ನಾವು ಆಶಾವಾದಿಗಳು

ನಾವು ಆಶಾವಾದಿಗಳು

ಈ ದೇಶದ ಭವಿಷ್ಯದ ಬಗ್ಗೆ

ನಾವು ಆಶಾವಾದಿಗಳು

ಪರಿಸರದಲಿ ಮಾಲಿನ್ಯದ ಹೊಗೆ ಎದ್ದಿರೆ

ನಾವು ಪವನ ಸುತರು

ವ್ಯವಸ್ಥೆಯಲಿ ಹಣವೇ ಮಾತನಾಡುತಿರೆ

ನಾವು ಪ್ರವಾದಿಗಳು...!

 

ಈ ನೆಲದ ಸಂಸ್ಕೃತಿ ಪರಂಪರೆಯಲಿ

ನಾವು ಹುಟ್ಟಿ ಬೆಳೆದು ಬಂದವರು

ಬಹುಕಾಲ ಭಾವೈಕ್ಯದಲಿ ಹೊರಗಿನವರೊಂದಿಗೆ

ಹೋರಾಡಿ ಗೆದ್ದವರು; ನಡು ರಾತ್ರಿಲಿ

ನಿದ್ರೆಗೆಟ್ಟರೂ ಸ್ವಾತಂತ್ ತ್ರ ಪಡೆದವರು.

ಹತ್ತಾರು ಯೋಜನೆಗಳ ಕನಸಿ

ನನಸಾಗಿಸಿದರೂ ಹತಾಶರಾದವರು;

ಇಲ್ಲೆ ದಿನವೂ ಇತಿಹಾಸ ರಚಿಸುತ್ತ

ಹಳೆ ಪುರಾಣಗಳ ಕೇಳಿ ಕಲಿಯುತ್ತ

ಕೆಚ್ಚೆದೆಯ ಕಲಿಗಳಾಗಿ ನಿಂತ ಧೀಮಂತರು

ಸಭ್ಯಜೀವನ ಮಾದರಿಗೆ ಮನ ಸೋತವರು.

 

ಮಹಾತ್ಮರಾಗಿ ಹುತಾತ್ಮರಾದವರ

ನಾಡಿನಲಿ ಗುಂಡು ಬಾಂಬುಗಳೆ ಬಿದ್ದ ರೂ

ನಾವು ಸದಾ ಶಾಂತಿ ದೂತರು;

ಜಾತಿ ಜಗಳ ದೊಂಬಿಗಳಲಿ ಸತ್ತರೂ

ಎಂದಿಗೂ ಹೊಸ ಹುಟ್ಟು ಕಾಣಬಲ್ಲವರು.

 

ಈ ದೇಶದ ಭವಿಷ್ಯದ ಬಗ್ಗೆ

ನಾವು ಆಶಾವಾದಿಗಳು

ಸುತ್ತ ಮುತ್ತ ಹಗರಣಗಳೆಷ್ಟೇ ಇದ್ದರೂ

ನಾವು ನಿತ್ಯ ಛಲವಾದಿಗಳು.

 

ಕಳೆದ ವರ್ಷದಲಿ ಆಕೃತ್ಯಗಳಣಕಿಸಿದರೂ

ಹೊಸ ವರ್ಷದಲಿ ನಾವು ಕ್ರಿಯಾಶೀಲರು.

-*ಮಾರ್ದನಿ (ನನ್ನ ಕವನ ಸಂಕಲನ)

Rating
No votes yet