ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ
ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ
ಪಾಪ ಇವತ್ತಂತೂ ಯಾವನೋ ಕಳ್ಳನ ಗ್ರಹಚಾರ ಅಂತ ಕಾಣ್ಸತ್ತೆ.
ಈ ರುದ್ರನ ಗೆಳೆಯ ಪೋಲೀಸನನ್ನು ನಾನೂ ಬಲ್ಲೆ. ಹೊರಗಡೆ ಜೋಗ ನಿಂತಿದ್ದ.
ಅವನು ನನ್ನನ್ನು ನೋಡಿ ಮುಖ ಕೆಳಗೆ ಹಾಕಿದ, ಅಂದರೆ ರುದ್ರನಿಗೆ ನಿನ್ನೆಯ ವಿಷಯ ಗೊತ್ತಾಯ್ತು ಅಂತ ಕಾಣ್ಸತ್ತೆ.
ಇದರ ಅರ್ಥ ನಿನ್ನೆಯ ಘಟನೆಯಲ್ಲಿ ತನ್ನ ಆಟ ನಡೆಯಲಿಲ್ಲ ಅಂತ ತಿಳಿದು ಹ್ಯಾಗಾದರೂ ಬಾಸನ್ನು ತನ್ನ ಕಡೆಗೆ ನಡೆಸಲು ಪಿತೂರಿ ನಡೆಸಿದ್ದಾನೆ.
ಇದೆಲ್ಲಾ ಖುರ್ಚಿಗಾಗಿ ರಾಜಕೀಯದವರು ನಡೆಸಿದ ಪಿತೂರಿ ತರವೇ ನಡೀತಾ ಇದೆ. ಹೋಗಲಿ ಇದು ಇದ್ದದ್ದೇ, ಅದೃಷ್ಟ ಯಾರ ಕಡೆಗಿದೆಯೋ?.
ಸಂಜೆಯ ವರೆಗೆ ನನಗೆ ಫುರ್ಸೊತ್ತೇ ಇರಲಿಲ್ಲ. ನೀರಿನ ಸಮಸ್ಯೆ ಬಗೆ ಹರಿಸಲಿತ್ತಲ್ಲ!! ನಾನು ಆ ತಲೆ ಬಿಸಿಯಲ್ಲೇ ಇದ್ದೆ. ನನಗೆ ಆಫೀಸಿಗೆ ಹೋಗಲಾಗಲೇ ಇಲ್ಲ. ಪಂಪ್ ಹೌಸ್ ನಿಂದಲೇ ಎಲ್ಲಾ ಕೆಲಸ ಮುಗಿಸಿಯೇ ರಾತ್ರೆ ಪಾಳಿಯ ಚೌಕಿದಾರ್ ಸಂಜೆ ಕೆಲಸಕ್ಕೆ ಬಂದ ಮೇಲೇ ನಾನು ಮನೆಗೆ ನಡೆದೆ. ಪೇಟೆಯ ಹತ್ತಿರ ಬಂದಾಗ ಗ್ರಹ ಮಂತ್ರಿ ಮನೆಗೆ ಬೇಕಾದ ವಸ್ತುಗಳ ಪಟ್ಟಿಯ ನೆನಪು ಅಕಾಸ್ಮಾತ್, ಅದೃಷ್ಟವಶಾತ್ ನೆನಪಿಗೆ ಬಂತು.( ಇಲ್ಲದಿದ್ದರೆ ಕಳೆದ ನಾಲ್ಕು ದಿನಗಳಿಂದ ಏನೇನೋ ಸಬೂಬು ಹೇಳುತ್ತಾ ತಪ್ಪಿಸಿಕೊಂಡಿದ್ದೆನಾದರೂ, ಇವತ್ತಿನ ಗೃಹ ಯುದ್ಧ ತಪ್ಪಿಸಲಸಾದ್ಧ್ಯವಿತ್ತು).
ನೀಲಿಯನ್ನು ಪೇಟೆಯ ಕಡೆ ತಿರುಗಿಸಿದೆ.
************************* ******************************
ನಾನು ಬೆಳಿಗ್ಗೆ ಆಫೀಸು ತಲುಪುವಾಗ ಎಂದಿನಂತೆ ಸ್ವಲ್ಪತಡವಾಯ್ತು.
ದೂರದಿಂದಲೇ ಬಾಸ್ ನ ಗಲಾಟೆ ಕೇಳಿ ಬರುತ್ತಲಿತ್ತು.
