ನಾವು ತೊಡಗಿಕೊಂಡಿರುವ ಅಗತ್ಯ ಹಾಗೂ ಅನಗತ್ಯ ವಿಷಯಗಳು
ನಾವು ಅನಗತ್ಯ ಸಂಗತಿಗಳ ನಡುವೆ ಕಳೆದು ಹೋಗಿದ್ದೇವೆನೋ ಅನಿಸುತ್ತದೆ. ಮಾಡಬೇಕಾಗುವ ಮಾಡದೆ ತಿಳಿಬೇಕಾದ್ದನ್ನು ತಿಳಿಯದೆ ಸಂಬಂಧವಿಲ್ಲದ ರಾಜಕೀಯ ಮನೋರಂಜನೆ ಧಾರ್ಮಿಕ ವಿಷಯಗಳಲ್ಲಿ ನಮ್ಮನ್ನೇ ಕಳೆದುಕೊಂಡಿದ್ದೇವೆ.ಅನಿಸುತ್ತದೆ.
ಇಲ್ಲಿ ಕೆಲವು ಇತ್ತೀಚಿನ ಉದಾಹರಣೆಗಳಿವೆ.
1) ಇಲ್ಲಿ ಒಬ್ಬರು ನನ್ನ ಹಾಗೆ ಬ್ಯಾಂಕಿನ ನಿವೃತ್ತರು. ಸುಮಾರು 15 ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಇತ್ತೀಚಿಗೆ ಅವರು ತಮ್ಮ ತಿಂಗಳ ಪೆನ್ಷನ್ ಜಮಾ ಆಗಿಲ್ಲ ಎಂದು ನನಗೆ ದೂರು ಕೊಟ್ಟರು. ಅವರು ಆನ್ಲೈನ್ ಬ್ಯಾಂಕಿಂಗ್ ಇಟ್ಟುಕೊಂಡಿಲ್ಲ. ಬ್ಯಾಂಕು ಇಮೇಲ್ ಮೂಲಕ ಪೆನ್ಷನ್ ಸ್ಲಿಪ್ ಅನ್ನು ಕಳಿಸುತ್ತದೆ. ಆದರೆ ಇವರು ಇ-ಮೇಲ್ ಇಟ್ಟುಕೊಂಡಿಲ್ಲ. ಬಹುಶ ಬ್ಯಾಂಕ್ ಗೆ ತಿಳಿಸಿಲ್ಲ. ಬ್ಯಾಂಕ್ ಖಾತೆಗೆ ಪೆನ್ಷನ್ ಜಮಾ ಆದರೆ ಒಂದು ಸಂದೇಶ ಇವರ ಮೊಬೈಲ್ ಗೆ ಬರುವುದಾದರೂ ಆ ಮೊಬೈಲ್ ಸಂದೇಶವನ್ನು ನೋಡಿಲ್ಲ ಅಥವಾ ಬ್ಯಾಂಕಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ತಿಳಿಸಿಲ್ಲ. ನಿಜ ಸಂಗತಿ ಏನೆಂದರೆ ಮಾಸಿಕ ಪಿಂಚಣಿ ಅವರ ಖಾತೆಗೆ ಜಮಾ ಆಗಿತ್ತು. ಈ ವಿಷಯವನ್ನು ಅವರು ನನಗೂ ಗೊತ್ತಾಯಿತು.
