ನಾಡಿಗರಲ್ಲಿ ವಿನಂತಿ

ನಾಡಿಗರಲ್ಲಿ ವಿನಂತಿ

ಇಂಟರ್್ನೆಟ್ ತೆರೆಯುತ್ತಿದ್ದ ಹಾಗೇನೇ ಒಮ್ಮೆ ಸಂಪದ ನೋಡುವ ಹವ್ಯಾಸ ಸಾಮಾನ್ಯವಾಗಿ ಕಂಪ್ಯೂಟರ್ ಗೊತ್ತಿರುವ ಎಲ್ಲರಲ್ಲೂ ಇದೆ ಎಂದರೆ ತಪ್ಪಾಗಲಾರದು. ತಾವು ಬರೆದ ಲೇಖನಗಳನ್ನಾಗಲಿ ಅಥವಾ ಇತರೆ ಲೇಖನಗಳಿಗೆ ಬಂದಂತಹ ಪ್ರತಿಕ್ರಿಯೆಗಳನ್ನು ನೋಡುವುದು ಎಲ್ಲರ ಅಭ್ಯಾಸ. ಇದೀಗ ಸಂಪದ ಬದಲಾಗಿದೆ. ಸಂತೋಷ. ಆದರೆ ಈ ಮುಂಚೆ ಇದ್ದ ಸಂಪದ ಬದಲಾಗಿರುವುದು ಕಷ್ಟಕರವಾಗಿದೆ. ಕೆಲವೊಮ್ಮೆ ಸಂಪದ ತೆರೆಯುವುದೇ ಇಲ್ಲ. ಲೇಖನಗಳು ಸೇವ್ ಆಗುವುದೇ ಇಲ್ಲ. ಈ ರೀತಿಯ ಸಮಸ್ಯೆಗಳು ಕಾಡುತ್ತಿದೆ. ಇದು ನನ್ನೊಬ್ಬನಿಗೆ ಮಾತ್ರವಲ್ಲದೆ ನನ್ನ ಸ್ನೇಹಿತರಿಗೂ ಇದೇ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಇರುವುದು ಅಭಿವೃದ್ದಿ ಎಂದರೆ ಮತ್ತಷ್ಟು ಸುಲಭವಾಗಬೇಕು., ಆದರೆ ಇದು ಸ್ವಲ್ಪ ಜಟಿಲ ಎನ್ನುವುದು ನನ್ನ ಅಭಿಪ್ರಾಯ. ಮತ್ತಷ್ಟು ಬದಲಾವಣೆಯನ್ನು ಸಂಪದದಲ್ಲಿ ಮಾಡಿದರೆ ಓದುಗರಿಗೆ ಹಾಗೂ ಬರಹಗಾರರಿಗೆ ಸಹಾಯವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ದಯವಿಟ್ಟು ಒಮ್ಮೆ ಪರಿಶೀಲಿಸಿ.

Rating
No votes yet

Comments