ನಿತ್ಯ ಕನ್ನಡ ಜ್ಯೋತಿ ಬೆಳಗಲಿ...

ನಿತ್ಯ ಕನ್ನಡ ಜ್ಯೋತಿ ಬೆಳಗಲಿ...

ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ
ಮೇಲಿನಿಂದ ಮೇಲೆ
ನಿತ್ಯ ಸುಲಲಿತ ