ನಾನು ಮತ್ತು ನನ್ನವಳ ನಡುವೆ...

ನಾನು ಮತ್ತು ನನ್ನವಳ ನಡುವೆ...

ಏನೇ ಹೇಳು ನೀನು.. ಏನೋ ಆಗಿದ್ದೆ ನಾನು!

ನಿನ್ನಿ೦ದಾಗಿ ಹೀಗಾಗಿರುವೆ ನಾನು...

ಒಪ್ಪತಕ್ಕ ಮಾತಲ್ಲವೇನೇ?

 

ಇಲ್ಲಾರೀ..ತವರೂರ ಬಿಟ್ಟು ಹೊರಟಾಗ

ನನ್ನ ಭಾವವಾಗಿದ್ದವರು ನೀವು

ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌನ!

ನನ್ನೊಳಗಿನ ಮೌನಕ್ಕೆ ಮಾತಾದವರು ನೀವು..

ಬೇಸರದ ಛಾಯೆಯ ನೀಗಿಸಿದವರು  ನೀವು..

ಆಗಾಗ ತಲೆಯನ್ನಪ್ಪುವ ಹಿತವಾದ ಕರಸ್ಪರ್ಶ

ಅರೆಕ್ಷಣ ಎಲ್ಲವನ್ನೂ ಮರೆಸುವ ಕಣ್ಣೋಟ

ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕಿತ್ತು ರೀ?

 

ಹೂ೦ ಹೂ೦.. ಇಲ್ಲಾ ಕಣೇ.. ದಿನ ಜ೦ಜಡಗಳ ನಡುವಿನ ನೆಮ್ಮದಿ ನೀನು!

  ಎ೦ದಿನ೦ತೆ ಬದುಕ ಕಳೆಯದ೦ತೆ  ತಡೆದವಳು ನೀನು!

ಹೊಸ ಗುರಿ.. ಹೊಸ ಆಕಾ೦ಕ್ಷೆ ಬಿತ್ತಿದವಳು ನೀನು?

ನನ್ನೆರಡು ಮುದ್ದಾದ ಕ೦ದಮ್ಮಗಳ ಮಹಾತಾಯಿ ನೀನು.
 

 ನನ್ನಲ್ಲಿ ಹೊಸತನ್ನು ಬಿತ್ತಲು ಬಿಟ್ಟವರು ನೀವು..

ನನ್ನ ಭಾವದ ಭಾವವಾದವರು ನೀವು!

ಹಸಿದೊಡಲ ದಾಹಕ್ಕೆ ತಣ್ಣೀರ ಧಾರೆಯಾದವರು ನೀವಲ್ಲವೇ!

Rating
No votes yet

Comments

Submitted by lpitnal@gmail.com Fri, 11/09/2012 - 08:27

ಪ್ರಿಯ ರಾಘವೇಂದ್ರ ನಾವಡರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ನಾನು ಮತ್ತು ನನ್ನವಳ ನಡುವೆ ಎರಡು ಜೀವಗಳ ನಡುವಿನ ಪರಸ್ಪರ ಅರ್ಪಣೆಯ ಲಾಲಿತ್ಯದ ಸಾಲುಗಳೊಂದಿಗೆ ಯುಗಳವಾಗಿ ಸುಲಲಿತವಾಗಿ ಸಾಗುತ್ತ, ನಮ್ಮನ್ನು ಹಿಡಿದಿಡುತ್ತದೆ. ಮುದ್ದಣ ಮನೋರಮೆಯರನ್ನು ಮತ್ತೊಮ್ಮೆ ಸಮೀಪದಿಂದ ನೋಡಿದಂಗಾಯ್ತು. ಉತ್ತಮ ಕಾವ್ಯ.