ನಮ್ಮ ತಂದೆ ದೇವರ ಪಾದ ಸೇರಿದರು

ನಮ್ಮ ತಂದೆ ದೇವರ ಪಾದ ಸೇರಿದರು

ಲೇ ಗೌಡಪ್ಪನ ಅಪ್ಪ ಸತ್ನಂತೆ ಹೌದಾ. ಅದೇ ಕನ್ಲಾ ನಮ್ಮ ಗಬ್ಬುನಾಥ ಗೌಡಪ್ಪ. ಯಾರು ಹಳಸೋದು ಫಲಾವು ವಾಸ್ನೆ ಗೌಡಪ್ಪನ ತಂದೆಯಾ. ಹೂ ಕನ್ಲಾ ಯಾರದೋ ಮನೆಗೆ ಊಟಕ್ಕೆ ಹೋಗಿದ್ನಂತೆ ಗಂಟ್ಲಾಗೆ ಕೋಳಿ ಮೂಳೆ ಅಡ್ಡಡಾಗಿ ತಗಲಾಕಿಕೊಂಡಿತ್ತಂತೆ. ಎಷ್ಟೇ ಗಂಟಲಿಗೆ ಹೊಡೆದ್ರೂ ಒಳಹೋಗ್ದೆ ಉಸಿರು ಕಟ್ಟೈತೆ. ತಕ್ಷಣನೇ ಗೌಡಪ್ಪಂಗೆ ಗೊತ್ತಾಗಿ ಆಸ್ಪತ್ರೆಗೆ ಕರಕ್ಕೊಂಡು ಹೋಗಿದಾನೆ. ಓಹ್ ಡಾಕ್ಟರ್ ಅನಸ್ತೀಷಿಯಾ ಖಾಲಿಯಾಗಿದೆ. ಏನ್ ಮಾಡೋದು. ಅಂಗೇ ಗೌಡಪ್ಪ ತನ್ನ ಒಳ ಉಡುಪನ್ನು ತೆಗೆದು ಅವರ ಅಪ್ಪನ ಮುಖದ ಮ್ಯಾಕೆ ಹಾಕ್ದ ನೋಡಿ. ಕೂಗಾಡ್ತಿದ್ದ ಅಪ್ಪ ಅಂಗೇ ಪ್ರಜ್ಞಾ ಹೀನನಾಗಿದ್ದ. ಸ್ವಲ್ಪ ಹೊತ್ತಿಗೆ ಅಪ್ಪ ಸತ್ತು ಹೋದ. ಡಾಕ್ಟ್ರೇ ಯಾಕೆ ನಮ್ಮ ಅಪ್ಪ ಸತ್ತಿದ್ದು. ಒಂದು ಮೂಳೆ ಸಿಕ್ಕಿ ಹಾಕಿಕೊಂಡಿರುವುದು ಅದಕ್ಕಿಂತ ಹೆಚ್ಚಾಗಿ ಅನಸ್ತೀಷಿಯಾ ಡೋಸ್ ಜಾಸ್ತಿಯಾಗಿದೆ ಅಂದ್ರು. ನೀವು ಬನೀನ್ ಮಾತ್ರ ಹಾಕ್ಬೇಕಿತ್ತು. ಇನ್ನೊಂದು ಹಾಕಿದ್ದೇ ಇದಕ್ಕೆ ಕಾರಣ.  ಇನ್ನೆಂಥಾ ಪ್ರಾಡಕ್ಟ್ ಮಡಿಗಾದಾನೆ ನೋಡಿ ನಮ್ಮ ಗೌಡಪ್ಪ.

