ನಾಯಿಪಾಡು
ಹಲ್ಲುಕಿಸಿಯುವ ನಾಯಿ ಬಗೆಗೊಂದು ಲೇಖನ ಬಂದಿತ್ತಲ್ಲ, ಆ ಟೈಮಲ್ಲಿ ಸಾಕಲಿಕ್ಕೆಂದು ನಾನೂ ಒಂದು ನಾಯಿಯನ್ನು ತಂದಿದ್ದೆ. ಲ್ಯಾಬ್ರಡಾರ್ ರಿಟ್ರೀವರ್ ಹಾಗು ಸ್ಪ್ಯಾನಿಯಲ್ನ ಮಿಶ್ರತಳಿಯದು. ಸ್ವಲ್ಪೇ ದಿನದಲ್ಲಿ ತುಂಬಾ ಹಚ್ಚಿಕೊಂಡುಬಿಡ್ತು/ಬಿಟ್ವಿ. ನಂತರ ತುಂಬಾ ಪ್ರಯತ್ನಪಟ್ರೂ ಅದನ್ನು ನಾವು ಇಟ್ಟುಕೊಳ್ಳದಾದೆವು. ನಮ್ಮ ಸ್ನೇಹಿತನೇ ಅದನ್ನು ತೆಗೆದುಕೊಂಡು ಹೋದ. ಎರಡುದಿನದ ತುಂಬಾ ಬೇಜಾರು ಅನ್ನಿಸಿತು. ನಂತರ ಯಥಾರೀತಿ ಜೀವನಕ್ಕೆ ಅದು ಹೊಂದಿಕೊಂಡಿತಂತೆ. ಆಮೇಲೆ ಸುಮ್ನೆ ಇಂಟರ್ನೆಟ್ಟಿನಲ್ಲಿ ನಾಯಿಗಳ ಬಗ್ಗೆ ಜಾಲಾಡುತ್ತಾ ಇದ್ದೆ. ನಾವೆಲ್ಲರೂ ಸಾಮಾನ್ಯವಾಗಿ ಕಾಣುವ ಒಂದು ವ್ಯವಹರಣೆ ನಾಯಿಯ ಜೀವನಕ್ಕೆ ಹೇಗೆ ಕುತ್ತು ತರಬಲ್ಲದು ಅನ್ನುವ ಮನಕಲಕುವ ವಿವರ ಇಲ್ಲಿ ಸಿಕ್ಕಿತು. http://www.unchainyourdog.org/FactsPhotos.htm ನಂತರ ನಂಗೆ ಅನ್ನಿಸಿದ್ದು ಅದನ್ನು ನನ್ನ ಸ್ನೇಹಿತನಿಗೆ ಕೊಟ್ಟಿದ್ದೇ ಒಳ್ಳೆಯದಾಯ್ತು ಈಗ ಅದು ಫಾರ್ಮ್ ಹೌಸಿನಲ್ಲಿ ಆರಾಮವಾಗಿ ಇದೆ.
ರಘುನಂದನ
Rating