ನಾನೂ ನನ್ನ ಬಾಸೂ
"ಯಾಕ್ರೀ ನಿನ್ನೆ ಬೇಗ ಮನೆಗೆ ಹೋದಿರಂತೆ?"
"ಹೌದು ಸಾರ್, ಮನೆಯಲ್ಲಿ ಸ್ವಲ್ಪ ಕೆಲಸವಿತ್ತು,"
"ಹಾಗಿದ್ದಲ್ಲಿ ಹೇಳಿ ಹೋಗಬಹುದಿತ್ತಲ್ಲ?"
"ಹೇಳಿದ್ದೆ ಸಾರ್ , ಕನ್ಯಾಲಗೆ ಹೇಳಿಹೋಗಿದ್ದೆನಲ್ಲ?"
"ಕನ್ಯಾಲ್ ಯಾರ್ರೀ, ಅವನೇನು ನಿಮ್ಮ ಬಾಸಾ?
ಮತ್ತೆ ಇವತ್ತು ಬೆಳಿಗ್ಗೆ ಸಹಾ ತಡವಾಗಿಯೇ ಬಂದ್ರೀ ಆೞೀಸಿಗೆ. ಹೀಗಾದಲ್ಲಿ ನಾನು ಮೇಲಿನವರಿಗೆ ಏನಂತ ಜವಾಬು ಕೊಡಲಿ?"
"ಯಾಕೆ ಸಾರ್ ಆೞೀಸು ಕೆಲ್ಸವೆಲ್ಲ ಮುಗಿಸಿಯೇ ಹೋಗುತ್ತಿದ್ದೆನಲ್ಲ."
"ಆ ವಿಷಯ ಬಿಡಿ, ಆಫೀಸ್ ಸಮಯದಲ್ಲಿ ಆಫೀಸಿನಲ್ಲಿಯೇ ಇರಬೇಕು, ಕೆಲ್ಸ ಬಂದಿದೆ ಮನೆಗೆ ಹೋದೆ ಅಂದರೆ..?"
" ಕರೆಕ್ಷನ್ ಸಾರ್! ಕೆಲಸ ಬಂದಿದ್ದಲ್ಲ , ಕೆಲಸ ಇತ್ತು ಎಂದಿದ್ದೆ" " ಸರಿ,
ಸರಿ, ಅದೇ ನೀನು ಹೇಳಿದ್ದೇ ಅಂದರೆ ಏನಯ್ಯಾ ಅರ್ಥ?"
(ಮುಗಿಯಿತು, ಪ್ರಾಣಿ ಬೆಳಿಗ್ಗೆ ತಿಂಡಿ ತಿಂದು ಬಂದಿಲ್ಲವಾ?
ಅಥವಾ ಬೆಳಿಗ್ಗೆ ಎದ್ದು ನಾನು ಯಾರದ್ದಾದರೂ ಕಾಟು ಶನಿಯ ಮುಖ ನೋಡಿರಬಹುದು?-
ಒಹ್ ನನ್ನದೇ ಮುಖ ನೋಡಿದ್ದೆ, ಎದ್ದ ಕೂಡಲೇ ಗಡ್ಡ ತೆಗೆದ ನೆನಪು- ನನ್ನ ಯೋಚನೆಗೆ ನನಗೇ ನಗು ಬಂತು)
"ಯಾಕ್ರೀ ನಗು? ತಪ್ಪು ಮಾಡೋದಲ್ಲದೇ ನಗು ಬೇರೆ" ವೃಥಾ ಮುಂದುವರಿಸಿದರೆ ಪ್ರಯೋಜನವೇ ಇಲ್ಲ.
"ಹಾಗೆ ಹೇಳಿದರೆ ಹೇಗೆ ಸರ್, ಮನುಷ್ಯ ಅಂದ ಮೇಲೆ ಏನಾದರೂ ತಲೆ ಬಿಸಿ ಇದ್ದೇ ಇರುತ್ತದೆ,
ಈಗ ನೀವು ಕ್ರಿಕೆಟ್ ಆಟ್ ಇದ್ದರೆ ಬೇಗ ಹೋಗ್ತೀರಲ್ಲ ಮನೆಗೆ, ಆದಿನ ಬಾಸ್ ಬಂದಾಗ ನಾನೇನ್ ಅದನ್ನ ಹೇಳಿದ್ನಾ?
ಇಲ್ಲ ಅಲ್ಲವಾ ಹಾಗೇ ನೀವೂ ಏನಾದರೂ ಸಬೂಬು ಹೇಳಿದರಾಯ್ತು, ಏನಂತೀರಾ?"
"ಯಾವಾಗ? ಬಾಸ ಬಂದಿದ್ದರಾ?" "ಅದೇ ಸಾರ್ ಮೊನ್ನೆ ಮೊನ್ನೆ ನಮ್ಮದು ಪಾಕಿಸ್ತಾನದ್ದೂ ಏಕ ದಿನ ಕ್ರಿಕೆಟ್ ಇತ್ತಲ್ಲಾ, ಆದಿನ!!