"ಏನ್ರೀ ನಿಮಗೆ ತಲೆ ಸರಿ ಇದೆಯೇನ್ರೀ? ನಿಮ್ಮನ್ನ ಯಾರ್ರೀ ಕೆಲಸಕ್ಕೆ ತಗೊಂಡಿದ್ದೂ? ನಿಮಗೆ ಚಾರ್ಜ್ ಶೀಟ್ ಕೊಡ್ತೇನೆ"... ನಿಮ್ಮ.....!!?? " ಶೇಟೀ , ರಾವ್ ಅವರು ಬಂದ್ರಾ ನೋಡೂ..."
ಶೇಟಿ ನಗಾಡ್ತಾ ನನ್ನ ನೋಡಿ " ಸಾರ್ ಆಗಲೇ ಮೂರ್ನಾಲ್ಕು ಬಾರಿ ನಿಮ್ಮನ್ನು ಕರೆದ್ರು , ಬೇಗ ಹೋಗಿ ಸಾರ್" ಎಂದ.
" ನಾನು ಒಳ ನುಗ್ಗಿ ಏನ್ಸಾರ್ ಕರೆದ್ರಾ" ಅಂದೆ.
ನನ್ನ ನೋಡಿ ಬಾಸ್ ನಕ್ಕು "ಬನ್ರೀ ರಾವ್ ಕುಳಿತುಕೊಳ್ಳಿ "
ಖುರ್ಚಿನೂ ತೋರಿಸಿದರು.
ನಾನು ಪಕ್ಕದಲ್ಲಿ ನಿಂತೇ ಇದ್ದ ರುದ್ರನ ಕಡೆಗೊಮ್ಮೆ ದೃಷ್ಟಿ ಹಾಯಿಸಿದೆ. ಅಲ್ಲಿ ಅಸಹಾಯಕತೆಯಿತ್ತು.
ಬಾಸ್ ರುದ್ರನ ಕಡೆ ನೋಡುತ್ತಾ " ನಿನ್ನೆಯೇ ನಿನ್ನ ನಾಟಕವೆಲ್ಲಾ ಗೊತಾಗಿತ್ತು, ಜೋಗನಿಂದ, ಈ ರಾವ್ ಅವರ ಸಹಾಯವಿಲ್ಲದೇ ಹೋಗಿದ್ದರೆ " ನನ್ನ ಕಡೆ ತಿರುಗಿ" ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರೂ ಕಡಿಮೆಯೇ "
ರುದ್ರನ ಕಡೆ ನೋಡುತ್ತಾ " ನಿನ್ನ ಪೋಲೀಸಪ್ಪ ನಿನ್ನೆ ನನ್ನ ಶ್ರೀಮತಿಯನ್ನ ನನ್ನದೇ ಕ್ರೆಡಿಟ್ ಕಾರ್ಡ್ ಕದ್ದ ಮತ್ತು ಉಪಯೋಗಿಸಿದ ತಪ್ಪಿಗೆ ಜೈಲಿಗೆ ಹಾಕ್ತಾ ಇದ್ದ! ರಾವ್ ಅವರು ಸರಿಯಾದ ಸಮಯಕ್ಕೆ ಆ ಮಾಲ್ ಗೆ ಬಾರದೇ ಹೋಗಿದ್ದರೆ!!."
ನಾನು ಸಮಾಧಾನ ಮಾಡಲೆತ್ನಿಸಿದೆ " ಸರಿ ಹೋಗಲಿ ಬಿಡಿ ಸಾರ್ ಆದದ್ದಾಯಿತು, ಅಂದ ಹಾಗೆ ನಿಮ್ಮ ಕಾರ್ಡ್ ನಿಮ್ಮ ಶ್ರೀಮತಿಯವರ ಕೈಗೆ ಹೇಗೆ..? ಓಹ್ : ಅರ್ಥವಾಯ್ತು , ಅಂದರೆ ನಿಮ್ಮ ಕಾರ್ಡ್ ಅವರ ಕೈಯ್ಯಲ್ಲಿತ್ತು!!"
ಅವರೆಂದರು " ಹೌದು, ಅವರೊಂದಿಗೆ ನಾನೂ ಹೋಗಲಿದ್ದೆ, ಆದರೆ ನಾನು ಅದನ್ನು ಮರೆತು ಪಂಪ್ ಹೌಸಿಗೆ ಹೋದಾಗ, ಈ ರುದ್ರನ ನಾಟಕವೆಲ್ಲಾ ತಿಳಿಯಿತು. ಆತ ತನ್ನ ಜನರಿಂದಲೇ ರಾತ್ರೋ ರಾತ್ರೆ ನೀರು ಸಾಗಿಸುತ್ತಲಿದ್ದ.
