ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ.

ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ.

ಮೊನ್ನೆ ಸ್ನೇಹಿತರೊಬ್ಬರು ಪ್ರತಾಪ ಸಿಂಹರು ಬರೆದಿರುವ ಈ ಪುಸ್ತಕದ ಲಿಂಕು ಕೊಟ್ಟರು. ಅಲ್ಪ ಕಾಲದಲ್ಲಿ ತಮ್ಮ ಸಾಧನೆಯಿಂದ ಬಹಳಷ್ಟು ಜನಪ್ರಿಯತೆ ಗಳಿಸಿದ್ದ ಈ ವ್ಯಕ್ತಿಯಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೂ ಇತ್ತು. ಅವರ ಜೀವನದ ಬಗ್ಗೆ ಬರೆದಿರುವುದನ್ನು ಓದುತ್ತಾ ಹೋದಂತೆ ಕುತೂಹಲ ಮೂಡಿಸುತ್ತದೆ. . ದೇಶಸೇವೆ ಮಾಡಲು ೫ ನೇ ತರಗತಿಯಲ್ಲಿದ್ದಾಗಲೇ ಸೈನ್ಯಕ್ಕೆ ಅರ್ಜಿ ಹಾಕಿದ್ದರಂತೆ. ಬಾಲ್ಯದಲ್ಲೇ ಪಾರಮಾರ್ಥಿಕ ಸತ್ಯದ ಅನ್ವೇಷಣೆಗಾಗಿ ಮನೆ ಬಿಟ್ಟುಹೋಗಿ ಹಿಮಾಲಯದತ್ತ ಹೊರಟಿದ್ದು. ನಂತರ ಕೊಲ್ಕತ್ತಾ ದಲ್ಲಿ ರಾಮಕೃಷ್ಣ ಮಿಷನ್ ಕೆಲಕಾಲ ಇದ್ದದ್ದು. ಅಲ್ಲಿಂದ ಹಿಮಾಲಯದತ್ತ ಹೊರಡಲಣಿಯಾದಾಗ ಸರಿಯಾದ ಮಾರ್ಗದರ್ಶಕರು ಇಲ್ಲದೆ ಎರಡುವರ್ಷಗಳ ನಂತರ ಅಂದರೆ ೧೯೭೦ರಲ್ಲಿ ಮನೆಗೆ ವಾಪಸಾದರಂತೆ.

ಅವರು ಮುಖ್ಯಮಂತ್ರಿಯಾಗಿದ್ದೇ ಬಹಳ ಅಚಾನಕ್ಕಾಗಿ. ಪಕ್ಷದ ಕೆಲವರ ವಿರೋಧ ಇದ್ದಾಗ ಯಾವುದೇ ಹುದ್ದೆ ಬೇಡವೆಂದರೂ ಕೆಲವರು ವರಿಷ್ತರ ಆದೇಶದಿಂದ ಆ ಪದವಿ ಒಪ್ಪಿಕೊಂಡರು.

ಇನ್ನು ಅಭಿವೃದ್ಧಿಕಾರ್ಯಗಳಲ್ಲೂ ಬಹಳಷ್ಟು ಸಾಧಿಸಿದ್ದಾರೆ. ಒಂದು ಕಾರು ಓಡಾಡುವಷ್ಟು ಗಾತ್ರದ ಪೈಪನ್ನು ೭೦೦ ಕಿ.ಮೀ ದೂರದ ಉತ್ತರ ಗುಜರಾತ್ ಗೆ ಜೋಡಿಸಿ ನೀರು ಸರಬರಾಜು ವ್ಯವಸ್ಥೆಯನ್ನು ಅತ್ಯಲ್ಪ ಕಾಲಾವಧಿಯಲ್ಲಿ ಪೂರೈಸಿದ್ದಾರೆ. ೨೦೦೪ ರಲ್ಲಿ ೫೫,೦೦೦ ಕೋಟಿ ಬಂಡವಾಳ ಹರಿದುಬರುವಂತೆ ಮಾಡಿದ್ದು. ಹೀಗೆ ಅನೇಕ ಕೆಲಸಗಳನ್ನು ಹಠಯೋಗಿಯಂತೆ ಮಾಡುತ್ತಿದ್ದಾರೆ. ೨೦೦೪ರ ವೇಳೆಗೆ ದೇಶದ ರಪ್ತಿನಲ್ಲಿ ಶೇ ೨೧ ರಷ್ಟು ಗುಜಾರಾತ್ ನ ಕೊಡುಗೆಇತ್ತಂತೆ. ೨೨,೦೦೦ ಕ್ಕೂ ಹೆಚ್ಚು ಚೆಕ್ ಡ್ಯಾಂ ನ ನಿರ್ಮಾನ ಮಾಡಿದ್ದಾರೆ. ೨೦೧೦ ರ ವೇಳೆಗೆ ೧,೧೬,೦೦೦ ಕೋಟಿ ಬಂಡವಾಳದ ಅನಿಲಸ್ಠಾವರ ಸ್ಥಾಪನೆ ಇವು ಸರ್ಕಾರದ ಯೋಜನೆಗಳಂತೆ.

ಇನ್ನು ಪ್ರತಿ ಹೆಜ್ಜೆಗೂ ಹೇಗೆ ಇಂಗ್ಲೀಷ್ ಮೀಡಿಯಾದವರು ಕಾಲೆಳೆಯಲು ಯತ್ನಿಸಿದ್ದು ಇವನ್ನೆಲ್ಲಾ ಪತ್ರಿಕೆ, ಪತ್ರಕರ್ತರ ಹೆಸರಿನ ಮೂಲಕ ವಿವರಿಸಿದ್ದಾರೆ. ನವರಾತ್ರಿಯ ದಿನಗಳಲ್ಲಿ ಕೇವಲ ನೀರೇ ಆಹಾರ, ಚಾತುರ್ಮಾಸ್ಯದ ೪ ತಿಂಗಳು ದಿನಕ್ಕೊಂದೇ ಊಟ, ಹೀಗೆ ಬಹಳ ಸರಳ ಸಾತ್ವಿಕ ಜೀವನ ಅವರದ್ದು ಎಂದು ಹೇಳಿದ್ದಾರೆ. ಕುತೂಹಲ ಇದ್ದವರು ಕೆಳಗಿನ ಕೊಂಡಿಯ ಮೂಲಕ ಪೂರ್ಣ ಪುಸ್ತಕವನ್ನೋದಬಹುದು.

http://pratapsimha.com/books/narendra-modi.pdf

Rating
No votes yet