ಆಸ್ಪತ್ರ್ಯಾಗೆ ಜನ ಇಲ್ಲಾ ಅಂತಾ ಡಾಕ್ಟ್ರೇ ಹೆಣ ತಂದು ಗೌಡನ ಮನೆ ಮುಂದೆ ಒಗೆದು ಹೋಗಿದ್ರು. ಊರ್ನಾಗೆಲ್ಲಾ ಅದೇ ಸುದ್ದಿಯಾ ಗೌಡಪ್ಪನ ಅಪ್ಪ ಸತ್ನಂತೆ. ಮನೆತಾವ ಹೋದೆ ಗಂಡ ಸತ್ತ ವಿಧವೆ ತರಾ ತಲೆ ಮೇಲೆ ಕೈ ಹೊತ್ಕೊಂಡು ಗೌಡಪ್ಪ ಕೂತಿದ್ದ. ಏನ್ರೀ ಗೌಡ್ರೆ, ಬೇಜಾರ್ ಆಗಬೇಡ್ರೀ. ಅಂದೆ ಆಟೆಯಾ. ಅದಲ್ಲಲಾ ಕೋಮಲ್. ಮನ್ಯಾಗೆ ನನ್ನ ಹೆಂಡ್ತೀನೇ ಎಲ್ಲಾ ಮಾಡಿಕೊಡೋಳು. ಬೋನ್ ಲೆಸ್ ಚಿಕನ್ ತಿಂದಿದ್ರೆ ಸಾಯ್ತಾ ಇರ್ಲಿಲ್ಲಾ ಕನ್ಲಾ. ಅಲ್ದೆ ನಮ್ಮ ಮನ್ಯಾಗೆ ಸಿಕ್ಕಿಹಾಕಿಕೊಂಡಿದ್ರೆ ರಾಗಿ ಮುದ್ದೆ ಮಾಡೋ ಕೋಲ್ನಾಗೆ ಒಳ ತಳ್ತೀದ್ವಿ ಕನ್ಲಾ.  ಸ್ನಾನ ಮಾಡದೇ ಹೋದ್ರೆ ಇನ್ನೂ ಸ್ಯಾನೆ ದಿನಾ ಬದುಕ್ತಾರಂತೆ. ಎಲ್ಲಿಗೇ ಹೋದ್ರು ಅಲ್ಲಿಗೇ ಬತ್ತೀಯಲಾ ನೀನು ಅಂದ. ಅಷ್ಟೊತ್ತಿಗೆ ಉರ್ನೋರು ಮಲ್ಲಿಗೆ ಹೂವು ಸಿಗಲಿಲ್ಲಾ ಅಂತಾ. ಮನೆ ಹಿತ್ಲಾಗೆ ಬೆಳೆದಿರೋ ಗಂಟೆ ಹೂವನ ಹಗ್ಗಕ್ಕೆ ಪೋಣಿಸಿದ ಹಾರನೇ ತಂದು ಹಾಕೋರು. ಹೆಣದ ತುಂಬಾ ಸ್ಯಾನೇ ಇರುವೆ. ಡಿಡಿಟಿ ಹಾಕ್ರಲಾ. ವಾಸ್ನೆ ಬರರ್ಬಾದು ಅಂತಾ ಪಿನಾಯಲ್, ಊದಿನಕಟ್ಟಿ ಹಚ್ಚಿದ್ದೇ ಹಚ್ಚಿದ್ದು.

ನವರಂಧ್ರಗಳಿಗೂ ಹತ್ತಿ ತುರುಕಿದ್ದು, ಇದನ್ನ ತೂಗಿದರೆ ಸಿದ್ದೇಸನ ಗುಡಿಗೆ ಒಂದು ತಿಂಗಳು ದೀಪ ಹಚ್ಚಬೋದಿತ್ತು. ಅಷ್ಟು ತುರುಕಿದ್ರು ಬಡ್ಡೆ ಹತ್ತೋವು. ಅವನ್ ಇಬ್ಬರು ಹೆಂಡರು ಮಾತ್ರ ಲಬೋ ಅಂತಾ ಬಡ್ಕಳೋವು. ಪಿರುತಿಗೋ ಇಲ್ಲಾ ಅತ್ಲಾಗೆ ಬಡ್ಡೆ ಐದ ಸತ್ತಾ ಅಂತಾನೋ ಗೊತ್ತಿಲ್ಲ. ನಗ್ತಾ ಸತ್ತಾವ್ನೆ. ಲೇ ಹಲ್ಲು ಇಲ್ರಲಾ ಅದಕ್ಕೆ ಅಂಗೆ ಕಾಣ್ತದೆ. ನೋಡ್ಲಾ ಕೋಮಲ್ ನಮ್ಮ ಮನೆ ಹಳ್ಯಾಗೆ ಬಾಳ ಪೇಮಸ್  ಅಂತ್ಯಕ್ರಿಯೆ ಮುಂದು ಯಾರು ಬಾಡ್ಬಾರದು ಕನ್ಲಾ ಅಂಗಿರಬೇಕು. ಸರಿ ಹೆಣನ್ನ ಚಟ್ಟದ ಮ್ಯಾಕೆ ಕೂರಿಸಿ ಊರ್ನಾಗೆ ಮೆರವಣಿಗೆ ಹೊಂಟ್ವಿ.

