ನಾಡಿಗರು ಯಾರು?

ನಾಡಿಗರು ಯಾರು?

ರಶೀದ್ ತಮ್ಮ ಲೇಖನದಲ್ಲಿ ಐದು ವರ್ಷಗಳ ಹಿಂದೆ ಸುಮತೀಂದ್ರ ನಾಡಿಗರ ಜೊತೆ ಸಂಭಾಷಣೆ ನಡೆಸಿದುದರ ನಿಮಿಷಗಳೆಂದು [:http://mysorepost.wordpress.com/2007/07/18/naadigara-jothe|ಹೀಗೆ ಬರೆದಿದ್ದಾರೆ]:

ರಶೀದ್: ‘ನಾಡಿಗ ಅಂತ ಹೆಸರು ಹೇಗೆ ಬಂತು’ ಅಂತ ಕೇಳಿದೆ.

ಸುಮತೀಂದ್ರ ನಾಡಿಗ್: ‘ನಾವು ಮೂಲದಲ್ಲಿ ತೆಲುಗರು ಹಾಗಾಗಿ ಈ ನಾಡಿಗರು ನಮ್ಮನ್ನು ನಾಡಿಗರು ಅಂತ ಕರೆದರು.ತೆಲುಗಿನಿಂದ ಬಂದ ಎಲ್ಲರನ್ನೂ ಕನ್ನಡಿಗರು ನಾಡಿಗರು ಎಂದು ಕರೆದರು.ಬ್ರಾಹ್ಮಣ ಸಾಬ ಶೂದ್ರ ಎಲ್ಲರಲ್ಲೂ ನಾಡಿಗರಿದ್ದಾರೆ’ ಎಂದರು.

(ರಶೀದ್ ರವರ ಬ್ಲಾಗಿನಿಂದ)

ಇದು ನಿಜವೋ ಸುಳ್ಳೋ ಎಂಬ ವಿಷಯ ಖಾತರಿಪಡಿಸಿಕೊಳ್ಳಲು ಅತಿಶೀಘ್ರವಾಗಿ ನನ್ನನ್ನು ಹಲವರು ಸಂಪರ್ಕಿಸಿದ್ದುದು ಗಾಬರಿಯೂ, ಅಚ್ಚರಿಯೂ ತಂದಿತು. ಆ ಲೇಖನದಲ್ಲಿ "ನಾಡಿಗರು" ಹೆಸರಿನ ಮೂಲವಲ್ಲದೆ ತಲೆ ಕೆರೆದುಕೊಳ್ಳುವ, ತಲೆ ಕೊರೆಯುವ ಹಲವು ವಿಷಯಗಳಿವೆ, ಸರ್ಕ್ಯಾಸಮ್ ಇದೆ. ಅವುಗಳ ಕಡೆಯೂ ಓದುಗರ ಗಮನ ಹೋಗುವುದೆಂದು wish ಮಾಡಬಹುದಷ್ಟೆ.

ಹೆಸರಿನ ಸುತ್ತ

ಸುಮತೀಂದ್ರ ನಾಡಿಗರ ಪರಿಚಯ ನನಗಿಲ್ಲ. ಸಾಹಿತ್ಯದ ಪರಿಚಯವಿರುವ ಹಲವರು ನನ್ನ ಹೆಸರು ಕೇಳಿ "ಸುಮತೀಂದ್ರ ನಾಡಿಗರ ಪರಿಚಯವಿದೆಯೇ, ನಿಮ್ಮ ಸಂಬಂಧಿಕರೋ ಅವರು?" ಎಂದು ಪ್ರಶ್ನಿಸಿದಾಗಲೆಲ್ಲ ನನ್ನ ಉತ್ತರ "ಪರಿಚಯವಿಲ್ಲ, ಗೊತ್ತಿಲ್ಲ" ಎಂಬುದೇ. ನಮ್ಮ ತಂದೆಯ ಹೆಸರಿನಲ್ಲಿದ್ದ ನಾಡಿಗ್ ಎಂಬ ಹೆಸರನ್ನು ನಾನೂ ಇಟ್ಟುಕೊಂಡಿದ್ದೇನೆ. ಈ ಹೆಸರಿನ ಹಿನ್ನೆಲೆ ಖಂಡಿತವಾಗಿಯೂ ಗೊತ್ತಿಲ್ಲ. ಹಿನ್ನೆಲೆ ಏನಾದರೇನು, ಹೆಸರು ನೆನಪಿನಲ್ಲುಳಿಯುವಂತೆ, ಮುಂದಿನ ಸಾರಿ ಫೋನಿನ ಅಡ್ರೆಸ್ ಬುಕ್ಕಿನಲ್ಲಿ ಹುಡುಕುತ್ತಿರುವಾಗ "ನೀನ್ಯಾವ ಹರಿ ಪ್ರಸಾದ್? ನನಗೆ ನಾಲ್ಕೈದು ಜನ ಹರಿ ಪ್ರಸಾದರು ಗೊತ್ತು" ಎಂಬುದು ಕೇಳಿಬರದಂತೆ ಈ ಸರ್ನೇಮ್ ಸಹಾಯ ಮಾಡುತ್ತಿದೆ.

