ನಾನು ಮತ್ತು ಮಳೆ

ನಾನು ಮತ್ತು ಮಳೆ

ಮಳೆ ಮತ್ತು ನಾನು
 
ಸುರಿವ ಮಳೆಗೂ ,ಹರಿವ ತೊರೆ ಗೂ ತೀರದ ನಂಟು ,
ಮುತ್ತು ಕೊರೆವ ಪುಟ್ಟ ಹನಿಯು ,ಬೆಟ್ಟ ಕರಗಿಸುತದೆ ,
 
ನಾನು  ಸಣ್ಣವಳಿದ್ದಾಗ  ಮಳೆ ಎಂದರೆ ಭಾರಿ ಖುಷಿ ಮಳೆಗಾಲಕ್ಕಾಗಿ ಯೇ  ಅಮ್ಮ ನನಗೂ ಅಣ್ಣನಿಗೂ ಖರೀದಿಸುವ ರೈನ್ ಕೋಟು ,ಅಕ್ಕನ ಬಣ್ಣದ ಕೊಡೆ .ಕೊಡೆ ಬೆಳಗಿದಸ್ಟು ,ಮಳೆ ಕೋಟು ಹಾಕಿದಷ್ಟು,ನೆನಪುಗಳು ಗರಿಕೆದರಿ ಕೊಳ್ಳುತವೆ .ಮಳೆಗಾಲದ ಚಪ್ಪಲಿಯ ಸದ್ದಿಗೂ ಮಳೆ ಹನಿಯ ಶಬ್ದಕ್ಕೂ ಯಾವ ವೆತ್ಯಾಸವಿಲ್ಲ .ಆ ದಿನಗಳನ್ನು ನೆನಪಿಸಿಕೊಂಡರೇ  ಮತ್ತೆ  ನನಗೆ ಬಾಲ್ಯ ಬರಬಾರದೇ ಅನ್ನಿಸುತ್ತೆ .ಕೊಡಗಿನ ಮಳೆಎಂದರೆ ಕೇಳಬೇಕೆ ,ಜಡಿಗುಟ್ಟುವ ಮಳೆ ,ಸುರಿವ ಮಳೆಗೆ ತೊಯ್ದು  ತೊಪ್ಪೆಯಾದ ಹಸಿರ ರಾಶಿ .ಬಣ್ಣ ತುಂಬಿಕೊಂಡು ಯಾವುದೇ ಕಲ್ಮಶವಿಲ್ಲದೆ ಹರಿವ ನನ್ನೂರಿನ ಪುಟ್ಟ ಹೊಳೆ ,ಪುಟ್ಟ ಹೊಳೆಯೂ ಯಾವತ್ತಿನ ಒನಪು ವ್ಯೆಯ್ಯಾರ ಬಿಟ್ಟು  ಪುಟಿದು ತೊನೆ ದು  ಹಾರುತ್ತಾ ರಭಸದಿ ನಿಂದ ಸಾಗುತದೆ .ಈ ಮಳೆಗೂ ಶಾಲೆಗೂ ಏನೋ ಹಳೆಯ  ಸಂಬಂಧ ,ಶಾಲೆ ಬಿಡಲು ಇನ್ನೇನು ಕೆಲವು ಗಳಿಗೆಗಳಿವೆ ಎನ್ನುವಾಗಲೇ  ಶುರುವಾಗುತ್ತೆ  ದಪ್ಪ ದೊಡ್ಡ ಹನಿಗಳ ನೃತ್ಯ .ಚಂದನೆಯ  ದಿನಗಳವು ,ನಾನೂ ನನ್ನ ಅಣ್ಣ ಶಾಲೆಯ ವರಾoಡದಲ್ಲೇ ಸೂರಿ ನಿಂದ ಬೀಳುವ ಹನಿಗಳೊಂದಿಗೆ ನಾವೂ ಅರ್ಧ ತೊಯ್ದು ತೊಪ್ಪೆಯಾಗುತ್ತಿದ್ದೆವು . ಅಂತೂ ಮಳೆ ಕಡಿಮೆಯಾಗುತ್ತದೆ ಅನ್ನಿಸುವಾಗಲೇ ನಮ್ಮ ಪುಟ್ಟ ಕಾಲುಗಳು ದೊಡ್ಡ ದೊಡ್ಡ ಹೆಜ್ಜೆ ಹಾಕಲು ಶುರು ಮಾಡು ತಿದ್ದವು ,ಸುಮಾರಾಗಿ ಓಡಿಕೊಂಡೆ ಹೋಗಿ ಮನೆ ಸೇರುತಿದ್ದೆವು .