ನಾನು ಸೋಲು - ನೀನು ಗೆಲುವು
ನಾನು ಸೋಲು - ನೀನು ಗೆಲುವು
ಸೋಲಿಗೆ ಕಾರಣ ನಾನು
ಗೆಲುವಿಗೆ ಕಾರಣ ನೀನು ||
ನಿನ್ನಯ ದಯೆಯದರಿಂದ
ಸೋತರು ಉಳಿದೆನು ನೋಡು ||
ಅರಿಯದೆ ಪಡೆದಿಹ ಸಿರಿಗೆ
ನೀನಲ್ಲದೆ ದೊರೆಯಾರದಕೆ ?
ಪೋಷಿಸಿದವರುಗಳನ್ನ
ತೋರುವೆ ನೀ ಗೆಲುವೊಳಗೆ ||
ಕಾಣದಿರುವ ನಾ ಮೂಢ
ಇದರೊಳದ ರೂಡಿ ಗೂಢ
ಕಂಡಾಗ ಸತ್ಯ ತಿಳಿದಾಗ ಮಿಥ್ಯ
ಸಂಭ್ರಮದ ಗೆಲುವು ನಿತ್ಯ ||
ಅರಿತಿರದೆ ಸೋತ ಭಾವ
ಅಣಕಿಂದ ಕಂಡ ನೋವ
ನಿನಗೇಕೆ ದೂರಬೇಕಯ್ಯ ನಾನು
ಸೋತಿರುವ ಕಾರಣವನು ||
- ಸದಾನಂದ
Rating
Comments
ಉ: ನಾನು ಸೋಲು - ನೀನು ಗೆಲುವು: ಸತ್ಯ,ಮಿಥ್ಯ ,ನಿತ್ಯ
In reply to ಉ: ನಾನು ಸೋಲು - ನೀನು ಗೆಲುವು: ಸತ್ಯ,ಮಿಥ್ಯ ,ನಿತ್ಯ by venkatb83
ಉ: ನಾನು ಸೋಲು - ನೀನು ಗೆಲುವು: ಸತ್ಯ,ಮಿಥ್ಯ ,ನಿತ್ಯ