ನಿಕೊಲಸ್ ಜೇಮ್ಸ್ ವಿವಚಿಚ್ (“voo-yi-chich”). ನಿಕ್ ವಿವಚೆಚ್ !
-ಎಚ್. ಆರ್. ಲಕ್ಷ್ಮೀವೆಂಕಟೇಶ್, ಮುಂಬೈ.
ಇದು ಆಸ್ಟ್ರೇಲಿಯಾ ದೇಶದ ಮೆಲ್ಬೋರ್ನ್ ನಲ್ಲಿ ಜನಿಸಿದ ಒಬ್ಬ ಸರ್ಬಿಯಾ ದೇಶದ ಮೂಲದವನಾದ ನಿಕೊಲಸ್ ಜೇಮ್ಸ್ ವಿವಚೆಚ್ ಎಂಬ ದಿವ್ಯಾಂಗ ಮಗುವಿನ ಅತ್ಯಂತ ರೋಚಕ ಕತೆ. ಕೇವಲ ರುಂಡ ಮುಂಡಗಳು,ಹಾಗೂ ಕೈಕಾಲುಗಳಿಲ್ಲದೆ ಹುಟ್ಟಿದ ಮಗುವನ್ನು ತಂದೆತಾಯಿಗಳೇ ನೋಡಿ ಎತ್ತಿಕೊಂಡು ಲಾಲನೆ ಪಾಲನೆ ಮಾಡಲು ಇಷ್ಟಪಡಲಿಲ್ಲ. ಕಾಲಾನುಕ್ರಮದಲ್ಲಿ ಇಂತಹ ದುರದೃಷ್ಟಮಗುವನ್ನು ಒಪ್ಪಿಕೊಂಡು ಅದಕ್ಕೆ ತಮ್ಮ ಪ್ರೀತಿಯ ಅಮೃತವೆರೆದು ವಿದ್ಯಾಭ್ಯಾಸವನ್ನು ಕೊಡಿಸಿ ಜೀವನ ಪಥದಲ್ಲಿ ಒಬ್ಬ ಪ್ರಬುದ್ಧ, ಆತ್ಮವಿಶ್ವಾಸದ ಯುವಕನನ್ನಾಗಿ ಪರಿವರ್ತಿಸಲು ಪೋಷಕರು ಪಟ್ಟ ಕಷ್ಟ ಅಸಾಧಾರಣವಾದದ್ದು. ಏನಾದರೂ ತನ್ನ ಜೀವನದಲ್ಲಿ ಸಾಧಿಸಲೇ ಬೇಕೆಂದು ಪಣತೊಟ್ಟ ಈ ವ್ಯಕ್ತಿ ಈಜುವುದು, ಗಾಲ್ಫ್ ಆಡುವುದು, ನಿಮಿಷಕ್ಕೆ ೪೫ ಪದಗಳನ್ನು ಟೈಪ್ ರೈಟರ್ ಯಂತ್ರದಲ್ಲಿ ಟೈಪಿಸುವುದು, ಕಂಪ್ಯೂಟರ್ ಬಳಸುವುದು, ತನ್ನದೇ ರೀತಿಯಲ್ಲಿ ಪೆನ್ಹಿಡಿದು ಬರೆಯುವುದು, ಫೋನ್ ನಲ್ಲಿ ಮಾತಾಡುವುದು, ಸ್ಕೈ ಡೈವಿಂಗ್ ಮಾಡುವುದು, ಸಂಗೀತದಲ್ಲಿ ಡ್ರಮ್ ಬಾರಿಸುವುದು ಇವೇಮೊದಲಾದ ಹಲವಾರು ಕಾರ್ಯಗಳನ್ನು ಮಾಡಿ ವಿಶ್ವದ ಜನತೆಯನ್ನು ಮಂತ್ರಮುಗ್ಧಗೊಳಿಸಿದಳಿಸಿದ. ಮುಂದೆ ನಿಕ್ ತನ್ನ ಅಸಾಧಾರಣ ಜ್ಞಾನ, ಕೌಶಲ ಗಳಿಂದ ಒಬ್ಬ ಪ್ರಭಾವಿ ಮಾತುಗಾರ, ಲೇಖಕ, ಮತ್ತು ಸಂಸ್ಥೆಗಳನ್ನು ಕಟ್ಟಿ ಬೆಳಸಿ ಅವನಿಗಿಂತ ದುರದೃಷ್ಟ ಹೊಂದಿದ ಮಕ್ಕಳಿಗೆ ಬೋಧಿಸುವ ಧನಾತ್ಮಕ ಮನೋಭಾವನೆಗಳನ್ನು ಅವರ ಮನಸ್ಸಿನಲ್ಲಿ ಬಿತ್ತಿ ಅವರ ಜೀವನವನ್ನು ಸುಧಾರಿಸಿದ ಕೆಲಸ ಅಸಾದೃಶ್ಯ. ಹೀಗೆ ಮುಂದುವರೆದ ನಿಕ್ ತನ್ನ ಭಾಷಣವನ್ನು ಆಲಿಸಲು ಬಂದ ಒಬ್ಬ ಸುಂದರ ತರುಣಿಯನ್ನು ಭೆಟ್ಟಿಯಾಗಿ ಆಕೆಯ ಮನವೊಲಿಸಿ ಮದುವೆಯಾಗುತ್ತಾರೆ. ೫ ಅಡಿ ಎತ್ತರದ ಮೆಕ್ಸಿಕನ್ ಜಪಾನೀ ತರುಣಿ, ಮನಃ ಪೂರ್ವಕವಾಗಿ ೯೯ ಸೇಂಟಿಮೀಟರ್ ಎತ್ತರದ ನಿಕ್ ತನ್ನ ಜೀವನದ ಜೊತೆಗಾರನಾಗಿ ಆರಿಸಿಕೊಂಡು ಅವನ ಕನಸುಗಳಿಗೆ ಸ್ಪಂದಿಸಿ ತನ್ನ ಸಂಪೂರ್ಣ ಸಹಕಾರಗಳನ್ನು ಧಾರೆಯೆರೆದು ನಿಕ್ ರ ಬಾಳಿನಲ್ಲಿ ಬೆಳಕು ಮೂಡಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ಅಮೇರಿಕಾದ ಕ್ಯಾಲಿಫೋರ್ನಿಯದಲ್ಲಿ ನೆಲೆಸಿರುವ ೩೮ ವರ್ಷದ ನಿಕ್ ನಾಲ್ಕು ಆರೋಗ್ಯವಂತ ಮಕ್ಕಳ ಹೆಮ್ಮೆಯ ತಂದೆ.
ಹುಟ್ಟು ಹಾಗೂ ಬಾಲ್ಯ :
೪ ಡಿಸೆಂಬರ್ ೧೯೮೨ ನಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ೨೨ ವರ್ಷ ವಯಸ್ಸಿನ ದುಷ್ಕರವರ (Dushka Vujicic) ಗರ್ಭದಲ್ಲಿ ಒಂದು ಮಗುವಿನ ಜನನವಾಗಿತ್ತು. ವೃತ್ತಿಯಿಂದ ಸೂಲಗಿತ್ತಿಯದಾಗಿದ್ದರಿಂದ ಬಹಳಷ್ಟು ಹೆರಿಗೆ ಪ್ರಕರಣಗಳನ್ನು ನೋಡಿ, ಅವರಿಗೆ ಒಳ್ಳೆಯ ಅನುಭವದೊರೆತಿತ್ತು. ಹೆರಿಗೆಯಬಗ್ಗೆ ಅಷ್ಟೊಂದು ಅನುಭವವಿದ್ದರೂ ಹುಟ್ಟುವ ಶಿಶು ಗಂಡೇ ಹೆಣ್ಣೇ ಎನ್ನುವ ಬಗ್ಗೆ ಮತ್ತು ಮಗುವಿನ ಆರೋಗ್ಯವಾದ ಪ್ರಸವದ ಬಗ್ಗೆ ಏನೂ ಖಡಾ ಖಂಡಿತವಾಗಿ ಹೇಳುವಂತಿರಲಿಲ್ಲ. ತಮ್ಮ ಗರ್ಭಾವಸ್ಥೆಯನ್ನು ಚೆನ್ನಾಗಿ ಜಾಗರೂಕತೆಯಿಂದ ನಿಭಾಯಿಸಿದ್ದರು. ಎರಡು Ultra sound Scan ಮಾಡಿಸಿದಮೇಲೆ ಗಂಡು ಮಗು ಜನಿಸುವುದೆಂದು ತಜ್ಞರು ಹೇಳಿದ್ದರೇ ಹೊರತು ಇದಕ್ಕಿಂತ ವಿಪರೀತವಾಗಿ ಹೆಚ್ಚಿಗೆ ಏನನ್ನೂ ಹೇಳಿರಲಿಲ್ಲ. ಮಗು ಜನಿಸಿದಮೇಲೆ ನೋಡಿದರೆ, ಅದಕ್ಕೆ ಕೈಕಾಲುಗಳು ಇರಲಿಲ್ಲ ಅದನ್ನು ಬಟ್ಟೆಯಲ್ಲಿ ಪೂರ್ತಿಯಾಗಿ ಸುತ್ತಿ ದುಷ್ಕರಿಗೆ ತೋರಿಸಲು ತಂದ ದಾದಿಯ ಮುಖದಲ್ಲಿ ಗೆಲುವಿರಲಿಲ್ಲ. ಮಗುವನ್ನು ಒಮ್ಮೆ ನೋಡಿದ ತಂದೆ (Boris Vujicic) ವಾಕರಿಸಿಕೊಂಡಿದ್ದರು. ಕೈಕಾಲುಗಳಿಲ್ಲದೆ ಜನಿಸಿರುವ ಮಗುವಿನ ಬಗ್ಗೆ ಪತ್ನಿಗೆ ತಿಳಿಸುವುದು ಹೇಗೆ ಇನ್ನುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಮೊದಲು ತಮ್ಮ ಮನಸ್ಸನ್ನು ಗಟ್ಟಿಮಾಡಿಕೊಂಡು ಮಾನಸಿಕ ಆಘಾತವನ್ನು ಹೊರಗೆ ತೋರಿಸಿಕೊಳ್ಳದೆ ಮಗುವನ್ನು ಹೆಂಡತಿಗೆ ತೋರಿಸಲು ಆಕೆಯ ಬಳಿಗೆ ತಂದಾಗ ದುಷ್ಕ ಅವರು ಒಮ್ಮೆಲೇ ಜೋರಾಗಿ ಕಿರುಚುತ್ತಾ ತೆಗೆದುಕೊಂಡು ಹೊರಗೆ ಹೋಗಿ ನನಗೆ ನೋಡಲು ಇಚ್ಛೆಯಿಲ್ಲವೆಂದು ಹೇಳಿದ್ದಲ್ಲದೇ ಮಗುವನ್ನು ನಾನು ಎತ್ತಿಕೊಳ್ಳಲೂ ಇಷ್ಟಪಡಲಾರೆ ಎಂದು ರೋದಿಸುತ್ತಾ ಹೇಳುವಾಗ ಅವರ ಹೃದಯ ಯಾತನೆಯಿಂದ ಮಿಡಿಯುತ್ತಿತ್ತು. ಒಳ ಕೊಠಡಿಯಲ್ಲಿ ದಾದಿಯರು ಒಬ್ಬರಿಗೊಬ್ಬರು ಪಿಸುಮಾತಾಡುತ್ತಿರುವಾಗ ಅವರ ಕಿವಿಗೆ ಬಿದ್ದ ವೊಕಾಮಿಲಿಯ ವೆಂಬ ಪದ ಅಸ್ಪಷ್ಟವಾಗಿದ್ದರೂ ದುಷ್ಕರವರ ಹೃದಯವನ್ನು ಘಾಸಿಗೊಳಿಸಿತ್ತು. ಆ ಪದದ ಅರ್ಥ ಕೈಕಾಲಿಲ್ಲದೆ ಹುಟ್ಟುವುದು ಎಂದು ಅರ್ಥ. ಅಂದರೆ ಇದೊಂದು ಜನ್ಮ ಜಾತ ಅಸ್ವಸ್ಥತೆ. ಜೆನೆಟಿಕ್ ರೋಗ. ವಂಶಪಾರಂಪರ್ಯವಾಗಿ ಬರುವ ರೋಗ. ಎಲ್ಲ ರೀತಿಯಲ್ಲೂ ಮುಂಜಾಗರೂಕತೆ ವಹಿಸಿದ ಸೂಲಗಿತ್ತಿ ದುಷ್ಕಗೆ ಇಂತಹ ಮಗುವಿನ ಜನನವಾಗಬೇಕೇ ?
