ನಾಳೆ ಮುಂಜಾನೆಯ ಕನ್ನಡದ ಮಾದರಿ ! ಇಂದೇ ನೋಡಿ!

ನಾಳೆ ಮುಂಜಾನೆಯ ಕನ್ನಡದ ಮಾದರಿ ! ಇಂದೇ ನೋಡಿ!

(ಇದನ್ನು ಒಂದು ಬ್ಲಾಗಲ್ಲಿ ನೋಡಿದ್ದು , ಆ ಬ್ಲಾಗಿನ ಲಿಂಕನ್ನು ಇಲ್ಲಿ ಕೊಡಬಹುದಿತ್ತು , ಆದರೆ ನೀವು ಅದನ್ನು ನೋಡಲಿಕ್ಕಿಲ್ಲ ಎಂದು ಅಲ್ಲಿಂದ ಕತ್ತರಿಸಿ ಇಲ್ಲಿ ಹಾಕಿದ್ದೇನೆ)
ಸದರೀ ಬರಹಕ್ಕೆ ನಾನು ಹಾಕಿದ ಟಿಪ್ಪಣಿಯನ್ನೂ ಕೊನೆಯಲ್ಲಿ ನೋಡಿ )

-------------------------------------------------------------------------------------------------
This is a little bit interesting topic ಇದು ಅತ್ಯಂತ common strategy .ನಮ್ಮೆಲ್ಲರ ಸ್ವಭಾವ ಕೂಡ ಹೀಗೆ ಯಾವುದೇ ಒಂದು ಘಟನೆ ನಡುದ್ರು ಅದ್ನ ನಮ್ಮ ಅನುಕೂಲಕ್ಕೆ ತಕ್ಕಂತೆ ಅದ್ನ accept ಮಾಡ್ಕೊಂಡ್‍ಬಿಡ್ತೀವಿ ಇದ್ರಿಂದ ಬೇರೆಯವರ ಬೆಳವಣಿಗೆಗೆ ಎಷ್ಟು ತೊಂದರೆ ಆಗುತ್ತಿ ಅಂತ little bit ಕೂಡ ಯೋಚ್ನೆ ಮಾಡಿರಲ್ಲ.ನಾವು ಇದ್ರ ಒಂದು pieceನ ಇಲ್ಲಿ discuss ಮಾಡೋಣಾಂತ ಅಂದ್ಕೊಂಡಿದೀನಿ.

For example ಒಂದು ಮನೆಯ ವಿಚಾರಾನೆ ತೆಗೋಳೋಣ ತಂದೆ-ತಾಯಿ ಒಂದು ಒಳ್ಳೆಯ job ನಲ್ಲಿದ್ದಾರೆ.ಅವ್ರಿಗೆ ಅವರ relations ನಲ್ಲಿ ಯಾರೂ ಕೂಡ ಸರಿಯಾಗಿ ಹೊಂದ್ಕೊಳ್ತಾ ಇಲ್ಲ.ಎಲ್ಲರ ಹತ್ರಾನು ಕಿರೀಕು. ಅತ್ತೆಗೆ ಸೊಸೆ ಆಗಲ್ಲ.ಎರಡನೆ ಸೊಸೆ ಮೊದಲನೆಯವಳ ಮೇಲೆ fireball ಎಸೀತಾಳೆ.ಅಣ್ಣ ತಮ್ಮ ಸರಿಯಿಲ್ಲ.ಈ ಥರ condition totally headachu- ತಲೆನೋವು.ಅದಕ್ಕೆ ದೊಡ್ಡ ಮಗ nuclear family formation ಮಾಡ್ಕೊಂಡಿದಾನೆ.ವರ್ಷಗಳೇ roll ಆಗಿವೆ.ಇವರ ಮಗನಿಗೆ ಒಳ್ಳೆ engineering collegeನಲ್ಲಿ seat ಸಿಕ್ಕಿದೆ.

