ನಾನು ನೋಡಿದ ಒಂದು ಬ್ಲಾಗು ! - ಶ್ರೀಸಾಮಾನ್ಯರೋ ವಿದ್ವಾಂಸರೋ ?( ಕಂತು -೫)

ನಾನು ನೋಡಿದ ಒಂದು ಬ್ಲಾಗು ! - ಶ್ರೀಸಾಮಾನ್ಯರೋ ವಿದ್ವಾಂಸರೋ ?( ಕಂತು -೫)

63. blogayana.blogspot.com  ಇದು  ಒಬ್ಬ  ವಿದ್ವಾಂಸರ ಬ್ಲಾಗ್   ಅನ್ನಬಹುದು  . ಬಗೆಬಗೆಯ  ಬರಹಗಳಿವೆ .  ಕವನಗಳೂ ಸಾಕಷ್ಟು ಸಂಖ್ಯೆಯಲ್ಲಿವೆ  .   ಕವನಗಳನ್ನು   ಅರ್ಥ  ಮಾಡಿಕೊಳ್ಳೋದು  ಇನ್ನೂ   ನನಗೆ ಸಾಧ್ಯವಾಗಿಲ್ಲ . ನಾನು ಸೀರಿಯಸ್ಸಾಗಿ ಪ್ರಯತ್ನಿಸಿಯೂ ಇಲ್ಲ . ಉಳಿದೆಲ್ಲ   ಗದ್ಯಬರಹಗಳನ್ನು   ನೋಡಿದರೆ ಇವರ ಪದ್ಯಗಳೂ ಚೆನ್ನಾಗಿರಲೇ ಬೇಕು  ಅಂತ ನನ್ನ  ತರ್ಕ.   
  ಕನ್ನಡದ ಹಿರಿಯರ ಫೋಟೋಗಳಿವೆ ,  "ಗೋಖಲೆ ಸಾರ್ವಜನಿಕ ಸಂಸ್ಥೆ ಹೊರತಂದಿರುವ ಧ್ವನಿ ಸುರಳಿಗಳಲ್ಲಿ ಈ ಕೆಳಕಂಡ ಎಂ.ಪಿ. ಗಳು ನನ್ನ ಬಳಿ ಇವೆ. ಆಸಕ್ತರೆಲ್ಲರು ಸೇರಿ ಒಂದು ಶ್ರಾವ್ಯ ಸಂಗ್ರಹಾಲಯ (ಆಡಿಯೋ ಲೈಬ್ರರಿ) ಮಾಡಬಹುದು. ಇದಕ್ಕೆ ಕೈ ಜೋಡಿಸಬೇಕೆಂದಿರುವವರು ನನ್ನನ್ನು ಸಂಪರ್ಕಿಸಿ."  ಅಂತ  ಕೇಳಿಕೊಂಡಿದ್ದಾರೆ .  ಶ್ರೀಸಾಮಾನ್ಯ, ನೇಗಿಲಯೋಗಿ , ಬೆಳ್ಳಿಹಬ್ಬ, ಸುತ್ತೋಲೆ    ಈ ಪದಗಳನ್ನು ಕನ್ನಡಕ್ಕೆ ನೀಡಿದವರು ಕುವೆಂಪು  ಎಂದು ನನಗೆ ಈ ಬ್ಲಾಗಿನಿಂದ ತಿಳಿಯಿತು .   
ಪು.ತಿ.ನ ,  ಮುದ್ದಣನ ಪದ್ಯಗಳ   ಪರಿಚಯ   , ವಿಲಿಯಂ ಬ್ಲೇಕ್ , ಖಲೀಲ್ ಗಿಬ್ರಾನ್  , ರವೀಂದ್ರನಾಥ ಠಾಕೂರರ ಅನುವಾದಗಳಿವೆ .
  ವೀರಗಲ್ಲುಗಳ  ಬಗ್ಗೆ ನಿಮಗೆ ಗೊತ್ತಿರಬಹುದು . ೨೬/೧೧ ಮುಂಬೈ ಯುದ್ಧದಲ್ಲಿ ಹೋರಾಡಿ ವೀರಮರಣ ಹೊಂದಿದ ವೀರ  ಸಂದೀಪ್ ಉನ್ನಿಕೃಷ್ಣನ್  ನೆನಪಿನಲ್ಲಿ   ಕರವೇ  ಬೆಂಗಳೂರಿನಲ್ಲಿ  ನಿಲ್ಲಿಸಿದ  ವೀರಗಲ್ಲಿನ ಫೋಟೋ ಇಲ್ಲಿ ಕೊಟ್ಟಿದ್ದಾರೆ .  
ಜೋತಿಷ್ಯದ  ಬಗೆಗೂ ಕೆಲವು ಬರಹಗಳಿವೆ.  ಶನೇಶ್ವರ ಸ್ತೋತ್ರ  , ಗುರು ಅಷ್ಟಕ, , ಕಾಲಭೈರವ ಅಷ್ಟಕ.  , ಹನುಮಾನ್ ಚಾಲೀಸಾ  ಇಲ್ಲಿವೆ ,
ಸಾಕಷ್ಟು ಪ್ರಭಾವಿಯಾಗಿದ್ದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದರೂ ಪ್ರಕೃತಿಸಹಜವಾಗಿಲ್ಲದಿದ್ದ ಸಂಪತ್ತು - ಸ್ಥಿತಿ - ಬೆಳವಣಿಗೆಯನ್ನು ಅಪೇಕ್ಷಿಸಿ ಅಸ್ತಂಗತನಾದ ಒಬ್ಬ ರಾಜನ ಕತೆ ಇದೆ.  ವ್ಯಾಪ್ತಿಯನ್ನು ಮೀರಿದ್ದಕ್ಕೆ ಅವನತಿ ಕಂಡ  ಆ ರಾಜನಂತೆ  ಇವತ್ತು   ಯಾವ ದಾರಿಯಾದರೂ ಪರವಾಗಿಲ್ಲ  ಸಂಸ್ಥೆಯ ಬೆಳವಣಿಗೆ ಅದರ ಕ್ಷೇತ್ರದ ಬೆಳವಣಿಗೆಗಿಂದ ಹೆಚ್ಚಿರಬೇಕೆಂಬ ದುರಾಸೆಯಿಂದ  ಸಲ್ಲದ ಅಪಾಯಸಾಧ್ಯತೆ (ರಿಸ್ಕ್)   ಗಳನ್ನು ತೆಗೆದುಕೊಳ್ಳುತ್ತ  ಹಾಳಾದ ಸಂಸ್ಥೆಗಳು  ಕಣ್ಣ ಮುಂದಿವೆ ಎಂದು ತಿಳಿಸುತ್ತಾರೆ.
ನೆರೆಮನೆಯವ  ಒಳ್ಳೆಯತನದಿಂದ  ಕಿರಿಕಿರಿಯಾದ ಬಗ್ಗೆ ಒಂದು ಬರಹ ಇದೆ . http://blogayana.blogspot.com/2008/03/blog-post_13.html      ಇಲ್ಲಿ  ಕ್ಲಿಕ್ಕಿಸಿ  ಓದಿರಿ .

