ನಾ ನಿನ್ನವಳಲ್ಲ

4.666665

ನಾ ನಿನ್ನವಳಲ್ಲ... ನಿನ್ನ

ನೆನಪಲೆ ಕಳೆದುಹೋದವಳಲ್ಲ.
ಹಂಬಲಿಸಿ ಕಾದಿರುವೆ  ಕಳೆದುಹೋಗಲು
ನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆ
ಇಡಿಸಾಗರದ ಮಧ್ಯೆ  ಹಿಮಚಕ್ಕೆಯಂತೆ.

ನೀ ನನ್ನ ಪ್ರೀತಿಸುವುದ ನಾ ಬಲ್ಲೆ.
ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ 
ಆದರೂ  ಕಳೆದುಹೋಗಲು ನನ್ನ ಹಂಬಲಿಕೆ
ಇರುಳಲ್ಲಿ ಇಣುಕಿಯೂ ನೋಡದ ಬೆಳಕಿನಂತೆ

ಪ್ರೀತಿ ಸಾಗರದಲಿ ನನ್ನ ಮುಳುಗಿಸು
ಮತಿಯ ಮತ್ತಿನಲೆ  ಮಲಗಿಸು
ಮೂಕವಾದರು, ಕೇಳದಾದರು
ಹಂಬಲಿಸಿ ಕಾದಿರುವೆ ಕಳೆದುಹೋಗಲು
ನಿನ್ನ ಪ್ರೀತಿಯ ಬಿರುಗಾಳಿಯಲೆ ತರಗೆಲೆಯಾಗಲು.

ಸಾರಾ ಟೀಸ್ ಡೇಲ್ ಅವರ " I am not yours " ಪದ್ಯದ ಭಾವಾನುವಾದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಿಯ ಮೊದ್ಮಣಿ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕಳೆದು ಹೋಗಲು, ಕರಗಿಹೋಗುವ ಹಂಬಲದ ಒಲವಿನ ಕರೆಯ ಭಾವನುವಾದ ಚನ್ನಾಗಿ ಒಡಮೂಡಿದೆ. ಹಂಬಲಿಸಿ ಕಾದಿರುವೆ ಕಳೆದುಹೋಗಲು , ಉತ್ತಮ ಕಾವ್ಯಮಯ ಧಾಟಿ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕಾಗಿ ನನ್ನಿ ಲಕ್ಷ್ಮೀಕಾಂತ ಇಟ್ನಾಳರೆ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಅರ್ಥಪೂರ್ಣವಾಗಿದೆ, liked it a lot

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬುಹೃದಯದ ಕೃತಙ್ಞತೆಗಳು ಅನಿಲ್ ತಾಳೀಕೋಟಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ನಿನ್ನವಳಲ್ಲ ..!
ಎಂದು ಭಯ ಬೀಳಿಸಿ ಕೊನೆಗೆ ನನ್ನವಳೇ ಆಗಿ ಕಳೆದು ಹೋಗಲು ಇಚ್ಚಿಸಿದವಳ ಬಗ್ಗೆ ಬರೆದ ಈ ಅಂಗಳ ಬರಹವನ್ನು ಸಮರ್ಥವಾಗಿ ಸರಳವಾಗಿ ಕನ್ನಡೀಕರಿಸಿರುವಿರಿ..
ನೀವು ಇದು ಆಂಗ್ಲ ಭಾಶೆಯ ಕವನದ ಕನ್ನಡ ಅನುವಾದ ಎಂದು ಅದರ ಮೂಲ ಹೆಸರು ಕತೃ ಹೆಸರು ತಿಳಿಸಿದ ಕಾರಣ ನೆಟ್ನಲ್ಲಿ ಹುಡುಕಾಡಿ ಆ ಬರಹದ ಲಿಂಕ್ ಸಹಾ ಹಾಕಿರುವೆ.
ಇದನ್ನು ಓದುವವರಿಗೆ ಮೂಲ ಬರಹವನ್ನು ಓದುವ ಅವಕಾಶ ಸಿಗಲಿ ಅಂತ..

http://www.poemhunter.com/poem/i-am-not-yours/

ಶುಭವಾಗಲಿ..
ನನ್ನಿ
\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಉದ್ದೇಶಪೂರ್ವಕವಾಗಿಯೇ ಮೂಲ ಪದ್ಯದ ಕೊಂಡಿ ಹಾಕಿರಲಿಲ್ಲ. ಆಸಕ್ತ ಕಲಾರಸಿಕರು ಅದನ್ನು ನೀಡಲಿ ಎನ್ನುವುದು ನನ್ನ ಆಶಯವಾಗಿತ್ತು. ಅದನ್ನು ನಿಜ ಮಾಡಿದಿರಿ ಧನ್ಯವಾದಗಳು ವೆಂಕಟ್.

ಮೊದ್ಮಣಿ
--

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.