ನಾನು ಬಂದಿದ್ದೆ...ನುಡಿ ಜಾತ್ರೆಗೆ

ನಾನು ಬಂದಿದ್ದೆ...ನುಡಿ ಜಾತ್ರೆಗೆ

ಸಾಹಿತ್ಯ ಸಮ್ಮೇಳನ ನಾನೆಂದು ನೋಡಿದವನಲ್ಲ ಹಾಗಾಗಿ ಬೆಂಗಳೂರಿನಲ್ಲೆ ನಡೆಯುವಾಗ ಬಿಟ್ಟರೆ ಮತ್ತೆ ನನ್ನ ಜೀವನದಲ್ಲಿ ಇಂತ ಅವಕಾಶ ಸಿಗುವುದೊ ಇಲ್ಲವೋ ?  ಹಾಗಾಗಿ ಶನಿವಾರ ಅಲ್ಲಿ ಹೋದೆ , ಒಳಗೆ ಹೋಗುವಾಗಲೆ ಜನ ನನಗೇನೊ ಸಂತೋಷ ಎಷ್ಟೊಂದು ಜನ ಜಂಗುಳಿ ಎಂದು. ಬಹುತೇಕ ಎಲ್ಲರು ಜನರ ಬಗ್ಗೆ ದೂಳಿನ ಬಗ್ಗೆ ಊಟದ ಅವ್ಯವಸ್ಥೆಯ ಬಗ್ಗೆಯೆ ಹೇಳುತ್ತಾರೆ ಬಹುತೇಕ ಮಾದ್ಯಮಗಳಲ್ಲಿ ಕೂಡ. ನನಗೆ ಅನ್ನಿಸಿದ್ದು ಇಷ್ತೊಂದು ಕನ್ನಡಿಗರಿದ್ದಾರಲ್ಲ ಬೆಂಗಳೂರಿನಲ್ಲಿ ಎಂಬ ಸಂತೋಷ ದೂಳನ್ನು ನೋಡುವಾಗಲೆ ಅನ್ನಿಸಿದು ಇದು ನಿಜವಾಗಲು ’ಕನ್ನಡದ ಕನ್ನಡ ನೆಲದ ದೂಳು’ ಎಂದು.  ಪುಸ್ತಕ ಕೊಳ್ಳಲ್ಲಿ ಬಿಡಲಿ ಅಲ್ಲಿ ನೂಕು ನುಗ್ಗಲಂತು ಇತ್ತು. ಪುಸ್ತಕ ಮಳಿಗೆಗಳನ್ನು ನೋಡುವಾಗಲು ಜನ ಜನ ಜನ. ಆದರು ಏಕೊ ಕೆಲವು ಮಳಿಗೆಗಳಲ್ಲಿ ತೆಲಗು ಲೇಖಕರ ಬಾಷಂತರ ಕಾದಂಬರಿ ಗಳನ್ನೆ ನೋಡುವಾಗ ಅನ್ನಿಸುತ್ತಿತ್ತು ಏಕೆ ಕನ್ನಡ ಕಾದಂಬರಿಗಾರರೆಲ್ಲ ಎಲ್ಲಿ ಹೋದರು.  ಈಚೆಗೆ ಗ್ರಂಥಾಲಯಕ್ಕೆ ಹೋದರು ಹಾಗೆ ಆಗುತ್ತದೆ ಎಲ್ಲಿ ಕೈಯಿಟ್ಟರು ಬರೀ ಯಂಡಮೂರಿ ಯವರ ತೆಲುಗಿನ ಬಾಷಾಂತರದ ಪುಸ್ತಕಗಳೆ .  ಹಾಗೆಯೆ ಕೆಲವು ಸ್ನೇಹಿತರು ಸಿಕ್ಕಿದರು. ಹೊರಗೆ ಬಂದು ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಬಂದರೆ ಜಿ.ವಿ.ಯವರು ಟಿ.