ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!
ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!
ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನು
ನೀರ ಮೇಲಿನಲೆ ತರಂಗಗಳು ನಿಲ್ಲುವುದೇನು?
ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರೇನು
ಮನದ ತಲ್ಲಣಗಳರಿವು ತಮಗಾಗುವುದೇನು?
ಮನದೊಳಗೆ ಕೆರೆಯ ನೀರ ಮೇಲಿನಲೆಗಳಂತೆ
ತಲ್ಲಣದ ತರಂಗಗಳು ಸದಾ ಕಾಡುತಿರುವವಂತೆ
ಬಂಧಿಸಲು ನಾವೆಷ್ಟೇ ಯತ್ನಿಸಿ ಸೋತರೇನಂತೆ
ಕಣ್ಣ ಮುಚ್ಚಾಲೆಯಾಟ ಸದಾ ಸಾಗುತಿರುವುದಂತೆ
ಜೀವನದೀ ಏರು ಪೇರುಗಳು ದಾಖಲಾಗದಿವೆಲ್ಲೂ
ನಗು ಮುಖದ ಸೋಗು ಪ್ರತಿಯೊಂದು ಚಿತ್ರದಲ್ಲೂ
ಸಂತಸವಿರಲಿ ನಮ್ಮ ಚಿತ್ರಗಳ ಕಂಡವರ ನೆನಪಲ್ಲೂ
ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ
**************************
ಚಿತ್ರ ಕೃಪೆ: ಪ್ರಕಾಶ್ ಹೆಗಡೆ (ಇಟ್ಟಿಗೆ ಸಿಮೆಂಟು: http:/ittigecement.blogspot.com )
Rating
Comments
ಉ: ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!
In reply to ಉ: ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...! by manju787
ಉ: ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!
ಉ: ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!
ಉ: ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!
In reply to ಉ: ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...! by chethukallali
ಉ: ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!