ನಾನೂ ಎಪ್ರಿಲ್ ಫೂಲ್ ಆದೆ !!
ಬೆಳಗ್ಗೆ ೯ ಗಂಟೆಯ ನ್ಯೂಸ್ ಪೂರ್ತಿ, ಟಿ.ವಿ.೯ ನವರು ಜನರನ್ನು ಫೂಲ್ ಮಾಡಿದರು. ಮೊದಲಿಗೆ ದೇವೇಗೌಡರ ನ್ಯೂಸ್ ಹಾಕುವ ಬದಲು ಕಾಂಗ್ರೆಸ್ನ ನ್ಯೂಸ್ ಹಾಕಿದ್ದರೆ ಇನ್ನೂ ಚೆನ್ನಾಗಿರುತಿತ್ತು. ಆದರೂ ಮಜವಾಗಿತ್ತು.
ನಾಡಿಗರ ಸಂಪದ ನಿಲ್ಲೋ ಸುದ್ದಿ(ಅಷ್ಟೇ) ಇನ್ನಷ್ಟು ಮಜ ಕೊಟ್ಟಿತು.
ಆದರೆ ನಾನು ನಿಜಕ್ಕೂ ಫೂಲ್ ಆದುದು ಸಂಪದ ಬಳಗದ ನೂತನ ಸದಸ್ಯೆ ‘ಚಿತ್ರಾ ಎ’ ಅವರ ಕವನದಿಂದ.
ಮೊದಲು ಬಹಳ ತಲೆಬಿಸಿಯಾಯಿತು.
ಹೀಗೂ ಉಂಟೇ? ಹೀಗಾಗಲು ಸಾಧ್ಯವೇ? ಎಂದೆಲ್ಲಾ ಚಿಂತಿಸಿದೆ.
ಕೊನೆಗೆ ಅದು ಎಪ್ರಿಲ್ ಫೂಲ್ ಎಂದಾಗ ನಕ್ಕೂ,ನಕ್ಕೂ ಸುಸ್ತಾದೆ.
ಎ.ಚಿತ್ರಾರವರಿಗೆ ನೂರು ನನ್ನಿಗಳು.
ಒಂದು ಚಿಕ್ಕ ಸಲಹೆ-ತಮ್ಮ ‘ಕೆರೆತ’ ಕವನವನ್ನು ಬ್ಲಾಗ್ ನಲ್ಲಿ ಹಾಕಿರುತ್ತಿದ್ದರೆ ಇನ್ನೂ ಚೆನ್ನಾಗಿತ್ತು.
-ಗಣೇಶ.
Rating