ಮುಂದೆ ಗೌಡಪ್ಪನ ಕೈನಾಗೆ ಬೆಂಕಿ. ಊರ್ನಾಗೆಲ್ಲಾ ವಾಲಗದ ಸವಂಡ್ ಬತ್ತಿದಾಗೆನೇ ಸಿದ್ದೇಸ ಬಂದಾ ಅಂತ ಹಣ್ಣು ಕಾಯಿ ತಟ್ಟ್ಯಾಗೆ ಇಟ್ಕೊಂಡು ಎಣ್ಣು ಐಕ್ಲು ಹೊರ ಬರೋವು. ಹೆಣ ನೋಡ್ತಿದ್ದಾಗನೇ, ಏ ಥೂ ಅಂತಾ ಒಳಗೆ ಹೋಗೋವು. ಗೌಡಪ್ಪನ ಹಿಡಿದಿದ್ದ ಬೆಂಕಿ ಮಡಕೆಗೆ ಯಾವನೋ ಬಡ್ಡೆ ಐದ ಸ್ಯಾನೆ ಕಟ್ಟಿಗೆ ಹಾಕಿದ್ದ ಅಂತಾ ಕಾಣ್ತದೆ. ಗೌಡಪ್ಪ ಕೈ ಬದಲಾಯಿಸ್ತಾನೇ ಇದ್ದ. ಯಾರಲಾ ಮಡಿಕೆಗೆ ಬೆಂಕಿ ಹಾಕ್ದೋರು. ಸುಬ್ಬ. ಮಗ ಸ್ಯಾನೆ ಕಟ್ಟಿಗೆ ಆಕವ್ನೆ. ಜಳಕ್ಕೆ ಕೈಯೆಲ್ಲಾ ಸುಟ್ಟು ಓಗಯ್ತೆ. ಮಗ ಸಿಗಲಿ ಅನ್ನೋನು. ಹೆಣದ ಮುಂದೆ ಡ್ಯಾನ್ಸ್ ಬಲೇ ಜೋರಾಗೇ ಇತ್ತು. ಹೆಣ ಹೊತ್ತೋವೆಲ್ಲಾ ಹೊಟ್ಟೆಗೆ ಬಲೇ ಹುಯ್ಕಂಡಿದ್ವು ಅಂತಾ ಕಾಣುತ್ತೆ. ಎಣನಾ ರೋಡ್ ಸರ್ವೆ ಮಾಡ್ಸಿದ್ದೇ ಮಾಡ್ಸಿದ್ದು. ಕಡೆಗೆ ರಂಗನ ಮುಂದೆ ಹೆಣ ಬೀಳಸಿ ಅಂಗೇ ಹೋಗ್ಬಿಟ್ಟವ್ರೆ. ಕಡೆಗೆ ಗೌಡಪ್ಪನ ತೋಟ ಬಂತು ತಿರುಗಿದರೆ, ಲೇ ಕೋಮಲಾ ಅಪ್ಪಾನೇ ಇಲ್ಲ ಅಂದ. ಬೇಜಾರಾಗ್ಬೇಡ್ರೀ ಗೌಡ್ರೆ ಏನು ಮಾಡಕ್ಕೆ ಆಯಕ್ಕಿಲ್ಲ. ಲೇ ಚಟ್ಟದಾಗೆ ಹೆಣನೇ ಇಲ್ಲಾ ಕನ್ಲಾ ಅಂದ. ಆ ಅಂತಾ ತಿರುಗ್ತೀನಿ ಖಾಲಿ ಚಟ್ಟ ಇಟ್ಕೊಂಡು ಬತ್ತಾವೆ. ಲೇ ಎಲ್ರಲಾ ಹೆಣ. ನೋಡಿದ್ರೆ ರಂಗನ ಮುಂದೆ ರವಷ್ಟು ಜನ. ರಂಗಪ್ಪನ ಅಪ್ಪ ಸತ್ತೋಗಾವ್ರೆ ಅಂತ. ಹೋಗಿ ನೋಡಿದ್ರೆ ಗೌಡಪ್ಪನ ಅಪ್ಪನ ಹೆಣ ಅದು. ಉಲ್ಟಾ ಬಿದ್ದಿತ್ತು. ಅದರ ಮ್ಯಾಕೆ ದನದ ಸಗಣಿ ಎಲ್ಲಾ ಬಿದ್ದಿತ್ತು. ಅಂಗೇ ಮೂಗು ಮುಚ್ಕೊಂಡು ಗೌಡಪ್ಪನ ತೋಟಕ್ಕೆ ಎತ್ಕಂಡ್ ಬಂದ್ವಿ.

