ನಾನು ಕೇಳಿರದ ಸ್ವಾರಸ್ಯಕರ ಗಾದೆ ಮಾತುಗಳು - ಇನ್ನಷ್ಟು

ನಾನು ಕೇಳಿರದ ಸ್ವಾರಸ್ಯಕರ ಗಾದೆ ಮಾತುಗಳು - ಇನ್ನಷ್ಟು

ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ

ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು

ಕದ್ದ ರೊಟ್ಟಿ ಬೇರೆ ದೇವರ ಪ್ರಸಾದ ಬೇರೆ.

ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ.

ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ

ಆಟ ಕೆಟ್ಟರೆ ದೀವಟಿಗೆಯವನ ಸುತ್ತ

ಲೇ ಅನ್ನಲು ಅವಳೇ ಇಲ್ಲ ಮಗನ ಹೆಸರು ಮುದ್ದುರ೦ಗ

ಸಾವಿರ ಉಳಿ ಪೆಟ್ಟು,ಒಂದು ಚಿತ್ತಾರ

ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು

ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು

ಉಂಡರೆ ಉಬ್ಬಸ, ಹಸಿದರೆ ಸಂಕಟ .

ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.

ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.

ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ

ರಾಜ ಇರೋತನಕ ರಾಣಿ ಭೋಗ

ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ

ಹೊಳೆಗೆ ಸುರಿದರೂ ಅಳೆದು ಸುರಿ

ಮನೆ ದೇವರನ್ನ ಮೂಲೆಗಿಟ್ಟು ಬೆಟ್ಟದ ದೇವರಿಗೆ ಬುತ್ತಿ ಹೊತ್ತಂತೆ.

ಊಟಕ್ಕೆ ಮೊದಲು ಉಪ್ಪಿನ ಕಾಯಿ, ಮಾತಿಗೆ ಮೊದಲು ಗಾದೆ.

ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ

ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ

ಆಡೋದು ಮಡಿ ಉಂಬೋದು ಮೈಲಿಗೆ

ಹಲ್ಲಿರುವ ತನಕ ಊಟ ಕಣ್ಣಿರುವ ತನಕ ನೋಟ.

ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು

ಸಂಸಾರಿಯ ಸಹವಾಸ ಮಾಡಿ ಸಂನ್ಯಾಸಿ ಕೆಟ್ಟ.

ಕೈಲಾದವರು ಮಾಡುತ್ತಾರೆ ಕೈಲಾಗದವರು ಆಡುತ್ತಾರೆ

ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು.

ತಲೇ ಕೂದಲು ಉದ್ದವಿದ್ದವಳು ಹ್ಯಾಗೆ ಕಟ್ಟಿದರೂ ಚಂದ

ಕಲಿತವನಿಗಿಂತ ನುರಿತವನೇ ಮೇಲು.

ತಾಳೆಮರ ಉದ್ದವಾದರೆ ಕೋಳಿಗೆ ಬಂದದ್ದೇನು

ತಾನಾಗಿ ಬೀಳುವ ಮರಕ್ಕೆ ಕೊಡಲಿ ಇಕ್ಕಿದ ಹಾಗೆ

ಜನಕ್ಕಂಜದಿದ್ದರೂ ಮನಕ್ಕಂಜಬೇಕು

ತಿಪ್ಪೆಯ ಮೇಲೆ ಕುಂಡ್ರುವವಗೆ ತಕ್ಯೆ ಯಾತಕ್ಕೆ

ತಾನೊಲಿದ ಮಂಕು ಮಾಣಿಕ್ಯ

ತಲೀ ಮ್ಯಾಲೆ ಸಿಡಿಲು ಬಡಿದರೆ ಅಂಗೈಲಿ ಹಿಡಿದ ಕೊಡೆ ಕಾಪಾಡಿತೇ

ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು

ಗ೦ಡ ಪಟ್ಟೆ ಸೀರೆ ತರುತ್ತಾನೆ೦ದು ಇದ್ದ ಬಟ್ಟೆ ಸುಟ್ಟಳ೦ತೆ.