ಸ್ವಲ್ಪ ದಿನ ಆಯ್ತ್ಯು.ತಮ್ಮನ ಮಗಳಿಂದ ಈ ಹುಡುಗನಿಗೆ phone ಬಂತು."ಅಣ್ಣ ಹೇಗಿದ್ದೀಯ?ಚೆನ್ನಾಗಿದ್ದೀಯ? ಮನೆಯಲ್ಲಿ ಎಲ್ಲರೂ ಆರಾಮ?ಯಾವ ಕಾಲೇಜು?ಎಷ್ಟನೇ ರ್‍ಯಾಂಕು? Etc etc…. ಅಣ್ನ ಆದವನು ಚೆನ್ನಾಗಿ ಮಾತಾಡ್ದ.ಹೀಗೆ ಆವಾಗವಾಗ ಅವ್ಳು call ಮಾಡ್ತಾ ಇದ್ಲು.ಇವ್ನು reply ಮಾಡ್ತಾ ಇದ್ದ.ಇದು ಇಬ್ರ ಮನೆಯವರಿಗೂ ಗೊತ್ತಿರಲಿಲ್ಲ.
ಒಂದು ದಿನ ಮನೇಲಿ ಈ ವಿಷ್ಯನಾ ಮಗ mother India ಹತ್ರ ಒದರಿ ಬಿಟ್ಟ.Mother India temper raise ಆಯ್ತು."ಯಾಕೋ ಅವ್ಳ call receive ಮಾಡ್ದೆ? ತಲೆ ಕೆಟ್ಟಿದ್ಯಾ ನಿಂಗೆ?ಅವ್ರಮ್ಮ, ಆ ಬಿತ್ತರಿ, ನಂಗೆ ಅವತ್ತು ಎಷ್ಟ್ಯು ಅವಮಾನ ಮಾಡಿದ್ಲು.ಮನೆ ಮುಂದೆ ಹೋಗಿ ನಿಂತಾಗ ಒಳಗೆ ಕರೀದೆ ಅದೆಷ್ಟು ರಂಪ ಮಾಡಿದ್ಲು.ಅವಳ !ಬಾಯಲ್ಲಿ ನಾಲಿಗೆ ಇದ್ಯ, ಅಥವಾ ಕಿತ್ತೋದ ಚಪ್ಲಿ ಇದ್ಯಾ ಅಂತ doubt ಬರುತ್ತೆ.ಹರಕಾ ಬಾಯಿ! ಅಂಥವಳ ಮಗ್ಳು phone ಮಾಡ್ದಾಗ ಯಾಕೋ reply ಮಾಡ್ದೆ!ಅಂತ charge ಮಾಡಿದ್ಲು.

ಅಷ್ಟೊತ್ತಿಗೆ god father entry.Mother India"ನೋಡ್ರಿ ನಿಮ್ಮಗ ಎಂಥ ಘನಂದಾರಿ ಕೆಲಸ ಮಾಡ್ಕೊಂಡ್ ಬಂದೀದಾನೆ.ನಿಮ್ಮ ತಮ್ಮ, ಥೂ!ಆ ಕತ್ತೆ ತಿಮ್ಮನ ಮಗ್ಳು phone ಮಾಡ್ದಾಗ ಇವ್ನು ಗಂಟೆಗಟ್ಲೆ ಮಾತಾಡಿದಾನೆ.ಇಷ್ಟು ವರ್ಷ ಇಲ್ಲದ phone ಇವತ್ಯಾಕೆ ಬರ್‍ಬೇಕು?ಒಳ್ಳೆ collegeನಲ್ಲಿ seat ಸಿಕ್ತು ಅಂದಾಕ್ಷಣ, ನೆಂಟ್ರು ಹೆಂಗೆ ನಾಯಿಗಳ ಥರ ಹತ್ರ ಬರ್‍ತಾರೆ ನೋಡಿದ್ರ.ಇವ್ನಿಗೂ ತಲೆಯಲ್ಲಿ ಸಗಣಿ ತುಂಬ್ಕೊಂಡಿದೆ.ಅವ್ರ ಮನಿ ಕಾಯೋಗ!
ಮಗ ಸುಮ್ನಿರೋದು ಬಿಟ್ಟು "ಅಲ್ಲಮ್ಮಾ, ಅವ್ರಮ್ಮ ಅವ್ರಪ್ಪಾ ಸರಿಯಿಲ್ಲ ಅಂತ ಅವ್ಳೂ ಹೀಗೆ ಅಂತ ಭಾವಿಸೋದು ತಪ್ಪಲ್ವಾ? ಅವ್ಳು ಚಿಕ್ಕವ್ಳು,ಅವ್ಳ ಹತ್ರ ಮಾತಾಡಿದ್ರೆ ಏನಾಗುತ್ತೆ?.

