ನಿಂಗೆ ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರ್ತೀನಿ ನಾನು..!
ನಿಂಗೆ ನಾನಿಷ್ಟಾನಾ ಚಳಿ ಇಷ್ಟಾನಾ ಕೇಳಿದರೆ ಚಳಿ ಅಂತೀಯಲ್ಲೇ ಪುಣ್ಯಾತಗಿತ್ತೀಅದ್ಯಾಕೇ ಚಳಿ ಅಂದ್ರೇ ಪ್ರಾಣ ಬಿಡ್ತೀಯೋ, ತಿಳೀವಲ್ದು. ಅಪ್ಪಿ ತಪ್ಪಿ ಅಮ್ಮನೆದುರುಚಳಿ ಅಂದ್ರೆ ಇಷ್ಟ ಅಂದುಬಿಡಬೇಡಾ, ಮಾರನೇ ದಿನದಿಂದ್ಲೇ ನಿನ್ನ ಮದುವೆ ಕುರಿತು ತಲೆಕೆಡೆಸಿಕೊಂಡಾರು, ಮೊಮ್ಮಗುವಿನ ನಾಮಕರಣಕ್ಕೆ 'ಮಕ್ಕಳ ಹೆಸರುಗಳ ಪುಸ್ತಕ'ಕೊಂಡುಕೋಬಿಟ್ಟಾರು, ಹುಷಾರು. ಬೆಳ್ಳಂಬೆಳಿಗ್ಗೆ ಈ ಜನವರಿ ಚಳೀಲಿ ನೀನು ಹೇಗಿರ್ತಿಅಂತ ಊಹಿಸ್ಕೊಳೋಕು ಎಷ್ಟು ಖುಷಿಯಾಗಿರುತ್ತೆ ಗೊತ್ತ? ವೀಣೆ ಚಿತ್ರವಿರುವ ರಗ್ಗಿನೊಳಗೆಮುದುಡಿ ಮಲಗಿರುವ ಮುದ್ದು ಮೊಲ ನೀನು. ಅಂತಹ ಚಳಿಯಲ್ಲು ಫ್ಯಾನನ್ನುಒಂದರಲ್ಲಿಟ್ಟಿರುತ್ತೀ, ಅದರ ಕೊರ ಕೊರ ಶಬ್ದ ನಿನಗೆ ಜೋಗುಳ ಹಾಡ್ತದೇನೆ? ಮೊನ್ನೆ ಅದುಹಾಳಾದಾಗ ರಿಪೇರಿ ಆಗೋವರ್ಗೂ ನಿದ್ದೆ ಮಾಡಿರ್ಲಿಲ್ವಂತೆ?ಐದು ಗಂಟೆಗೆ ಎಚ್ಚರವಾದರೂ ಅದೇನು ಊಹಿಸುತ್ತಿರುತ್ತೀಯ ಹೊದಿಕೆಯ ಲೋಕದೊಳಗೆ? ನನ್ನಕನಸಿನಲ್ಲಿ ನಾನು ಕೊಡೋ ರಾಶಿ ರಾಶಿ ಮುತ್ತುಗಳೆಲ್ಲ ನಿನಗೆ ತಲುಪ್ತಿದಾವೇನೋ ಎಂಬಂತೆಹೊದಿಕೆಯೊಳಗೇ ನಗ್ತಾ ಇರ್ತೀಯಲ್ಲ. ಕನಸುಗಳು ಕಾಣ್ತಾ ಕಾಣ್ತಾ ಮಗ್ಗಲು ಬದಲಿಸುವಾಗಗೆಜ್ಜೆ ಸದ್ದು , ಅದು ಕೇಳುತ್ತಲೇ ಅಮ್ಮ ಡಿಕಾಕ್ಷನ್ ಮಾಡಲು ಶುರು ಹಚ್ಚಿಕೊಳ್ತಾರೆ.ಸ್ವಲ್ಪ ಹೊತ್ತಿನಲ್ಲೆ ಅಮ್ಮ ಕೊಡುವ ಬೆಚ್ಚಗಿನ ಕಾಫಿ. ಒಂದು ವಿಷಯ, ಮದ್ವೆ ಆದ್ಮೇಲೆನಿಂಗೆ ಅಷ್ಟು ಬೆಳಿಗ್ಗೇನೆ ಕಾಫೀ ಬೇಕಂದ್ರೆ, ಅಪ್ಪುಗೆ ಅರಮನೆಯಿಂದ ನನ್ನ ಬಿಟ್ಟರೆಮಾತ್ರ!!ಆ ರಗ್ಗನ್ನು ಅದೆಷ್ಟು ಮುದ್ದಾಗಿ ಅವುಚಿಕೊಂಡಿರ್ತೀಯ?
ಊಹಿಸಿಕೊಂಡ್ರೆ ಹೊಟ್ಟೆಯಲ್ಲಉರಿದುಹೋಗತ್ತೆ. ಏನಿದ್ರೂ ಅವೆಲ್ಲಾ ಮದ್ವೆ ಆಗೋವರೆಗಷ್ಟೇ! ಆಮೇಲ ರಗ್ಗಿಗೆಕಪಾಟಿನೊಳಗೆ ಜೀವಾವಧಿ ಶಿಕ್ಷೆ. ಅದೇನು, ಸ್ವಲ್ಪ ಬೇಗ ಎದ್ದು ನಿನ್ನ ಮುಕ್ಕಾಲುಕಂಗಳಿಂದ ಆ ಕಿಟಕಿಯಾಚೆ ಸ್ವಲ್ಪ ನೋಡ್ಬಾರ್ದ? ಪಾಪ, ಹೂಗಳು ಅರಳುವುದಕ್ಕೋಸ್ಕರಅದೆಷ್ಟು ಆಸೆಯಿಂದ ಕಾಯ್ತಿರ್ತಾವೆ. ಅಮ್ಮ ಹಾಕಿದ ರಂಗೋಲಿ ನೋಡೋಕಾದ್ರು ಬಂದ್ರೆಕಾಲ್ಗೆಜ್ಜೆ ನಾದಕ್ಕೆ ಕೂಗೋ ಕೋಳೀಗೆ ಮುದ ಸಿಕ್ಕೀತು. ಹಂಗೇ ಜಾಗಿಂಗ್ ಗೇ ಅಂತ ಬಂದರೆಅಲ್ಲಿ ಪಾರ್ಕಿಗೆ ವ್ಯಾಯಾಮ, ಲಾಫ್ಟರ್ ಕ್ಲಬ್ಬಿಗೆಂದೆ ಬರುವ ಮುದುಕರ ವಯಸ್ಸು ಸ್ವಲ್ಪಹೊತ್ತಾದರೂ ಕಡಿಮೆಯಾಗುತ್ತಲ್ವ?ಅಂದ ಹಾಗೆ ಬೇಂದ್ರೆ ಅಡಿಗರ ಕವನ ಓದುತ್ತಿರುತ್ತೀಯಂತೆ? ಲಂಕೇಶರ ಬರಹ ಅಂದ್ರೆಪಡುತ್ತಿ, ಕೆ.ಎಸ್.ನ ಅಂದ್ರೆ ಸಾಕು ಕೆ.ಆರ್.ಎಸ್. ಡ್ಯಾಮಿನಿಂದ ಬಿದ್ದೋಳ ತರಹಪುಸ್ತಕದಲ್ಲೇ ಮುಳುಗಿಹೋಗ್ತೀಯಲ್ಲ, ನನಗೊಂದು ಪುಟ್ಟ ಅನುಮಾನ, ಅವರನ್ನೆಲ್ಲ ಓದೋವಾಗನಾನು ನೆನಪಾಗಲ್ವ? ನನ್ನನ್ನು ಚೂರು ಮಾತಾಡಿಸ್ಬೇಕು ಅನಿಸಲ್ವ? ನಂಗೊತ್ತು ಆವಿಷಯದಲ್ಲಿ ನೀನು ಕೊಬ್ಬಿನ ಫ್ಯಾಕ್ಟರಿ, ನಾನ್ಯಾಕೆ ಕೇಳಲಿ ಎಂಬ ಟಿಪಿಕಲ್ ಹುಡುಗಿಯಜಂಭ!! ನನ್ನ ಕಣ್ಣೊಳಗೆ ಯಾಚನೆ ಕಾಣುವ ಆಸೆ. ಜೀವನ ಪೂರ್ತಿ ಕಣ್ರೆಪ್ಪೆ ತರಹನೋಡ್ಕೋತೀನಿ, ಪ್ಲೀಸ್ ಒಪ್ಕೋ ಎಂಬ ಮಾತುಗಳನ್ನ ಕೇಳೋ ಬಯಕೆ.ಹುಡುಗರಿಗೆ ಅವರದೇ ಆದಭಯಗಳಿರುತ್ತೆ ಕಣೇ, ಒಬ್ಬ ಹುಡುಗ ಐ ಲವ್ ಯು ಅಂತ ಹೇಳಿದರೆ ಒಲ್ಲದ ಹುಡುಗಿಗೆಅವನೊಬ್ಬ ಲೋಫರ್ ಅನ್ನಿಸಿಕೊಳ್ಳುವ ಚಾನ್ಸ್ ಗಳೇ ಜಾಸ್ತಿ!! ಬೀದಿಗಳಲ್ಲಿ ತದುಕಲೆಂದೇತುಂಬ ಜನ ಓಡಾಡಿಕೊಂಡಿರುತ್ತಾರೆ! ಆಫೀಸಿನ ಒತ್ತಡ, ಹಣದ ಸಮಸ್ಯೆ, ಹೆಂಡತಿಯ ಜಗಳಎಲ್ಲದರ ಒಟ್ಟು ಮೊತ್ತವನ್ನು ಮುಷ್ಟಿಯಲ್ಲಿಟ್ಟುಕೊಂಡೇ ತಿರುಗಾಡುತ್ತಿರುತ್ತಾರೆ.