ಮನೆಯಲ್ಲಿ ತಂದೆಗಾಗಲೀ ತಾಯಿಗಾಗಲೀ ಮಗುಹುಟ್ಟಿದ ಬಗ್ಗೆ ಸಂಭ್ರಮವಿಲ್ಲ. ಯಾರೂ ಹೂಗುಚ್ಛವನ್ನು ಕೊಡಲು ಸಹಿತ ಬಂದಿರಲಿಲ್ಲ ತಾಯಿಗಂತೂ ಇಂತಹ ಮಾಂಸದ ಮುದ್ದೆಗೆ ಏನು ಭವಿಷ್ಯವಿದೆ , ಹೇಗಪ್ಪಾ ಸಾಕುವುದು ಈ ಮಗುವನ್ನು ಎನ್ನಿಸುತ್ತಿತ್ತು. ಜೀವನಾವೆಲ್ಲಾ ಹೀಗೆಯೇ ವ್ಯರ್ಥವಾಗಿ ಬಿದ್ದುಕೊಂಡಿರುತ್ತದೆ ಎಂಬ ಭಾವನೆ ಮನಸ್ಸಿನಲ್ಲಿ ಉಮ್ಮಳಿಸಿಬಂದು ಕಣ್ಣಿನಲ್ಲಿ ನೀರು ಕೋಡಿ ಹರಿಯಿತು. ಈಗ ಅಜ್ಜ ಅಜ್ಜಿಯರು ಇಂತಹ ಸಂದರ್ಭದಲ್ಲಿ ನೋಡಿಕೊಳ್ಳಲು ಮುಂದೆಬಂದರು. ಆದರೆ ವಯಸ್ಸಾದ ಹಿರಿಯರಿಗೆ ಯಾಕೆ ಈ ಜವಾಬ್ದಾರಿ. ಮಗುವಿನ ಪಾಲನೆ ತಮಗೆ ಸೇರಿದ್ದು ಎನ್ನುವ ಭಾವನೆ ಬಂದಾಗ, ಹೃದಯ ಭಾರವಾಗುತ್ತಿತ್ತು. ಹೀಗೆಯೇ ಮೂರುತಿಂಗಳ ಬಳಿಕ ಸ್ವಲ್ಪ ಧೈರ್ಯ ತೆಗೆದುಕೊಂಡರು. ಮಗುವಿನ ಮುದ್ದು ಮುಖ, ನಿಷ್ಕಲ್ಮಶ ನಗು ಅವರ ಮನಸ್ಸನ್ನು ಕರಗಿಸಿತು. ಆದರೆ ಮುಂದಿನ ಭವಿಷ್ಯದಲ್ಲಿ ತನ್ನಷ್ಟಕ್ಕೆ ತಾನೇಎಲ್ಲವೂ ನಡೆಯಬಲ್ಲುದೆ, ಸ್ವತಂತ್ರ್ಯವಾಗಿ ವಿಶ್ವದ ಜೊತೆಗೆ ಹೋರಾಡಬಲ್ಲುದೆ ಆಹಾರ ತಿನ್ನಬಲ್ಲುದೆ, ತಮಗೇನಾದರೂ ಆದರೆ ಇದನ್ನು ನೋಡಿಕೊಂಡು ಪಾಲಿಸುವರ್ಯಾರು. ಸುತ್ತಲೂ ದಟ್ಟವಾದ ಅಂಧಕಾರ ಕಣ್ಣಿನಮುಂದೆ ಕಾಣಿಸುತ್ತಿತ್ತು.
ಅಮೆರಿಕಕ್ಕೆ ಹೋದರು :
ಒಂದು ದಿನ ನಿಕ್ ತಾಯಿ ಪತ್ರಿಕೆಯೊಂದರಲ್ಲಿ ಪ್ರಪಂಚದ ಮೂಲೆಯೊಂದರಲ್ಲಿ ವಾಸವಾಗಿದ್ದ ಅಂಗವಿಕಲ ವ್ಯಕ್ತಿಯ ಕತೆಯನ್ನು ಓದಿ, ನೀನೊಬ್ಬನೇ ಇತರಹದ ವಿಚಿತ್ರಪರಿಸ್ಥಿತಿಯನ್ನ ಅನುಭವಿಸುತ್ತಿಲ್ಲ ಎಂದು ಹೇಳಿದಾಗ, ನಿಕ್ ಗೆ ತಕ್ಷಣ ಜ್ಞಾನೋದಯವಾದಂತಾಗಿತ್ತು ಮತ್ತು ಅವನ ಪೋಷಕರಿಗೆ ಸಹಿತ. ಈಗ ಅವರು ತನ್ನನ್ನು ತಾನು ಇರುವಂತೆಯೇ ಸ್ವೀಕರಿಸಲು ಮನಸ್ಸನ್ನು ಹದಗೊಳಿಸಿದರು. ತಮ್ಮ ೧೭ ನೆಯ ವಯಸ್ಸಿನಲ್ಲಿ Qeensland High school captain ಆಗಿ ಚುನಾಯಿತರಾದರು. ಪ್ರಾರ್ಥನಾ ಸಭೆಗಳಲ್ಲಿ ದಿಟ್ಟತನದಿಂದ ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದು, ಮಾತಾಡುವುದು ಮತ್ತು Fund rise ಮಾಡುವುದು ಅವರ ಧ್ಯೇಯವಾಗಿತ್ತು,. ಮಾತಿನ ವಾಗ್ಝರಿ, ಕೌಶಲ, ಇಂಗ್ಲಿಷ್ ಭಾಷೆಯಮೇಲೆ ಹತೋಟಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಗ್ರಿಫಿತ್ ವಿಶ್ವವಿದ್ಯಾಲಯದ ವಾಣಿಜ್ಯ ವಿಷಯದಲ್ಲಿ ಡಬಲ್ ಪದವಿಗಳಿಸಿದರು. accountancy & Financial planning double major. ಆಗ ಅವರಿಗೆ ೨೧ ವರ್ಷ ವಯಸ್ಸು.
ತಮ್ಮ ಓದಿನ ವಿಷಯದಲ್ಲಿ ಪ್ರಾವೀಣ್ಯತೆಯನ್ನು ಹಾಸಿಲ್ ಮಾಡಿದರು. ತಮ್ಮ ಬದುಕಿನ ಉದ್ದಿಶ್ಯವನ್ನು ಮನಗಂಡರು. ತಾನು ಇತರರ ಬದುಕಿನಲ್ಲೂ ಭರವಸೆಯನ್ನು ಮೂಡಿಸಲು ಸಾಧ್ಯವಿದೆ, ಎನ್ನುವ ಸತ್ಯ ನಿಧಾನವಾಗಿ ಅವರಿಗೆ ಅರಿವಾಗತೊಡಗಿತು ; ೨೦೦೨ ರಲ್ಲಿ ಅಮೇರಿಕಾದ ಕ್ಯಾಲಿಫೋರ್ನಿಯಾಕ್ಕೆ ಹೋದರು. ಭರವಸೆ ಹಾಗೂ ಅಪಾರ ಸಾಧ್ಯತೆಗಳ ನಾಡಾದ ಅಮೇರಿಕಾದಲ್ಲಿ ವಿಕಲಾಂಗರ ಸಮಸ್ಯೆಗಳಿಗೆ ಹಲವಾರು ಸೂಕ್ತ ಪರಿಹಾರಗಳು ಸಿಗುವುದೆಂದು ಸ್ನೇಹಿತರಿಂದ ಕೇಳಿದ್ದರು ಅಲ್ಲಿ ತಮ್ಮ ಪ್ರೇರಕ ಉಪನ್ಯಾಸಗಳ ಮೂಲಕ ವಿಕಲಾಂಗರಿಗೆ ಬದುಕಿನ ಯಾವುದೇ ಕಷ್ಟಗಳನ್ನು ಎದುರಿಸಲಾರದೆ ಖಿನ್ನರಾಗಿ ಜೀವನ ಚಕ್ರವನ್ನು ನೂಕುತ್ತಿರುವ ವ್ಯಕ್ತಿಗಳಿಗೆ ಮಾರ್ಗದರ್ಶನ ಮಾಡಿದರು. ೨೦೦೫ ರಲ್ಲಿ ನಿಕ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ದೊರೆಯಿತು. ಅವರ ಕೆಲಸ ಜಗತ್ತಿನ ಗಮನವನ್ನು ಸೆಳೆದಿತ್ತು. ದೇಶವಿದೇಶಗಳಿಗೆ ಪ್ರಯಾಣಮಾಡಿ ತಮ್ಮ ಉಪನ್ಯಾಸಗಳನ್ನು ನೀಡತೊಡಗಿದರು.
೨೦೦೫ ರಲ್ಲಿ ಅವರು ಎಂಬ Non profit organisation ಲಾಭವಿಲ್ಲದ ಸಂಸ್ಥೆಯೊಂದನ್ನು ಲಾಸ್ ಎಂಜಲೀಸ್ ನಗರದಲ್ಲಿ ಸ್ಥಾಪಿಸಿದರು. ಈ ಸಂಸ್ಥೆ ಮುಖ್ಯವಾಗಿ ಏಸುವಿನ ಅನಂತ ಕೃಪೆಯನ್ನು ಬೋಧಿಸುವ ನಿಟ್ಟಿನಲ್ಲಿ ಕೆಲಸಮಾಡುತ್ತಿತ್ತು ಮುಂದೆ ನಿಕ್ (Secular) ಧರ್ಮ ನಿರಪೇಕ್ಷ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಶಾಲಾ ಮಕ್ಕಳ ಉತ್ತಮ ಭವಿಷ್ಯಕ್ಕೆ ಭದ್ರ ತಳಪಾಯ ಹಾಕುವ ನಿಟ್ಟಿನಲ್ಲಿ ಕೆಲಸಮಾಡತೊಡಗಿದರು ಅವರಿಗೆ ಜೀವನದಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಬಗ್ಗೆ ಅದನ್ನು ಬೆಳೆಸಿಕೊಳ್ಳುವ ಬಗ್ಗೆ ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳಿಗೆ ವಿರುದ್ಧ ಸೆಟೆದುನಿಂತು ಮುಂದೆ ಸಾಗುವ ಧಾರಢ್ಯವನ್ನು ಇತರರಿಗೆ ಹಿಂಸೆ, ಪೀಡೆ, ಕಿರುಕುಳ ನೀಡದೆ ಇರುವಂತಹ ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಯನ್ನು ನೀಡುವಲ್ಲಿ ಆದ್ಯತೆ ನೀಡುತ್ತದೆ. ಒಂದು ಸ್ವಸ್ಥ ಸಮಾಜವನ್ನು ಕಟ್ಟಲು ಸ್ವಸ್ಥ ಮನಸ್ಸಿನ ಯುವಜನತೆ ಬೇಕು. ಆ ಯುವ ಜನಾಂಗವನ್ನು ನಿರ್ಮಿಸಲು ಈ ಸಂಸ್ಥೆ ಒತ್ತು ಕೊಡುತ್ತಿದೆ. ಸಂಚಾರಿ ಕ್ರೈಸ್ತ ಬೋಧಕ ವೃತ್ತಿ ಅವರಿಗೆ ಬಹಳ ಮುದಕೊಟ್ಟ ಕೆಲಸ.
