ನಾಳೆ ನಮ್ಮ ಮತ-ದಾನದ ಫಲಿಂತಾಶ

4.5

          ನಾಳೆ ಇಷ್ಟೊತ್ತಿಗೆ ನಮ್ಮ ಮತ-ದಾನವನ್ನು  ಪಡೆದ ರಾಜಕಾರಣಿಗಳ ಹಣೆಬರಹ ಬಹುತೆಕ ನಿರ್ದಾರವಾಗಿರುತ್ತೆ,ಚುನಾವಣಾ ಆಯೋಗದ ದಿಟ್ಟ ನಿರ್ದಾರವನ್ನು ಮೆಚ್ಚಲೆಬೇಕು ಏಕೆಂದರೆ ಚುನಾಣೆಯಿಂದ ಚುನಾವಣೆಗೆ ಕಠಿಣ ನಿಯಮಗಳನ್ನು ಜಾರಿಗೆ ತರುವದರಿಂದ ಬದಲಾವಣೆ ಸಾದ್ಯವೆನ್ನು ಆಶಾಭಾವನೆ ಜನರಾಗಿದೆ,ಚುನಾವಣೆ ಆಯೋಗ ಎಷ್ಟೇ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದರೂ ಬಹತೆಕ ಎಲ್ಲಾ ಕಡೆ ಹಣದ ಮಳೆ ಹೆಂಡದ ಹೋಳೆ ಹರಿಯಿತು. ಚುನಾವಣಾ ಆಯೋಗದ ಕಠಿಣ ನಿಯಮಗಳು ಜಾರಿಗೆ ಬಂದಿದ್ದು ಅಭ್ಯರ್ಥಿಗಳಿಗೆ ಅಷ್ಟೆ ಅಲ್ಲ ಕೆಲವು ಮರಿ ಪುಡಾರಿಗಳಿಗೆ ತುಂಬಾ ತೊಂದರೆಯಾಗಿತ್ತು. ಚುನಾವಣಾ ಆಯೋಗವೊಂದು ಇದೆ ತೋರಿಸಿಕೊಟ್ಟವರು ಹಾಗೂ ಚುನಾವಣಾ ಆಯೋಗದ ಆಯುಕ್ತರೆಂದರೇ ಇವರೇನಾ ಎಂದು ಇಡಿ ದೇಶವೇ ಗುರತಿಸಿದ್ದು ದಕ್ಷ,ಪ್ರಾಮಾಣಿಕ ಅಧಿಕಾರಿಯಾದ ಮಾನ್ಯ ಟಿ.ಎನ್.ಶೇಷನ್ ರವರು ಹಾಗೂ ಹಿಂದಿನ ಚುನಾವಣಾ ಆಯೋಗದ ಆಯುಕ್ತರಾದ ಮಾನ್ಯ ಗೋಪಾಲಸ್ವಾಮಿಯವರು ಚುನಾಣಾ ಆಯೋಗಕ್ಕೆ ಎಷ್ಟೊಂದು ಅಧಿಕಾರ ಇದೆ ಎನ್ನುವದನ್ನು ತೋರಿಸಿಕೊಟ್ಟರು ಮುಂದಿನ ಎಲ್ಲಾ ಆಧಿಕಾರಿಗಳು ಅದೇ ಹಾದಿಯಲ್ಲಿ ಸುಧಾರಣೆಗಳನ್ನು ತರುತ್ತಾ ನಡೆದಿರುವುದು ಸಂತೋಷದ ಸಂಗತಿಯಾಗಿದೆ. ಆದರೆ ಈಗಿನ ಚುನಾವಣೆಯಲ್ಲಿ ಮತದಾನದ ಪ್ರಮಾಣ ಸುಮಾರು ಶೇಕಡ.75 ರಷ್ಟು ಆಗಬಹುದು ಎನ್ನುವ ನಿರಿಕ್ಷೆ ಇತ್ತು, ಆದರೆ ನಿರಿಕ್ಷೆಗೆ ತಕ್ಕ ಪ್ರಮಾಣದಲ್ಲಿ ಮತದಾನ ವಾಗಲಿಲ್ಲ ಸ್ವಲ್ಪ ಬೇಸರದ ಸಂಗತಿಯಾಗಿದೆ. ಆದರೂ ಆಯ್ಕೆಯಾಗಿ ಬರುವ ಭಾವಿ ಶಾಸಕರು ಉತ್ತಮ ಆಡಳಿತ ನೀಡಲಿ ಸುಭದ್ರ ಸರಕಾರ ರಚನೆಯಾಗಲಿ ಎಂದು ಆಶಿಸೋಣ, ಆಹಾಃ ಶಾಸಕರೆಂದರೆ ಚುನಾವಣಾ ಸಮಯದಲ್ಲಿ ದೃಶ್ಯ ಮಾದ್ಯಮ ಒಂದರಲ್ಲಿ ಪಂಚಪಾಂಡವರು ಎನ್ನುವ ಕಾರ್ಯಕ್ರಮವನ್ನು ಬಿತ್ತರಿಸಿದರು. ನಾನು ಪಂಚಪಾಂಡವರು ಎನ್ನುವ ಹೆಸರಿನ ಶಿರೋನಾಮೆಯನ್ನು ನೋಡದ ಪೂರ್ವದಲ್ಲಿಯೇ ಆ ಐದು ಜನ ಮಾಜಿ ಶಾಸಕರ ಹೆಸರನ್ನು ನನ್ನ ಗೆಳೆಯರಿಗೆ ತಿಳಿಸಿದೆ ತಕ್ಷಣ ಅವರುಗಳು ಎಷ್ಟೊಂದು ನೀಖರವಾಗಿ ಹೇಳಿದೆಯಲ್ಲ ಎಂದು ಕೇಳಿದರು, ಹೌದು ಐದು ಜನ ಶಾಸಕರಲ್ಲಿ ಕುಂದಾಪೂರದ ಶಾಸಕರ ಬಗ್ಗೆ ಕ.ರಾ.ಸಾ.ಸಂಸ್ಥೆಯಲ್ಲಿ ಚಾಲಕನಾಗಿರುವ ನನ್ನ ಸಹೋದರನಿಂದ ಕಳೆದ ಎಂಟು ವರ್ಷಗಳಿಂದ ಅವರ ಪ್ರಮಾಣಿಕತೆ,ದಕ್ಷತೆ.ಸರಳ ಸಜ್ಜನಿಕೆಯನ್ನು ಕೇಳಿ ಅವರ ಬಗ್ಗೆ ತುಂಬಾ ಹೆಮ್ಮೆ ಪಟ್ಟಿದ್ದಿದೆ, ಹಾಗೆಯೇ ಬಾಗೆಪಲ್ಲಿ ಮಾಜಿ ಶಾಸಕರನ್ನಂತು ತುಂಬಾ ಹತ್ತಿರದಿಂದ ನೋಡಿ ಅವರ ಜೋತೆ ಮಾತು ಕೂಡಾ ಆಡಿದ್ದಿದೆ ಏಕೆಂದರೇ ನಾನೂ ಕೂಡಾ ಒಂದು ಕಾರ್ಮಿಕ ಸಂಘಟನೆಯ ಪದಾಧಿಕಾರಿಯಾಗಿದ್ದು ತಿಳಿದುಕೊಳ್ಳಲು ಸಹಾಯಕ ವಾಯಿತು.ಹಾಗೆಯೇ ಉಳಿದ ಮೂರು ಜನರ ವಿಷಯವನ್ನು ಪತ್ರಿಕೆಗಳಲ್ಲಿ ಓದಿ,ಕೇಳಿದ್ದೆನೆ ಆದರೆ ಮೊನ್ನೆ ದಿನ ದೂರ ದರ್ಶನದ ಸುದ್ದಿ ವಾಹಿನಿಯಲ್ಲಿ ಅವರ ಕುರಿತು,ಕಾರ್ಯಕ್ರಮ ಬಿತ್ತರಿಸಿದಾಗ ನನ್ನ ಮನದಲ್ಲಿ ನಾಳೆ ತಿಳಿಯುವ ಫಲಿತಾಂಶದಲ್ಲಿ ಅಂತವರ ಸಂಖ್ಯೆ ಜಾಸ್ತಿಯಾಗಲಿಯಂತ ಬಯಸಿದ್ದೆವೆ,ಖಂಡಿತಾ ನಾವು ಯಾವದೆ ಪಕ್ಷಪಾತಿಯಲ್ಲ ಈ ಲೇಖನವನ್ನು ನಾಲ್ಕ ದಿನಗಳ ಪೂರ್ವದಲ್ಲಿಯೇ ಬರೆಯುತ್ತಿದ್ದೆ ಆದರೆ ನಾನು ಒಂದು ಸ್ಥಳಿಯ ಸಂಸ್ಥೆಯ ನೌಕರನಾದ್ದರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆಂದು ಬರೆದಿರಲಿಲ್ಲ ನಾಳೆ ಆಯ್ಕೆಯಾಗಿ ಬರುವ ನಮ್ಮ ಎಲ್ಲಾ ಶಾಸಕರು ಇನ್ನಾದರೂ ಪ್ರಮಾಣಿಕತೆ.ದಕ್ಷತೆ.ಸರಳತೆಯನ್ನು ಮೈಗೂಡಿಸಿಕೊಂಡು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡಯ್ಯಲಿ ಎಂದು ಆಶಿಸೋಣ.