ನಿಂಗಿನ್ನೂ ಪ್ರಪಂಚ ಜ್ಞಾನ ಬೆಳೆದಿಲ್ಲ.ಅದು ಅವ್ಳು ಮಾಡಿದ್ದಲ್ಲ. ಅವ್ರಪ್ಪಾನೋ, ಅಮ್ಮನೋ ಮಾಡಕ್ಕೆ ಹೇಳಿರ್‍ತಾರೆ.ಹೀಗಾದ್ರು ಮಾಡಿ ಮತ್ತೆ ಸಂಬಂಧ ಕುದುರಿಸೋಣ ಅಂತ. ನಮ್ಗೇನು ಅವ್ರ ನರಿ ಬುದ್ಧಿ ಗೊತ್ತಾಗಲ್ವ,ಹಲ್ಕ ಮುಂಡೇವು.
This is one broad example for this topic.ಇಲ್ಲಿ ಏನಾಗಿದೆ ಅಂದ್ರೆ ತಂದೆ-ತಾಯಿ ಒಂದು ಥರ think ಮಾಡ್ತಿದಾರೆ.ಮಗ ಇನ್ನೊಂಥರೆ.ಹಿಂದೆ ನೆಂಟ್ರಿಂದ ಭಯಂಕರ ಮೋಸ ಹೋಗಿ parents ಗೆ ರೋಸಿ ಹೋಗಿ ಅವ್ರು ಈ ರೀತಿ ಮಾತಾಡ್ತ ಇರ್‍ಬೋದು.ಅದ್ರೆ, ಅವ್ರ ಮಕ್ಳು ಅದೇ ರೀತಿ ಅಂತ conclusionಗೆ ಬರೋದು 200% ತಪ್ಪು.ಆ ಚಿಕ್ಕ ಹುಡುಗಿ phone ಮಾಡಿದ್ದು ಅವ್ರ ಅಪ್ಪನ-ಅಮ್ಮನ ಅನುಕೂಲಕ್ಕಾಗಿ ಅಂತ ಆ ಮಹಾತಾಯಿ ಯಾಕೆ ಭಾವಿಸ್ಭೇಕು.ದೊಡ್ದವ್ರು ಏನ್ ಬೇಕಾದ್ರು ಮಾಡ್ಲಿ,ಅದನ್ನ ಚಿಕ್ಕವ್ರ ತಲೆಗೆ ಯಾಕೆ ತಂದು ಕಟ್ಬೇಕು? ಏನೋ ಮಕ್ಳನ್ನ ಹುಟ್ಸಿದ್ದೇ ದ್ವೇಷ ಸಾಧಿಸೋಕೆ ಅನ್ನೋಥರ ಇವ್ರಿಲ್ಲಿ ಮಾತಾಡ್ತಿದಾರೆ.
ಇದು ಸಾಮಾನ್ಯವಾಗಿ ಎಲ್ಲ ಮನೆಲೀ ಕಂಡು ಬರುವ seenಉ.ಇದ್ರಿಂದ ಹಲವು ಮನೆಗಳು brake ಆಗ್ತವೆ.ಮಕ್ಳಿಗು ಇದರ ಅರಿವನ್ನು genetically transfer ಮಾಡಿರ್‍ತಾರೆ ಅಂಥ ಕಾಣ್ಸುತ್ತೆ.ಸ್ವಲ್ಪ think ಮಾಡ್ರಿ.Broad minded ಆಗ್ರಿ.ನೀವು ಮಾಡ್ಕೊಂಡ ಕರ್ಮಕ್ಕೆ ನಿಮ್ಮ ಮಕ್ಕಳಾಕೆ ಬಲಿಪಶುಗಳಾಗ್ಬೇಕು? ಮಗ ಆ phone call ತನ್ನ ತಂಗಿ ತನ್ನ ಮೇಲಿನ ಪ್ರೀತಿಯಿಂದ ಮಾಡಿದಾಳೆ ಅಂತ್ಕೊಂಡ್ರೆ, parents ಆದೋರು ತಮ್ಮ ಹಳೇ enemityನ ಇಲ್ಯಾಕೆ expose ಮಾಡ್ತಾರೆ?
ಈಗ ನಮ್ಗೂ ಒಂದು ನಿಲುವೆದೆ.Thinking power ನ ದೇವ್ರು ನಮ್ಗೂ ಕೊಟ್ಟಿದ್ದ್ದಾನೆ.ನಮ್ಮ ಪೇರೆಂಟ್ಸ್ ಏನಾದ್ರೂ ಮಾಡ್ಕೊಂಡಿರ್‍ಲಿ ಕಂಡ್ರಿ ಹಾಗಂತ ಇನ್ನೊಬ್ಬರ ತಪ್ಪು ನಮ್ಮ ಜೀವನಕ್ಕೆ ಭಾರಿ ತೊಂದರೆ ಮಾಡಿದ್ರೆ, ಅದರಿಂದ ನಮ್ಮ careerಗೆ ಗೂಟ ಬಿದ್ದಿದ್ದ್ರೆ, ವೈರತ್ವ ಬೆಳೆಯೋದು common ಆದ್ರೆ ಸುಮ್ನೆ ತಂದೆ-ತಾಯಿ ಮಾಡಿದ್ರು ಅಂತ ಅನವಶ್ಯಕ ಹಗೆ ಸಾಧಿಸೋದು ಆ god ಕೂಡ ಮೆಚ್ಹೋದಿಲ್ಲ.ಅಪ್ಪ ನೆಟ್ಟ ಆಲದ ಮರೆ ಅಂತ ವಿದ್ಯಾವಂತರಾದ ನಾವು ಏಕೆ ಕೊಚ್ಹಿಗೆ ಬೀಳ್ಬೇಕು?ಸರಿ ತಪ್ಪು ಆರಿಸ್ಕೊಳಕ್ಕೆ ನಮ್ಗೆ ಬರೋದಿಲ್ವ?