ನಿಕ್ ಬರೆದ ಮೊದಲ ಪುಸ್ತಕ Life with out limits. ಪುಸ್ತಕದ ಪೀಠಿಕೆಯಲ್ಲಿ ಕೈಕಾಲಿಲ್ಲದೆ ಹುಟ್ಟಿದ ನಾನು ಬದುಕಿನ ಸಂದರ್ಭದಲ್ಲಿ ನಿರ್ಬಂಧಗಳು ಇರಲಿಲ್ಲ ಅವು ನನಗೆ ಅಪಾರ ಕೊಟ್ಟಿತು. ಜಗತ್ತಿನುದ್ದಕ್ಕೂ ಸಂಚರಿಸಿ ಲಕ್ಷಾಂತರ ಜನರ ಜೊತೆ ಸ್ಪಂದಿಸುತ್ತಿದ್ದೇನೆ. ಅವರ ಬದುಕಿನಲ್ಲಿ ಎದುರಿಸುತ್ತಿರುವ ಪ್ರತಿಕೂಲ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಪ್ರೀತಿ ಭರವಸೆ ಮತ್ತು ಧರ್ಯಗಳಿಂದ ಜಿಗಿದು ಮೇಲೇರಿ ತಮ್ಮ ಕನಸುಗಳನ್ನು ಮುಂದುವರೆಯಲು ಪ್ರೊತ್ಸಾಹಿಸುತ್ತೇನೆ. ನಿಕ್ ಅವರ ಈ ಅಧ್ಭುತ ಪುಸ್ತಕ ಲಕ್ಷಾಂತರ ಪ್ರತಿಗಳು ಮಾರಲ್ಪಟ್ಟವು. ಹೀಗೆಯೇ ಮುಂದುವರೆದ ನಿಕ್ ತನ್ನ ಜೀವನದಲ್ಲೂ ಒಬ್ಬ ಜೀವನ ಸಂಗಾತಿಯನ್ನು ಪಡೆಯಲು ಹವಣಿಸುತ್ತಿದ್ದರು. ಅದರಲ್ಲಿ ಅವರು ಜಯಶೀಲರಾದರೂ ಸಹಿತ. ಇದಕ್ಕೆ ಅವರ ಉಲ್ಲಾಸದ ಮನೋಭಾವವೇ ಕಾರಣ. ಸ್ವಯಂ ಮರುಕದ ಕೂಪಕ್ಕೆ ಜಾರದೆ, ಪ್ರೀತಿ, ಅನುಕಂಪ ಆತ್ಮ ಸ್ಥೈರ್ಯಗಳೇ ಮೂರ್ತಿವೆತ್ತಂತೆ ಜೀವನ ಸಾಗಿಸುತ್ತಿರುವ ನಿಕ್ ನಿಜವಾಗಿ ನಂಬಿದ್ದು ತಮ್ಮ ೩ ಅಡಿ ೩ ಅಂಗುಲದ (೯೯ ಸೆಂಟಿಮೀಟರ್) ದೇಹವನ್ನು ರುಂಡ, ಮುಂಡ ಎಡಗಾಲಿನ ಪುಟ್ಟಎರಡು ಬೆರಳುಗಳನ್ನು.ಆಗ ೨೦ ನೆಯವಯಸ್ಸಿನಲ್ಲಿದ್ದ ನಿಕ್ ಅಂದುಕೊಂಡಿದ್ದು ಪ್ರೀತಿಯ ಹುಡುಗಿಯನ್ನು ಬಳಸಲು ಕೈಗಳಿಲ್ಲವಲ್ಲ. ಎಲ್ಲ ಯುವಕರೂ ತಮ್ಮ ಯುವ ವಯಸ್ಸಿನ ಸಹಜವಾಗಿ ಆಶಿಸುವ ತಮ್ಮ ಜೀವನ ಸಂಗಾತಿಯ ಪ್ರೀತಿ ತನ್ನ ಪಾಲಿಗೆ ಇಲ್ಲವೆಂದು ಭಾವಿಸಿದ್ದರು. ಅವರ ಪ್ರಯತ್ನಗಳೆಲ್ಲಾ ನಿರಾಸೆಯಲ್ಲಿ ಕೊನೆಗೊಂಡವು. ಅರಿವು ಕಣ್ತೆರೆದಂತೆ ತಮ್ಮನ್ನು ತಾವಿರುವ ತರಹವೇ ಸ್ವೀಕರಿಸಿದ್ದರು. ಈಗ ಬದುಕು ಬದಲಾಗಿತ್ತು. ಅವರ ನಗುಮೊಗ ಆತ್ಮವಿಶ್ವಾಸ ಎಲ್ಲರನ್ನೂ ಚಕಿತಗೊಳಿಸಿತ್ತು ಅವರ ಬದುಕಿನಲ್ಲೂ ಪ್ರೀತಿ ಚಿಗುರಿತ್ತು. ಅದೊಂದು ಅನಿರೀಕ್ಷಿತ ನಂಬಲಸಾಧ್ಯವಾದ ಪ್ರೇಮ ಪ್ರಸಂಗ.
ಅಮೇರಿಕಾದ Dollas ನಗರದ ಸಮಾರಂಭವೊಂದರಲ್ಲಿ ನಿಕ್ ಬೃಹತ್ ಸಭೆಯನ್ನುದ್ದೇಶಿಸಿ ಅತಿಥಿ ಉಪನ್ಯಾಸಕಾರರಾಗಿ ಮಾತನಾಡುತ್ತಿದ್ದಾಗ, ಕನೆಯ ಮಿಯಹರ (kaneya miahara) ಎಂಬ ಸುಂದರ ಯುವತಿ, ಆಕೆಯ ಅಕ್ಕ ಯೋಶಿ, ಮತ್ತು ಮತ್ತೊಬ್ಬ ಗೆಳತಿ ಟ್ಯಾಮಿಯ ಜೊತೆಯಲ್ಲಿ ಭಾಷಣವನ್ನು ಕೇಳಲು ಬಂದಿದ್ದರು. ಆಗಾಗ ಕನೆಯ ಹಾಗೂ ಯೋಶಿ ಟ್ಯಾಮಿಯ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಭಾಷಣದ ನಂತರ ಟ್ಯಾಮಿ ತನ್ನ ಗೆಳತಿಯರನ್ನು ನಿಕ್ ಗೆ ಪರಿಚಯಿಸಿದರು. kaneya miahara ಜಪಾನೀ ಮೆಕ್ಸಿಕನ್ ಹುಡುಗಿ. ಮೊದಲ ನೋಟದಲ್ಲೇ ನಿಕ್ ಅವರು ಕನಯ ಮೇಲೆ ತೀವ್ರವಾಗಿ ಆಕರ್ಷಣೆಗೊಳಗಾಗಿದ್ದರು. ತಮ್ಮ ಇ-ಮೇಲ್ ವಿಳಾಸವನ್ನು ಕನೆಯಗೆ ಕೊಡುವುದು ನಿಕ್ ಅವರ ಉದ್ದೇಶವಾಗಿತ್ತು. ಆದರೆ ಕನೆಯ ಅದನ್ನು ತನ್ನ ಗೆಳತಿ ಟ್ಯಾಮಿಯಿಂದ ಪಡೆಯುವುದಾಗಲಿ ಹೇಳಿ ಅಲ್ಲಿಂದ ನಡದೇಬಿಟ್ಟಳು. ನಿಕ್ ಕನೆಯಳ ಸಂದರ್ಯ, ಕರುಣಾಮಯ ಮಂದಹಾಸದ ಮುಖ, ಸಹನೆ ಮತ್ತು ಸ್ವಯಂ ಭರವಸೆಗಳು ಸೂಜಿಗಲ್ಲಿನಂತೆ ಸೆಳೆದಿತ್ತು. ಆದರೆ ಕನೆಯಗೆ ಅದು ಪ್ರಥಮ ಪ್ರೇಮವಾಗಿರಲಿಲ್ಲ. ನಿಕ್ ಧರ್ಯಮಾಡಿ ಟ್ಯಾಮಿಗೆ ತಾವು ಕನೆಯನ್ನು ಪ್ರೀತಿಸುವುದಾಗಿ ತಿಳಿಸಿದರು. ನಿರಾಕರಣೆಯ ಭೀತಿಯನ್ನು ಬದಿಗಿಟ್ಟು ಧರ್ಯಮಾಡಿ ತಮ್ಮ ಪ್ರೇಮ ನಿವೇದನೆ ಮಾಡಿ ಮುಂದುವರೆದರು. ಕನೆಯಾಗೆ ಅನೇಕ ಗೆಳೆಯರು ಇದ್ದರು. ನಿಕ್ ಪ್ರೀತಿಯ ಯಾಚನೆ ಕೇವಲ ಕ್ಷಣಿಕ ಆಕರ್ಷಣೆಯೇ ಅಥವಾ ನೈಜ ಪ್ರೀತಿಯೇ ಎನ್ನುವುದನ್ನು ಕನಯ ಮನವರಿಕೆ ಮಾಡಿಕೊಳ್ಳಬೇಕಿತ್ತು. ಕನಯನ ಮಿತ್ರ ತನ್ನ ಜೀವನದುದ್ದಕ್ಕೂ ಒಳ್ಳೆಯ ಸಂಗಾತಿಯಾಗಲಾರ; ಆತ ಕೇವಲ ವಯೋಸಹಜ ಆಕರ್ಷಣೆಗೆ ಒಳಗಾಗಿದ್ದ ಎಂದು ಆಕೆಗೆ ಅನ್ನಿಸಿತು. ಕೂಡಲೇ ಆ ಮಿತ್ರನಜೊತೆ ಸಂಬಂಧವನ್ನು ಮುಂದುವರೆಸಲಿಲ್ಲ. ನಿಕೆ ನಲ್ಲಿ ಆಕೆ ಮೊದಲಬಾರಿ ನೋಡಿದಾಗ ಆತನ ಅಂತರಂಗದ ಸೌಂದರ್ಯವನ್ನು ಕಂಡುಕೊಂಡಿದ್ದರು. ಫೋನ್ ಮಾಡಿ ಪರಸ್ಪರ ಭೆಟ್ಟಿಯಾದರು. ಕನಯೆ ಮತ್ತು ನಿಕ್ ಪರಸ್ಪರ ತಮ್ಮಲ್ಲಿ ಮೂಡಿದ ಭಾವನೆಗಳ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಯಿತು. ಭೂತಕಾಲದ ನಿರಾಶೆಗಳು ವರ್ತಮಾನದ ಬಿಡಲಿಲ್ಲ ಪರಿಪೂರ್ಣ ಪ್ರೀತಿ ಪಡೆಯಲು ದೈಹಿಕವಾಗಿ ಪರಿಪೂರ್ಣರಾಗಿರುವ ಅಗತ್ಯತೆ ಕಾಣಿಸಲಿಲ್ಲ ಪರಸ್ಪರ ನ್ಯೂನತೆಗಳನ್ನು ಒಪ್ಪಿಕೊಂಡು ನಮ್ಮನ್ನು ನವಿರುವಂತೆಯೇ ಪ್ರೀತಿಸುವ ವ್ಯಕ್ತಿಗಳು ಜಗತ್ತಿನಲ್ಲಿ ಎಲ್ಲಾದರೂ ಇದ್ದೆ ಇರುತ್ತಾರೆ ಎಂದು ನಿಕ್ ನಂಬುತ್ತಾರೆ. ನಿರಾಕರಣೆಯ ಭೀತಿ ನಿಕ್ ಅವರನ್ನು ಆವರಿಸಿತ್ತು ಪ್ರೇಮನಿವೇದನೆಯನ್ನು ಮಾಡಿದರು. ಆಗಸ್ಟ್ ೧, ೨೦೧೧ ರಲ್ಲಿ ಫೇಸ್ಬುಕ್ ನಲ್ಲಿ ಮದುವೆ ನಿಶ್ಚಿತಾರ್ಥವನ್ನು ಸಾರ್ವಜನಿಕವಾಗಿ ಬಯಲು ಪಡಿಸಿದರು ನಿಕ್ತ ತನ್ನ ಬಾಯಿನಿಂದ ತನ್ನ ಮನದನ್ನೆಗೆ ನಿಶ್ಚಿತಾರ್ಥದ ಉಂಗುರ ತೊಡಿಸಿದರು. ಆದರೂ ಈ ವಿವಾಹ ಒಂದು ತರಹದ ಅಸಾಧ್ಯ ಮದುವೆ ಎನ್ನಿಸಿತ್ತು. ಈಗ ನಿಕ್ ಮತ್ತು ಪರಸ್ಪರ ಒಪ್ಪಿ ವಿವಾಹವಾಗಲು ನಿರ್ಧರಿಸಿ ಫೆಬ್ರವರಿ ೧೨, ೨೦೧೨ ರಂದು ಮದುವೆಯಾದರು. ಫೆಬ್ರವರಿ ೧೧, ೨೦೧೩ ರಲ್ಲಿ ಅವರ ಮೊದಲ ಮಗ ಜನಿಸಿದ. ೮ ಫೌಂಡ್ ತೂಕವಿದ್ದ ಆರೋಗ್ಯವಂತ ಮಗ, ಎರಡನೆಯ ಮಗ, ೨೦೧೫ ರ ಆಗಸ್ಟ್ ನಲ್ಲಿ ಜನಿಸಿದ. ೨೦೧೮ ರಲ್ಲಿ ಅವಳಿ ಜವಳಿ ಮಕ್ಕಳ ತಂದೆಯಾದರು. ನಾಲ್ಕು ಮ್ಯಾಕ್ಕಳ ಹೆಮ್ಮೆಯ ತಂದೆಯಾಗಿ ನಿಕ್ ದಂಪತಿಗಳು ಈಗ ವಿಶ್ವದ ಸುಖಿ ಜೀವನವನ್ನು ಅನುಭವಿಸುತ್ತಿದ್ದಾರೆ. ಸಾವಿರ ಸ್ಫೂರ್ತಿದಾಯ ಉಪನ್ಯಾಸಗಳನ್ನು ನೀಡಿದ್ದಾರೆ. ಕೈಕಾಲುಗಳು ಬೇಕಿಲ್ಲ. ಕನಸುಗಳ ಬೆನ್ನುಹತ್ತಲು ನಿಮಗೆ ಒಂದು ಸಾಮರ್ಥ್ಯವಿದ್ದರೆ ಸಾಕು ಬದುಕು ತಾನೇ ಮತ್ತೊಂದು ಸಾಮರ್ಥ್ಯ ಒದಗಿಸುತ್ತದೆ. ನಿಕ್ ಹೇಳುವಂತೆ, ಪವಾಡಗಳನ್ನು ನಿರೀಕ್ಷಿಸಬೇಡಿ. ನೀವೇ ಪವಾಡವಾಗಿ ಬೆಳೆಯಿರಿ.
