ನಾಸ್ತಿಕ
ನಾಸ್ತಿಕ
---------
ದೂಪ ದೀಪ ನೈವೇದ್ಯದಿಂದ ಪೂಜಿಸಿ
ರಾಮನಾಮ ಜಪಿಸುತ್ತ ಕಣ್ಮುಚ್ಚಿದ ಹನುಮ
ಉಫ್ ಉಫ್ ಉಫ್ ಎನಿದು ಸದ್ದು ಉಫ್
ಕಣ್ತೆರೆದು ಬೆರಗಿನಿಂದ ದಿಟ್ಟಿಸಿದ ಹನುಮ
ಮಹಾಕಪಿಯೆ ಚೇಷ್ಟೆಯ ಬಿಟ್ಟು ದೀನಭಾವದೊಳಿರಲು
ತಂದೆಯಾದ ಪವನನು ಆಡುತಿರುವ ದೇವರೆದುರು
ಅತ್ತ ಓಡಿ ಇತ್ತ ಓಡಿ ಆಟವಾಡುತಿರುವ ದೀಪದೆದುರು
'ಅತ್ತ ಹೋಗಿ ಅಪ್ಪ ಇದು ರಾಮನಿಗಾಗಿ ಹಚ್ಚಿರುವ ದೀಪ'
ಮತ್ತೆ ಕಣ್ಮುಚ್ಚಿದ ಹನುಮ ಮನದಿ ' ರಾಮ ರಾಮ ರಾಮ'
ಮತ್ತೆ ಸುತ್ತ ಮುತ್ತ ಆಡುವ ವಾಯುದೇವನ ಶಬ್ದ
ಅಸಹನೆಯಿಂದ ಕಣ್ತೆರದ ಹನುಮ ವ್ಯಗ್ರನಾದ
'ಎಲ್ಲರು ಕರೆವರು ನಿನ್ನ ದಿಕ್ಪಾಲಕನೆಂದು ಅದು ಮಿಥ್ಯ
ನೀನು ನಾಸ್ತಿಕನೆಂಬುವುದು ನಾನು ಕಂಡ ಸತ್ಯ'
--------------------------------------------------------
ನನಗೆ ಹೊಳೆದ ಇದೊಂದು ವಿಚಿತ್ರ ಕಲ್ಪನೆ
ಅಪ್ಪನ ಎದುರಿಗೆ ಮಕ್ಕಳು ಮಾಡುವುದು ಚೇಷ್ಟೆ
ಆದರೆ ಮಕ್ಕಳ ಎದುರಿಗೆ ಅಪ್ಪನ ಚೇಷ್ಟೆ ಮಾಡಿದರೆ
ಅನ್ನಿಸಿತು. ಹಾಗೆ ಸುಮ್ಮನೆ ಬರೆದೆ.
ಇದೊಂದು ಕಲ್ಪಿತ ಪ್ರಸಂಗ
ಚಿತ್ರಮೂಲ : ಹನುಮ ರಾಮ
Rating
Comments
:)
:)
In reply to :) by kavinagaraj
ಗುರುಗಳೇ
ಗುರುಗಳೇ
ಥಟ್ಟನೆ ಹೊಳೆವ ಸಾಲುಗಳನ್ನು ನೆನಪಿಟ್ಟುಕೊಂಡು ಅವುಗಳಿಗೆ ಮಾಂಸ -ಮಜ್ಜೆ ಜೋಡಿಸಿ ಉಡುಗೆ ತೊಡಿಸಿ ಬರಹವಾಗಿಸುವುದು ಪ್ರಯಾಸದ ಕೆಲಸ ....ಬರಹ ತುಂಬಾ ಚೆನ್ನಾಗಿದೆ. ಹಾಗೆಯೇ ಜೊತೆ ಸೇರ್ಸಿದ ಚಿತ್ರ ಭಯ ಭಕ್ತಿ ಮೂಡಿಸುತಿದೆ...
ಮಕ್ಕಳಲ್ವೇ -ಹಾಗೇನೆ...!!
ಶುಭವಾಗಲಿ..
\|
ಪಾರ್ಥ ಸಾರಥಿ ಯವರಿಗೆ ವಂದನೆಗಳು
ಪಾರ್ಥ ಸಾರಥಿ ಯವರಿಗೆ ವಂದನೆಗಳು
' ನಾಸ್ತಿಕ' ಕವನ ಹನುಮ ಸ್ತುತಿ ಚೆನ್ನಾಗಿ ಬಂದಿದೆ, ಧನ್ಯವಾಧಗಳು.