ನಯಸೇನನ ಸಲೀಸಾದ ಸಾಲುಗಳು -ಬಿಡಿ ೧೦- ಸೊಡರು ಮತ್ತು ಕಿಚ್ಚು
ಸೊಡರುಂ ಕಿರ್ಚಾಕಿರ್ಚುಂ
ಗಡ ಕಿರ್ಚಂತೆರಡುಮೆಸೆವ ನಂಟರ್ತನಗಾ
ದೊಡೆ ಗಾಳಿ ಮಸಗಿ ಸೊಡರಂ
ಕಿಡಿಸುವವೊಲ್ ಕಿರ್ಚನೇಕೆ ಕಿಡಿಸದೊ ಮುನಿಸಿಂ
ಗಮನಿಕೆಗಳು:
->ಇಲ್ಲಿ ಸೊಡರು ಎಂಬುವುದು 'ಒಳ್ಳೆಯದು'ಎಂಬುದು, ಕಿರ್ಚು ಎಂಬುದು 'ಕೆಟ್ಟದ್ದು'. ಇಲ್ಲಿ ಕಿಚ್ಚಿಂದಾಗುವ ಕೆಡುಕುಗಳನ್ನ ಎರಡು ಮೆಸೆವ/ಬಗೆವ ನಂಟಸ್ತನಕ್ಕೆ ಹೋಲಿಸಲಾಗಿದೆ. ಆದರೂ ಈ ತೀಡುವ ಗಾಳಿ, ಬೆಳಕು ಕೊಡುವ ಸೊಡರನ್ನೆ ಕಿಡಿಸುತ್ತದೆಯೆ ಹೊರತು ಕೆಡುಕನ್ನು ಉಂಟುಮಾಡುವ ಕಿರ್ಚನ್ನಲ್ಲ(ಕಿಚ್ಚನ್ನಲ್ಲ).
-> ಇಲ್ಲಿರುವ ಹೋಲಿಕೆಗಳು ಸಾಮಾನಿಯವಾಗಿ ಬೇರೆ ಕಬ್ಬಗಳಲ್ಲಿ ಕಾಣಬರುವುದಿಲ್ಲ. ಇಲ್ಲೇ ನಯಸೇನನು ತನ್ನ ಸಾಮಾನಿಯ ತಿಳುವಳಿಕೆಯಿಂದ ಓದುಗರಿಗೆ ಮೋಡಿ ಮಾಡುವುದು. ನಾನು ನಯಸೇನನ ಕೆಚ್ಚಿಗ/ಅಬಿಮಾನಿ. :)
ಸೊಡರು= ದೀಪ, ದೀವಿಗೆ
ಮಸಗಿ = ತೀಡಿ
( ಈ ಪದ್ಯ ನಿಮಗೆ ಬೇರೆ ಅರಿತ ಸಿಕ್ಕಿದರೆ ದಯವಿಟ್ಟು ಹಂಚಿಕೊಳ್ಳಿ)
Rating