Motivational speaker ಎಂದು ತಮ್ಮನ್ನು ಗುರುತಿಸಿಕೊಂಡು ನಿಕ್ ಬರೆದಿರುವ ಪುಸ್ತಕಗಳು : Life without limits, Love without limits, unstoppable, Be the hand and the feet, Attitude is everything, Be strong you can overcome bullying, and limitless. The butterfly circus, ಎಂಬ ಕಿರುಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏನನ್ನೂ ಸಾಧಿಸಬಲ್ಲೆವು ಎಂಬ ಪ್ರೇರಣೆಯನ್ನು ಅವರು ತಮ್ಮ ನಿರ್ವಹಿಸಿದ ಪಾತ್ರದ ಮೂಲಕ ಪ್ರಚುರಪಡಿಸಿದ್ದಾರೆ. ಈ ಚಿತ್ರ ಯು ಟ್ಯೂಬ್ ನಲ್ಲಿ ಉಚಿತವಾಗಿ ಲಭ್ಯವಿದೆ. Something more ಎಂಬ ಆರೂವರೆ ನಿಮಿಷಗಳ Music Video ಸುಂದರವಾಗಿ ಬಂದಿದೆ. ಹಿಂದೊಮ್ಮೆ ನಿರಾಶನಾಗಿ ಆತ್ಮಹತ್ಯೆಗೆ ಶರಣುಹೋದ ನಿಕ್ ಈಗ ತನ್ನ ಬದುಕಿನ ಸಂದೇಶ ನಮ್ಮೆಲ್ಲರನ್ನೂ ಚಕಿತಗೊಳಿಸುತ್ತದೆ. ಅವರು ಹೇಳುವ ಮಾತುಗಳು "ನಾನು ಸಾಯಲು ಬಯಸುವುದಿಲ್ಲ. ಬದುಕಿನಲ್ಲಿ ಸಾಧಿಸಲು ಬಹಳಷ್ಟಿದೆ. ನಾನು ಮಾತ್ರ ಇನ್ನೊಂದು ದಿನವನ್ನೂ ವ್ಯರ್ಥವಾಗಿ ಕಳೆಯಲು ಇಷ್ಟಪಡೆನು. ಇಂತಹ ಹೃದಯಸ್ಪರ್ಶಿ ಜೀವನಗಾಥೆ.
ನಿಕ್ ಭೂಮಿಗೆ ಬಂದ ದಿನ ವೈದ್ಯರು ತಾಯಿಗೆ ಹೇಳಿದ ಮಾತುಗಳು ಈ ಮಗು ಎಂದೂ ತಾನೇ ಎದ್ದು ಕುಳಿತುಕೊಳ್ಳಲಾರದು; ನಡೆಯಲಾರದು. ನಿಕ್ ಈ ವಾಕ್ಯಗಳನ್ನು ಎಂದೋ ಸುಳ್ಳುಮಾಡಿದ್ದಾನೆ. ನಿಮಿಷಕ್ಕೆ ೪೫ ಪದಗಳ ವೇಗದಲ್ಲಿ ಟೈಪಿಸಬಲ್ಲರು. ಕಂಪ್ಯೂಟರ್ ಬಳಸಬಲ್ಲರು ಡ್ರಮ್ ಸಂಗೀತವಾದ್ಯ ಬಾರಿಸಬಲ್ಲರು, ಗಾಲ್ಫ್ ಆಡಬಲ್ಲರು ಈಜುತ್ತಾರೆ ಸಮುದ್ರದ ನೀರಿನಮೇಲೆ ಸರ್ಫ್ ಮಾಡುತ್ತಾರೆ. ಕಾರ್ ಓಡಿಸಬಲ್ಲರು, ವಿಮಾನದಿಂದ ಸ್ಕೈ ಡೈವ್ ಮಾಡಲು ಸಮರ್ಥರು. ಕೈಕಾಲು ಇರುವವರು ಮಾಡಲಾರದ ಎಲ್ಲವನ್ನೂ ನಿಕ್ ಸಮರ್ಥವಾಗಿ ಮಾಡಬಲ್ಲರು. ನಿಜವಾದ ಅಂಗವಿಕಲತೆ ದೇಹದಲ್ಲಿಲ್ಲ; ನಮ್ಮ ಮನಸ್ಸಿನಲ್ಲಿದೆ ಎನ್ನುವ ಸತ್ಯವನ್ನು ಎತ್ತಿ ಹಿಡಿದು ತೋರಿಸಿದ್ದಾರೆ. ಅವರು ಘೋಷಿಸುವ ಕೆಲವು ವಾಕ್ಯಗಳು ಸತ್ಯವನ್ನು ಮೀರಿ ಎದ್ದು ಮಿಂಚುತ್ತವೆ.
ಅವರು ಹೇಳುವ ಪ್ರತಿಯೊಂದು ಅಡ್ಡನಿಂತ ಗೋಡೆಗಳನ್ನು ಅಡೆತಡೆಗಳನ್ನು ಅವಕಾಶದ ದ್ವಾರಗಳಾಗಿ ಪರಿವರ್ತಿಸಿ. Nick, "Power of choice" ಬಗ್ಗೆ ಒತ್ತಿ ಹೇಳುತ್ತಾರೆ. ನನ್ನಲ್ಲಿ ಇಲ್ಲದೆಯಿರುವುದರ ಬಗ್ಗೆ ವ್ಯರ್ಥವಾಗಿ ಯೋಚಿಸುತ್ತಾ ಮರುಗುತ್ತ ಕೂರುವುದಿಲ್ಲ ; ನನ್ನಲ್ಲಿ ಇರುವುದೆಲ್ಲವ ನೆನೆದಾಗ ಕೃತಜ್ಞತೆಯಿಂದ ಮನಸ್ಸು ತುಂಬಿಬರುತ್ತದೆ. ಕೃತಜ್ಞತೆ ನಮ್ಮ ಎದೆಯಲ್ಲಿ ತುಂಬಿದ ಕ್ಷಣ ಮನಸ್ಸು ಪ್ರಫುಲ್ಲಿತವಾಗುತ್ತದೆ. ದೇಹ ಆರೋಗ್ಯದಿಂದ ಚೇತರಿಸಿಕೊಳ್ಳುತ್ತದೆ. ನಮ್ಮ ಬದುಕಿನ ಉದ್ದಿಶ್ಯ ನಮ್ಮೆದೆರುಗೆ ಕಾಣಿಸಿಕೊಳ್ಳುತ್ತದೆ. ಹಾಗೂ ಬದುಕು ಬದಲಾಗುತ್ತದೆ.