ಬಾಸ್ ಬೇರೆ ಬಂದಿದ್ದರು"- ಆಗದ ದಿನವನ್ನು ನೆನಪಿಸುತ್ತಾ ಹೇಳಿದೆ "ಬಾಸ್ ನ ಬಾಸ್ ಬೇರೆ ಬಂದಿದ್ದರು ಸಾರ್,
ನಮ್ಮ ಇದಿರಿನ ಕಾಂಪೌಂಡ್ ಕಲರಿಂಗ್ ಮಾಡಿಸ್ತಾ ಇದ್ದ್ವಲ್ಲ, ಆ ದಿನ ಚಂದ್ರೂ ಬೇರೆ ಇರಲಿಲ್ಲ,
ಅವನನ್ನು ನಿಮ್ಮ ಮೇಡಮ್ ಮಾರ್ಕೇಟಿಂಗ್ ಗೆ ಕರ್ಕೊಂಡ್ ಹೋಗಿದ್ರಲ್ಲ, ಕ್ಯೂರಿಂಗ್ ಯಾಕ್ರೀ ಮಾಡಿಸ್ಲಿಲ್ಲ ಅಂತ ಬೇರೆ ಕೂಗಾಡಿದ್ರು,
ನಾನು ಇಲ್ಲ ಸಾರ್ ಫ್ರಾಗ್ ಯೂರಿನ್ ಕ್ಯೂರಿಂಗ್ ಮಾಡಿಸ್ತಾಇದ್ದೀವಿ ಅಂದೆ
ಬಾಕಿ ಆಫೀಸಿನ ಕೆಲಸದ ಬಗ್ಗೆ ಕೆಲವು ಇನ್ಸ್ಟ್ರಕ್ಷನ್ ಕೊಟ್ಟು ಹೋದ್ರು ಸಾರ್"
"ವೆರಿ ಗುಡ್ ವೆರಿ ಗುಡ್ ರಾವ್ ಅವ್ರೆ ಒಳ್ಳೆಯ ಕೆಲಸ ಮಾಡಿದ್ರಿ, ಅಂದ ಹಾಗೆ ಅದೇನದು.. ಫ್ರಾಗ್ ಕ್ಯೂರಿಂಗಾ?
ಆವಿಷಯ ನನಗೆ ಗೊತ್ತಿರಲಿಲ್ಲ, ಅದೇನದು ಸ್ವಲ್ಪ ಬಿಡಿಸಿ ಹೇಳಿ.." ನಕ್ಕೆ ನಾನು "ಅವರೂ ಅದನ್ನೇ ಕೇಳಿದರು ಸರ್!
( ಅವರಿಗೆ ಹೇಳುವವರೆಗೆ ನನಗೇ ಗೊತ್ತಿರಲಿಲ್ಲ, ಅಲ್ಲ ಇದ್ದ ಒಬ್ಬ ಚಂದ್ರುವನ್ನ ಇವರು ಸ್ವಕಾರ್ಯಕ್ಕೆ ಉಪಯೋಗಿಸಿಕೊಂಡರು,
ಇನ್ನು ಅವರ ಬಾಸ್ ಬಂದು ನೀರು ಯಾಕೆ ಹಾಕಲಿಲ್ಲ ಎಂದರೆ, ಈ ಕೆಲಸ ನಾವು ಸ್ಟಾಫ್ ಮಾಡಬೇಕಾ ಹೇಗೆ?
ಏನಾದರೊಂದು ಹೇಳಲೇ ಬೇಕಲ್ಲ! ಅದಕ್ಕೆ ಸಮಯಕ್ಕೊಂದು .... ಹೇಳಿದ್ದೆ, ಅಷ್ಟೇ)
ಅಂದರೆ... ನೀವು ಕಪ್ಪೆ ಹಿಡಿಯಲು ಎಂದಾದರೂ ಹೋಗಿದ್ದ್ರಾ ಸರ್?" ರಾಆಆಆವ್ ಅವರೇ ಏನಂತ ಹೇಳ್ತೀರಾ !
! ಅಲ್ಲ ನಾನು ಹೇಳಿ ಕೇಳಿ ಸಸ್ಯಾಹಾರಿ ನನ್ಯಾಕೆ ಕಪ್ಪೆ ಹಿಡೀಯಲು ಹೋಗಲಿ? ಎಲ್ಲಿಂದ ಎಲ್ಲಿಗೆ ಹೋಗ್ತೀರಾ
ವಿಷಯಕ್ಕೆ ಬನ್ನಿ" ಮಾತನಾಡುವಾಗ ಇದಿರಿದ್ದವರ ಹಾಗೆಯೇ ತಾನೂ ಇದ್ದೇನೆ ಅಂತ ಹೇಳಿಎಲ್ಲರನ್ನು ಚೆನ್ನಾಗಿ ಕರವಶ ಮಾಡಿ ಕೊಳ್ಳೋ ಕಲೆ
ಈ ಬಾಸ್ ವಂಶಜರಿಗೆ ಸರಿಯಾಗಿ ತಿಳಿದಿರುತ್ತೆ.ಅಲ್ಲ ಈತ ವಾರ ವಾರ ಯಾವ ಕೆಂಟುಕಿಯಿಂದ ಏನೇನು ತರಿಸ್ತಾರೆ ಅಂತ ಚಂದ್ರುವಿನಿಂದ ಎಲ್ಲ ವಿಷಯಗಳನ್ನೂ ನಾನೂ ಕನ್ಯಾಲೂ ತಿಳಿದುಕೊಂಡಿರೋದು ಇವನಿಗೆ ಹೇಗೆ ತಿಳಿಯುತ್ತೆ?