ಗೌಡಪ್ಪ, ಲೇ ಸುಬ್ಬ ಎಲ್ಲಿ ಗುಂಡಿ ಹೊಡಿಸಿದೆಯಲ್ಲಾ ಅಂದಾ. ಇದೇ ಗೌಡ್ರೆ. ಲೇ ಇನ್ನೊಂದು ಅಡಿ ತೆಗ್ಸಿದ್ರೆ ನೀರೇ ಬಂದ್ ಬಿಡ್ತಿಲ್ಲಾ ಅಂದಾ ಗೌಡಪ್ಪ. ಸುಬ್ಬ ಜೆಸಿಬಿ ತರ್ಸಿ ಬಾವಿ ತರಹ ಗುಂಡಿ ತೆಗೆಸಿ ಬಿಟ್ಟಾವ್ನೆ. ಗೌಡ್ರೆ ಹೆಣನ್ನ ಹೆಗಲೇ ಮ್ಯಾಕೆ ಮಡಿಕೊಂಡು ನೀವು ಗುಂಡ್ಯಾಗೆ ಇಳಿಬೇಕು ಅಂದಾ ಪೂಜಾರಪ್ಪ. ಗೌಡ ಸುಬ್ಬ ನೋಡಿ ಹಲ್ಲು ಕಡಿಯೋನು. ಗೌಡ್ರೆ ಇಳಿಯೋಕ್ಕಂತು ಆಗಕ್ಕಿಲ್ಲ. ಜಂಪ್ ಮಾಡಿ ಅಂದು ಗೌಡಪ್ಪನ ತಲೆ ಮ್ಯಾಕೆ ಹೆಣ ಇಟ್ಟು ಸಿದ್ದೇಸ ಅಂತಾ ತಳ್ಳಿದ್ದೇಯಾ. ಓಹ್್್್್್್್ ಅಂತಾ ಬಾವ್ಯಾಗೆ ಗೌಡಪ್ಪ, ದಪ್ ಅಂತಾ ಬಿದ್ದ. ಮೇಲಿಂದ ಕೆಳಗೆ ಎಲ್ಲಾ ಎಸ್ದಿದ್ದೇಯಾ. ಯಾವನೋ ಬಡ್ಡೆ ಐದ ಕಾಯಿ ಎಸ್ದ ನೋಡಿ ಗೌಡಪ್ಪನ ತಲೆ ಬಾತ್ಕಂಡು ಹೋಗಿತ್ತು. ಗೌಡಪ್ಪ ಮಾತಾಡಿದ್ರೆ ಯಾದೋ ಗುಹೆಯೊಳಗೆ ಮಾತಡ್ದಂಗೆ ಕೇಳ್ತಾ ಇತ್ತು. ಅಂತು ಎಲ್ಲಾ ಮುಗೀತು. ಗೌಡಪ್ಪನ ಎತ್ರಲಾ. ಚಟ್ಟದ ಉದ್ದನೇ ಬೊಂಬು ಕೊಟ್ಟು ಎತ್ತಿದ್ವಿ. ಮ್ಯಾಕೆ ಬಂದೋನು ಅಂಗೇ ಕೂತ. ಯಾಕ್ ಗೌಡ್ರೆ. ಲೇ ಹಾರ್ದಾಗ ಕಾಲು ತಿರಗಿ ಹೋಗೈತೆ ಕಲಾ.