ಅಷ್ಟೂ ಮಳೆ ,ಗಾಳಿ ಚಳಿಗೆ ನೆನೆದರೂ ಸಣ್ಣ ಶೀತವೂ ಬಾದಿಸುತ್ತಿರಲಿಲ್ಲ .ಮನೆ ತಲುಪುತಿದ್ದನಂತೆ ಅಜ್ಜಿಯ ಕರಿ ಕಾಫೀ ಬೆಳಗಿನ ರೊಟ್ಟಿ ಸುರಿವ ಮಳೆಗೆ ಭಾರಿ ಮೃಷ್ಟಅನ್ನ  ವೆನಿಸುತಿತು.ಅಂದಿನ ಬೆಳಗಿನ ರೊಟ್ಟಿ  ಕರಿ ಕಾಪಿ ಇಂದಿನ ನನ್ನ ಮಕ್ಕಳು  ಆಸೆ ಪಟ್ಟು  ಇಷ್ಟ ಪಟ್ಟು ತಿನ್ನುವ ಯಾವ ಪಿಜ್ಜಾ ಬರ್ಗರ್  ಹಿಂದೆ ಹಾಕಲಾರದು .ಮಳೆಗಾಲದ  ರಜೆಗಳು ಮಳೆಯ ಆಟಗಳು ಇನ್ನೂ ಹಸಿರು ಹಸಿರು .ವಿಪರ್ಯಾಸ ವೆಂದರೆ ನನ್ನ ಮಕ್ಕಳಿಗೆ ಸಿಗುವ ಬೇಸಿಗೆಕಾಲದ ರಜೆ ಸರಿಯಾಗಿ ಇಲ್ಲಿ ಮಳೆಗಾಲ ಶುರುವಾಗುತ್ತೆ .ಮರೆಯದೆ ಮಕ್ಕಳಿಗೆ ಬಣ್ಣ ಬಣ್ಣದ ಪುಟ್ಟ ಪುಟ್ಟ ಕೊಡೆಗಳ್ಳನ್ನು ಕೊಡಿಸುತ್ತೆನೆ .ಅವರು ರೈನ್ ರೈನ್ ಗೊ ಅವೇ ಅಂತ ಆಡುವುದನ್ನು ವಿಡಿಯೋ  ಮಾಡಿಕೊಳ್ಳುತೆನೆ. ಬತ್ತ ಬೀಜ ನೀರಲ್ಲಿ ನೆನಸಿ ಅದು ಮೊಳಕೆ ಕಟ್ಟಿ ಹಸಿರೇಎಲೆ ಟಿಸಿಲೋಡೇಯುವ ತನಕ ಸಸಿಯ ಜೀವನ ಕ್ರಮ ಪೂರ್ತಿ ಪ್ರಕ್ರಿಯೆ ನೋಡುತಿದ್ದೆವು. ಪೈರು ಕೀಳುವ ಸಮಯದಿನಿಂದ ಹಿಡಿದು ನಾಟಿ ವರೆಗಿನ ಎಲ್ಲಾ ಕೆಲಸ ನಾವೇ ಮಾಡಿ ಮುಗಿಸಿದ ಹಾಗೆ ಬೀಗುತಿದ್ದೆವು. ಅವಾಗೆಲ್ಲಾ  ಮಾಮ ಹೇಳುತಿದ್ದ  ಮಾತು ಇವಾಗಲೂ ನೆನಪಿಗೆ ಬರುತದೆ. ಓದದೇ ಇದ್ದರೆ ಏನಂತೆ ಕೆಲಸಕ್ಕೆ ಜನ ಒಂದು ಭರ್ತಿ. ದನ ಮೆಯ್ಯಿಸಿ ಕೊಂಡು ನಾಟಿ ಮಾಡಿಕೊಂಡು ಕಾಫಿ ತೋಟದಲ್ಲಿ ಕಾಫೀ ಕುಯ್ಕ್ಅಂಡ್ ಇರು ಎಂದು ಚೆeಡಿಸುತಿದ್ದದ್ದು ಅದು ಯಾವುದು ನನ್ನ ತಲೆಗೆ ಹೊಕ್ಕುತಿರಲಿಲ್ಲ. ಮಳೆ ಹಸಿರು ಪೈರು ಕೆಸರು ಪೈರಿನಲ್ಲಿ ಊರಿ ನಿಲ್ಲುವ ಪರಿ ನೋಡುವುದೇ ವಿಸ್ಮಯ. ಸೋಜಿಗವೆಂದರೆ ಮಳೆ  ಗಾಲದಲ್ಲಿ ತುಂಬಿ ಹರಿವ ಹೊಳೆ ದಾಟಿ ನಾವೇ ಶಾಲೆಗೆ ಹೋಗಿ ಸುರಕ್ಷಿತವಾಗಿ ಮನೆ ಸೇರುತಿದ್ದೆವು.ಅವುಗಳ ನ್ನು ನೆನೆಸಿಕೊಂಡರೇ ಹೃದಯ ಒಮ್ಮೆ ಸಣ್ಣಗೆ ನಡುಕ ಬರುತ್ತೆ. ಮಳೆಯ ರಬಸಕ್ಕೆ ಸ್ವಲ್ಪ ಕೈ ಜಾರಿದರೂ ನಾವು ನೀರು ಪಾಲು. ಈಗ ನನ್ನ ಮಕ್ಕಳ ಶಾಲೆಯ ಬಸ್ ಮನೆ ಕೆಳಗೆ ಬಂದು ನಿಂತರು ನಾನೇ ಹೋಗಬೇಕು ಮನೆಗೆ ಕರೆತರಲು. ನನ್ನ  ಮಕ್ಕಳ ವಯಸ್ಸಿಗೆ ನಾನು ಅಣ್ಣ ಇಬ್ಬರೇ ಎರಡು ಕಿಲೋಮೀಟರ್  ನಡೆದು ಶಾಲೆ ಸೇರುತಿದ್ದೆವು. ಯಾವ ಮಳೆ ಗಾಳಿಯೂ ಅಡ್ಡ ಬರುತಿರಲಿಲ್ಲ. ನಾವೇ ದ್ಯೆರ್ಯವಂತರು. ಮಳೆಗಾಲದಲ್ಲಿ ಬತ್ತದ ಗದ್ದೆ ಪೈರು ನೆಡುವ ಕೆಲಸದಾಳುಗಳಿಗೆ ಚಹಾ ಕಾಫೀ ಕೊಡಲು ಅಜ್ಜಿ ಹೇಳಿದಾಗಲನಂತೂ ನಾನು ಅಣ್ಣ ಪೈಪೋಟಿ ಯಲ್ಲಿ ಕೊಡೆ ಚೆಲ್ಲಿ ಮಳೆಯಲ್ಲಿ ಓಡುತಿದ್ದೆವು. ಗದ್ದೆಯಲ್ಲಿ ಕೆಸರು ಪೈರು ಮಳೆಯೊಂದಿಗೆ ಆಟ. ಮಳೆ ಜೋರಾಗಿ ಹೊಳೆ ಮೀರಿ ಗದ್ದೆ ಏರಿ ಬರುವ ಸಣ್ಣ ಸಣ್ಣ ಮೀನುಗಳು ರಾಶಿ ನೋಡುವುದೇ ಚಂದ. ಅಜ್ಜಿ ಮಾವನ ಸ್ವರ ಕೇಳದೆ ಹೋದರೆ ನಾವು ನಮ್ಮ ಆಟಗಳಲ್ಲಿ ಮುಳುಗಿಹೋಗಿ ಬಿಡುತಿದ್ದೆವು. ಮಳೆಯ ದಿನಗಳಲ್ಲಅಂತೂ ಮನೆಯ ಹೊರಗೆ ಕಾಲಿಟ್ಟರೇ ಒಳಗೆ ಬರುವಾಗ ಬಿಸಿ ನೀರಿನ   ತಂಬಿಗೆ ಕಾಲು ತೊಳೆಯಲು  ಸಿದ್ದವಾಗಿ ನಿಂತಿರುವತಿತು.ರಾತ್ರಿಗಳಲ್ಲಿ ಮಳೆಯ  ಸದ್ದಿಗೆ ಅಜ್ಜಿಯ ರಾಜಕುಮಾರಿ ಮತ್ತು ರಾಕ್ಷಸರು ಪುಣ್ಯಕೋಟಿ ಕಥೆಗಳನ್ನೂ ಅಜ್ಜಿ ಸಾವಿರ ಭಾರಿ ಹೇಳಿದರು ನಾವು ಸಾವಿರದ ಒಂದನೆಯ ಬಾರಿ ಕೇಳಲು ನಾವು ಸಿದ್ದ ವಾಗುತಿದ್ದೆವು .