ನಿಮ್ಮ ಹೆಸರು ಕೆಡಿಸಲು. ನೀವು ಹೊಸ ಚೌಕೀದಾರ್ ಇಟ್ಟು ಒಳ್ಳೆಯ ಕೆಲಸ ಮಾಡಿದಿರಿ"
ನಾನೆಂದೆ" ನನಗೂ ಹಿಂದಿನಿಂದಲೇ ಸಂಶಯವಿತ್ತು ಸಾರ್, ಅಂತೂ ತಲೆ ಬಿಸಿ ಹೋಯ್ತಲ್ಲಾ, ಆದದ್ದಾಯಿತು ಬಿಡಿ"
ನಾನೇಳಲು ಹೋದಾಗ ಕಲ್ಲೂರಾಮ್ ತಡೆದು
" ಪ್ರಮೋಶನ್ ಪಾರ್ಟಿ ಯಾವಾಗ?" ಎಂದು ಕೇಳಿ ನಕ್ಕರು.
****** ******* ******** ******************** ********* * ************
ಉತ್ಖನನ
೧. ಹಿತ ಶತ್ರು
"ನಮ್ಮ ಒಪ್ಪಂದದ ಪ್ರಕಾರ ನಾವು ನಿಮಗೆ ಕೊಟ್ಟ ಬಿಲ್ಲನ್ನು ನೀವು ವಾಪಾಸ್ಸು ಮಾಡದೇ ನಿಮ್ಮಲ್ಲಿಯೇ ಇಟ್ಟುಕೊಳ್ಳೋ ಹಾಗಿಲ್ಲ, ಈ ಸಾರಿ ನಾವು ನಿಮಗೆ ನಮ್ಮ ಬಿಲ್ಲು ಕಳುಹಿಸಿ ಒಂದು ತಿಂಗಳಾದರೂ ಅದನ್ನು ಪಾಸು ಮಾಡಲೂ ಇಲ್ಲ, ವಾಪಾಸ್ಸು ಕಳುಹಿಸಲೂ ಇಲ್ಲ. ಅದಕ್ಕಾಗಿ ನಮ್ಮ ಈ ಒಪ್ಪಂದದ ಕರಾರಿನಲ್ಲಿದ್ದಂತೆ ನಮಗೆ ಆ ಹಣವನ್ನು ಬಡ್ಡಿ ಸಮೇತ ತೆಗೆದು ಕೊಳ್ಳೋ ಹಕ್ಕು ಇದೆ, ಹಾಗಾಗಿ ಈ ಪತ್ರದ ಮೂಲಕ ನಾವು ಈ ವಿಷಯವನ್ನು ಜ್ಞಾಪಿಸುತ್ತಿದ್ದೇವೆ."
ಪತ್ರವನ್ನು ಓದುತ್ತಾ ಹೋದಂತೆ ಬಾಸ್ ಮುಖ ಕೆಂಪು ಕೆಂಪಾಗಿತ್ತು.
"ನನ್ನ ಇಡೀ ಸರ್ವಿಸ್ಸಿನಲ್ಲೇ ಇಂತಹ ಪತ್ರವನ್ನು ಯಾವುದೇ ಕಂಟ್ರಾಕ್ಟರ್ ಕಡೆಯಿಂದ ಈ ರೀತಿಯಲ್ಲಿ ಪಡೆದಿರಲಿಲ್ಲ, ಗೊತ್ತಾ ನಿಮಗೆ? ಸಮಯ ಬೇಕು! ಸಮಯ ಬೇಕು!! ಅನ್ನುತ್ತಾ ತಿಂಗಳು ಮಾಡಿದಿರಲ್ಲಾ , ಅವರ ಬಿಲ್ಲು ಪಾಸು ಮಾಡದೇ, ಏನ್ರೀ ಹೇಳ್ತೀರಾ ಈಗ...?"
ನಿಮ್ಮನ್ನು ನಂಬಿದ್ದಕ್ಕೆ ಈ ರೀತಿ ಮಾಡಿದಿರಲ್ಲಾ ಎನ್ನುವಂತಿತ್ತು ಆ ನೋಟ.