ಇರುವೆಗೆ ಇರುವೆ ಮೈ ಭಾರ,ಆನೆಗೆ ಆನೆ ಮೈ ಭಾರ

ಚಾಡಿಕೋರನಿಗೆ ಊರೆಲ್ಲ ನೆಂಟರು.

ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು

ತಾನು ಸಾಯಬೇಕು ಸ್ವರ್ಗಾ ಪಡೆಯಬೇಕು

ಅರೆಗೊಡದ ಅಬ್ಬರವೇ ಬಹಳ.

ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ

ಹುಣ್ಣು ಮಾದರೂ ಕಲೆ ಮಾದೀತೇ.

ಬೆಲ್ಲವಿಲ್ಲದಿದ್ದರೆ ಬೆಲ್ಲದಂಥ ಮಾತೂ ಇಲ್ಲವೇ?

ತೀರ್ಥಕ್ಕೆ ಥಂಡಿ, ಪ್ರಸಾದಕ್ಕೆ ಅಜೀರ್ಣ , ಮಂಗಳಾರತಿಗೆ ಉಷ್ಣ

ಹಣವಿದ್ದ ಗಂಡನನ್ನು ಮದುವೆಯಾದರೂ ಋಣವಿದ್ದಷ್ಟೇ

ನೆತ್ತಿಯಲ್ಲಿ ಅಮೃತ ಹೊತ್ತು ಸಾವಿಗಂಜಿ ಜಗವೆಲ್ಲ ಸುತ್ತಾಡಿದ

ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ

ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ

ಆರಿದ್ರೆ ಮಳೆಯಲ್ಲಿ ಆದವನೇ ಗಂಡ

ಅ೦ಗಳದಾಗೆ ಒದ್ದು ಅಡಿಗೆ ಮನೆಯಲ್ಲಿ ಕಾಲು ಹಿಡಿದ.

ತಗಲಿದವನಿಗೆ ಹಗಲಿರುಳೇನು?

ಭಿಕಾರಿಯಾದವ ಕಾಶಿಗೆ ಹೋದರೂ, ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?

ತವರೂರಿನ ದಾರೀಲಿ ಕಲಿಲ್ಲ ಮುಳ್ಳಿಲ್ಲ

ಕಡಗ ನೋಡಲಿ ಅ೦ತ ಗುಡಿಸಲು ಸುಟ್ಕೊ೦ಡ ಹಾಗೆ.

ಯಾರ ಹೆ೦ಡ್ತಿ ಎಲ್ಲಿಯಾದರೂ ಹೋಗಲಿ ನಮ್ಮ ಹೆ೦ಡ್ತಿ ನಮ್ಮನೇಲಿರಲಿ

ಬಚ್ಚಿಟ್ಟ ಆಸ್ತಿ ಹೊಂಚುತ್ತಿದ್ದವರ ಪಾಲಾಯ್ತು

ಅತ್ತೆ ಆಸ್ತೀನ ಅಳಿಯ ದಾನ ಮಾಡಿದ

ತಲೇ ಕೂದಲಿದ್ದರೆ ಎತ್ತ ಬೇಕಾದರು ತುರುಬು ಹಾಕಿಕೊಳ್ಳಬಹುದು

ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ

ಬರ ಬಂದಾಗ ಮಗ ಉಣ್ಣೊದು ಕಲಿತ.

ಅಕ್ಕನ ಹಗೆ ಬಾವನ ನೆಂಟು

ನಯಶಾಲಿ ಆದವನು ಜಯಶಾಲಿ ಆದಾನು

ನಾ ಬಡವ ವಾಲಗ ಸಾವಕಾಶ ಊದು ಅಂದಂತೆ

ಉಪಾಸ ಇದ್ರೂ ಉಪದ್ರ ಇರಬಾರ‍್ದು

Rating
Average: 4 (1 vote)