ನಿತ್ಯಾನಂದನ ಮಾತಿನಲ್ಲಿದೆಯಂತೆ ಸತ್ಯ!?
"ಬ್ರಹ್ಮಚರ್ಯ ಎನ್ನುವುದು ವಾಸ್ತವಿಕ ಮಿಥ್ಯ
ನಿತ್ಯಾನಂದನ ಮಾತಿನಲ್ಲೂ ಇದೆ ಸ್ವಲ್ಪ ಸತ್ಯ"
ಹೀಗೆಂದು ವಾದಿಸುವ ಬಂಧುಗಳಿಗೆ ಕಿವಿಯಾದೆ
ಸ್ವಾಮಿಯನು ಬೆಂಬಲಿಸುತಿರುವುದಕೆ ದಂಗಾದೆ
ಬ್ರಹ್ಮಚರ್ಯ ಕಡ್ಡಾಯ ಅಲ್ಲ ಅನ್ನುವುದೂ ಸರಿ
ಆದರೆ ನಿತ್ಯಾನಂದ ಆಗಲೇ ಬೇಕಿತ್ತೆ ವ್ಯಭಿಚಾರಿ
ಬ್ರಹ್ಮಚಾರಿಯಾಗಿ ಇರಲಾಗದವನು ಆಗಲಿ ಗೃಹಸ್ಥ
ಕಂಡೆಲ್ಲ ಹೆಣ್ಣುಗಳ ಮೇಲೆ ಹರಿಯ ಬಿಡಲೇಕೆ ಚಿತ್ತ
ವ್ಯಕ್ತಿ ಹೀಗೆಯೇ ಇರಬೇಕೆಂದು ಹೇಳುವುದಿಲ್ಲ ಜನ
ನುಡಿಯಂತೆ ನಡೆಯನ್ನು ನಿರೀಕ್ಷಿಸುವುದು ಅವರ ಮನ
ಆದರಣೀಯನಾದರೆ ಆದರ್ಶಪ್ರಾಯನೂ ಆಗಿರಬೇಕು
ಸದಾ ತೆರೆದ ಪುಸ್ತಕದಂತೆ ಆತನ ಜೀವನ ಇರಬೇಕು
ಮನೆಗೆ ಕನ್ನ ಹಾಕಿದರೊಮ್ಮೆ ಮನಸ್ಸು ಕ್ಷಮಿಸಬಹುದು
ನಂಬಿಕೆ ದ್ರೋಹ ಮಾಡಿದವನನ್ನು ಎಂದಿಗೂ ಕ್ಷಮಿಸದು
********
ಆತ್ರಾಡಿ ಸುರೇಶ ಹೆಗ್ಡೆ
Rating