ನಾನು ನೋಡಿದ ಮತ್ತೂ ಹತ್ತು ಬ್ಲಾಗುಗಳು
74 kaadabeladingalu.blogspot.com
ಕೆಲವೇ ಬರಹಗಳಿರುವುದಾದರೂ ಎಲ್ಲವೂ ಅಪ್ಪಟ ಚಿನ್ನ ! .
ಒಂದು ಭಕ್ತಿಕಾವ್ಯವಾಗಿ ಗದುಗಿನಭಾರತ , ಕನ್ನಡ ಸಾಹಿತ್ಯದಲ್ಲಿ ಅನುಭಾವ, ಅರವಿಂದರ ಸಾವಿತ್ರಿ ಎಂಬ ಕಾವ್ಯ , ವಿಮರ್ಶೆ , ಸ್ವಪ್ನವಾಸವದತ್ತಂ , ನಾಂದಿ , ಕಾವ್ಯದಲ್ಲಿ ರಸ ಮತ್ತು ನೀತಿಬೋಧೆ , ಬೇಂದ್ರೆ ಕಾವ್ಯದಲ್ಲಿ ಒಲವು , ಭಾವಗೀತ ಈ ತಲೆಬರಹಗಳಲ್ಲಿ ತುಂಬ ಒಳ್ಳೆಯ ಲೇಖನಗಳ್ವಿವೆ . ನೀವೂ ಅಲ್ಲಿನ ಬರಹಗಳನ್ನು ಓದಿ ಮೆಚ್ಚಿದರೆ , ಅಲ್ಲಿ ಕಮೆಂಟ್ ಹಾಕಿ ಬ್ಲಾಗ್ ಮುಂದುವರೆಯುವಂತೆ ಮಾಡಬಹುದು . *****
75 sriramasamartha.blogspot.com ಶ್ರೀ ಮಾರುತಿ ಅಂಶರೂ ಶ್ರೀ ಸಮರ್ಥ ರಾಮದಾಸರ ಪುನರಾವತಾರಿಗಳೆಂದೂ ಪ್ರಸಿದ್ಧರಾದ ಗೋಂದಾವಲಿ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಕುರಿತಾದ ಈ ಬ್ಲಾಗ್ ಚಿಂತಾಮಣಿಯ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದ್ದು ಬಹುತೇಕ ಮಾಹಿತಿ , ಬರಹ ಇಂಗ್ಲೀಶಿನಲ್ಲಿ ಇದ್ದರೂ ಕನ್ನದದಲ್ಲೂ ಸಾಕಷ್ಟು ಬರಹ ಇದೆ . ಆಸಕ್ತರು ನೋಡಬಹುದು.
76. bhavanegalasammilana.blogspot.com ನೆನಪು , ಭಾವನೆ, ಕನಸುಗಳು , ಈವರ್ಷದ ಜನವರಿ ಮತ್ತು ಫೆಬ್ರುವರಿಯಲ್ಲಿ ಸೇರಿಸಿದ ಮೂರು ಬರಹ , ಒಂದು ಕವನ .
77 bharathiharate.blogspot.com ಬ್ಲಾಗುಕರ್ತರು ಮಂಗಳೂರಿನವರು ಅಮೆರಿಕದಲ್ಲಿ ನೆಲೆಸಿದ್ದಾರೆ . ಮಂಗಳೂರು ಪರ್ಶಿಯನ್ ಭಾಷೆಯ ಒಮಾರ್ ಕಯ್ಯಾಮನ ಸುಮಾರು ನೂರು ರುಬಾಯಿಯತ್ ನ ಅನುವಾದಗಳು , ಕೆಲವು ಇಂಗ್ಲೀಷ್ ಕವನಗಳ ಅನುವಾದಗಳು , ಕೆಲವು ಸ್ವಂತ ರಚನೆಗಳು ಅಷ್ಟೇ ಅಲ್ಲದೆ ಕ್ಯಾಲಿಫೋರ್ನಿಯಾದ ಯೊಸೆಮಿಟಿ (Yosemite) , ರ‍್ಯಾಂಡಿ ಫೌಶ್ಶ್ ನ ಕೊನೆಯ ಉಪನ್ಯಾಸ , ಅಮೆರಿಕದ ರಿಸೆಶನ್ , ಮೈಕಲ್ ಜ್ಯಾಕ್ಸನ್ ಮತ್ತು ಅಮೇರಿಕಾದ ಮಾಧ್ಯಮಗಳು , ಸೈಬರ್ ಅಟ್ಯಾಕ್ , ಅಂಡರ್ವೇರ್ ಪುರಾಣ, ರಿಸೆಶನ್ ನಲ್ಲಿ ಒಂದು ಜಾಬ್ ಫೇರ್ , ಅಮೆರಿಕದ ಇಸ್ಮ್ ಗಳು ಹಾಗೂ ಪ್ರಖ್ಯಾತ ಬಲಿಪಶುಗಳು ,ಸ್ಪಾಮ್, ಫಿಶಿಂಗ್, ಹಾಗು ಇತರ ಈಮೇಲ್ ಕೀಟಗಳು , ಅಂತರ್ಜಾಲದಲ್ಲಿ ಅನಾಮಿಕತೆ ನಮ್ಮ ಜನ್ಮ ಸಿದ್ಧ ಹಕ್ಕೆ? , ಆತ್ಮಾವಲೋಕನ ಈ ಬಗ್ಗೆ ಬರಹಗಳಿವೆ . ೨೦೦೯ ರಲ್ಲಿ ಸೇರಿಸಿದ ಬರಹಗಳು . ಈ ವರ್ಷ ಸೇರ್ಪಡೆ ಇಲ್ಲ . **** .
