ನಮ್ಮ ನಗರದಲ್ಲಿ ಗ್ರಂಥಾಲಯಗಳೆಷ್ಟಿವೆ?
ಬೆಂಗಳೂರು ಮಹಾನಗರದಲ್ಲಿ ಗ್ರಂಥಾಲಯಗಳೆಷ್ಟಿವೆ? ಜ್ಞ್ಯಾನಾರ್ಜನೆಗೆ ಪುಸ್ತಕವೇ ಒಂದು ಸಂಗಾತಿ ಅಲ್ವಾ.ಅದೇನೋ ಹೇಳಿದ್ದಾರಲ್ಲ ಹಿರಿಯರು "ಕೋಶ ಓದು ದೇಶ ಸುತ್ತು " ಎಲ್ಲ ಪೀಳಿಗೆಯವರು ಅನುಸರಿಸಿದ,ಅನುಸರಿಸಬೇಕಾದ ಹೇಳಿಕೆ.ದಿನಪತ್ರಿಕೆಯಿರಲಿ ,ಗ್ರಂಥಗಳೇ ಇರಲಿ,ಬೇಕಾದ ಪುಸ್ತಕವನ್ನು ಅಲ್ಲೇ ಫ್ರೀ ಆಗಿ ಓದಬಹುದು ಇಲ್ಲವೇ ಸದಸ್ಯರಾಗಿ ಮನೆಗೆ ಪುಸ್ತಕ ಹೊತ್ತೊಯ್ದು ಓದುವ ವ್ಯವಸ್ಥೆ .ಈಗೇನೋ ಇಂಟರ್ನೆಟ್ ನಿಂದ ಎಲ್ಲ ಮಾಹಿತಿಗಳು ಲಭ್ಯ ಎನ್ನೋ ಕಾರಣಕ್ಕೆ ಗ್ರಂಥಾಲಯಗಳಿಗೆ ಹೋಗುವ ಜನ ಸಂದಣಿ ಕಡಿಮೆ ಇರಬಹುದು.ಕೆಲವು ಗ್ರಂಥಾಲಯಗಳಲ್ಲಿ ಇ-ಗ್ರಂಥಾಲಯಗಳ ವ್ಯವಸ್ಥೆಯೂ ಇರುವುದನ್ನು ನೋಡಬಹುದು.ಎಲ್ಲ ಪುಸ್ತಕಗಳನ್ನು ದುಡ್ಡು ಕೊಟ್ಟು ಕೊಳ್ಳಲಾಗದ ಕಾರಣಕ್ಕೆ ಎಲ್ಲ ವಯಸ್ಸಿನವರಿಗೂ ಜ್ಞ್ಯಾನಾರ್ಜನೆಗೆ ಉಪಯೋಗವಾಗುವ ವ್ಯವಸ್ಥೆಯಂತೂ ಮೆಚ್ಚಲೇ ಬೇಕಾದ ವಿಷಯ.ಆದರೆ ಹೊಸ ಬಡಾವಣೆಗಳಲ್ಲಿ ಎಲ್ಲೂ ನೂತನ ಗ್ರಂಥಾಲಯಗಳು ಕಾಣದ ವಿಚಾರ ವಿಷಾದನೀಯ.
ಹಾಗಾದರೆ ಎಲ್ಲ ಸಂಪದಿಗರಿಗೆ ಒಂದು ವಿನಂತಿ.ಈ ಬ್ಲಾಗ್ ಓದಿದವರು ನಿಮ್ಮ ಬಡಾವಣೆಗಳಲ್ಲಿ ನೀವು ನೋಡಿರುವ ಗ್ರಂಥಾಲಯಗಳು ನಿಮ್ಮ ಸಂಪದ ಮಿತ್ರರಲ್ಲಿ ಹಂಚಿ ಕೊಳ್ಳಿ.. ಬಡಾವಣೆ,ಹಾಗೂ ವಿಳಾಸವಿದ್ದಲ್ಲಿ ಇನ್ನೂ ಉತ್ತಮ.