ಇಂತಹ ಲೋಫರ್ ಸಿಕ್ಕರೆ ಸಾಕು ಕಾರಣ ಕೇಳದೆ ತೋರಣಕ್ಕೆ ಕಟ್ಟಿಬಿಡುತ್ತಾರೆ. ಆ ಜನಗಳಿಗೆಹುಡುಗಿಯರೆಂದರೆ ಕಣ್ಣಲ್ಲಿ ಕರುಣೆಯ ಕಡಲು ಹರಿಯುತ್ತಿರುತ್ತದೆ. ತಪ್ಪು ಮಾಡಿದಹುಡುಗಿ ಎದುರಾದರೆ ಅವರೆಲ್ಲ ಸಾಯಿಪ್ರಕಾಶ್ ಫಿಲ್ಮಿನ ಅಣ್ಣಂದಿರು. ಅದೇಕೋ ಈ ವಿಶೇಷರಿಯಾಯಿತಿ. ಈ ಎಲ್ಲ ವಿಷಯಗಳನ್ನು ಪರಿಗಣಿಸಿಯಾದರೂ ಪ್ರೀತಿಯನು ಬಾಯಿ ಬಿಟ್ಟು ಹೇಳುಮಾರಾಯ್ತಿ. ನೀನು ಹಾಗೆ ಹೇಳಿದ ಕ್ಷಣ ನಾನು ಲತಿಕಾಳನ್ನು ಗೆದ್ದ ಜಮಾಲ್, ಆಸ್ಕರ್ಗೆಲ್ಲುವ ರೆಹಮಾನ್!!ನಿಂಗೆ ಚಳಿ ಇಷ್ಟ ಅಂತ ಗೊತ್ತಾದ ಮೇಲೆ ಗೆಳೆಯರೆಲ್ಲ ನನ್ನನ್ನು ಮಿಸ್ಟರ್ ಚಳಿ ಅಂತಲೇಕರೀತಿದ್ದಾರೆ. ಅದಕ್ಕಾದರೂ ನನ್ನನ್ನು ಚಳಿಯಷ್ಟೇ ಪ್ರೀತಿಸು.ನಿಜವಾಗ್ಲೂ ನಿಂಗೆಚಳಿಗಾಲದಲ್ಲಿ ತುಂಬ ಸಹಾಯಕ್ಕೆ ಬರ್ತೀನಿ ನಾನು. ಅದೂ ಅಲ್ದೆ ನೂರು ಚಳಿಗಾಲ ನಮಗೋಸ್ಕರಕಾಯ್ತಿರುವಾಗ ಅದಕ್ಕೆ ಅವಮಾನ ಮಾಡೋದು ನಿಂಗಿಷ್ಟ ಆಗೋಲ್ಲ ಅಲ್ವನೇ? ಚಳಿ ಇಷ್ಟ ಪಡುವನನ್ನ ಮುದ್ದು ಗಿಳಿ....(ವರ್ಷದ ಹಿಂದಿನ ಚಳಿಗಾಲದಲ್ಲಿ, ರೆಹಮಾನ್ ಗೆ ಆಸ್ಕರ್ ಸಿಗುವ ಮೊದಲು ಬರೆದಿದ್ದು )ನಿಂಗೆ ನಾನಿಷ್ಟಾನಾ ಚಳಿ ಇಷ್ಟಾನಾ ಕೇಳಿದರೆ ಚಳಿ ಅಂತೀಯಲ್ಲೇ ಪುಣ್ಯಾತಗಿತ್ತೀಅದ್ಯಾಕೇ ಚಳಿ ಅಂದ್ರೇ ಪ್ರಾಣ ಬಿಡ್ತೀಯೋ, ತಿಳೀವಲ್ದು. ಅಪ್ಪಿ ತಪ್ಪಿ ಅಮ್ಮನೆದುರುಚಳಿ ಅಂದ್ರೆ ಇಷ್ಟ ಅಂದುಬಿಡಬೇಡಾ, ಮಾರನೇ ದಿನದಿಂದ್ಲೇ ನಿನ್ನ ಮದುವೆ ಕುರಿತು ತಲೆಕೆಡೆಸಿಕೊಂಡಾರು, ಮೊಮ್ಮಗುವಿನ ನಾಮಕರಣಕ್ಕೆ 'ಮಕ್ಕಳ ಹೆಸರುಗಳ ಪುಸ್ತಕ'ಕೊಂಡುಕೋಬಿಟ್ಟಾರು, ಹುಷಾರು. ಬೆಳ್ಳಂಬೆಳಿಗ್ಗೆ ಈ ಜನವರಿ ಚಳೀಲಿ ನೀನು ಹೇಗಿರ್ತಿಅಂತ ಊಹಿಸ್ಕೊಳೋಕು ಎಷ್ಟು ಖುಷಿಯಾಗಿರುತ್ತೆ ಗೊತ್ತ? ವೀಣೆ ಚಿತ್ರವಿರುವ ರಗ್ಗಿನೊಳಗೆಮುದುಡಿ ಮಲಗಿರುವ ಮುದ್ದು ಮೊಲ ನೀನು. ಅಂತಹ ಚಳಿಯಲ್ಲು ಫ್ಯಾನನ್ನುಒಂದರಲ್ಲಿಟ್ಟಿರುತ್ತೀ, ಅದರ ಕೊರ ಕೊರ ಶಬ್ದ ನಿನಗೆ ಜೋಗುಳ ಹಾಡ್ತದೇನೆ? ಮೊನ್ನೆ ಅದುಹಾಳಾದಾಗ ರಿಪೇರಿ ಆಗೋವರ್ಗೂ ನಿದ್ದೆ ಮಾಡಿರ್ಲಿಲ್ವಂತೆ?
ಐದು ಗಂಟೆಗೆ ಎಚ್ಚರವಾದರೂ ಅದೇನು ಊಹಿಸುತ್ತಿರುತ್ತೀಯ ಹೊದಿಕೆಯ ಲೋಕದೊಳಗೆ? ನನ್ನಕನಸಿನಲ್ಲಿ ನಾನು ಕೊಡೋ ರಾಶಿ ರಾಶಿ ಮುತ್ತುಗಳೆಲ್ಲ ನಿನಗೆ ತಲುಪ್ತಿದಾವೇನೋ ಎಂಬಂತೆಹೊದಿಕೆಯೊಳಗೇ ನಗ್ತಾ ಇರ್ತೀಯಲ್ಲ. ಕನಸುಗಳು ಕಾಣ್ತಾ ಕಾಣ್ತಾ ಮಗ್ಗಲು ಬದಲಿಸುವಾಗಗೆಜ್ಜೆ ಸದ್ದು , ಅದು ಕೇಳುತ್ತಲೇ ಅಮ್ಮ ಡಿಕಾಕ್ಷನ್ ಮಾಡಲು ಶುರು ಹಚ್ಚಿಕೊಳ್ತಾರೆ.ಸ್ವಲ್ಪ ಹೊತ್ತಿನಲ್ಲೆ ಅಮ್ಮ ಕೊಡುವ ಬೆಚ್ಚಗಿನ ಕಾಫಿ. ಒಂದು ವಿಷಯ, ಮದ್ವೆ ಆದ್ಮೇಲೆನಿಂಗೆ ಅಷ್ಟು ಬೆಳಿಗ್ಗೇನೆ ಕಾಫೀ ಬೇಕಂದ್ರೆ, ಅಪ್ಪುಗೆ ಅರಮನೆಯಿಂದ ನನ್ನ ಬಿಟ್ಟರೆಮಾತ್ರ!!ಆ ರಗ್ಗನ್ನು ಅದೆಷ್ಟು ಮುದ್ದಾಗಿ ಅವುಚಿಕೊಂಡಿರ್ತೀಯ? ಊಹಿಸಿಕೊಂಡ್ರೆ ಹೊಟ್ಟೆಯಲ್ಲಉರಿದುಹೋಗತ್ತೆ. ಏನಿದ್ರೂ ಅವೆಲ್ಲಾ ಮದ್ವೆ ಆಗೋವರೆಗಷ್ಟೇ! ಆಮೇಲ ರಗ್ಗಿಗೆಕಪಾಟಿನೊಳಗೆ ಜೀವಾವಧಿ ಶಿಕ್ಷೆ. ಅದೇನು, ಸ್ವಲ್ಪ ಬೇಗ ಎದ್ದು ನಿನ್ನ ಮುಕ್ಕಾಲುಕಂಗಳಿಂದ ಆ ಕಿಟಕಿಯಾಚೆ ಸ್ವಲ್ಪ ನೋಡ್ಬಾರ್ದ? ಪಾಪ, ಹೂಗಳು ಅರಳುವುದಕ್ಕೋಸ್ಕರಅದೆಷ್ಟು ಆಸೆಯಿಂದ ಕಾಯ್ತಿರ್ತಾವೆ. ಅಮ್ಮ ಹಾಕಿದ ರಂಗೋಲಿ ನೋಡೋಕಾದ್ರು ಬಂದ್ರೆಕಾಲ್ಗೆಜ್ಜೆ ನಾದಕ್ಕೆ ಕೂಗೋ ಕೋಳೀಗೆ ಮುದ ಸಿಕ್ಕೀತು. ಹಂಗೇ ಜಾಗಿಂಗ್ ಗೇ ಅಂತ ಬಂದರೆಅಲ್ಲಿ ಪಾರ್ಕಿಗೆ ವ್ಯಾಯಾಮ, ಲಾಫ್ಟರ್ ಕ್ಲಬ್ಬಿಗೆಂದೆ ಬರುವ ಮುದುಕರ ವಯಸ್ಸು ಸ್ವಲ್ಪಹೊತ್ತಾದರೂ ಕಡಿಮೆಯಾಗುತ್ತಲ್ವ?ಅಂದ ಹಾಗೆ ಬೇಂದ್ರೆ ಅಡಿಗರ ಕವನ ಓದುತ್ತಿರುತ್ತೀಯಂತೆ? ಲಂಕೇಶರ ಬರಹ ಅಂದ್ರೆಪಡುತ್ತಿ, ಕೆ.ಎಸ್.ನ ಅಂದ್ರೆ ಸಾಕು ಕೆ.ಆರ್.ಎಸ್. ಡ್ಯಾಮಿನಿಂದ ಬಿದ್ದೋಳ ತರಹಪುಸ್ತಕದಲ್ಲೇ ಮುಳುಗಿಹೋಗ್ತೀಯಲ್ಲ, ನನಗೊಂದು ಪುಟ್ಟ ಅನುಮಾನ, ಅವರನ್ನೆಲ್ಲ ಓದೋವಾಗನಾನು ನೆನಪಾಗಲ್ವ? ನನ್ನನ್ನು ಚೂರು ಮಾತಾಡಿಸ್ಬೇಕು ಅನಿಸಲ್ವ? ನಂಗೊತ್ತು ಆವಿಷಯದಲ್ಲಿ ನೀನು ಕೊಬ್ಬಿನ ಫ್ಯಾಕ್ಟರಿ, ನಾನ್ಯಾಕೆ ಕೇಳಲಿ ಎಂಬ ಟಿಪಿಕಲ್ ಹುಡುಗಿಯಜಂಭ!! ನನ್ನ ಕಣ್ಣೊಳಗೆ ಯಾಚನೆ ಕಾಣುವ ಆಸೆ. ಜೀವನ ಪೂರ್ತಿ ಕಣ್ರೆಪ್ಪೆ ತರಹನೋಡ್ಕೋತೀನಿ, ಪ್ಲೀಸ್ ಒಪ್ಕೋ ಎಂಬ ಮಾತುಗಳನ್ನ ಕೇಳೋ ಬಯಕೆ. ಹುಡುಗರಿಗೆ ಅವರದೇ ಆದಭಯಗಳಿರುತ್ತೆ ಕಣೇ, ಒಬ್ಬ ಹುಡುಗ ಐ ಲವ್ ಯು ಅಂತ ಹೇಳಿದರೆ ಒಲ್ಲದ ಹುಡುಗಿಗೆಅವನೊಬ್ಬ ಲೋಫರ್ ಅನ್ನಿಸಿಕೊಳ್ಳುವ ಚಾನ್ಸ್ ಗಳೇ ಜಾಸ್ತಿ!! ಬೀದಿಗಳಲ್ಲಿ ತದುಕಲೆಂದೇತುಂಬ ಜನ ಓಡಾಡಿಕೊಂಡಿರುತ್ತಾರೆ! ಆಫೀಸಿನ ಒತ್ತಡ, ಹಣದ ಸಮಸ್ಯೆ, ಹೆಂಡತಿಯ ಜಗಳಎಲ್ಲದರ ಒಟ್ಟು ಮೊತ್ತವನ್ನು ಮುಷ್ಟಿಯಲ್ಲಿಟ್ಟುಕೊಂಡೇ ತಿರುಗಾಡುತ್ತಿರುತ್ತಾರೆ.