ನಾಟಕ....ಎಲ್ಲ ನಾಟಕ
ಏನು ವಿಚಿತ್ರ
ನಾಟಕದಲ್ಲಿ
ಪರಿಣಿತರು ನಾವೆಲ್ಲ.ಬಾಲ್ಯದಿಂದಲೇ,
ಅಪ್ಪ ,ಅಮ್ಮನಲ್ಲಿ ,
ಅಣ್ಣ,ತಮ್ಮ,
ಅಕ್ಕ,ತಂಗಿಯರಲ್ಲಿ,
ಏಲ್ಲಕಡೆಯಲ್ಲಿ.ಎಲ್ಲೆಂದರಲ್ಲಿ,ಸುತ್ತುಮುತ್ತಲ್ಲಿ,
ನಾವೆಲ್ಲ ಪಾತ್ರ ದಾರಿಗಳು,
ಸೂತ್ರ ಹಿಡಿದವನು ಮೇಲೊಬ್ಬ
ಅಂತ ಹೇಳುದನ್ನ ಕೇಳುತ್ತ.........
ಇದ್ದರೂ
ನೆನಪಿರಲ್ಲ ನಮಗೆ ನಮ್ಮ ಬಗ್ಗೆ.
ನಾಟಕದೊಳಗೆ ನಾಟಕ ಮಾಡುವುದರಲ್ಲಿ,
ನಮ್ಮನ್ನು ಮಿರಿಸುವರು ಯಾರು ಹೇಳಿ?
ಒಮ್ಮೊಮ್ಮೆ
ಅಸ್ಟು ತಲ್ಲೀನತೆ ನಮಗೆ.
ನಾಟಕದೊಳಗಿನ ನಾಟಕದಲ್ಲಿ,ಪಾತ್ರ ಬದಲಾಯಿಸೋದರಲ್ಲಿ
ನಾವಂತೂ ನಿಸ್ಸೀಮರು.
ಆಗ -ಗೊತ್ತಿದ್ದರೂ
ಆಡುತ್ತೇವೆ ಆಟ,ಆಟದೊಳಗಿನ ಆಟ.
ಯಾಕೆ ಬೇಕು ಹೇಳಿ,
ಈ ರೀತಿ ನೀತಿ ?
ಗೊತ್ತಿದ್ದೂ ಗೊತ್ತಿದ್ದೂ,
ಒಳಗೊಂದು,ಹೊರಗೊಂದು !
ಇಲ್ಲ ,ಬಿಡಲ್ಲ
ನಾಟಕ ...ನಾಟಕ...
ಯಾಕೆಂದರೆ
ನಾಟಕದಲ್ಲಿ ಪರಿಣಿತರು........ಬಾಲ್ಯದಿಂದಲೇ
Rating
Comments
ಉ: ನಾಟಕ....ಎಲ್ಲ ನಾಟಕ
In reply to ಉ: ನಾಟಕ....ಎಲ್ಲ ನಾಟಕ by somayaji
ಉ: ನಾಟಕ....ಎಲ್ಲ ನಾಟಕ
In reply to ಉ: ನಾಟಕ....ಎಲ್ಲ ನಾಟಕ by somayaji
ಉ: ನಾಟಕ....ಎಲ್ಲ ನಾಟಕ