ನಮ್ಮ ಮೂಗಿನ ನೇರಕ್ಕೆ

ನಮ್ಮ ಮೂಗಿನ ನೇರಕ್ಕೆ

ಮಕ್ಕಳಿಗೆ ಅದು ಸನ್ನು , ಇದು ಮೂನು , ಸ್ವೀಟು , ಸಾಲ್ಟು ,ರೈಸು ಎಂದೆಲ್ಲ ಕಲಿಸುವದು ನೋಡಿದಾಗ ಬೇಜಾರಾಗುತ್ತದೆ ಅಲ್ಲವೆ?

ನಾನು ಸಣ್ಣವನಿದ್ದಾಗ ಅದು ಸೂರ್ಯ , ಇದು ಚಂದ್ರ ,ಇದು ನದಿ , ಅದು ಸಮುದ್ರ ಎಂದು ಕಲಿಸಿದರು . ನನಗೆ ಅದು ಸರಿ ಅನ್ನಿಸುತ್ತದೆ .
ಹೋ , ಅದು ಸಂಸ್ಕೃತ ... ಎಂದು ನೀವು ಹೇಳಬಹುದು . ನಿಮಗೆ ಬಾನು , ಕಡಲು , ಹೊಳೆ ಹಳ್ಳ ಎಂದು ಕಲಿಸಿರಬಹುದು .
ನಿಮಗೆ ನಿಮ್ಮದು ಸರಿ ಅನ್ನಿಸುತ್ತದೆ . ನನಗೆ ನಾನು ಕಲಿತದ್ದು ಸರಿ , ಸಹಜ ಅನ್ನಿಸುತ್ತದೆ .

ಹಾಗಾದರೆ ಈಗಿನ ಮಕ್ಕಳು ಕಲಿತಿರುವಂತೆ ಸನ್ನು , ಮೂನು , ವಾಟರ್ , ಮಿಲ್ಕು ಇವೂ ಸರಿ ಅಲ್ಲವೇ ?

Rating
No votes yet

Comments