                                                                                                        

                                                                                              

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಮರೇಶ್ ಪಾಟೀಲರೆ,
ಈಗಿನ ಕಾಲದ ಯುದ್ಧವೇನಿದ್ದರೂ ಕೌರವ ಮತ್ತು ಉಪಕೌರವರ ನಡುವೆ ಎಂದು ಮಾತ್ರ ಭಾವಿಸಿದ್ದೆ. ಇನ್ನೂ ಅಲ್ಲಿ ಇಲ್ಲಿ ಪಾಂಡವರ ವಂಶಜರು ಇದ್ದಾರೆಂದರೆ ಸಂತೋಷದ ಸಂಗತಿಯೇ ಸರಿ. ಆಗ ಒಬ್ಬನೇ ಒಬ್ಬ ಶಕುನಿಯಿದ್ದದ್ದರಿಂದ ಮಹಾಭಾರತ ನಡೆಯಿತು; ಇಂದು ಸಾವಿರಾರು ಶಕುನಿಯರಿದ್ದಾರೆ ಹಾಗಾಗಿ ಇಷ್ಟೆಲ್ಲಾ ಸ್ಕ್ಯಾಂಗಳು ನಡೆಯುತ್ತಿವೆ. ಮೇರಾ ಭಾರತ್ ಮಹಾನ್ :((

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಳು ಶ್ರೀಧರ ಬಂಡ್ರಿಯವರಿಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.