ನಾ ಹಾಡಿದ ಮೊದಲ ಹಾಡು - ನನಗಾದ ಮೊದಲ ಅವಮಾನ

ನಾ ಹಾಡಿದ ಮೊದಲ ಹಾಡು - ನನಗಾದ ಮೊದಲ ಅವಮಾನ

ಬೇಗ ಬೇಗ ತಯಾರಾದೆ ಇವತ್ತಿಂದ ಸ್ಕೂಲ್ ಶುರು...ಅಬ್ಬ ನಾನು ಎಂಟನೆ ಕ್ಲಾಸು ಏನೊ ಖುಷಿ ಮನಸಲ್ಲಿ. ಪ್ರಾರ್ಥನೆ ಎಲ್ಲ ಮುಗಿದು
ನಮ್ಮ ನಮ್ಮ ವಿಭಾಗಕ್ಕೆ ಬಂದು ಕುಳಿತುಕೊಂಡೆವು..ಮೊದಲ ತರಗತಿಯೆ ಸಂಸ್ಕ್ರುತವಾಗಿತ್ತು ಸರಿ ಸಂಸ್ಕ್ರುತ ಮೇಡಮ್ ಬಂದ್ರು ಸರಿ ತಮ್ಮ ಮತ್ತು ನಮ್ಮ ಎಲ್ಲರ ಪರಿಚಯವನ್ನ್ನು ಮಾಡಿಕೊಂಡರು..ನಂತರ ಪಾಠ ನಾಳೆಯಿಂದ ಮಾಡುವೆ ಇವತ್ತು ಯಾರಾದ್ರು ಹಾಡೇಳಿ ಅಂದರು........... ಮೊದಲ ಬೆಂಚಿನಲ್ಲೆ ಕುಳಿತ ನಾನು ಠಣ್ ಅಂತ ಕೈ ಎತ್ತಿದೆ...ಸರಿ ಹೇಳಮ್ಮ ಅಂದರು...ಬೆಂಚಿನಿಂದ ಎದ್ದೆ... ನನಿಗೆ ಹೇಳು ಅಂದಿದ್ದಕ್ಕೆ ಖುಷಿಯಾಗೆ ಎನೊ ಸಾಧಿಸಿದವಳಂತೆ ...ಕೈ ಕಟ್ಟಿ ಹಾಡಲು ಶುರುವಿಟ್ಟೆ..ಮಾತಾಡು ಮಾತಾಡು ಮಲ್ಲಿಗೆ ಸಂಪಿಗೆ ಶಾವಂತಿಗೆ............( ನಾನು ಎಂದು ಹಾಡಿದವಳಲ್ಲ, ಸಂಗೀತವನ್ನು ಕಲಿತವಳು ಅಲ್ಲ ಮೊದಲು ಯಾವತ್ತು ಹಾಡುವ ಪ್ರಯತ್ನವನ್ನು ಮಾಡಿರಲಿಲ್ಲ.. ಅದು ನಾ ಹಾಡಿದ ಮೊದಲ ಹಾಡಾಗಿತ್ತು..) ಎಲ್ಲರು ಒಮ್ಮೆಲೆ ಗೊಳ್ಳೆಂದು ನಕ್ಕರು......ಒಮ್ಮೆಲೆ ಅವರೆಲ್ಲ ನಕ್ಕಿದ್ದನ್ನು ಕಂಡು ನನಗೆ ಯಾಕೆ ಎಂದು ತಿಳಿಯಲಿಲ್ಲ.....ನಮ್ಮ ಮೇಡಮ್ ಕೂಡ ನಕ್ತಾ ಇದ್ರು ಅವಾಗ ತಿಳಿಯಿತು ನನ್ನ ಹಾಡು ಚೆನ್ನಾಗಿಲ್ಲವೆಂದು ಬೇರೆಯವರೆಲ್ಲ ನಕ್ಕಿದ್ದು ನನಿಗೆ ಏನು ಅನ್ನಿಸಲಿಲ್ಲ ಆದರೆ ಮೇಡಮ್ ನಕ್ಕಿದ್ದು ನನ್ನ ಎಳೆಯ ಮನಸಿನ ಮೇಲೆ ಬರೆ ಎಳೆದಂತಾಯಿತು..ಕಣ್ಣಲ್ಲಿ ನೀರು ತುಂಬಿ ಬಂತು........
ಘಟನೆ ನಡೆದು ಎಷ್ಟೊ ವರುಷಗಳಾದರು...ಅವರು ನಕ್ಕ ಆ ದ್ರುಶ್ಯ ನನ್ನ ಮನಸ್ಸಿನಲ್ಲಿ ಹಾಗೆ ಹಚ್ಚೊತ್ತಿದೆ........ಎಷ್ಟು ಸಾರಿ ಆ ಘಟನೆ ನೆನಪಿಗೆ ಬರುತ್ತೆ ಆಗ ಆ ಮೇಡಮ್ ಬಗ್ಗೆ ಬೇಸರ ವಾಗುತ್ತದೆ ಅವರ ಒಬ್ಬ ಗುರುಗಳಾಗಿ ನನ್ನನ್ನು ಪ್ರೋತ್ಸಾಹಿಸದಿದ್ದರು ಹಾಗೆ ಅವಮಾನ ವಾಗುವಂತೆ ನಗಬಾರದಿತ್ತೆಂದು.....ಆದರೆ ಆ ಘಟನೆಯಿಂದ ಇಂದಿಗು ಕೂಡ ನಾನು ಯಾವ ಮಕ್ಕಳ ಮನಸ್ಸನ್ನು ನೋಯಿಸುವುದಿಲ್ಲ...ಸಾಧ್ಯದರೆ ಅವರನ್ನು ಸಮಾಧಾನ ಮಾಡಿ ಹೋಗುತ್ತೇನೆ.
ಆದರೆ ಅಂದೆ ಕೊನೆ ಮತ್ತೆ ಯಾವತ್ತು ಯಾರ ಮುಂದೆಯು ಹಾಡುವ ಪ್ರಯತ್ನವಂತು ಮಾಡಿಲ್ಲ..

Rating
No votes yet

Comments