ನಾ ಕೊಂಡ ಹೊತ್ತಗೆಗಳು

ನಾ ಕೊಂಡ ಹೊತ್ತಗೆಗಳು

ಕಳೆದ ವಾರದ ಕೊನೆಯಲ್ಲಿ 'ಅಂಕಿತ'ಕ್ಕೆ ಹೋಗಿ ನಾಲ್ಕು ಹೊತ್ತಗೆಗಳನ್ನು ಕೊಂಡೆ

ಈಗಾಗಲೆ ಸಂಪದದಲ್ಲಿ ಬಹಳ ಸಾರಿ ಮಾತಿಗೆ ಬಂದಿರುವ ಡಿ.ಎನ್.ಶಂಕರಬಟ್ಟರ

೧) ಕನ್ನಡ ಬರಹ ಸರಿಪಡಿಸೋಣ

೨) ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ

೩) ಯಶವಂತ ಚಿತ್ತಾಲರ 'ಶಿಕಾರಿ'

೪) ಬಸವಣ್ಣನ ವಚನಗಳು - ಒಂದು ಮುಕಾಮುಕಿ

೧) ನ್ನು ಓದಲು ಸುರು ಮಾಡಿದೆ...ಎಡಬಿಡದೆ ಓದಿ ಈಗಾಗಲೇ ೮೦% ಮುಗಿಸಿದ್ದೇನೆ.  ಕೈ ಮುಗಿಬೇಕು ಶಂಕರಬಟ್ಟರಿಗೆ ಅವರು ವಿಶ್ಯವನ್ನು  ಹೇಳಿರುವ ಬಗೆಗೆ. ಎಲ್ಲ ಕನ್ನಡಿಗರೂ ಓದಲೇ ಬೇಕಾದ ಬರವಣಿಗೆ ಇದು. ನನಗನ್ನಿಸಿದ್ದು

   --> ನನಗೆ 'ಕನ್ನಡ'ವನ್ನು ನಾವು ಸುಮ್ಮನೆ "ಕ್ಲಿಷ್ಟ", 'ಕಷ್ಟ' ಮಾಡಿಕೊಂಡಿದ್ದೀವಿ ಅನ್ನಿಸಿತು. 

   --> ಗಮನ ಸೆಳೆದ ಇನ್ನೊಂದು ವಿಶ್ಯ ಅಂದ್ರೆ ಬದಲಾಗುವುದು ನುಡಿಯ(ಬಾಶೆಯ) ಗುಂಡಿಗೆ( ಜೀವಂತಿಕೆ) ಯನ್ನು ತೋರಿಸುತ್ತೆ. ಇದೇ ಕಾರಣಕ್ಕೆ ನಾವು ಱ ಮತ್ತು ೞ ಗಳನ್ನು ಹೊಸಗನ್ನಡದಲ್ಲಿ ಬಳಸದಿರುವುದು.

   --> ಅಡಿಗಡಿಗೆ ಅವ್ರು ಹೇಳುವುದೇನೆಂದರೆ ೨೦೦೦ ಸುಗ್ಗಿ(ವರುಸ)ಗಳಿಗೂ ಹಳೆಯದಾದ ಸಂಸ್ಕ್ರುತ ಪದಗಳನ್ನು ಹಾಗೆ ಬರೆಯುವ 'ಚಪಲ' ಕನ್ನಡಿಗರಿಗೆ ಯಾಕೆ ಬೇಕು. ಸಂಸ್ಕ್ರುತದಿಂದ ಬೆಳೆದು ಬಂದ ನುಡಿಗಳೇ ( ಪಂಜಾಬಿ, ಮರಾಟಿ) ಸಂಸ್ಕ್ರುತದ ಪದಗಳನ್ನು ಆಯ ನುಡಿಗಳಿಗೆ ಒಗ್ಗಿಸಿಕೊಂಡು ಬರೆಯುತ್ತಾರೆ. ಕನ್ನಡಿಗರಿಗೆ ಈ ಹುಚ್ಚು ಯಾತಕ್ಕೆ?

  ಹೀಗೆ ಇನ್ನು ಏಟೊಂದು ಬರೀಬೇಕು ಅಂತಿದೀನಿ, ಆಮೇಲೆ ಬರಿತೀನಿ.

 

Rating
No votes yet