ನಾನು ಅಪ್ಪಟ ಸಸ್ಯಾಹಾರಿಯಾದುದರಿಂದ ತಾನೂ ಹಾಗೆಯೇ ಅಂತ ಹೇಳುತ್ತಿರುತ್ತಾನೆ.
"ಹಾಗೇನಿಲ್ಲ ಸಾರ್, ಚಿಕ್ಕವರಿರುವಾಗ ನಾವೆಲ್ಲ ಕಪ್ಪೆಯನ್ನು ಓಡಿಸುತ್ತಿದ್ದೆವು ಮಳೆಗಾಲ ಬಂತೆಂದರೆ ಕಪ್ಪೆಯ ವಟ ವಟ ಕೇಳದವರಿಲ್ಲವಲ್ಲ ಸರ್,
ಆಗೆಲ್ಲ ಹಿಡಿಯಲು ಹೋದಾಗ ಅದನ್ನು ನಾವು ಹಿಡಿದೆವು ಅನ್ನುವಾಗ ಅದು ಮೂತ್ರ ಮಾಡಿ ಜಂಪ್ ಮಾಡಿ ತಪ್ಪಿಸಿಕೊಂಡು ಓಡಿ ಬಿಡುತ್ತಲ್ಲ,
ನಾನು ಅಸಹ್ಯವೆನಿಸಿ ಅದನ್ನು ಬಿಟ್ಟು ಓಡುತ್ತಿದ್ದೆವು, ಹೀಗೆ ಇಲ್ಲೊಂದಿಷ್ಟು ಅಲ್ಲೊಂದಿಷ್ಟು ನೀರು ಚಿಮುಕಿಸೋದನ್ನ ಫ್ರಾಗ್ ಯೂರಿನ್ ಕ್ಯೂರಿಂಗ್ ಎನ್ನುತ್ತಾರೆ ಸರ್, ಅದನ್ನೇ ನಾನು ಹೇಳಿದ್ದು, ಅವರು ನಕ್ಕು ಬಿಟ್ಟರು ಸರ್!" "ಸರಿ ಸರಿ, ಮಾತಾಡಿದ್ದು ಸಾಕು ಇನ್ನು ಸ್ವಲ್ಪ ಕೆಲಸಾನೂ ಮಾಡೋಣ...".
ಇನ್ನೇನಿಲ್ಲ ಹೋಗಿ ಅಂತ ಅರ್ಥ. ನಾನು ನನ್ನ ಕ್ಯಾಬಿನ್ನಿಗೆ ವಾಪಸಾದೆ.
ಬಾಸ್ ತನ್ನ ಕೆಂಪು ಹೊಂಡಾ ಸಿಟಿಯಲ್ಲಿ ಹೋಗುವುದು ಕಂಡಿತು, ನನ್ನನ್ನು ಅವ ನೋಡಿರಬಹುದಾ?
ನೋಡಿದರೆ ನೋಡಲಿ, ಒಂದು ಐಡಿಯಾವೂ ಬಂತು, ಈ ರಸ್ತೆಯಲ್ಲಿ ಗಾಡಿಗಳ ಲೈನ್ ನೋಡಿದರೆ ಮುಕ್ಕಾಲು ಘಂಟೆಯಲ್ಲಿ ಅವರು ಆೞೀಸು ತಲುಪಲು ಸಾಧ್ಯವೇ ಇಲ್ಲ.
ದಕ್ಕೆ ನಾನು ನನ್ನ ನೀಲಿಯನ್ನ ೞುಟ್ ಪಾಥ್ ಮೇಲೇ ಓಡಿಸಿ ಎಡಕ್ಕೆ ತಿರುಗಿಸಿ ಗಲ್ಲಿ ಹಿಡಿದೆ. ಇದರಲ್ಲಿ ಹೋದರೆ ನನಗೆ ಬೇಕಾಗುವುದು ಬರೇ ಹತ್ತು ನಿಮಿಷಗಳಷ್ಟೇ.
ಬಾಸು ತಲುಪುವುದರೊಳಗಾಗಿ ನನ್ನ ರಿಪೋರ್ಟ್ ಕೂಡಾ ಮುಗಿಸಿ ಬಿಡಬಹುದು.
ಎಂದಿನಂತೆ ಇವತ್ತು ಕೂಡಾ ಬೆಳಿಗ್ಗೆ ಏಳುವುದು ತಡವಾಗಿ ಆೞೀಸಿಗೆ ತಡವಾಯ್ತು. ಏನುಮಾಡುವುದು, ಅಭ್ಯಾಸ ಬಲ (ಸಶೇಷ)
http://sampada.net/blog/gopinatha/03/12/2007/6513