ನಲ್ಲನಲ್ಲೂಂದು ಕೋರಿಕೆ..

ನಲ್ಲನಲ್ಲೂಂದು ಕೋರಿಕೆ..

ಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ಕಾಡುತ್ತಿದೆ
ನಿನ್ನ ಧ್ವನಿ ಕೇಳಲು ಮನ ಕಾತುರದಿಂದ ಕಾಯುತ್ತಿದೆ
ಕ್ಷಣ ಕ್ಷಣವು ನಿಮಿಷದ ಹಾಗೆ ಭಾಸವಾಗುತ್ತಿದೆ
ಪ್ರತೀ ನಿಮಿಷ ಘಂಟೆಗಳೆನ್ನಿಸುತ್ತಿದೆ
ದಿನಗಳು ಯುಗಗಳೆನ್ನಿಸುತ್ತಿದೆ
ನಿನ್ನ ಸ್ವರ ಕೇಳದ ದಿನ ಬರಿ ಶೂನ್ಯ
ನಿನ್ನ ದನಿ ಕೇಳಿದ ದಿನ ಧನ್ಯ
ಮೂಗಿಯ ಚಳಿಯಲ್ಲೂ ನಿನ್ನ ನೆನಪು ನನ್ನನು ಬೆಚ್ಚಗಿಟ್ಟಿದೆ
ನಿನ್ನ ಪ್ರೀತಿ ಮನ ತುಂಬಿ ತನು ತುಂಬುತ್ತದೆ
ಹೇ ಗೆಳೆಯ ಅರಿಯೆಯ ನೀನು ನನ್ನ ಮನದಾಳದ ಮಾತಾ?
ತಿಳಿಯೆಯ ನನ್ನ ತಳಮಳವ ?
ಆದರು ಏಕೆ ಕಾಡಿಸುವೆ ನನ್ನ?

Rating
No votes yet

Comments