ನಾನು ನೋಡಿದ ಇನ್ನಷ್ಟು ಬ್ಲಾಗುಗಳು- ಕಂತು ೩
೪೩. raghavendraraob.blogspot.com ಇಲ್ಲಿ ಅನೇಕ ಕಥಾಸಂಕಲಗಳ ಮತ್ತು ಪುಸ್ತಕಗಳ ಪರಿಚಯ ಇದೆ . ಆಯಾ ಪುಸ್ತಕದ ಹೊದಿಕೆಯ ಚಿತ್ರಗಳೂ ಇವೆ. ಸ್ವತಃ ಕತೆಗಾರರೂ ಕಾದಂಬರಿಕಾರರೂ ಆಗಿದ್ದು , ಅನು ಬೆಳ್ಳೆ ಹೆಸರಿನಲ್ಲಿ ಬರೆಯುತ್ತಿದ್ದು ತಮ್ಮ ಸಾಮಾಜಿಕ ಕತೆಗಳನ್ನೂ ಇಲ್ಲಿ ಹಾಕಿದ್ದಾರೆ . *****
೪೪. nanprapancha.blogspot.com ಇಲ್ಲಿ ವನಿತಾ ಅವರು ಪಲ್ಯ , ಕರಿದ ತಿಂಡಿ , ಸಿಹಿತಿಂಡಿ , ಮಂಗಳೂರಿನ ತಿನಿಸುಗಳು , ಗೊಜ್ಜು , ಚಟ್ನಿ , ದೋಸೆ , ಹೋಳಿಗೆ , ಪಲಾವ್ , ಕೇಕ್ ಉಪ್ಪಿನಕಾಯಿ , (ನಿಮಗೆ ಯಾವುದು ಬೇಕು?) ಮತ್ತೂ ಇನ್ನೇನೆಲ್ಲ ಅಡುಗೆ ವಿಧಾನಗಳನ್ನು ತಿಳಿಸಿದ್ದಾರೆ . ಅವುಗಳ ಒಳ್ಳೊಳ್ಳೇ ಫೋಟೋ ಕೂಡ ಹಾಕುತ್ತಿದ್ದಾರೆ . *****
೪೫. chukkisamsthe.blogspot.com ಸಾಮಾಜಿಕ ಸೇವೆಯ ಸದುದ್ದೇಶ ಇಟ್ಟುಕೊಂಡು ಸಂಸ್ಥೆಯೊಂದನ್ನು ಕಟ್ಟಿಕೊಂಡ ಒಂದು ಗೆಳೆಯರ ಗುಂಪಿನ ಬ್ಲಾಗ್ ಇದು . ೨೦೦೮ ರ ನಂತರ ಸೇರ್ಪಡೆ ಇಲ್ಲ. ಸಂಘ ಮತ್ತು ಸೇವೆ ಮುಂದುವರಿದಿರಬಹುದೆಂದು ಆಶಿಸೋಣ . ***
೪೬. archana-hebbar.blogspot.com ಇನ್ನಷ್ಟು ಅಡುಗೆ !! ಬಗೆಬಗೆಯ ಅಡುಗೆಗಳ ವಿಧಾನಗಳು , ಲಂಡನ್ , ಕೇಪಟೌನ್ ಪ್ರವಾಸ, ಅಡುಗೆಗಳ ಫೋಟೋಗಳೂ ಪ್ರವಾಸದ ಫೋಟೋಗಳೂ ಇವೆ. *****
೪೭. vgurav.blogspot.com ಕ್ರಿಕೆಟ್ ಬಗ್ಗೆ ಒಂದೇ ಒಂದು ಬರಹಕ್ಕೆ ಉತ್ಸಾಹ ಉಡುಗಿದೆ.
೪೮. chitra-vichitra.blogspot.com ಚಿತ್ರ-ವಿಚಿತ್ರ ಫೋಟೋಗಳು , ಕುತೂಹಲಕರ ತಪ್ಪು-ತಪ್ಪಾಗಿರುವ ಬೋರ್ಡುಗಳ ಫೋಟೋಗಳು ಇಲ್ಲಿವೆ . ಚಾಲ್ತಿಯಲ್ಲಿದೆ . ****
೪೯. kannadadakuvara.spaces.live.com ನಾಲ್ಕೈದು ಭಾವಗೀತೆಗಳ ಸಾಹಿತ್ಯ ಇಲ್ಲಿದೆ.
೫೦. anandadi.blogspot.com ಬೆರಳೆಣಿಕೆಯ ಕವನಗಳು , ಚಾಲ್ತಿಯಲ್ಲಿಲ್ಲ.
೫೧. srimaruthi2.blogspot.com ಪ್ರವೇಶದ್ವಾರದಲ್ಲಿ ಬಲು ಎತ್ತರದ ಮಾರುತಿಯ ಮೂರ್ತಿ ಇರುವ ಗುಡಿಯ ಫೋಟೋ ಬಿಟ್ಟರೆ ಇನ್ನೇನೂ ಇಲ್ಲ ; ಆದರೆ ಈ ಸ್ಥಳ ಎಲ್ಲಿದೆ?
೫೨. eekannada.blogspot.com ಕನ್ನಡದ ಕೊಂಡಿಗಳು ಒಂದಿಷ್ಟನ್ನು ಕೊಟ್ಟಿದ್ದಾರೆ . ಚಾಲ್ತಿಯಲ್ಲಿಲ್ಲ. ಆರಂಭಶೂರತ್ವದ ಇನ್ನೊಂದು ಬ್ಲಾಗ್!
೫೩. esuddi.blogspot.com ಸುದ್ದಿಯಲ್ಲಿರುವ ಘಟನೆಗಳ ಬಗ್ಗೆ ಕೆಲವು ಬರಹಗಳು . ಈ ವರ್ಷ ಜನವರಿ ನಂತರ ಏನೂ ಸೇರ್ಪಡೆ ಇಲ್ಲ.