ನಾ ನೋಡಿದ ಮೀರಾ ಮಾಧವ ರಾಘವ
ಅಲ್ಲ ನಾನ್ ಅನ್ಕೊಂಡೆ "ಮೀರಾ ಮಾಧವ ರಾಘವ" ಕೂಡ ಒಂದು ತ್ರಿಕೊನ ಪ್ರೇಮ ಪ್ರಕರಣವಾಗಿರತ್ತದೆ ಎಂದು. "ಮಾಯಾ ಮ್ುಗ"ದ ಮಾಯೆಗೆ ನನ್ನ ಶಾಲಾದಿನಗಳಿಂದಲೇ ಸಿಕ್ಕಿಹಾಕಿಕೊಂಡಿದ್ದ ನನಗೆ ಶ್ರೀಯುತ ಟಿ.ಎನ್. ಸೀತಾರಾಮರು ಮಾಡುವ ಮೋಡಿಯನ್ನು ನೊಡುವ ಕಾತರ ಪಿವಿಆರ್ ಕಾಲಿಡುವವರಿಗೂ ಕಾಡುತ್ತಿತ್ತು.
ರಜೆಯಲ್ಲಿರುವ ನನಗೆ ದಿನಾಲೂ ತಡವಾಗಿ ಎದ್ದೇಳುವ ಕೆಟ್ಟ ಚಾಳಿ ಶುರುವಾಗಿರುವಾಗ, ಸಿನಿಮಾದ ಮೊದಲ ಪ್ರೇಮುಗಳು ನನ್ನನ್ನ ಎಚ್ಚರಿಸಿದ ಹಾಗೆ ಕಂಡು ಬಂತು. ಇಂಪಾದ ಸಂಗೀತ, ಕಣ್ಮನ ಸೆಳೆದ ಪ್ರಕ್ುತಿ ;) ರಮ್ಯಳ ಮನಮೊಹಕ ನೊಟ ಮತ್ತು ಸಾಂಪ್ರದಾಯಿಕ ಉಡುಗೆಯೊಂದಿಗಿನ ನಟನೆ ನನ್ನನ್ನು. ಬೆರಗುಗೊಳಿಸಿದ್ದಂತೂ ನಿಜ. "ಅಮ್ುತಧಾರೆ"ಯ ನಂತರ ರಮ್ಯ ಮೈಗೆ ಕಚಗುಳಿಯಿಡುವಂತೆ ಕಂಡಿದ್ದು ಈ ಚಿತ್ರದಲ್ಲೇ.
ಮದ್ಯಮವರ್ಗದ ಅನೇಕ ಕುಟುಂಬಗಳಲ್ಲಿ ಕಂಡು ಬರುವ ಸಾಲ, ಅಸ್ಥಿರತೆ, ಬಡತನದ ನಡುವೆ ಕಂಡುಬರುವ ನೆಮ್ಮದಿ, ಹಾಸ್ಯ, ನೆಮ್ಮದಿ, ಕುಟುಂಬದಲ್ಲಿನ ಸದಸ್ಯರ ನಡುವೆಯಿರುವ ಬಾಂದವ್ಯ ಹಾಗೆ ಮೇಲ್ವರ್ಗದ ಗರ್ವ, ಕುಹಕತನ, ಅಲ್ಲಿನ ಬದುಕು, ಮನುಷ್ಯ ಒಳ್ಳೆಯವನಾದರೂ ಕೆಟ್ಟವನಾದರೂ ಅವನನ್ನು ಬದುಕು ಕಾಲಕ್ಕೆ ತಕ್ಕಂತೆ ವಿಚಿತ್ರ ರೀತಿಯಲ್ಲಿ ನೆಡೆಯುವಂತೆ, ಚಿಂತಿಸುವಂತೆ ಮಾಡುವುದರ ಸಂಪೂರ್ಣ ಚಿತ್ರಣ ಇಲ್ಲಿದೆ.