ಪವಾಡ ಪುರುಷ :
ಬದುಕಿನಲ್ಲಿ ನಿರಾಶನಾಗಿ, ಹತಾಶನಾಗಿ ಆತ್ಮಹತ್ಯೆಗೂ ಪ್ರಯತ್ನಿಸಿ, ಪವಾದಕ್ಕಾಗಿ ಕಾದ ವ್ಯಕ್ತಿ. ಸ್ವಂತ ಪಾವಡವಾದಂತಹ ಕತೆಯಿತು ಈ ಸತ್ಯಕತೆ,ಕಲ್ಪನೆಯ ಕಟ್ಟು ಕತೆಗಳಿಗಿಂತ ಅಚ್ಚರಿಯದಾಗಿ ಬೆರಗು ಮೂಡಿಸುತ್ತದೆ. ನೋವಿನ ಪಾತಾಳದಿಂದ ಭುಗಿಲೆದ್ದು ಭರವಸೆಯ ಪರ್ವತಾರೋಹಣದ ಶಿಖರಕ್ಕೇರಿ, ಅಲ್ಲಿ ನಿಂತು ಮುಗುಳ್ನಗುತ್ತಿರುವ ೩೮ ವರ್ಷ ವಯಸ್ಸಿನ ಯುವಕನ ಕತೆ Life without limits ಎಂಬ ಅಂತಾರಾಷ್ಟ್ರೀಯ ಲಾಭವಿಲ್ಲದ ಕಂಪೆನಿಯನ್ನು ಲಾಸ್ ಎಂಜಲೀಸ್ ನಗರದಲ್ಲಿ ಸ್ಥಾಪಿಸಿದರು ಈ ಸಂಸ್ಥೆ ಏಸುವಿನ ಅನಂತ ಕೃಪೆಯನ್ನು ಮಾನವ ಜನಾಂಗಕ್ಕೆ ಸುವಾರ್ತೆಯನ್ನು ಬೋಧಿಸುವ ಸಂಸ್ಥೆ. ೨೦೦೭ ರಲ್ಲಿ ಒಂದು Secular ಸಂಸ್ಥೆ (ಧರ್ಮ ನಿರಪೇಕ್ಷತೆ ) ಯನ್ನು ಸ್ಥಾಪಿಸಿದರು. ಅದರ ಹೆಸರು Attitude is Altitude ಶಾಲಾಮಕ್ಕಳಿಗೆ ನಿಕ್ ಉತ್ತಮ ಭದ್ರ ಬುನಾದಿಯ ಭವಿಷ್ಯವನ್ನೂ ಸಕಾರಾತ್ಮಕ ಮಾನಸಿಕ ದೃಷ್ಟಿಕೋನವನ್ನೂ ಬೆಳೆಸಿಕೊಳ್ಳಲು ಪ್ರೇರಣೆಮಾಡಿ ಸಹಾಯಮಾಡುವ ದಿಶೆಯಲ್ಲಿ ಕಟ್ಟಿದ ಸಂಸ್ಥೆ. ಬುಲ್ಲಿಯಿಂಗ್ ವಿರೋಧಿಸಿ ಸ್ಥರ್ಯ ಮನೋಭಾವವನ್ನು ಬೆಳೆಸುತ್ತಾರೆ. ಇತರರಿಗೆ ಪೀಡನೆ, ಹಿಂಸೆ ಕಿರುಕುಳ ನೀಡದೆ ಇರುವಂತಹ ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಗೆ ಪ್ರಾಶಸ್ತ್ಯ ಕೊಡಲಾಗುತ್ತದೆ. ತನ್ನ ಬಾಲ್ಯದಲ್ಲಿ ಬುಲ್ಲಿಯಿಂಗ್ ನಿಂದ ಮನ ನೊಂದು ತನ್ನ ಏಳಿಗೆಯೇ ಕುಂಠಿತವಾಗುವುದೇನೋ ಎನ್ನುವ ಸಂದಿಗ್ದ ಪರಿಸ್ಥಿತಿಯನ್ನು ನಿಕ್ ಅಲ್ಲದೆ ಯಾರು ಅರ್ಥಮಾಡಿಕೊಳ್ಳಲು ಸಾಧ್ಯ ? ಭರವಸೆ, ಬದುಕಿಗೊಂದು ಉದ್ದಿಶ್ಯ, ಹಾಗು ಜೀವನೋಲ್ಲಾಸಗಳನ್ನು ನಿರೂಪಿಸಿ ಸಹಾಯಮಾಡುವ ಒಂದು ಯುವ ಸಂತೆಯನ್ನು ಕಟ್ಟುವ ನಿಟ್ಟಿನಲ್ಲಿ ಕೆಲಸಂದಿದರು ಜೀವನದಲ್ಲಿ ಸಕಾರಾತ್ಮಕ ಮನೋ ಭಾವನೆಯೇ ತಮ್ಮನ್ನು ಹಿಮಾಲಯದೆತ್ತರಕ್ಕೆ ಒಯ್ಯಬಲ್ಲುದು ಎನ್ನುವುದೇ ನಿಕ್ ಅವರು ಸ್ಥಾಪಿಸಿದ ಸಂಸ್ಥೆಯ ಸಂದೇಶ.
ನಿಕ್ ಒಬ್ಬ ಸಧೃಡ ಆರೋಗ್ಯವಂತ ಯುವಕನಾಗಿ ಬೆಳೆದರು. ಆಗ ಅವರ ವಯಸ್ಸು ೨೦ ವರ್ಷ. ಆಕರ್ಷಕ ಕಣ್ಣುಗಳು, ಸುಂದರವಾದ ಮುಖವಿದೆ. ಆದರೆ ಅವರ ದೇಹದ ಎತ್ತರ ಕೇವಲ ಒಂದು ಮೀಟರ್ ಗಿಂತ ಹೆಚ್ಚೇನಿಲ್ಲ. (೯೯ ಸೆಂಟಿ ಮೀಟರ್ ಗಳು) ಆದರೆ ಕೈಕಾಲುಗಳಿಲ್ಲ. ಎಲ್ಲಾ ಯುವಕರಂತೆ ಒಬ್ಬ ಜೀವನ ಸಂಗತಿಯನ್ನು ಆರಿಸಿಕೊಳ್ಳುವ ಮದುವೆಯಾಗುವ ಆಸೆ ಪ್ರಬಲವಾಗತೊಡಗಿತು. ಅವರು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಂತೆ, ಅವರ ಒಳಗಣ್ಣು ತೆರೆಯಿತು. ಈಗ ಅವರು ತಮ್ಮನ್ನು ತಾವಿರುವಂತೆಯೇ ಸ್ವೀಕರಿಸುವುದನ್ನು ಕಲಿಯಲೇಬೇಕೆಂಬ ಮಾತನ್ನು ಅರ್ಥಮಾಡಿಕೊಳ್ಳತೊಡಗಿದರು. ಮನಗಂಡರು. ಪ್ರಪಂಚ ವೇಗವಾಗಿ ಬೆಳೆಯುತ್ತಿದೆ. ತಮ್ಮ ದೇಹದಲ್ಲೂ ಭಾವನೆಗಳು ಬೆಳೆಯುತ್ತಿವೆ. ತಮಗೂ ಒಬ್ಬ ಪ್ರೀತಿಸುವ ಸುಂದರ ಹುಡುಗಿ ಬೇಕು. ಆದರೇ ಅದು ಅಸಾಧ್ಯವೆನ್ನಿಸುತ್ತಿದ್ದಂತೆಯೇ ಡಲ್ಲಾಸ್ ನಲ್ಲಿ ಅವರು ಅತಿಥಿಯಾಗಿ ಮಾಡುತ್ತಿದ್ದ ಅವರ ಭಾಷಣವನ್ನು ಆಲಿಸಿದ ಬಂದವರಲ್ಲಿ ಒಬ್ಬ ಜಪಾನೀ ಮೆಕ್ಸಿಕನ್ ಮೂಲದ ಹುಡುಗಿ ಕನಯ ಮಿಯಾಹರ ಆಕರ್ಷಿಸಿದಳು. ಸುಂದರವಾದ ಮುಖವಿದೆ. ಆಕೆಯ ಕರುಣಾಮಯ ಹೃದಯ, ಸಹನೆ, ಮತ್ತು ಆತ್ಮ ವಿಶ್ವಾಸ ನಿಕ್ ಆವರ ಮೇಲೆ ಮೋಡಿಮಾಡಿತ್ತು, ನಿಕ್ ಜೊತೆ ಬಹಳ ಪ್ರೀತಿಯಿಂದ ಮಾತಾಡಿದರು. ಪ್ರಥಮ ಭೇಟಿಯಲ್ಲೇ ನಿಕ್ ಮನಸ್ಸನ್ನು ಗೆದ್ದಿದ್ದರು. ಆದರೆ ಆಕೆಗೆ ನಿಕ್ ಬಗ್ಗೆ ಇನ್ನು ಪ್ರೇಮ ಅಂಕುರಿಸಿರಲಿಲ್ಲ. ನಿಕ್ ಕಾಣುವ ಮೊದಲು ಆಕೆಗೆ ಹಲವು ಮಿತ್ರರಿದ್ದರು. ಆದರೆ ಕಾಯುವಿಕೆಯ ಸಮಯದಲ್ಲಿ ತನ್ನ ಬದುಕಿನುದ್ದಕ್ಕೂ ಅವರು ಒಳ್ಳೆಯ ಸಂಗಾತಿಯಾಗಲಾರರು ಎನ್ನಿಸಿತು. ಬಹುಶಃ ಕೇವಲ ದೈಹಿಕ ಆಕರ್ಷಣೆಗಳ ಸಂಬಂಧ ಮಾತ್ರವೆನ್ನುವ ತರಹ ಅನ್ನಿಸಿತು. ಆದರೆ ನಿಕ್ ಹಾಗಲ್ಲ; ಅವರ ಅಂತರಂಗದ ಸೌಂದರ್ಯ ಮತ್ತು ಪ್ರಬುದ್ಧ ಮಾತುಗಳು ಆಕೆಗೆ ಮುದಕೊಟ್ಟಿತು. ಕನಯವಿಚಿತ್ರವಾದ ಅಂಗ ಭಿನ್ನತೆಯನ್ನು ತಲೆಗೆ ಹಚ್ಚಿಕೊಳ್ಳದೆ ಅವರ ಸಹೃದಯತೆಯನ್ನು ಕಂಡು ಮೆಚ್ಚಿ ಆತನೇ ತನ್ನ ಪತಿ ಎಂದು ಒಪ್ಪಿಕೊಂಡರು. ಆಗಸ್ಟ್ ೧, ೨೦೧೧ ರಲ್ಲಿ Face book ನಲ್ಲಿ ತಮ್ಮ ಮದುವೆಯ ನಿಶ್ಚಿತಾರ್ಥವನ್ನು ಸಾರ್ವಜನಿಕಗೊಳಿಸಿದರು. ನಿಕ್ ತಮ್ಮ ಬಾಯಿನಿಂದ ನಿಶ್ಚಿತಾರ್ಥದ ಉಂಗುರವನ್ನು ಕನಯಳ ಬೆರಳಿಗೆ ತೊಡಿಸಿದರು. ಪತ್ನಿಯ ಕೈ ಹಿಡಿಯಲು ಸಾಧ್ಯವಿಲ್ಲ. ಜೊತೆಯಾಗಿ ನಡೆದು ಹೋಗಲು ಸಾಧ್ಯವಿಲ್ಲ ಆದರು ಆಕೆಯ ಹೃದಯವನ್ನು ಹಿಡಿಯಲು ಕೈ ನ ಅವಶ್ಯಕತೆ ಅವರಿಗೆ ಇದ್ದಂತೆ ಕಾಣಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿವಾಹ ಫೆಬ್ರವರಿ, ೧೨, ೨೦೧೨ ರಲ್ಲಿ ಜರುಗಿದ್ದು, ಅವರಿಬ್ಬದ ಪರಸ್ಪರ ಪ್ರೀತಿ ಅಸಾಧ್ಯವನ್ನು ಸಾಧ್ಯವಾಗಿಸಿ, ಆದರೂ ನಿರಾಕರಣೆಯ ಭೀತಿ ಅವರನ್ನು ಸದಾ ಕಾಡುತ್ತಿತ್ತು ತನ್ನ ಮನದನ್ನೆಗೆ ಪ್ರೇಮನಿವೇದನೆ ಮಾಡಿದರು. ಪರಿಪೂರ್ಣ ಪ್ರೀತಿಯನ್ನು ಪಡೆಯಲು ದೈಹಿಕವಾಗಿ ಪರಿಪೂರ್ಣರಾಗಿರಬೇಕಿಲ್ಲ ನಮ್ಮಲ್ಲಿರುವ ಮೀರಲಾರದ ನ್ಯೂನತೆಗಳನ್ನು ಪರಸ್ಪರ ಒಪ್ಪಿಕೊಳ್ಳೋಣ. ನಾವು ಹೇಗಿದ್ದೇವೋ ಹಾಗೆಯೇ ನಮ್ಮನ್ನು ಒಪ್ಪಿಕೊಂಡು ಗೌರವಿಸುವ ವ್ಯಕ್ತಿಗಳು ಪ್ರಪಂಚದಲ್ಲಿ ಇದ್ದೇಇರುತ್ತಾರೆ.
ನಿಕ್ ಅವರ ಪರಿವಾರ ;
ಫೆಬ್ರವರಿ ೧೩, ೨೦೩ ರಲ್ಲಿ ಮೊದಲ ಮಗ ಜನಿಸಿದ ಆರೋಗ್ಯವಂತನಾಗಿ ಹುಟ್ಟಿದ ಅವನ ತೂಕ ೮ ಫೌಂಡ್. ೨೦೧೫ ರ ಆಗಸ್ಟ್ ತಿಂಗಳಲ್ಲಿ ಎರಡನೆಯ ಮಗ ೨೦೧೮ ರಲ್ಲಿ ಅವಳಿ-ಜವಳಿ ಮಕ್ಕಳ ತಂದೆಯಾದರು. ತಮ್ಮ ಪ್ರೀತಿಯ ಮಕ್ಕಳೊಂದಿಗೆ ಅವರು ಕುಣಿದು ಸಂಭ್ರಮಿಸಿ ತಮ್ಮ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾರೆ.
