ನಾನೇ ರಾಜಕುಮಾರ

ನಾನೇ ರಾಜಕುಮಾರ


ರಾಜ್ ಕುಮಾರ್ ಅವರ ಹಳೆಯ ಗೀತೆ "ನಾನೇ ರಾಜಕುಮಾರ" ಹಾಡಿಗೆ ಸಾಹಿತ್ಯ ಬದಲಿಸಿ ರಚಿಸಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ.

 

ನಾನೇ ಯಡಿಯೂರಪ್ಪ ಕನ್ನಡ ರಾಜ್ಯದ ಭ್ರಷ್ಟದ CM ,

ಅನೀತಿ ಮಾಡಿ ಹಗರಣ ಮಾಡಿ ರಾಜ್ಯದ ಮಾನವ ಕಳೆದ ಕಿಶೋರ ಯಡ್ಯೂರಪ್ಪಾ....

ಆರಡಿ ಮೂರಡಿ ನೆಲದಲ್ಲಿ ಹಿಡಿ ಮಣ್ಣಾಗುವ ದೇಹದಲಿ ಇರುವ ದುರಾಸೆಗೆ ಮಿತಿ ಎಲ್ಲಿ ತೀರದ ಬಯಕೆಗೆ ಕೊನೆ ಎಲ್ಲಿ

ನಾನು ನೀನು ಎಲ್ಲ ಸೇರಲೇಬೇಕು ಕೊನೆಗಲ್ಲಿ..ನಾನು ನೀನು ಎಲ್ಲ ಸೇರಲೇಬೇಕು ಕೊನೆಗಲ್ಲಿ

ಮೂರೇ ವರ್ಷದ ಅವಧಿಯಲಿ ದುರ್ಗುಣ ತೋರಿದೆ ನಾನಿಲ್ಲಿ //ನಾನೇ ಯಡಿಯೂರಪ್ಪ//

 

ಯುಗಯುಗದಿಂದಲೂ ದೋಚಿದರು ಕಾಂಗ್ರೆಸ್ ಪಾಳ್ಯದ ಮಂತ್ರಿಗಳು

ದೋಚುವ ಮಂತ್ರಿಗೆ ಸುಖವಿಲ್ಲ ಆದರೂ ದೋಚಲು ಬಿಡಲಿಲ್ಲ..

ಹೊನ್ನು ಮಣ್ಣು ಎಲ್ಲ ಎಂದಿಗೂ ಕಾಂಗ್ರೆಸ್ ಸ್ವತ್ತಲ್ಲ..

ಹೊನ್ನು ಮಣ್ಣು ಎಲ್ಲ ನನಗೂ ಬೇಕಾಗಿತ್ತಲ್ಲ..

ನನ್ನಯ ಸುಖಕೆ ದೋಚಿದೆನು

ಹೆಗ್ಡೆಯ ವರದಿಗೆ ಸೋತಿದೆನು...

 


ನಾನೇ ಯಡಿಯೂರಪ್ಪ ಕನ್ನಡ ರಾಜ್ಯದ ಭ್ರಷ್ಟದ CM ,

ಅನೀತಿ ಮಾಡಿ ಹಗರಣ ಮಾಡಿ ರಾಜ್ಯದ ಮಾನವ ಕಳೆದ ಕಿಶೋರ ಯಡ್ಯೂರಪ್ಪಾ
Rating
No votes yet

Comments