ನಮ್ಮ ಶಾಲೆಯೊಳಗೂ ಬಂದ

ನಮ್ಮ ಶಾಲೆಯೊಳಗೂ ಬಂದ

ಚಿತ್ರ

ನಗುತ ಬಂದ ಗಣೇಶ
ಮಕ್ಕಳಿಗೆ ಹರುಷ ತಂದ

ಮಣ್ಣಿನಿಂದ ಅರಳಿ
ಮಣ್ಣಿಗೇ ಮರಳುವಾತ
ನಮ್ಮ ಮನಸ ಗೆದ್ದನಾತ
ಡೊಳ್ಳು ಹೊಟ್ಟೆ ಗಣೇಶ

ವರುಷ ಪ್ರತೀ ಬಿಡದೆ ಬರುವ
ಹರುಷದಲೇ ತೆರಳುವಾತ
ಬರುತಲಿಹನು ಗಣೇಶ

ನನ್ನಂತೇ ಪುಸ್ತಕವ ಹಿಡಿದ
ಅಮ್ಮ ಗೌರಿಯ ಹುಡುಕುತಾ
ನಮ್ಮ ಶಾಲೆಯೊಳಗೂ ಬಂದ

ಮಕ್ಕಳೆದುರು ಮುಖವ ಹಾಕಿ
ಕಪ್ಪು ಹಲಗೆಗೆ ಬೆನ್ನಹಾಕಿ
ಪಾಠ ಮಾಡದಂತೆ ಮಾಡಿದ

ನನ್ನಂತೆ ಹೊಟ್ಟೆಬಾಕ
ನನ್ನಂತೆ ಹುಟ್ಟಿದಾತ
ನ್ನನ್ನನೇ ಅಣಕಿಸುವನೇ ಈತ

 

Rating
No votes yet