ವಿ ಚಾನಲ್ ಗಳ ಕಾರ್ಯಕ್ರಮಗಳ ಬಗ್ಗೆ ಹೇಳುತ್ತ , ಅಡುಗೆ ಕಾರ್ಯಕ್ರಮಗಳ ಬಗ್ಗೆ ಇಂಗ್ಲೀಷ್ ತರಕಾರಿಗಳ ಬಗ್ಗೆ ವಿವರಿಸುತ್ತಿದ್ದರು. ಸನಿಹ ಬಂದು ನೋಡಬೇಕೆಂದು ಬಲಗಡೆಯಿಂದ ಬಂದು ಹತ್ತಿರದಿಂದ ಮೇಲೆ ಕುಳಿತವರನ್ನೆಲ್ಲ ನೋಡಿದೆವು. ಮತ್ತೆ ಹೊರಗೆ ಕೆಲವು ಹಿರಿಯ ಕವಿಗಳನ್ನು ನೋಡುವ ಬಾಗ್ಯವು ಸಿಕ್ಕಿತ್ತು. ಅಷ್ಟರಲ್ಲಿ ಶಾಸಕ ಅಶೋಕ್ ರವರು ಒಳಬರುತ್ತಿದ್ದರಿಂದ ಸ್ವಲ್ಪ ಜನ ಸೇರಿದರು ಹಾಗಾಗಿ ಪುನಃ ಹಿಂದೆ ಬಂದೆವು.
         ಮನದಲ್ಲೇನೊ ಕುತೂಹಲ ನಮ್ಮ ಸಂಪದಿಗರು ಯಾರಾದರು ಬಂದಿರುವರ ಎಂದು?  ಎದುರಿಗೆ ಸಿಕ್ಕಿದರು ನಾನವರನ್ನು ಗುರುತು ಹಿಡಿಯಲಾರೆ ಅನ್ನಿಸಿತು ಏಕೆಂದರೆ ಬಹಳಷ್ಟು ಜನ ತಮ್ಮದೆ ಬಾವಚಿತ್ರ ಉಪಯೋಗಿಸುವದಿಲ್ಲ !!!
        ಹೊರಗೆ ಹೊರಟಾಗ ಅನ್ನಿಸಿದ್ದು ಮಕ್ಕಳನ್ನು ಆಕರ್ಷಿಸಲು ಅವರಲ್ಲಿ ಕನ್ನಡ ಜಾಗೃತಿ ಮೂಡಿಸಲು ಏನಾದರು ಮಾಡಬಹುದಿತ್ತು ಎಂದು. ಅವರಿಗಾಗಿ ಏನು ಇರಲಿಲ್ಲ. ಮಕ್ಕಳ ಪುಸ್ತಕಗಳು ಹೆಚ್ಚು ಕಾಣಲಿಲ್ಲ. ಕನ್ನಡ ಬಾರತಿಯ ಬೊಂಬೆಗಳೂ , ಕನ್ನಡ ಅಕ್ಷರ ಸಂಖ್ಯೆಗಳನ್ನು ಪರಿಚಯಿಸುವ ಅಟಿಕೆಗಳು ಕನ್ನಡದ ಬೆಲೂನುಗಳು  ಹೀಗೆ ಮಕ್ಕಳಿಗಾಗಿ ಏನಾದರು ವಿಷಯಗಳನ್ನು ಮಾರಟಗಾರರು ಯೋಚಿಸಿದ್ದರೆ ಚೆನ್ನಿತ್ತು.
    ಮತ್ತೆ ಹೊರಗೆ ಬಂದು ಗಾಡಿಗಾಗಿ ಗಾಂದಿಭಜಾರ್ ಹತ್ತಿರ ಬಂದರೆ ವಿಧ್ಯಾರ್ಥಿಭವನದಲ್ಲಿ ಮತ್ತೊಂದು ಸಮ್ಮೇಳನ ನಡೆದಿತ್ತು ! , ನಗುತ್ತ ದೂರದಿಂದಲೆ ನೋಡಿ. ನಮ್ಮ ದ್ವಿಚಕ್ರಗಳನ್ನು ತೆಗೆದುಕೊಂಡು ಮನೆಗೆ ಹೋದರೆ ಮಗಳ ಪ್ರಶ್ನೆ "ಏಕೆ ಇಷ್ಟು ತಡವಾಯಿತು ?"  ಉತ್ತರಿಸಿದೆ , ಮತ್ತೆ ಉದ್ಗಾರ " ಮನೆಗೆ ಬಂದು ಹೋಗಿದ್ದರೆ ನಾನು ಬರುತ್ತಿದ್ದೆ !!"
............
   
 

Rating
No votes yet

Comments