ನಮ್ಮ ಸಮಾಜದ Empowerment
ನಮ್ಮ ಕಂಪನಿಲಿ ಕನ್ನಡ ರಜ್ಯೋತ್ಸವ ಮಾಡ್ದಾಗ T.N.ಸೀತಾರಾಮ್ ಹೀಗ್ ಹೇಳಿದ್ರು - "ಈ ಬಂಡವಾಳಶಾಹಿ ಕಾಲದಲ್ಲಿ ಎಲ್ಲವೂ ಮಾರಾಟದ್ ವಸ್ತು ಹಾಗ್ಬಿಟ್ಟಿದೆ. ಒಂದು ಚಿಕ್ಕ ಹುಡುಗಿ - My Daddy has the Big Car ! ಅಂತಾಳೆ. ಅಪ್ಪ ದೊಡ್ಡ ಕಾರ್ ತಗೊಳ್ಳೊ ಶಕ್ತಿ ಇದೆ ಅಂತ ಆತ ಒಳ್ಳೆ ಅಪ್ಪ ಅನ್ನುಸ್ಕೊತಾನೆ. ಮಮತೆ, ಪ್ರೀತಿ ಇವ್ನೆಲ್ಲಾ ಮಾರಾಟದ್ ವಸ್ತು ಮಾಡಿ ದಿನಾಗ್ಲು TV ಅಲ್ಲಿ ತೋರ್ಸಿ ತೋರ್ಸಿ, ಜನ ಈ ತರದ ಮಾಹಿತಿಯನ್ನೇ ಜ್ನಾನ ಅಂತ ತಿಳ್ಕೊಳಕ್ಕೆ Start ಮಾಡಿದಾರೆ. ಇದೊಂದು ದೊಡ್ಡ ದುರಂತ" ಅಂತ.
ನೆನ್ನೆ ನಮ್ Friend ಜೊತೆ ಎಣ್ಣೆ ಹೊಡಿತಿರ್ವಾಗ ಯಾವ್ದೋ ವಿಚಾರಕ್ಕೆ, ಈ ವಿಷಯ ಬಂತು. ಅವ್ನೇಳ್ದ - "ಅಮೇರಿಕದಲ್ಲೇನಾದ್ರು ಈ ತರ ಜಾಹಿರಾತು ಕೊಟ್ರೆ, ಜನ ಚಪ್ಪಲಿ ತಗೊಂಡ್ ಹೊಡಿತಾರೆ. ಆ ಕಾರ್ ಒಂದೂ ಮಾರಾಟ ಹಾಗೊಲ್ಲ ಅಂತ".. ಅವ್ನೇಳಿದ್ದು ಸರಿ. ಅಮೇರಿಕಾದ ತುಂಬಾ ಜಾಹಿರಾತನ್ನ ನೋಡಿದ್ದಿನಿ. ಅಲ್ಲಿ ಮೌಲ್ಯಗಳ್ಗೆ ತುಂಬ ಮಹತ್ವ ಕೊಡ್ತಾರೆ. "Fair and Lovely" ಜಾಹಿರಾತು ಕೊಡ್ಲಿ ಅಮೇರಿಕಾದಲ್ಲಿ ನೋಡೋಣ. Sue ಮಾಡಿ ಕಂಪನಿ ಮುಚ್ಚಾಕುಸ್ತಾರೆ.
ನಮ್ಮ ದೇಶದಲ್ಲಿ ಅಂಗಿದ್ರೆ ಈ ತರ ಜಾಹಿರಾತು ಯಾಕೆ ಮಾಡ್ತಾರೆ ? ಈ ತರದ್ದನ್ನ ಜನ ಒಪ್ಪ್ಕೊಳ್ತಾರ್ರಿ ! ಅದಕ್ಕೆ. ಮೌಲ್ಯನ ಮಾರಾಟದ್ ವಸ್ತು ಮಾಡಿರೋದು ಬಂಡವಾಳಶಾಹಿ ಸಿದ್ದಾಂತ ಅಲ್ಲ, ಮಾಡಿರೋದು ನಮ್ ಜನ !! ಮಾರುತಿ Esteem ಕಾರ್ ಜಾಹಿರಾತ್ ನೊಡಿದೀರ ? Esteem ಕಾರ್ ಇದ್ರೆ lifeಅಲ್ಲಿ Esteem ಬರುತ್ತಂತೆ !! ಇದೇ ತರ "Fair and Lovely", "Fair and Handsome" ಈ ತರ ಜಾಹಿರಾತ್ ಕೊಟ್ಮೇಲೇ ಅವ್ರ Sales ಜಾಸ್ತಿ ಹಾಗಿರೋದು. ಭಾರತದಲ್ಲಿ ಆ valuesಉ, ಈ valuesಉ ಅಂತಾರಲ್ಲ, ಎಲ್ಲಾ ಬರೀ ಬೊಗಳೆ.
ನಮ್ಮ ಸಮಾಜ ಇನ್ನೂ Empower ಹಾಗಿಲ್ಲ. ಇಲ್ಲಿನ್ ಜನಕ್ಕೆ ಎನೋ ಒಂತರ Complex. ಈ ಜನರಲ್ಲಿರೋ weaknessನೆ Marketing ಅವ್ರು ಬಳುಸ್ಕೊತಾರೆ. ಬಹುಶಹ Empowerment ಹಾದಿಅಲ್ಲಿದೆ ಅಂತ ತಿಳ್ಕೊತೀನಿ. ನಮ್ ಮಕ್ಳು ಕಾಲಕ್ಕಾದ್ರು ಉದ್ದಾರ ಹಾಗ್ಬೊದೇನೋ, ನೋಡ್ಬೇಕು..
Comments
Re: ನಮ್ಮ ಸಮಾಜದ Empowerment
In reply to Re: ನಮ್ಮ ಸಮಾಜದ Empowerment by Ashwini
Re: ನಮ್ಮ ಸಮಾಜದ Empowerment
In reply to Re: ನಮ್ಮ ಸಮಾಜದ Empowerment by betala
Re: ನಮ್ಮ ಸಮಾಜದ Empowerment
In reply to Re: ನಮ್ಮ ಸಮಾಜದ Empowerment by kannadiga_1956
Re: ನಮ್ಮ ಸಮಾಜದ Empowerment
In reply to Re: ನಮ್ಮ ಸಮಾಜದ Empowerment by betala
Re: ನಮ್ಮ ಸಮಾಜದ Empowerment