"ನಾವೇನ್ರೀ ಮಾಡೋಕಾಗುತ್ತೆ, ಮಾಡೋದೆಲ್ಲಾ ಅವರೇ ಮಾಡಿ ಮುಗಿಸಿದಂತಿದೆ," ನಾನು ಮನಸ್ಸಿನಲ್ಲೇ ಅಂತ ಹೇಳಿದ್ದೂ ಸ್ವಲ್ಪ ಗಟ್ಟಿಯಾಗೇ ಕೇಳಿಸಿತೂ ಅಂತ ಕಾಣ್ಸತ್ತೆ.
"ಏನ್ರೀ ಮತ್ತೆ ಗೊಣಗಾಟ..? ಎಂದರು ಬಾಸ್.
"ಏನಿಲ್ಲ ಸಾರ್ ಇದೂ ಕೂಡಾ ಕಳೆಯುತ್ತೆ " ಎಂದೆ ನಾನು.
ಎನ್ರೀ ಕಳೆಯುತ್ತೆ..? ಈಗಿನ ಈ ಕ್ಷಣದ, ಈ ಗಂಡಾಂತರ ಹೇಗೆ ಕಳೆಯುವದೂ ಅಂತ ತಲೆ ಬಿಸಿಯಲ್ಲೇ ನಾನಿದ್ರೆ.............ಕಳೆಯುತ್ತೆ ಅಂತೆ !!, ಕಳೆಯುತ್ತೆ........... ನನ್ನ ತಲೆ ....ನಿಮಗೇನ್ರೀ..?"
ನಾನದನ್ನೆಲ್ಲಾ ಕೇಳಿಕೊಳ್ಳೋ ಸ್ಥಿತಿಯಲ್ಲೇ ಇರಲಿಲ್ಲ, ಇದನ್ನ ಹೇಗೆ ನಿಭಾಯಿಸೋದು ಅಂತ ಯೋಚಿಸುತ್ತಿತ್ತು ಮನಸ್ಸು.
ಇವರು ಕೊಟ್ಟ ಬಿಲ್ಲಿನಲ್ಲಿ ಏನಾದರೂ ಕುಂದು ಕೊರತೆಯಿದ್ದರೆ ಮಾತ್ರ ಅದನ್ನು ತಡೆ ಹಿಡಿಯಬಹುದು, ಶತ ಪ್ರತಿ ಶತ ದಾರಿ ಇದೆ ಅನ್ನಿಸುತ್ತಿತ್ತು ಮನಸ್ಸಿಗೆ , ಏನೋ ಇದೆ ಹೌದು, ಆದರೆ ಏನದು... ಗೊತ್ತಾಗ್ತಾ ಇಲ್ಲ.
ಅದೇ ಗುಂಗಿನಲ್ಲಿ ಆಫೀಸು ಬಿಟ್ಟು ಹೊರ ಬಂದೆ.
ನಾನು ಈ ಪ್ರೋಜೆಕ್ಟ್ ವಹಿಸಿಕೊಂಡು ಜಾಸ್ತಿ ಸಮಯವಾಗಿರಲಿಲ್ಲ.
ಇದು ಆರಂಭವಾಗಿ ಬರೇ ಮೂರ್ನಾಲ್ಕು ತಿಂಗಳಾದರೂ ಕೆಲಸ ಸರಿಯಾಗಿ ಶುರುವಾಗಿರೋದೂ ಅಂದರೆ ಈಗಲೇ.
ನಾನು ಬರುವ ಮೊದಲು ಉತ್ಖನನ ಮಾತ್ರ ಆಗಿ ಹೋಗಿತ್ತು.
ಆಗ ನೋಡಿಕೊಳ್ಳುತ್ತಿರೋ ಮೆನೇಜರ್ ನಿಂದ ಮೋಸದಾಟದ ವಾಸನೆ ಬಂದು ಸೀನಿಯರ್ ಮೆನೇಜ್ಮೆಂಟ್ ನನ್ನನ್ನು ಈ ಪ್ರೋಜೆಕ್ಟ್ ಗೆ ವರ್ಗಾಯಿಸಿತ್ತು.
ಆದರೆ.....
(ಮುಂದುವರಿಯುವುದು)
Comments
ಉ: ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ
In reply to ಉ: ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ by gopaljsr
ಉ: ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ
ಉ: ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ
In reply to ಉ: ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ by partha1059
ಉ: ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