ್ಥೆ ಮೈಸೂರಿನಲ್ಲಿದೆ ಅಲ್ಲೂಕೂಡಾ ಬ್ರಷ್ಟಾಚಾರದ ಹೋಗೆಯಾಡಿರುವುದನ್ನು ಪ್ರಾಮಾಣಿಕರು ದಕ್ಷ ಐ.ಎ.ಎಸ್.ಅಧಿಕಾರಿಯಾದ ವಿ.ರಷ್ಮಿ ಯವರು ತುಂಬಾ ಕಹಿ ಅನುಬವ ಪಡೆದರು. ವಿಷಯವಿಷ್ಟೆ ಇಂದಿನ ಯುಗದಲ್ಲಿ ಸಮಾನ ಮನಸ್ಕರ ನಡುವೆ ಸೇತುವೆಂತಿರು ಸಾಮಜಿಕ ಜಾಲತಾಣದಿಂದಾಗಲಿ ಅಥವಾ ವಿದ್ಯನ್ಮಾನ ಮಾದ್ಯಮಗಳಿಂದಾಗಲಿ ಜಾಗೃತಿಗೆ ವೇದಿಕೆಯಾಗಬೇಕು ಒಂದು ವಿಷಯಕ್ಕೆ ಸಂಬಂದಿಸಿದಂತೆ ಚರ್ಚೆಗೆ ನಾವುಗಳು ಸಿದ್ದರಾಗಬೇಕು. "ಧನ್ಯವಾದಗಳೊಂದಿಗೆ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.