ಇಂತಹ ಲೋಫರ್ ಸಿಕ್ಕರೆ ಸಾಕು ಕಾರಣ ಕೇಳದೆ ತೋರಣಕ್ಕೆ ಕಟ್ಟಿಬಿಡುತ್ತಾರೆ. ಆ ಜನಗಳಿಗೆಹುಡುಗಿಯರೆಂದರೆ ಕಣ್ಣಲ್ಲಿ ಕರುಣೆಯ ಕಡಲು ಹರಿಯುತ್ತಿರುತ್ತದೆ. ತಪ್ಪು ಮಾಡಿದಹುಡುಗಿ ಎದುರಾದರೆ ಅವರೆಲ್ಲ ಸಾಯಿಪ್ರಕಾಶ್ ಫಿಲ್ಮಿನ ಅಣ್ಣಂದಿರು. ಅದೇಕೋ ಈ ವಿಶೇಷರಿಯಾಯಿತಿ. ಈ ಎಲ್ಲ ವಿಷಯಗಳನ್ನು ಪರಿಗಣಿಸಿಯಾದರೂ ಪ್ರೀತಿಯನು ಬಾಯಿ ಬಿಟ್ಟು ಹೇಳುಮಾರಾಯ್ತಿ. ನೀನು ಹಾಗೆ ಹೇಳಿದ ಕ್ಷಣ ನಾನು ಲತಿಕಾಳನ್ನು ಗೆದ್ದ ಜಮಾಲ್, ಆಸ್ಕರ್ಗೆಲ್ಲುವ ರೆಹಮಾನ್!!ನಿಂಗೆ ಚಳಿ ಇಷ್ಟ ಅಂತ ಗೊತ್ತಾದ ಮೇಲೆ ಗೆಳೆಯರೆಲ್ಲ ನನ್ನನ್ನು ಮಿಸ್ಟರ್ ಚಳಿ ಅಂತಲೇಕರೀತಿದ್ದಾರೆ. ಅದಕ್ಕಾದರೂ ನನ್ನನ್ನು ಚಳಿಯಷ್ಟೇ ಪ್ರೀತಿಸು.ನಿಜವಾಗ್ಲೂ ನಿಂಗೆಚಳಿಗಾಲದಲ್ಲಿ ತುಂಬ ಸಹಾಯಕ್ಕೆ ಬರ್ತೀನಿ ನಾನು. ಅದೂ ಅಲ್ದೆ ನೂರು ಚಳಿಗಾಲ ನಮಗೋಸ್ಕರಕಾಯ್ತಿರುವಾಗ ಅದಕ್ಕೆ ಅವಮಾನ ಮಾಡೋದು ನಿಂಗಿಷ್ಟ ಆಗೋಲ್ಲ ಅಲ್ವನೇ? ಚಳಿ ಇಷ್ಟ ಪಡುವನನ್ನ ಮುದ್ದು ಗಿಳಿ....(ವರ್ಷದ ಹಿಂದಿನ ಚಳಿಗಾಲದಲ್ಲಿ, ರೆಹಮಾನ್ ಗೆ ಆಸ್ಕರ್ ಸಿಗುವ ಮೊದಲು ಬರೆದಿದ್ದು)
Comments
ಉ: ನಿಂಗೆ ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರ್ತೀನಿ ನಾನು..!
In reply to ಉ: ನಿಂಗೆ ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರ್ತೀನಿ ನಾನು..! by inchara123
ಉ: ನಿಂಗೆ ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರ್ತೀನಿ ನಾನು..!
In reply to ಉ: ನಿಂಗೆ ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರ್ತೀನಿ ನಾನು..! by ranjith
ಉ: ನಿಂಗೆ ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರ್ತೀನಿ ನಾನು..!