ಇಂದು ನಿಕ್ ರವರ ಸಾವಿರ-ಸಾವಿರ ಉಪನ್ಯಾಸಗಳನ್ನು ಕೇಳಲು ಲಕ್ಷಾಂತರ ಜನರು ಕೇಳುತ್ತಿದ್ದಾರೆ. ನಿಕ್ ಹೇಳುವ ಹಾಗೆ, ಕನಸುಗಳ ಬೆನ್ನು ಹತ್ತಲು ಕೈಗಳು ಬೇಕಿಲ್ಲ; ನಿಮ್ಮಲ್ಲಿ ಒಂದು ಸಾಮರ್ಥ್ಯವಿಲ್ಲದಿದ್ದರೆ ದೇವರು ಮತ್ತೊಂದು ಸಾಮರ್ಥ್ಯವನ್ನು ಕರುಣಿಸಿರುತ್ತಾನೆ. ಪವಾಡವನ್ನು ನಿರೀಕ್ಷಿಸಬೇಡಿ ನೀವೇ ಪವಾಡವಾಗಿರಿ.
ಫೊಕಾಮೆಲಿಯಾ ರೋಗ, ತಂದೆ ತಾಯಿಯರಲ್ಲಿ ೮ ನೆಯ ವರ್ಣತಂತುವಿನಲ್ಲಿ Chromosome ನ್ಯೂನತೆ ಇದ್ದಾಗ ಇತರಹ ಮಗು ಹುಟ್ಟುತ್ತದೆ ಎಂಬ ಮಾತಿದೆ. ಒಟ್ಟಿನಲ್ಲಿ ಮೆಡಿಕಲ್ ವಲಯದಲ್ಲೂ ಇನ್ನು ಹೆಚ್ಚು ಪರಿಚಯವಿಲ್ಲದ ನಿಗೂಢ ಅಂಗವಿಕಲತೆಯಿದು. ಕೇವಲ ಒಂದು ಕೈ ಇಲ್ಲವೇ ಒಂದು ಕಾಲು ಊನವಾಗಿರುತ್ತದೆ. ಗಿಡ್ಡವಾಗಿರುತ್ತವೆ, ಇಲ್ಲವೇ ಇರುವುದೇ ಇಲ್ಲ. ಇಲ್ಲಿ ಕೇವಲ ರುಂಡ ಮುಂಡವಿರುವ ಶಿಶು ಉದಯಿಸಿತ್ತು. ಎಡಕಾಲಿನ ಕೊನೆಯಲ್ಲಿ ಪುಟ್ಟ ಮೀನಿನ ರೆಕ್ಕೆಯಂತೆ ಅಂಟಿಕೊಂಡ ಒಂದು ಮಾಂಸದ ತುಂಡು, ಎರಡು ಕಾಲ್ಬೆರಳುಗಳು ಗಟ್ಟಿಯಾಗಿ ಒಂದಕ್ಕೊಂದು ಅಂಟಿಕೊಂಡಿದ್ದವು. ನಂತರ ಆ ಬೆರಳುಗಳನ್ನು ಶಸ್ತ್ರ ಚಿಕೆತ್ಸೆಮಾಡಿ ಬೇರ್ಪಡಿಸಿದಮೇಲೆ ಬಹಳಷ್ಟು ಕೆಲಸಗಳನ್ನು ನಿಕ್ ಸ್ವತಃ ಮಾಡಿಕೊಳ್ಳಬಹುದಾಗಿದೆ.
ಶಿಕ್ಷಣವನ್ನು ಮುಂದುವರೆಸಿ ಎರಡು ವಿಷಯಗಳಲ್ಲಿ ಪದವೀಧರರಾಗಿದ್ದರು. ಎರಡು ಕಂಪೆನಿಗಳ ಮುಖ್ಯಸ್ಥ. ಜನಪ್ರಿಯ ನಾಯಕ, ಪ್ರೇರಕ ಮಾತುಗಾರ, ಲೇಖಕ. ಜಗತ್ತಿನ ಮೂಲೆಮೂಲೆಗಳಲ್ಲಿ (೬೦ ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ) ಹೋಗಿ ತಮ್ಮ Motivational lecture ಕೊಟ್ಟು ಬಂದವರು. ಸಂಚಾರಿ ಕ್ರೈಸ್ತ ಬೋಧಕ ಸೇವಾ ಮನೋಭಾವ ಅವರಿಗೆ ತಮ್ಮ ಅಜ್ಜನ ಬಳುವಳಿಯಿಂದ ಬಂತು. ವ್ಲಾಡಿಮೀರ್ ಅಜ್ಜ ಸರ್ಬಿಯದಲ್ಲಿ ಒಬ್ಬ ಸೈನಿಕರಾಗಿದ್ದರು. ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಅವರು ಉಪಚಾರಮಾಡಿ ಜೀವದಾನ ನೀಡುತ್ತಿದ್ದರು. ಇಂತಹ ಸಮಯದಲ್ಲಿ ಹಲವಾರು ಬಾರಿ ಗಾಯಗೊಂಡಿದ್ದರು ಸಹಿತ. ಕ್ರೈಸ್ತ ಮತದ ತತ್ವಗಳನ್ನು ಅವರು ಬೋಧಿಸುತ್ತಿದ್ದರು. ವ್ಲಾಡಿಮೀರ್ ಅಜ್ಜನಂತೆ ನಿಕ್ ಸಹಿತ ಒಬ್ಬ ಸಂಚಾರಿ ಕ್ರೈಸ್ತ ಬೋಧಕ. ನಿಕ್ ಇಂದು ವಿವಾಹಿತ, ೪ ಮುದ್ದು ಮಕ್ಕಳ ತಂದೆ, ತಮ್ಮ ದಿಟ್ಟ ಸಾಹಸ ಬದುಕಿನಿಂದ ಅವರು ನಮ್ಮೆಲ್ಲರ ದುಸ್ವಪ್ನಗಳೆಲ್ಲ ನಿಜವಾಗುವುದಿಲ್ಲ ಸತತವಾಗಿ ಚಿಂತಿಸುತ್ತ ಕಲ್ಪಿಸಿದ ಕಷ್ಟಗಳೆಲ್ಲವೂ ಬಂದೆರಗುವುದಿಲ್ಲ. ಭವಿಷ್ಯದ ಬಗ್ಗೆ ಯೋಚನೆಬೇಕು ನಿಜ. ಸಾಧ್ಯತೆಗಳನ್ನು ಕಲ್ಪಿಸಿ ಮುಂದುವರೆಯಬೇಕು.
ಅತಿಯಾದ ಚಿಂತೆ ಅನಗತ್ಯ. ದೇವರು ಕೊಟ್ಟ ನಮ್ಮ ಬದುಕು ನಾವು ಎನಿಸಿದ್ದಕ್ಕಿಂತ ಒಳಿತನ್ನೇ ನಮ್ಮ ಮುಂದೆ ತೂರಿಬಿಡುತ್ತದೆ. ಯಾವುದು ನಮ್ಮ ಆಲೋಚನೆಗಳಿಗೆ ಮೀರಿನಿಂತಿದೆಯೋ ಆ ಸತ್ಯವನ್ನು ಒಪ್ಪಿ ಮುಂದೆ ನಡೆಯೋಣ ನಮ್ಮ ಪಾಲಿಗೆ ಅಪಂಗತ್ವ ಸಿಕ್ಕಿದರೆ ಏನುಮಾಡಲು ಸಧ್ಯ ? ನಮ್ಮ ೭ ವರ್ಷ ವಯಸ್ಸಿನಲ್ಲಿ ಅಮೆರಿಕಕ್ಕೆ ಹೋದರು ಅಲ್ಲಿ ಅವರ ಅಂಕಲ್ ಲಾಸ್ ಏಂಜಲೀಸ್ ನಗರಕ್ಕೆ ೩೫ ಮೈಲಿದೂರದಲ್ಲಿ ಅಗೋರ ಹಿಲ್ಸ್ ಎಂಬಲ್ಲಿ ವಾಸಿಸುತ್ತಿದ್ದರು ವರ್ಕ್ ವೀಸಾ ಕಷ್ಟ. ಕಾಯಬೇಕಿತ್ತು, ಆದ್ರೆ ನಿಕ್ ಗೆ ಅಲರ್ಜಿ ತೊಂದರೆ ಹಾಗಿ ಅಸ್ತ್ರೆಲಿಯಾದ Queensland ನ ಬ್ರಿಸ್ಬೇನ್ ಎಂಬ ನಗರಕ್ಕೆ ಸ್ಥಳಾಂತರಗೊಳ್ಳಬೇಕಾಯಿತು. ೧೯೯೪ ರಲ್ಲಿ ಎಲಿಮೆಂಟರಿ ಶಾಲೆ ೬ ನೆಯ ವರ್ಷದಲ್ಲಿದ್ದಾಗ, ತಂದೆಯವರಿಗೆ Work permit visa ದೊರೆಯಿತು ಅಮ್ರಿಕಕ್ಕೆ ಧಾವಿಸಿದರು. ಇಷ್ಟರಲ್ಲಿ ತಮ್ಮ ಅರನ್, ತಂಗಿ ಮಿಶಲ್ ಹುಟ್ಟಿದರು Agora hill ನ ಶಾಲೆ ಅವರಿಗೆ ಸಹಾಯಕಾರಿಯಾಗಿರಲಿಲ್ಲ ಮತ್ತು ನಿವಾಸಸ್ಥಾನದಲ್ಲಿ ಜನಜಂಗುಳಿಯ ವಾತಾವರಣ ಹೆಚ್ಚಾಗಿದ್ದು ಅಮೇರಿಕಾದಲ್ಲಿ ಶಾಶ್ವತವಾಗಿ ನೆಲೆಸುವ ಕನಸು ಸಾಧ್ಯವಾಗಲಿಲ್ಲ ಮತ್ತೆ ತಮ್ಮ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರಕ್ಕೆ ವಾಪಾಸ್ ಹೋಗುವ ನಿರ್ಧಾರಮಾಡಬೇಕಾಯಿತು.
ಮೊದಮೊದಲು ತನ್ನ ತಂದೆಗೆ ತನ್ನ ಹುಟ್ಟು ಎಷ್ಟು ಖೇದ ತಂದಿದೆ ಎನ್ನುವುದು ಅವರಗಮನಕ್ಕೆ ಬಂದಿರಲಿಲ್ಲ. ದೊಡ್ಡವನಾಗಿ ಬೆಳೆಯುತ್ತಿದ್ದಂತೆ ಅದು ಅವರ ೧೩ ನೆಯ ವಯಸ್ಸಿನಲ್ಲಿ ಅರ್ಥವಾಗತೊಡಗಿತು. ಶಾಲೆಯಲ್ಲಿ ಅವರ ಜೊತೆಯ ಹುಡುಗರು ಲೇವಡಿಮಾಡುವುದು, ಛೇಡಿಸುವುದು, ಮತ್ತು ಅನೇಕ ಕಿರುಕುಳ ಕೊಡುವುದು ಅವರ ಮನಸ್ಸಿಗೆ ಬಹಳ ವೇದನೆಯನ್ನುಂಟುಮಾಡುತ್ತಿತ್ತು. ಮನೆಗೆ ಬಂದೊಡನೆಯೇ ಇದನ್ನು ತಮ್ಮ ತಾಯಿಯವರೊಂದಿಗೆ ಹಂಚಿಕೊಂಡಾಗ ಅವರು ನೊಂದುಕೊಂಡು ನಿಕ್ ನಿನಗೆ ದೇವರು ಬೇರೊಂದು ಯೋಜನೆಯನ್ನು ಕಾದಿರಿಸಿದ್ದಾನೆ ಮಗು, ಚಿಂತಿಸಬೇಬೇಡವೆಂದು ಸಮಾಧಾನ ಮಾಡಿ ಭರವಸೆಯನ್ನು ಮೂಡಿಸಿದರು ಧರ್ಯ, ಆತ್ಮ ವಿಶ್ವಾಸದ ಬೋಧನೆಯನ್ನು ಮಾಡಿದರು. ಈಗ ನಿಕ್ ಬದಲಾಯಿಸಿದ್ದರು. ದಿಟ್ಟತನ ಛಲಗಳನ್ನು ಬೆಳೆಸಿಕೊಂಡು ನಿರ್ಧರಿಸಿದ್ದನ್ನು ತಲುಪಲು ಶಾಲೆಯಲ್ಲಿ ತಮ್ಮನ್ನು ಗೋಳುಹೊಯ್ದುಕೊಳ್ಳುವವರ ಮಧ್ಯೆ ನಗುನಗುತ್ತಾ ಲವಲವಿಕೆಯ ಮಗುವಾಗಿ ಬೆಳೆದರು.