ಲೇ ಎಲ್ಲಾ ಮಣ್ಣು ಹಾಕ್ರೋ. ಇಂಗೆ ಕೈನಾಗೆ ಮಣ್ಣು ಹಾಕಿದ್ರೆ ವರ್ಷ ಆದರೂ ಮುಚ್ಚಕ್ಕಿಲ್ಲ ಅಂತಾ ಜೆಸಿಬ್ಯಾಗೆ ಮುಚ್ಚಿಸದ ಸುಬ್ಬ. ನಂಗಂತೂ ನಡೆಯಕ್ಕೆ ಆಗಕ್ಕಿಲ್ಲ ಅಂದಾ ಗೌಡಪ್ಪ. ಎಂಗಿದ್ರೂ ಚಟ್ಟ ಅಲ್ಲೇ ಇತ್ತು. ಗೌಡ್ರೆ ಮಕ್ಕಳ್ರಿ ಅಂದು ಮೆರವಣಿಗೆ ಸಮೇತ ಗೌಡಪ್ಪನ ಮನೆಗೆ ಹೋದ್ರೆ. ಅವನ ಹೆಂಡರು ಹೆಣ ವಾಪಸ್ಸು ತರಬೇಡ್ರಿ ಅಪಸಕುನ ಅಂದ್ವು. ಲೇ ಮೂದೇವಿ ಎಣಾ ಅಲ್ವೇ ನಾನು ಕಣೇ ಮೂದೇವಿ. ಏ ಥೂ.  ಗೌಡಪ್ಪನಿಗೆ ಸ್ನಾನ. ಎಲ್ಲರಿಗೂ ಖುಷಿ. ಸ್ವಲ್ಪ ಬೆನ್ನು ಉಜ್ಜಲಾ ಕೋಮಲ್. ಗೌಡ್ರೆ ಉಜ್ಜಿದ್ರೆ ಕೊಳೆ ಓಗಕ್ಕಿಲ್ಲಾ. ಎಲ್ಲಾ ಸೋಪಿನ ಪುಡಿ, ಬಟ್ಟೆ ಒಗೆಯೋ ಸೋಪನ್ನ ನೀರ್ನಾಗೆ ಹಾಕಿ. ನಿಮ್ಮನ್ನ ಒಂದು ವಾರ ನೆನಸಿ. ಆಮ್ಯಾಕೆ ಚಾಕು ತಗೊಂಡು ಹೆರದ್ರೆ ಮಾತ್ರ ಕೊಳೆ ಓಯ್ತದೆ ಅಂದೆ. ಹೊಗಲಾ ಬಡ್ಡೆ ಐದ್ನೆ ಅಂದು ಅಂಗೇ ನೀರಾಕ್ಕೊಂಡು ಟವಲ್ನಾಗೆ ವರಸ್ಕೊಂಡ. ರಾತ್ರಿ ಮನೆತಾವ ಓದ್ರೆ ಗೌಡಪ್ಪ ದಿನಾ ಜಗಲಿ ಮ್ಯಾಕೆ ಮಕ್ಕಂತಿದ್ದೋನು ಒಳಗೆ ಮಕ್ಕಂಡಿದ್ದ. ಗೌಡ್ರೆ ಅಂದೆ. ಲೇ ಹೊರಗೆ ಮಕ್ಕೊಂಡ್ರೆ ನಮ್ಮಪ್ಪ ಮಗಾ ಬೀಡಿ ಕೊಡ್ಲಾ ಅಂದಂಗೆ ಆಕ್ತೈತೆ ಅದಕ್ಕೆ ಒಳ ಮಲಗಿದೀನಿ ಕನ್ಲಾ. ಮಧ್ಯರಾತ್ರಿ ನಂತರ ನಡೀತಿದ್ದ ಅತ್ಯಾಚಾರಗಳು ತಪ್ಪಿದ್ವು ಬಿಡಿ. ಅಂದು ಸ್ವಲ್ಪ ಹೊತ್ತಿಗೆ ಗೌಡ್ರು ಮನೆಗೆ ಒಳಗೆ ಭೂಕಂಪದ ಸವಂಡ್ ಬತ್ತು. ನೋಡಿದ್ರೆ ಇಬ್ಬರೂ ಹೆಂಡರು ಗೌಡಪ್ಪಂಗೆ ಪರ್ಕಯಾಗೆ ಸ್ಯಾನೇ ಬಾರಿಸ್ತಾ ಇದ್ವು.

Rating
No votes yet

Comments