ಏನಪ್ಪಾ ಮಚೆಂಪು ಈ ಥರಾ ಯರ್ರಾ ಬಿರ್ರಿ brake ಇಲ್ದಂಗೆ, ತಲೆಲೀರೋ ನಾಲ್ಕು ಕೂದ್ಲು tension ನ ಬಿಸಿಯಿಂದ ಉದ್ರೋಗೋ ಥರ ಕುಯ್ದಿದ್ದಿಯಲ್ಲಾ ಅಂತ ಬಾಯಿಗೆ ಬಂದ ಹಾಗೆ ನನ್ನ ಬಯ್ತಾ ಇರ್ಬೋದು.ಆದರೆ ಜೀವನದ truth ಹೇಳಿಕ್ಕೆ ಯಾರಾದ್ರೇನು.ಹೀಗೆ ಮಾಡ್ಬಾರ್ದು ಅಂತ ನಿಮ್ಮ parentsಗೆ ನೀವು ಹೇಳಾಕಾಗಲ್ಲ ಅಂತ ನಂಗೂ ತಿಳಿಯುತ್ತೆ.ಅದ್ನ ನುಂಗಕ್ಕೊ ಆಗ್ದೆ, ಉಗಿಯೋಕು ಆಗ್ದೆ ಬಿಸಿ ತುಪ್ಪದ ಥರೆ ಆಗಿರ್ಬೋದು ನಿಮಗೆ ಆದ್ದರಿಂದ ನಿಮ್ಮ ಪರವಾಗಿ ನಾನು ನಿಮ್ಮ parents ಹತ್ರ request ಮಾಡ್ಕೊತೀನಿ.ನಿಮ್ಮ ಮಕ್ಕಳನ್ನ ವಿಶ್ವಮಾನವರಾಗಿ ಬೆಳೆಸಿ ಸಂಬಂಧ ಒಳಗೆ ತೂರಿಸಿ ಅವರ ಸುಂದರವಾದ lifeಗೆ ಬೆಂಕಿ ಇಡ್ಬೇಡಿ ಅಂಥ ಕೇಳ್ಕೊಂತೀನಿ.Any how good luck guys and gals… Bye…..

------------------------------------------------------------------------------------------

ನನ್ನ ಪ್ರತಿಕ್ರಿಯೆ : --
ನಮಸ್ಕಾರ
೧) ಅನಿವಾರ್ಯ ಆದ ಇಂಗ್ಲೀಷ್ ಶಬ್ದಗಳನ್ನಷ್ಟೇ ಬಳಸಿ.
೨) ಅನಿವಾರ್ಯ ಅನ್ನಿಸಿದಾಗಲೂ - ನಿಮ್ಮ ಹಿರಿಯರು - ಇಂಗ್ಲೀಷ್ ತಿಳಿಯದ , ಕಲಿಯದ ಹಿರಿಯರು ಈ ಮಾತನ್ನು ಹೇಗೆ ಹೇಳುತ್ತಿದ್ದರು - ಎಂದು ಒಂದು ಕ್ಷಣ ವಿಚಾರ ಮಾಡಿ
೩) ಆಗಲೂ ಇಂಗ್ಲೀಶ್ ಅನಿವಾರ್ಯ ಆದರೆ , ಕನ್ನಡ ಲಿಪಿಯಲ್ಲಾದರೂ ಬರೆಯಿರಿ .
ಈಗ ಇರುವಂತೆ ಓದಲು ಕಷ್ಟ .

Rating
No votes yet

Comments