ಎಡಗಾಲಿನ ಮೋಟು ಭಾಗದ ಮೇಲೆ ಸ್ವಲ್ಪ ನಿಯಂತ್ರಣ ಬಂದು ಚೆಂಡನ್ನು ತಲೆಯಿಂದ ಒದೆಯಲು ತಲೆಯನ್ನು ಗೋಡೆಗೆ ಊರಿ ಎದ್ದು ನೆಟ್ಟಗೆ ನಿಲ್ಲಲು ಸಹಾಯವಾಯಿತು. ಅವರಿಗೆ ತಲೆಯೊಂದೇ ಎಲ್ಲ ಕೆಲಸಗಳಿಗೂ ಪ್ರಮುಖವಾದ ಅಂಗವಾಗಿತ್ತು. ತಲೆ ಊರಿ ಮೇಲೇಳಲು ಸಾಧ್ಯವಾಗಲೆಂದು ಬಿದ್ದಾಗ ಪೆಟ್ಟಾಗದಿರಲೆಂದು ತಾಯಿಯವರು ಮನೆಯ ತುಂಬಾ ಮೃದುವಾದ ದಿಂಬುಗಳನ್ನು ಹರಡಿದ್ದರು. ಈಗ ಅವರ ಹಣೆಗಟ್ಟಿಯಾಯಿತು. ಹೆಚ್ಚಿನ ಕೆಲಸಕ್ಕೆ ಸಣ್ಣ ಮಾಂಸದ ತುಂಡಿನಂತಹ ಕಾಲನ್ನು ಬಳಸುತ್ತಿದ್ದರು ಕುತ್ತಿಗೆಗೆ ಶಕ್ತಿಬಂತು. ಉತ್ತಮ ಆರೋಗ್ಯವಂತ ಹುಡುಗನಾಗಿ ಬೆಳೆದ. ಆದರೆ ಬೇಗ ಅಲರ್ಜಿ ಅವರಿಗೆ ಆಗುತ್ತಿತ್ತು. ಪೋಷಕರು ವೈದ್ಯರಿಗೆ ತೋರಿಸಿ ಶಸ್ತ್ರಚಿಕಿತ್ಸೆ ಮಾಡಿಸಿ ಅಂಟಿಕೊಂಡಿದ್ದ ಕಾಲಿನ ಎರಡು ಬೆರಳುಗಳನ್ನು ಬೇರ್ಪಡಿಸಿದರು. ಈಗ ಈ ಬೆರಳುಗಳು ಕೈನಂತೆ ಕೆಲಸಮಾಡುತ್ತಿದವು ವಸ್ತುಗಳನ್ನು ಹಿಡಿಯುವುದು. ಪುಸ್ತಕದ ಪುಟತಿರುಗಿಸಲು, ಟೈಪ್ ಮಾಡಲು ಪೆನ್ ಹಿಡಿದು ಬರೆಯಲು ಎಲೆಕ್ಟ್ರಾನಿಕ್ ಗಾಲಿ ಕುರ್ಚಿಯಮೇಲೆ ಕುಳಿತಮೇಲೆ ಅದರ ಗುಂಡಿಗಳನ್ನು ಒತ್ತುವುದನ್ನು ಕಲಿತರು. ಫೋನ್ ಬಳಸಲು ಕಲಿತರು.
ಶಾಲೆಯಲ್ಲಿ ಹುಡುಗರು ನಿಕ್ ನನ್ನ ಅಣಕಿಸಿ ಕುಚೇಸ್ಟೆ ಮಾಡುತ್ತಿದ್ದರು. ಎಷ್ಟೇ ದಿಟ್ಟತನದಿಂದ ಅದನ್ನು ವಿರೋಧಿಸಿ ಮುಂದುವರೆಯಲು ಪ್ರಯತ್ನಿಸಿದಾಗ್ಯೂ ಯಾಕೋ ಸಾಧ್ಯವಾಗುತ್ತಿರಲಿಲ್ಲ ಶಾಲೆಯಿಂದ ಬಂದಕೂಡಲೇ ತನ್ನ ಗೆಳೆಯರು ಮಾಡಿದ Bullying ಬಗ್ಗೆ ಅಪ್ಪ ಅಮ್ಮನಿಗೆ ವರದಿ ಮಾಡದೇ ಬೇರೆಕೆಲಸಮಾಡಲು ಸಾಧ್ಯವಾಗುತ್ತಿರಲಿಲ್ಲ. ಆಗ ತಂದೆ ತಾಯಿ ನಿಕ್ ನನ್ನ ಅಪ್ಪಿ ಮುದ್ದಿಸಿ ನಿನ್ನ ಬಗ್ಗೆ ನಮಗೆ ಸಂಪೂರ್ಣ ನಂಬಿಕೆಯಿದೆ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡ ಮಗು, ಎಂದು ಹೇಳಿದ ಕೆಲವು ದಿನವಂತೂ ಅವರ ಕೆಲಸಮಾಡುತ್ತಿತ್ತು. ಅವರ ಪ್ರೀತಿಯಲ್ಲಿ ಅವರು ಜಾಗೃತಗೊಳಿಸುವ ಆತ್ಮವಿಶ್ವಾಸದಲ್ಲಿ ಅಸಾಧಾರಣ ಶಕ್ತಿ ದೊಡ್ಡ ಪವಾಡವಿದೆ, ಮಾರನೆಯದಿನ ಮತ್ತೆ ಜಗತ್ತನ್ನು ಎದುರಿಸುವ ಧೃಡಪ್ರಯತ್ನಕ್ಕೆ,ಸಿದ್ಧರಾಗುತ್ತಿದ್
Give me a hug !
ಎಂಬ ಪುಸ್ತಕವನ್ನು ಬರೆದ ನಿಕ್ ಒಂದು ಪ್ರಸಂಗವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಪ್ರತಿವರ್ಷ ಡಿಸೆಂಬರ್ ತಿಂಗಳ ೨೦ ರಂದು ಅವರ ಹುಟ್ಟಿದ ಹಬ್ಬ. ಮೆಕ್ಸಿಕೋ ದೇಶದಲ್ಲಿ ಜನಿಸಿದರು. ಅನಂತರ ಅಮರಿಕದ Texas ನಗರಕ್ಕೆ ಬಂದು ನೆಲೆಸಿದರು. ಒಳ್ಳೆಯ ಜಾಣೆ, ಕಲಿತಿದ್ದರು. ತಂದೆ ಮೆಕ್ಸಿಕನ್, ಹಾಗೂ ತಾಯಿ ಜಪಾನಿಗರು. ಕೃಷಿವಿಷಯದಲ್ಲಿ ಎಂಜಿನಿಯರ್ ಆಗಿದ್ದರು. ಒಬ್ಬ ಸೋದರಿಯ ಜೊತೆ ಅಮರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದರು. ೫ ಅಡಿಗಿಂತ ಎತ್ತರ. ನಿಕ್ ೩ ಅಡಿ, ೩ ಅಂಗುಲ. ಒಮ್ಮೆ ೩ ವರ್ಷದ ಪುಟ್ಟ ಹುಡುಗಿ ನಿಕ್ ಹತ್ತಿರ ಬಂದಳು ಅವಳಷ್ಟೇ ಎತ್ತರವಿದ್ದ ನಿಕ್ ನನ್ನ ಕಂಡು ತನ್ನ ಕೈಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು ನಿಂತಳು. ಕೈಗಳೇ ಇಲ್ಲದ ನಿಕ್ ತನ್ನ ಕೈಗಳನ್ನು ಕಂಡಮೇಲೆ ಸಂಕೋಚವಾಗದಿರಲೆಂದು. ಕೇವಲ ಮಕ್ಕಳಿಗಾಗಿಯೇ ಬರೆದ ಪುಟಕಗಳು : Believe, Belong, become, dream big, Make a difference etc;
ನಿಕ್ ನನ್ನು ನೋಡಿ ಆ ಪುಟ್ಟ ಪೋರಿಗೆ ಭಯವಾಯಿತೇ ? ಹೆದರಬೇಡ ಮಗು. ನಾವು ವಿಭಿನ್ನವಾಗಿದ್ದೇವೆ ನಿಜ ಪುಟ್ಟ Dolfin ನಂತೆ ನನಗೆ ಕೈ ಅಥವಾ ಕಾಲಿಲ್ಲ. ಹೆದರಬೇಡ. ನಾವು ಸ್ನೇಹಿತರಾಗಬಲ್ಲೆವು. ಇದರಜೊತೆಗೆ ಮತ್ತೊಂದು ವಿಚಾರ : ನಮ್ಮ ನಡುವಿನ ವಿಭಿನ್ನತೆ ನಮ್ಮಿಂದ ಒಬ್ಬರಿಂದೊಬ್ಬರು ದೂರವಾಗುವಂತೆ, ಒಬ್ಬರು ಇನ್ನೊಬ್ಬರಮೇಲೆ ಗುಮಾನಿ ಮಾಡುವಂತೆ, ಭಯಭೀತರಾಗುವಂತೆ, ದ್ವೇಷಿಸುವಂತೆ ಮಾಡಬಾರದು ಅಲ್ಲವೇ ? ಪ್ರೀತಿ, ಮಾನವೀಯತೆಗಳ ಬಗ್ಗೆ ಎಳೆಯಮಕ್ಕಳಿಗೆ ಸ್ನೇಹ, ಭರವಸೆ ಪ್ರೀತಿಗಳನ್ನು ಬೆಸೆಯುವಂತಹ ಕತೆಗಳನ್ನು ಇದಕ್ಕಿಂತ ಸೊಗಸಾಗಿ ನಾವು ಹೇಳಬಲ್ಲೆವೇ ?
