ನಾನು ನನ್ನದು ಬಿಟ್ಟೆ

ನಾನು ನನ್ನದು ಬಿಟ್ಟೆ

ಚಿತ್ರ

ನಾನು ನನ್ನದು ಬಿಟ್ಟೆ

ನಾನೆಂಬುದ ಬಿಟ್ಟೆ
ಜೊತೆಯಲಿ, ನನ್ನದೆಂಬುದೂ ಬಿಟ್ಟೆ ||
ಅಟ್ಟಿಬಿಟ್ಟೆ ದೂರಕ್ಕೆ
ಗಟ್ಟಿಯನುಳಿಸಿ, ಹೊಟ್ಟ ಸುಟ್ಟು ಬಿಟ್ಟೆ ||ಪ||

ಅದು ಪಂಜರವಾಗಿತ್ತು
ನೋಡಲು ಬಣ್ಣ ಬಣ್ಣ ಮಿನುಗಿತ್ತು ||
ಸೂರೆಗೊಂಡು ತನ ಅಡಗಿರುವಂತೆ
ಸುಂದರ ಚಿತ್ರಣ ಮಣಿಸಿತ್ತು ||1||

ನಾನೀ ಬೇಲಿಯ ಕಿತ್ತರೆ ನೀನಾ
ನಾಗುವ ಸಂಭವ ಬಹಳುಂಟು ||
ಈ ನಾಕವ ಕಾಣಲು ತೊಡಕಾಗುವ
ನಾನು ನನ್ನದು ತೊಳೆ ಅಂಟು ||2||

ಹೋಮ ಮಾಡಿ ಸುಟ್ಟೆ
ನನದಲ್ಲವೆಂದು ಕೊಟ್ಟೆ
ಈ ಸೃಷ್ಟಿಯಲ್ಲಿ ಬಲು
ಇಷ್ಟವಾದುದಷ್ಟೆಲ್ಲವಾಗಿಬಿಟ್ಟೆ |
ಬಿಟ್ಟಷ್ಟು ಹೊತ್ತು ಎಷ್ಟೆಲ್ಲವಾಗಿ ಬಿಟ್ಟೆ ||3||

                     -    ಸದಾನಂದ

Rating
No votes yet

Comments

Submitted by H A Patil Mon, 12/24/2012 - 17:24

ಸದಾ ಸಮರ್ಥ ರವರಿಗೆ ವಂದನೆಗಳು
' ನಾನು ನನ್ನದು ಬಿಟ್ಟೆ ' ಬಹಳ ಸುಂದರ ಆಳ ಒಳ ನೋಟಗಳುಳ್ಳ ಕವನ. ಅದಕ್ಕೆ ಪೂರಕವಾದ ಅಂದವಾದ ಮತ್ತೆ ಮತ್ತೆ ನೋಡ ಬೇಕೆನಿಸುವ ಚಿತ್ರ. ಸೊಗಸಾದ ಚಿತ್ರ ಕಾವ್ಯ ನೀಡಿದ್ದಿರಿ ಧನ್ಯವಾದಗಳು.