ರಾಘವ ಮತ್ತು ಮಾಧವ ಇವರಿಬ್ಬರಲ್ಲಿ ರಾಘವನ ನಟನೆ ಸಹಜ ಮತ್ತು ಭಿನ್ನ.ಮಾಧವನ ನೆಡತೆ ಸಿನಿಮೀಯ ರೀತಿಯಲ್ಲೆ ಅಲ್ಲಲ್ಲಿ ಮಸುಕಾಗುತ್ತಾ ನೆಡೆಯುತ್ತದೆ. ಮಾಧವ ತನ್ನ ಕೆಲಸದ ಮತ್ತು ಕನಸಿನ ಕಡೆ ತೊರುವ ಪ್ರೀತಿಯನ್ನು ತನ್ನ ಮಡದಿಯ ಕಡೆ ನೀಡದೆ ಅದು ಸಿನಿಮಾನೆ ಅನ್ನೊ ತರ ಮಾಡ್ತಾನೆ (ಏಕೆಂದರೆ ನಿರ್ದೇಶಕರು ಮಾಧವ ಅವನ ಹೆಂಡತಿಗೆ ಕೆಲಸ ಸಿಕ್ಕಾಗ ನೆಡೆದ ಸಂಭಾಷಣೆಯನ್ನು ಬೇಗ ಮರೆತೆ ಹೊಗ್ಬಿಡ್ತಾರೆ).
ರಾಘವ ತನ್ನ ಪ್ರೇಮ ನಿಜವಾದದ್ದು ಅನ್ನೋದನ್ನ ಕೊನೆತನಕ ತೋರಿಸಿಕೊಂಡು ಬಂದರೂ, ಪ್ರೇಮ್ ಬದಲಾಯಿಸೂದರ ಮದ್ಯದಲ್ಲಿ ಚಿನ್ನದ ಕಟ್ಟಿನಲ್ಲಿರೋ ಉಂಗುರ ನೀಲಿಯಿಂದ ಹಳದಿಗೆ ಬದಲಾಗಿರುತ್ತದೆ (ಸೂಷ್ಮವಾಗಿ ಗಮನಿಸಿ). ಅವನ ರೌಡಿಸಂ , ಹುಡುಗೀನ ಮಾತಾಡಿಸೋ ರಬಸ ಬೇರೆ ಚಿತ್ರಗಳಿಗಿಂತ ಬಿನ್ನವಾಗಿವೆ.
ವಸಂತ ವಸಂತ, ಬೆಳ್ಳುಳ್ಳವ್ವ ಬೆಳ್ಳುಳ್ಳಿ ಯೊಂದಿಗೆ ಸಂಗೀತ ಇಂಪಾಗಿದೆ.
ಮೊದಲರ್ದ "ಎಕ್ಸ್ ಪ್ರೆಸ್ ಟ್ರೈನ್" ಆದರೆ ಇಂಟರ್ವಲ್ ನಂತರದ ಬಾಗ ಕುತೂಹಲದಿಂದಾಗಿ ಮಾತ್ರ ನಿಮ್ಮನ್ನ ಕೂರಿಸಿಕೊಳ್ಳುತ್ತದೆ. ಅಂದರೆ ಆನಂತರ ಡೈಲಾಗಿಗೆ ಮಾತ್ರ ಜಾಗ. ಮುಂಗಾರುಮಳೆಗಿಂತಾ ಜ್ಯಾಸ್ತಿ ನೀರನ್ನು ತೋರಿಸಿದರೂ ನೀವು ನೆನಯಲಿಕ್ಕಾಗದಷ್ಟು ಬಿಸಿಯನ್ನ ಇವು ಮುಟ್ಟಿಸುತ್ತವೆ.
ಇನ್ನೂ ನೊಡಿಲ್ವಾ, ಇವತ್ತೇ ಹೊಗಿ ನೊಡಿ... ಕಾಸಿಗೆ ಮೊಸ ಇಲ್ಲ ಪಿವಿಆರ್ ನಲ್ಲೂ ಕೂಡ
Comments
ಉ: ನಾ ನೊಡಿದ ಮೀರಾ ಮಾದವ ರಾಘವ
In reply to ಉ: ನಾ ನೊಡಿದ ಮೀರಾ ಮಾದವ ರಾಘವ by gangadharg
ಉ: ನಾ ನೊಡಿದ ಮೀರಾ ಮಾದವ ರಾಘವ