ನಾನು ತುಂಬಾ ಚಿಕ್ಕವಳಿದ್ದ ಕಾರಣ ನೀರವ ಮಳೆ ರಾತ್ರಿಗೆ ಹೆದರಿ ಗುಬ್ಬಚ್ಚಿಯಾಗಿ ಮದ್ಯದಲ್ಲೇ ನಿದ್ದೆ ಹೋಗಿ ಬಿಡುತಿದ್ದೆ .ಕೊಡಗಿನ ಚಳಿ ಮಳೆ ಬಿಸಿ ಕಂಬಳಿ ಅಜ್ಜಿ ಮಾಮನ ಆರೈಕೆ ಇಂದಿಗೂ ನನ್ನ ಬಾಲ್ಯಾ ದ ಬಹು ಬೆಚ್ಚನೆಯ ದಿನಗಳು .ನಗುವಿನ ವಿಷಯವೆಂದರೆ ಸ್ವಲ್ಪ ಹೆಚ್ಚಾಗಿ ಮಳೆ ಕಂಡ ಬೆಳಗಿನ ದಿನಗಳಲ್ಲಿ ಅಜ್ಜಿನೆ ಸ್ವತಃ ನನಗೆ ಶಾಲೆಗೆ ರಜೆ ಘೋಷಣೆ   ಮಾಡುತಿದ್ದಳು .ಅಣ್ಣ ಸ್ವಲ್ಪ ದೊಡ್ಡ ತರಗತಿಯಲ್ಲಿ ಓದುತಿದ್ದ ಕಾರಣ ಅವನಿಗೆ ಅಜ್ಜಿಯ ರಜೆಯ ಯಾವ ಭಾಗ್ಯವೂ ಇರುತಿರಲಿಲ್ಲ .ಎಷ್ಟೋ ಸಲ ಶಾಲೆಗೆ ಹೊರಟು ನಿಂತು ಇನ್ನೇನು ಹೊರಡಬೇಕು ಎನ್ನುವಾಗಲೇ ದೊಡ್ಡ ಶಬ್ದದೊಂದಿಗೆ ದಪ್ಪನೆಯ ಹನಿ ಮಳೆ ಪ್ರತ್ಯಕ್ಷ .ರಬಸದಾ ಮಳೆಗೆ ಹೆದರಿ ನಾನು ಸಣ್ಣವಳಾದ ಕಾರಣ ಮತ್ತೆ ಶಾಲೆಗೆ ಚಕ್ಕರ್  .ಅಣ್ಣನಿಗೊ ಕೆಟ್ಟ ಕೋಪದ ದಿನಗಳು ಅವು .ಇವಾಗಲು ನಾನು ಅಣ್ಣ ಇವೆಲ್ಲ ಮೆಲುಕು ಹಾಕಿ ನಗುವುದು ಉಂಟು .ಅಕ್ಕನೋ ಭಾರೀ ಗಾಳಿ ಮಳೆಯಿ ಯಿಂದ ಆಕಾಶವೆ ಕೆಳಗೆ ಬಿದ್ದರು ಅವಳ ಪಠ್ಯ ಕ್ರಮಗಳನ್ನ ಚಾಚೂ ತಪ್ಪದೆ ನಿಭಾಯಿಸಿಕೊಂಡು ಹೋಗುತಿದ್ದಳು..ಆದರೂ ಅದು ಯಾಕೋ ಇತೀಚಿನ ಮಳೆ ಭಾರಿ ಭಯ  ದಿಗಿಲು ಹುಟ್ಟಿಸುತ್ತೆ .ಒಂದೊಂದು ಹನಿಗಳ ಸದ್ದು ಮನೆ ಮಟ ಕಳೆದುಕೊಂಡವರ  ಕಣ್ಣೀರ ಧಾರೆ  ಎನಿಸುತ್ತದೆ .ಬೀಸುವ ಸಣ್ಣದೊಂದು ಗಾಳಿಯು ಹತಾಶ ನಿಟ್ಟುಸಿರು ಎನಿಸುತದ.ಮಳೆಯೇ ನನ್ನದೊಂದು ಪ್ರಾರ್ಥನೆ ನೀ  ಮತ್ತೆ ನನ್ನ ಭಾಲ್ಯಾದ ಮಳೆಯಾಗು ಕರೆದಾಗ ಮುತ್ತು ಕೊರೆವ ಹನಿಯಾಗು .
 
ಪವಿತ್ರ ಪ್ರಶಾಂತ್
ಅಬುಧಾಬಿ
 
 
 

Rating
No votes yet