ನಿಕ್ ಅವರನ್ನು ಮೊಟ್ಟಮೊದಲು ನೋಡಿದವರಿಗೆ :
ವಿಶೇಷವೆಂದರೆ, ನಿಕ್ ನನ್ನ ಮೊದಲು ನೋಡಿದವರು ಅವರ ತಲೆಯ ದಟ್ಟವಾದ ನೀಳ್ಗೂದಲು, ಒಂದು ಲಕ್ಷಜನರಿರುವ ದೊಡ್ಡ ಸಭೆಯಲ್ಲಿ ಕೊನೆಯ ಸಭಿಕನಿಗೂ ಸ್ಪಷ್ಟವಾಗಿ ಕೇಳಿಸುವಂತಹ ಆಕರ್ಷಕ ಗಟ್ಟಿ ಧ್ವನಿ, ತುಂಟ ಕಣ್ಣುಗಳು, ಸ್ಪಷ್ಟ ಹಾಗೂ ದಿಟ್ಟ ನಿಲವನ್ನು ಅಲ್ಲಗಳೆಯುವರ್ಯಾರು ? ಆದರೆ ನಮ್ಮ ದೃಷ್ಟಿ ಕುತ್ತಿಗೆಯಿಂದ ಕೆಳಗೆ ಬಂದಂತೆ ಕೈಗಳು, ಕಾಲುಗಳು ಇಲ್ಲವೆಂದು ಕಂಡಾಗ ಮನಸ್ಸಿಗೆ ಬೇಸರವಾಗುತ್ತದೆ. ಅವರ ಅಂಗವಿಹೀನತೆಯ ಬಗ್ಗೆ ಕನಿಕರ ಮೂಡುತ್ತದೆ. ಏಕೆ ಹೀಗಾಯಿತು ? ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತವೆ. ನಿಕ್ ಅವರ ಅಜ್ಜ, ವ್ಲಾಡಿಮೀರ್ ವಿವಚೆಚ್ ಸರ್ಭಿಯ ಸೇನೆಯಲ್ಲಿದ್ದರು. ಗಾಯಾಳುಗಳನ್ನು ಹೊತ್ತು ತಂದು ಅವರಿಗೆ ಹೊಸಜೀವನವನ್ನು ಕೊಡುವ ಅದ್ಭುತ ಕೆಲಸಮಾಡುತ್ತಿದ್ದರು. ಇಂತಹ ಸಮಯದಲ್ಲಿ ಅವರೂ ತೀವ್ರವಾಗಿ ಗಾಯಗೊಂಡ ಸಂಗತಿಗಳಿವೆ. ವ್ಲಾಡಿಮೀರ್ಅಜ್ಜ ಮಾಡುತ್ತಿದ್ದ ಸಂಚಾರಿ ಕ್ರೈಸ್ತ ಬೋಧಕ ಕೆಲಸ ನಿಕ್ ಅವರಿಗೆ ಪ್ರಿಯವಾಯಿತು. ಮುಂದೆಯೂ ಅದನ್ನು ಅವರು ತಮ್ಮ ಜೀವನ ಪೂರ್ತಿ ಮುಂದುವರೆಸಿಕೊಂಡು ಹೋದರು.
ನಿಕ್ ಅವರ ದೈನಿಂದಿನ ಬದುಕು :
ನಿಕ್ ದಿನದಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಅವರ ಕೆಲಸದ ವ್ಯಾಪ್ತಿ ಯಾವ ಯಾವ ಆರೋಗ್ಯವಂತ ಪ್ರಬುದ್ಧ ಕಂಪೆನಿಯ CEO ಗಿಂತ ಕಡಿಮೆಯಿಲ್ಲ :
-
ನಿಕ್ founder and CEO of the non-profit ministry ‘Life Without Limbs’ ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದಾರೆ.
-
ಬಿ ಬಿ.ಸಿ ಟೆಲಿವಿಷನ್ ನಲ್ಲಿ 60 Minutes Australia,
-
CBS Sunday Morning,
-
Oprah’s Life Class,
-
USA Today,
-
People Magazine,
-
ABC News,
-
The Glenn Beck Program TLC,
-
LA Stories, ಮೊದಲಾದ ಸೋಷಿಯಲ್ ಮಿಡಿಯಾದೊಡನೆ ಸ್ಪಂದಿಸುತ್ತಿದ್ದಾರೆ.
ನಿಕ್ ವಿವಾಚೆಚ್ ಬೋರಿಸ್ ವಿವಚೆಚ್, ದಷ್ಕ ವಿವಚೆಚ್ (ತಂದೆ-ತಾಯಿ) ಮೂಲತಃ ಸರ್ಬಿಯದೇಶದವರು. ಆದರೆ ನಿಕ್ ಜಸಿದ್ದು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ. ಬಾಲ್ಯದಲ್ಲಿ ಸರ್ಬಿಯನ್ ಮೂಲದ ನಂಬಿಕೆಗಳು, ಮತ್ತು ಹಲವಾರು ಆಚರಣೆಗಳು ನಿಕ್ ಅವರ ರಕ್ತದಲ್ಲಿ ಹಾಸುಹೊಕ್ಕಿವೆ. ಅದರಲ್ಲೂ ವ್ಲಾಡಿಮೀರ್ ಅಜ್ಜನ ಸೇವಾಮನೋಭಾವ ನಿಕ್ ಗೆ ಬಹಳ ಪ್ರಿಯ. ಅಂತಹ ದೊಡ್ಡ ಪರಿವಾರದಲ್ಲಿ ಅವರು ಬೆಳೆದಿದ್ದರು.
“The Nick Vujicic Podcast”, ವೆಬ್ ನ ಸೆಮಿನಾರ್ ಗಳನ್ನು ಆಯೋಜಿಸುವಲ್ಲಿ ಮತ್ತು ಕೋಚಿಂಗ್ ನಲ್ಲಿ ವ್ಯಸ್ಥರಾಗಿರುತ್ತಾರೆ. ಇವರ ಸುಂದರ ಪತ್ನಿ, ಕನಿ, ಹಾಗೂ ೪ ಜನ ಆರೋಗ್ಯವಂತ ಮಕ್ಕಳೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ನಿಕ್ ಅವರ ಜೀವನದ ಧ್ಯೇಯವೆಂದರೆ, ಈ ವಿಶ್ವದ ಅಂಗವಿಕಲರಾಗಿ ಜನಿಸಿದ ಮಕ್ಕಳಿಗೆ ಅವರ ಎಲ್ಲಾ ಅಸಹಾಯಕತೆಗಳನ್ನು ಮುಕ್ತಗೊಳಿಸಿ ಅವರ ಜೀವನದಲ್ಲಿ ಆಶಾಕಿರಣಮೂಡಿಸಿ ಪ್ರಮುಖ ಜೀವನವಾಹಿನಿಯಲ್ಲಿ ಅವರನ್ನು ಆತ್ಮವಿಶ್ವಾಗಳೊಂದಿಗೆ ಮುನ್ನಡೆಸಿಕೊಂಡು ಹೋಗಲು ಸಹಾಯಮಾಡುವುದು.
ನಿಕ್ ಅವರ ಮೊದಲ ಪುಸ್ತಕ, Life Without Limits: Inspiration for a Ridiculously Good Life, Random House ಪ್ರಕಟಣಾಲಯದಿಂದ ೨೦೧೦ ರಲ್ಲಿ ಪ್ರಕಟಗೊಂಡಿತು ಈ ಪುಸ್ತಕ ೩೦ ಪ್ರಮುಖ ಭಾಷೆಗಳಲ್ಲಿ ಭಾಷಾಂತರಗೊಂಡಿದೆ.
-
ಇನ್ನಿತರ ಪುಸ್ತಕಗಳು :
* Life Without Limits: Inspiration of a Ridiculously Good Life (2010); ISBN 978-0307589743
-
Your Life Without Limits (2012); ISBN 978-0307731043
-
Limitless: Devotions for a Ridiculously Good Life (2013); ISBN 978-0307730916
-
Unstoppable: The Incredible Power of Faith in Action (2013); ISBN 978-0307730893
-
The Power of Unstoppable Faith (2014); ISBN 978-1601426765
-
Stand Strong (2015); ISBN 978-1601427823
-
Love Without Limits (2016); ISBN 978-1601426185
-
Be the Hands and Feet: Living Out God's Love for All His Children, February 13, 2018; ISBN 978-1601426208
ಸಾಧನೆಗಳು :
Griffith University ಯಲ್ಲಿ ತನ್ನ ೨೧ ನೆಯ ವಯಸ್ಸಿನಲ್ಲಿ ಕಾಮರ್ಸ್ ವಿಷಯದಲ್ಲಿ ಪದವಿ ಗಳಿಸಿದರು. ೨ ಮೇಜರ್. ವಿಷಯಗಳನ್ನು ತೆಗೆದುಕೊಂಡಿದ್ದರು. accountancy ಹಾಗೂ financial planning.
2005 ರಲ್ಲಿ , Life Without Limbs, ಸಂಸ್ಥೆಯ ಸ್ಥಾಪಕ. ಅಂತಾರಾಷ್ಟ್ರೀಯ ಸಂಸ್ಥೆ an international non-profit organisation and ministry.
2007, ರಲ್ಲಿ Attitude is Altitude, ಎಂಬ ಕಂಪೆನಿಯ ಸ್ಥಾಪನೆ a secular motivational speaking company.
ಕಿರು ಚಿತ್ರ The Butterfly Circus. 2010 ರಲ್ಲಿ Method Fest Independent Film Festival, ಅತ್ಯುತ್ತಮ ನಟ ಪ್ರಶಸ್ತಿ ಕಿರುಚಿತ್ರದಲ್ಲಿ 'ವಿಲ್' ಎಂಬ ಪಾತ್ರ ನಿಭಾಯಿಸಿದ್ದಕ್ಕೆ
9 March 2002, ರಲ್ಲಿ ಅವರು ಅಮೇರಿಕಾದ ಕ್ಯಾಲಿಫೋರ್ನಿಯಾಕ್ಕೆ ಹೋದರು.
2008 ರಲ್ಲಿ in McKinney, Texas, Dallas, ಹತ್ತಿರ ಕನಯೆ ಮಿಯಾಹರ ಎಂಬ ಸುಂದರ ಯುವತಿಯನ್ನು ಭೆಟ್ಟಿಯಾದರು. ಈ ಮಿಲನ ಪ್ರೀತಿಯಲ್ಲಿ ಕೊನೆಗೊಂದು ಫೆಬ್ರವರಿ, ೧೨, ೨೦೧೨ ರಲ್ಲಿ ಅವರಿಬ್ಬರೂ ವಿವಾಹವಾದರು. ಈ ದಂಪತಿಗಳಿಗೆ ಆರೋಗ್ಯವಾದ ೪ ಜನ ಮಕ್ಕಳಿದ್ದಾರೆ. ಈ ಪರಿವಾರ ಈಗ ಅಮೇರಿಕಾದ ಕ್ಯಾಲಿಫೋರ್ನಿಯಾ ದಲ್ಲಿ ವಾಸ್ತವ್ಯ ಹೂಡಿದ್ದಾರೆ.
* Life's Greater Purpose' and 'Biography of a Determined Man of Faith'.
* He gradually learnt to use his feet to write, type, play, and shave. He pursued his secondary education from the 'Runcorn State High School', Queensland,
* 1990, Vujicic's determination and courage impressed the world, and he was felicitated with the 'Australian Young Citizen Award'.
* This motivational speaker is best known for his saying, “If God can use a man without arms and legs to be His hands and feet, then He will certainly use any willing heart!”Iq was good.
* In March 2008, Nick appeared in the '20/20' television series aired in the United States, for an interview, taken by presenter Bob Cummings.
* The movie won a lot of accolades, including the first prize awarded by the 'Doorpost Film Project', and the 'Best Short Film' at the 'Method Fest Independent Film Festival', as well as the 'The Feel Good Film Festival'
* In 2010, Nick wrote a book, 'Life Without Limits: Inspiration for a Ridiculously Good Life', under the banner of publishing company, 'Random House'. He also released a DVD titled 'Biography of a Determined Man of Faith'.
* ೨೦೧೧, Vujicic gave a heart-rending speech in Switzerland, at the 'World Economic Forum', for their Annual Meeting's special session, 'Inspired for a Lifetime'
-Sources :
* ಲೇಖಕಿ : ನೇಮಿಚಂದ್ರ, ತುಷಾರ ಮಾಸಪತ್ರಿಕೆ ಪು. ೧೦೮, ಮಾರ್ಚ್, ೨೦೨೧
* ನಿಕ್ ಹೆಸರಿನ ಇಂಗ್ಲಿಷ್ ವಿಕಿಪಿಡಿಯಾನಿಕ್, ವೆಬ್ಸೈಟ್
* Pictures : Wikipedia commons, (Google site)