ನಾನು ನೋಡಿದ ಹಳೆಯ ಸಿನಿಮಾ : ಚಂದ್ರ ಕುಮಾರ (1963)

ನಾನು ನೋಡಿದ ಹಳೆಯ ಸಿನಿಮಾ : ಚಂದ್ರ ಕುಮಾರ (1963)

ಬ್ರಹ್ಮನಿಯಮದ ಎದಿರು ಆತ್ಮಶಕ್ತಿ (ಮಾನವ ಪ್ರಯತ್ನ) ಎಷ್ಟು ಸಫಲ? ಎಂಬ ಗಂಭೀರ ಪ್ರಶ್ನೆಯನಿಟ್ಟು ಕೊಂಡು ಸಿನಿಮಾ ಆರಂಭವಾಗುತ್ತದೆ. ಇದಕ್ಕೆ ಉತ್ತರವು ಕೊನೆಯ 2-3 ನಿಮಿಷಗಳಲ್ಲಿ ಸಿಗುತ್ತದೆ. ಈ ಸಿನಿಮಾ ಯೂ ಟ್ಯೂಬಲ್ಲಿ ಇದೆ.  

 

ಇದು ಶ್ರೀ ಶ್ರೀ ಶ್ರೀ ಭಂ ಭಂ ಭಂ ಸ್ವಾಮಿಗಳ ಆಶೀರ್ವಾದದಿಂದ ತಯಾರಾದ ಸಿನಿಮಾ ಎ೦ದು ಟೈಟಲ್ಸ ನಲ್ಲಿದೆ.  ಇನ್ನೊಂದು ಕಡೆ ಯಜ್ಞನಾರಾಯಣ ಎಂಬ ಹೆಸರನ್ನು ಎಗ್ನನಾರಾಯಣ ಎಂದು ಬರೆದಿರುವುದನ್ನು ಗಮನಿಸಬಹುದು.

 

ಸಿನಿಮಾದ ನಾಯಕ ಉದಯ ಕುಮಾರ್. ಆದರೆ ರಾಜಕುಮಾರ್ ಒಂದು ಪ್ರಮುಖ ಪಾತ್ರದಲ್ಲಿದ್ದಾರೆ. ಕೆಳಗಿನ ಡೈಲಾಗುಗಳು ಇಲ್ಲಿನ ವಿಶೇಷ. Alliteration ಗಮನಿಸಿ

 

 

 

ಕಮಂಗಿ ಕೈಯಲ್ಲಿ ತಾಳಿ ಕಟ್ಟಿಸ್ಕೊಳೋಕೆ ಕಾದು ಕೂತಿದ್ದೀನಾ ?

ಪ್ರಕೃತಿ ಪರಮಾತ್ಮನ ಪ್ರತಿರೂಪ.

ತಾತ್ಪರ್ಯವು ತಾನಾಗಿಯೇ ತಿಳಿಯುತ್ತದೆ.

ಕಾಳಸರ್ಪಕ್ಕಿಂತ ಕಠೋರವಾದ ಕಠಿಣಾತ್ಮನು . 

ಸಮಯ ಸಾಧಿಸಿ ಸಂಧಿಸ್ತೀನಿ. ಇದು ಸಂದರ್ಭವೂ ಅಲ್ಲ ಸರಿಯಾದ ಸ್ಥಳವೂ ಅಲ್ಲ,

ಹಿಂದಿ ಸಿನಿಮಾ ಮತ್ತು  ಸೀರಿಯಲ್ ಗಳಲ್ಲಿ 'ಪಾಲಾ ಪೋಸಾ ' (ಅಂದರೆ ಪಾಲಿಸಿ ಪೋಷಿಸಿ ) ಕೇಳಿರಬಹುದು. ಅದಕ್ಕೆ ಸಮಾನವಾಗಿ ಕನ್ನಡದಲ್ಲಿ ಏನಿದೆ ಗೊತ್ತೇ ? 'ಸಾಕಿ ಸಲಹಿ ' .

Rating
Average: 4 (1 vote)