ನಿಜಕ್ಕೂ ಈ ಸರಕಾರಕ್ಕೆ ಕನ್ನಡತನ ಅಂದರೆ ಏನು ಅಂತ ಗೊತ್ತಿದೆಯಾ?????

Submitted by Chetan.Jeeral on Tue, 06/09/2009 - 15:55

ಸುಮಾರು ಎರೆಡು ದಿನಗಳ ಹಿಂದೆ ಸರಕಾರ ಒಂದು ಸುತ್ತೋಲೆ ಹೊರಡಿಸುತ್ತದೆ ಇದರ ಒಕ್ಕರಣೆ ಹೀಗಿದೆ "ಇನ್ನು ಮೇಲೆ ಯಾವುದೇ ಸರಕಾರೀ ಮತ್ತು ಅರೆ ಸರಕಾರೀ ಕಟ್ಟಡಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬಾರದು". ನೋಡಿ ಇದು ನಮ್ಮ ಕರ್ನಾಟಕದ ಪರಿಸ್ಥಿತಿ. ಇಂತಹ ಘಟನೆಗಳು ಕೇವಲ ಕರ್ನಾಟಕದಲ್ಲಿ ನಡೆಯಲು ಮಾತ್ರ ಸಾಧ್ಯ. ನಿಜಕ್ಕೂ ಈ ಸರಕಾರಕ್ಕೆ ತಾವು ಆಡಳಿತ ನಡೆಸುತ್ತಿರುವುದು ಕರ್ನಾಟಕದಲ್ಲಿ ಅನ್ನೋದು ಮರೆತು ಹೋಗಿದೆ.

ಯಾಕೆ ಹೀಗೆ ಸರಕಾರ ಮಾಡುತ್ತಿದೆ ಅನ್ನೋದಕ್ಕೆ ಅವರೇ ಉತ್ತರ ಹೇಳಬೇಕು. ಬಹುಶಃ ಬಿ ಜೆ ಪಿ ಅನ್ನೋ ಪಕ್ಷಕ್ಕೆ ರಾಷ್ಟ್ರ ಧ್ವಜ ಬಿಟ್ಟು ಬೇರೆ ಧ್ವಜ ಹಾರಿಸೋದು ಸರಿ ಬರೋಲ್ಲ ಅಂತ ಕಾಣುತ್ತೆ. ಈ ಸರಕಾರಕ್ಕೆ ಕನ್ನಡಿಗರ ಭಾವನೆಗಳು ಅರ್ಥ ಮಾಡಿಸೋಕೆ ಹೋರಾಟವನ್ನೇ ಮಾಡಬೇಕು. ಬಹುಶಃ ಈ ಸರಕಾರಕ್ಕೆ ಒಂದು ನಾಡಿನ ಸ್ವಾಭಿಮಾನದ ಸಂಕೇತವಾದ ಭಾವುಟವನ್ನ, ಕನ್ನಡಿಗರ ಹೋರಾಟದ ಪ್ರತೀಕ ವಾದ ಧ್ವಜವನ್ನ ಮತ್ತು ಅದರ ಮಹತ್ವವನ್ನ ಅರಿತುಕೊಳ್ಳುವುದರಲ್ಲಿ ಸೋತಿದೆ ಅಂತ ಹೇಳಬಹುದು. ನಿಜಕ್ಕೂ ಈ ಸರಕಾರದ ಹೊಣೆಗೇಡಿತನಕ್ಕೆ ನಾಚಿಕೆ ಆಗಬೇಕು.

ಈ ಸುತ್ತೋಲೆ ಹೊರ ಬೀಳುತ್ತಿದ್ದಂತೆ ಮೊದಲು ಹೋರಾಟ ಶುರು ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆ, ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟಿಗೆ ಈ ಆದೇಶದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮುಖ್ಯ ಮಂತ್ರಿ ಚಂದ್ರು ಮತ್ತು ಇತರೆ ಕನ್ನಡ ಸಂಘಟನೆಗಳು ಧ್ವನಿ ಗೂಡಿಸಿದ ನಂತರ, ಈ ಸರಕಾರ ಈಗ ಈ ಆದೇಶವನ್ನ ಹಿಂಪಡೆದುಕೊಂಡಿದೆ. ಅದಕ್ಕೆ ಅವರ ಉತ್ತರ ನೋಡಿ "ಇದು ಈ ಸರಕಾರದಲ್ಲಿ ಮಾಡಿರುವ ನಿರ್ಧಾರವಲ್ಲ ಇದನ್ನ ಮುಂಚೆನೇ ಮಾಡಲಾಗಿತ್ತು". ಸರಕಾರಕ್ಕೆ ನಾವು ಕೇಳೋದು, ಇಂತಹ ಒಂದು ಆದೇಶವನ್ನ ಪ್ರಕಟಿಸುವುದಕ್ಕೆ ಮುಂಚೆ ಇದರ ಪರಿಣಾಮ ಏನು ಆಗುತ್ತೆ ಅನ್ನೋ ಅರಿವು ಇರುವುದಿಲ್ಲವೇ.

ಇದಕೆಲ್ಲ ಪರಿಹಾರ ಕರ್ನಾಟಕದ್ದೇ ಆದ ಒಂದು ಪ್ರಾದೇಶಿಕ ಪಕ್ಷ ಹುಟ್ಟಬೇಕು, ಅದು ಕನ್ನಡ, ಕನ್ನಡಿಗರ ಮತ್ತು ಕರ್ನಾಟಕದ ಹಿತಾಸಕ್ತಿಗೆ ಟೊಂಕ್ಕ ಕಟ್ಟಿ ದುಡಿಯುವಂತಹುದಾಗಿರಬೇಕು.

ಹೆಚ್ಚಿನ ಮಾಹಿತಿಗೆ :
http://karave.blogspot.com/2009/06/kannadadwajakke-nirbanda-krv-viroda.html
http://www.kannadaprabha.com/pdf/epaper.asp?pdfdate=6/6/2009

Rating
No votes yet

Comments