ಶ್ರೀ ರುದ್ರ ( ಅಥವಾ  ರುದ್ರಾಧ್ಯಾಯ) ದ ಬಗೆಗೊಂದು ಲೇಖನ ಇದೆ . ಅದರಲ್ಲಿ ಆನಂದವೆಂದರೆ ಏನು? ಅತ್ಯುನ್ನತ ಆನಂದ ಯಾವುದರಿಂದ ದೊರೆಯುತ್ತದೆ? ಈ ಆನಂದದ ಸ್ವರೂಪವೇನು -- ಹೀಗೆ ಪ್ರಶ್ನಿಸಿ, ಆಳವಾದ ವಿಶ್ಲೇಷಣೆ ಇದೆಯಂತೆ.  
ಶತಪಥ ಬ್ರಾಹ್ಮಣ  ಮತ್ತು  ವಾಕ್ ಮೀಟರ್ ( ನಡೆದಾಟದ ಹೆಜ್ಜೆಗಳ ಲೆಕ್ಕ ಇಡುವ ಸಾಧನ ) ದ ಬಗ್ಗೆ ಒಂದು ಲಘುಬರಹ ( ಹಗುರ ಬರಹ ಅನ್ನಬಹುದೋ?)   ಇದೆ.
ಹಿಂದೋಳ ವಸಂತ, ಶೃಂಗಾರ ಸಂಕೀರ್ತನೆ ಮತ್ತು ಪುರುಷಾರ್ಥ ಕುರಿತು  ಒಂದು ಬರಹದಲ್ಲಿ  ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮವೇ ಆಗಲಿ, ಅರ್ಥವೇ ಆಗಿಲಿ, ಕಾಮವೇ ಆಗಲಿ, ಯಾವುದೇ ಒಂದು ಸಂಪೂರ್ಣ ಪುರುಷಾರ್ಥವಲ್ಲ. ಹಂತ ಹಂತವಾಗಿ ನೀತಿಯಿಂದ ಧರ್ಮಾರ್ಥಗಳು, ಶೃಂಗಾರದಿಂದ ಧರ್ಮಾವರೋಧವೆನಿಸದ ಕಾಮವು, ಕಾಲಾಂತರದಲ್ಲಿ ವೈರಾಗ್ಯದಿಂದ ಮೋಕ್ಷವೂ ಪ್ರಾಪ್ತಿಯಾಗುವುದಲ್ಲಿಯೇ ಜೀವಿತದ ಸಾರ್ಥಕತೆ  ಅಂತ ಹೇಳಿದ್ದಾರೆ.  
ಷೂ ಗೆ   ಲೇಸ್  ಕೊಂಡುಕೊಳ್ಳು ವುದರ ಬಗೆಗೂ ಒಂದು  ಹಗುರ ಬರಹ ಇದೆ . (http://blogayana.blogspot.com/2008/02/blog-post_24.html)  

ಇಂಗ್ಲೀಷ್  ಕತೆಗಳ ರೂಪಾಂತರಗಳೂ ಇಲ್ಲಿವೆ.
ಇನ್ನೂ  ಏನೇನಿದೆ ?  ನೀವೇ  ನೋಡಿ.  

ಇಷ್ಟೆಲ್ಲ   ಬರೆದವರು ತಮ್ಮನ್ನು   ಶ್ರೀಸಾಮಾನ್ಯ   ಅಂತ  ಕರೆದುಕೊಳ್ಳೋದು ನ್ಯಾಯವೇ  ?  

Rating
No votes yet

Comments