ಪಿಂಚಣಿ ಜಮಾ ಆಗಿಲ್ಲವೆಂದು ಪಿಂಚಣಿ ದಾರರ ಸಂಘದ ಕಾರ್ಯದರ್ಶಿಯಾದ ನನಗೆ ದೂರು ಕೊಟ್ಟ ಈ ಮನುಷ್ಯ ಪಿಂಚಣಿ ಜಮಾದ ವಿಷಯ ತಿಳಿದ ಮೇಲೆ ನನಗೆ ಫೋನ್ ಮೂಲಕ ಆಗಲಿ ಅಥವಾ ವಾಟ್ಸಪ್ ಮೂಲಕ ಒಂದು ಸಂದೇಶ ಮೂಲಕವಾಗಲಿ ವಿಷಯ ತಿಳಿಸದೆ ಸುಮ್ಮನೆ ಇದ್ದರು. ಹಾಗಂತ ಇವರು ವಾಟ್ಸಾಪ್ ಬಳಸದವರು ಏನಲ್ಲ. ನನಗೆ ಏನೇನೋ ಸಂದೇಶಗಳನ್ನು ಫಾರ್ವರ್ಡ್ ಮಾಡಿದ್ದಾರಲ್ಲ? ( ಇವರ ಜೊತೆಯಲ್ಲಿ ಮಕ್ಕಳಿಲ್ಲ. ಗಂಡು ಹುಡುಗರು ಇಲ್ಲ. ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಊರಲ್ಲಿ ಇದ್ದಾರೆ. ಅವರಿಂದ ಯಾವುದೇ ತಾಂತ್ರಿಕ ಸಹಾಯ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ) ಇನ್ನೊಮ್ಮೆ 15 ವರ್ಷದ ಹಿಂದಿನ ವೇತನ ಪರಿಷ್ಕರಣೆಯ ಅರಿಯರ್ಸ್ ತಮಗೆ ಬಂದಿಲ್ಲವೆಂದು ತಿಳಿಸಿದ್ದರು! 15 ವರ್ಷ ಏಕೆ ಸುಮ್ಮನೆ ಇದ್ದರು?
2 ) ಇತ್ತೀಚೆಗೆ ಇನ್ನೊಬ್ಬ ಬ್ಯಾಂಕ್ ನಿವೃತ್ತರು - ಇವರು ಮರಿ ನಾಯಕರೇ - ನನಗೆ ಫೋನ್ ಮಾಡಿ ಈ ತಿಂಗಳು ಪಿಂಚಣಿಯಲ್ಲಿ ತುಟ್ಟಿ ಭತ್ಯ ಬಂದೇ ಇಲ್ಲವಲ್ಲ ಎಂದರು. ಏನು? ಕೇವಲ ಮೂಲವೇತನ ಬಂದಿದೆಯೇ ಎಂಬ ನನ್ನ ಪ್ರಶ್ನೆಗೆ ತಮ್ಮ ಹೇಳಿಕೆಯನ್ನು ಬದಲಾಯಿಸಿ ತುಟ್ಟಿ ಭತ್ಯದ ಹೆಚ್ಚಳ ಬಂದಿಲ್ಲ ಎಂದರು. ಇವರಿಗೆ ಮತ್ತು ಇತರರಿಗೆ ಈ ತುಟ್ಟಿ ಭತ್ಯದ ಕಲ್ಪನೆಯೇ ಇಲ್ಲ. ಸುಮಾರು 30 ವರ್ಷ ನೌಕರಿ ಮಾಡಿದ ಇವರಿಗೆ ತುಟ್ಟಿ ಭತ್ಯವು ಹೇಗೆ ತೀರ್ಮಾನವಾಗುತ್ತದೆ ಎಂಬುದೇ ಗೊತ್ತಿಲ್ಲ. ನೌಕರಿಯಲ್ಲಿದ್ದಾಗ ಒಂದೆರಡು ವರ್ಷಕ್ಕೊಮ್ಮೆ ಕಡಿಮೆ ಹೆಚ್ಚಳ ಅಥವಾ ಭತ್ಯವೇ ಕಡಿಮೆ ಆಗುವುದು ಇವರ ಗಮನಕ್ಕೆ ಬಂದಿಲ್ಲವೇ ? ಇವರಿಗೆ ತುಟ್ಟಿಭತ್ಯ ಎಷ್ಟು ಬರಬೇಕಿತ್ತು ಎಂಬುದೂ ಗೊತ್ತಿಲ್ಲ !
ಇದನ್ನೆಲ್ಲ ನೋಡಿ ನನಗೆ ಅನಿಸುವುದು ಏನೆಂದರೆ ನಮಗೆ ಏನೇನೂ ಸಂಬಂಧವಿಲ್ಲದ ರಾಜಕಾರಣ ಧರ್ಮದಂಥ ವಿಷಯಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುತ್ತೇವೆಯೇ ಹೊರತು ಅಗತ್ಯ ಆರೋಗ್ಯ ಸಂಗತಿಗಳು , ಆರ್ಥಿಕ ವಿಷಯಗಳು , ಹೊಟ್ಟೆ ತುಂಬಿಸಿಕೊಳ್ಳಲು ಅಡುಗೆಯ ವಿಧಾನಗಳು ಮುಂತಾದವುಗಳನ್ನು ತಿಳಿದುಕೊಂಡಿರುವುದೇ ಇಲ್ಲ. ಏನಂತೀರಿ?