ಈ ಹೆಸರ ಬಗ್ಗೆ ಅಲ್ಲಿಲ್ಲಿ ಕೇಳಿದ್ದಷ್ಟೇ ನನಗೂ (ಬಹುಶಃ ಸುಮತೀಂದ್ರ ನಾಡಿಗರಿಗೂ) ಗೊತ್ತಿರುವುದು ಎಂಬ ವಿಷಯವನ್ನು ಬಿಟ್ಟರೆ ರಶೀಧರು ಬರೆದ ಈ ವಿಷಯದ ಸತ್ಯಾಸತ್ಯತೆಯ ಕುರಿತು ಆಸಕ್ತಿಯನ್ನು ದಯವಿಟ್ಟು ರಶೀಧರ ಹತ್ತಿರವೋ, ಅದನ್ನು ಹೇಳಿದರೆನ್ನಲಾದ ಸುಮತೀಂದ್ರರ ಬಳಿಯೋ ಆಸಕ್ತರು ತೋಡಿಕೊಂಡಲ್ಲಿ ಅವರು ಬರೆದ ಹಿನ್ನೆಲೆಯಲ್ಲಿನದೇ ಹೆಚ್ಚಿನ ಮಾಹಿತಿ ಸಿಗಬಹುದು.

ಒಟ್ಟಾರೆ ಲೇಖನ ಓದಿದ ಮೇಲೆ ನನಗೆ ಸುಮತೀಂದ್ರ ನಾಡಿಗರು ನಿಜವಾಗಿಯೂ ಹೀಗೆ ಹೇಳಿದ್ದರೆ ಅದು ಅವರ opinion ಆಯಿತು. ಅವರು ಯಾಕೆ ಹಾಗೆ ಹೇಳಿದರೋ, ಕಾಂಟೆಕ್ಸ್ಟ್ ಏನಿತ್ತೋ ಏನೂ ಗೊತ್ತಿಲ್ಲದೆ ಮಾತನಾಡುವ ಹಾಗಿಲ್ಲ - ಇದು ಸೆನ್ಸಿಟಿವ್ ವಿಷಯ. ಸುಮತೀಂದ್ರರ ಜೊತೆಗಿನ ಆ ಸಂಭಾಷಣೆಯನ್ನು ರಶೀದ್ ಹೊರಗೆಡವಲು ಅನುಸರಿಸಿರುವ ಚತುರ ವಿಧಾನ ನನಗಂತೂ ಇಷ್ಟವಾಯ್ತು ಎಂದು ಹೇಳೋಕಾಗೊಲ್ಲ.

ಆದರೆ ಪರಿಚಯವಿರುವ ರಶೀಧರ ಹತ್ತಿರ ನಾನು ತಮಾಷೆಯಿಂದಲೋ, ಸ್ನೇಹದಿಂದಲೋ ಮಾತನಾಡುವಾಗಲೂ ಬಹಳ ಹುಷಾರಾಗಿ ಇರಬೇಕೆಂಬುದು ಖಾತ್ರಿಯಾಯ್ತು. ಯಾರಿಗ್ಗೊತ್ತು? ಮುಂದೊಂದು ದಿನ ಇನ್ನೊಬ್ಬ ನಾಡಿಗನಿಂದಲೂ ರಶೀಧರು ತಮ್ಮ ಬ್ಲಾಗಿನಲ್ಲಿ ಏನೇನೋ ಹೇಳಿಸಿಬಿಟ್ಟಾರು. ;)

Rating
No votes yet

Comments