78 . guruve.blogspot.com ಇದು ಪುಸ್ತಕೋದ್ಯಮ aakrutibooks.com ರವರ ಬ್ಲಾಗ್ , ಚಿತ್ರವಿಮರ್ಶೆ, ಸಾಹಿತ್ಯ ಸಮ್ಮೇಳನಗಳು , ಸಾಹಿತ್ಯಸುದ್ದಿ , ದ ಡಿಫಿಕಲ್ಟಿ ಆಫ್ ಬಿಯಿಂಗ್ ಗುಡ್ , ಕರಿಸಿರಿಯಾನ — ಪುಸ್ತಕ ಪರಿಚಯ , ಹುಯಿಲಗೋಳ ನಾರಾಯಣರಾಯರು , ಶಿವರಾಮಕಾರಂತರು , ವಿ.ಸೀತಾರಾಮಯ್ಯ ,ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದವರ ಬಗ್ಗೆ , ಕಂತನಹಳ್ಳಿ ಗೃಹ ವಿಶ್ರಾಂತಿಧಾಮ (ಹೋಮ್ ಸ್ಟೇ) ಬಗೆಗೆ ಲೇಖನ , ಗಾಂಧಿಯ ಬಗೆಗೆ ಕೈಲಾಸಂ ಇಂಗ್ಲೀಶಲ್ಲಿ ಬರೆದ ಕವನ , ಅದರ ಅನುವಾದ ಜೀ. ಪಿ. ರಾಜರತ್ನಂ ಅವರಿಂದ ಇಲ್ಲಿ ಸಿಗುತ್ತವೆ .
ಇಲ್ಲಿ ಸಿಕ್ಕ ಒಂದು ಕನ್ನಡ ರೈಮ್
- ಪೆನ್ಸಿಲ್ ಗೊಂದು ಮೊದಲನೆ ಶತ್ರು, ಅಳಿಸೋ ರಬ್ಬರ್ರು,
- ತಪ್ಪು ಬರೆದರೆ ಒಪ್ಪೋದಿಲ್ಲ, ಎಷ್ಟೇ ಹೇಳಿದ್ರೂ..
೨೦೦೬ ರಿಂದ ಚಾಲ್ತಿಯಲ್ಲಿದೆ . ಒಟ್ಟಿನಲಿ ಒಂದು ಒಳ್ಳೆಯ ಬ್ಲಾಗ್ . *****
79. accha-kannada.blogspot.com ನಿಮಗೆ ಅಚ್ಚಗನ್ನಡ - ಅಣ್ಣೆಗನ್ನಡ , ಆಂಡಯ್ಯ , ಬೇಗರಣ , ಒರೆಗಳು , ಉಲಿಗಳು ,ಮಿಂಬಲೆ , ಎಣಿ , ಶಂಕರಭಟ್ಟರ ಹೊಸ ಬರಹ ಮುಂತಾದವುಗಳ ಬಗ್ಗೆ ಆಸಕ್ತಿ ಇದ್ದರೆ ಈ ಬ್ಲಾಗ್ ನೋಡಿ , ಇಲ್ಲಿ ೨೦೦೭ ರಲ್ಲಿ ಸೇರಿಸಿದ ಎಂಟು ಬರಹಗಳಿವೆ ಈ ಬ್ಲಾಗ ಕರ್ತರು - ವಿನಾಯಕ ಖವಾಸಿ - ಸಂಪದಿಗರೂ ಹೌದು . ಅವರ ಇನ್ನಷ್ಟು ಬರಹಗಳು ಸಂಪದದಲ್ಲಿ ಇಲ್ಲಿ ಸಿಗುತ್ತವೆ- http://sampada.net/blog/khavi .
8೦ . bhakthigeetha.blogspot.com ಬಹಳಷ್ಟು ಭಕ್ತಿಗೀತೆಗಳು , ಕನ್ನಡ ಹಾಗೂ ಇಂಗ್ಲೀಷ್ ಲಿಪಿಯಲ್ಲಿ ಆಡಿಯೋ , ವೀಡಿಯೋ ಕೊಂಡಿಗಳೊಂದಿಗೆ ೨೦೦೮ ರಿಂದ ಇಂದಿಗೂ ಚಾಲ್ತಿಯಲ್ಲಿದೆ *****
81. 4linesfrommanoj.blogspot.com ಇಪ್ಪತ್ತು ಕವನಗಳು . ಈ ಜನುವರಿಯಲ್ಲಿ ಒಂದು ಕವನದ ನಂತರ ಹೊಸ ಸೇರ್ಪಡೆ ಇಲ್ಲ.
81. aatmabandhu.blogspot.com ಚಿಕ್ಕ ಕವಿ ಅಂದರೆ ಚುಟುಕ , ಸಣ್ಣ ಕವನಗಳನ್ನು ಬರೆವವರು ಇವರು. ಈ ವರ್ಷ ಹೊಸ ಸೇರ್ಪಡೆ ಇಲ್ಲ. ೨
83. abhilashe.blogspot.com ಬ್ಲಾಗುಲೋಕಕ್ಕೆ ಬಂದ ಬಗ್ಗೆ ಘೋಷಣೆ , ಒಂದು ಅಡಿಗರ ಕವನ , ಎರಡು ಸ್ವಂತ ಕವನ ( ಒಂದು- ನೀನೇಕೆ ಇಷ್ಟವಾಗುವೆ , ಇನ್ನೊಂದು- ನೀನೇಕೆ ದೂರವಾದೆ ? ಅಂತ) . ಆತೋಪಾತು! ಇದೂ ಎಲ್ಲ ೨೦೦೬ ರಲ್ಲಿ.
Comments
ಉ: ನಾನು ನೋಡಿದ ಮತ್ತೂ ಹತ್ತು ಬ್ಲಾಗುಗಳು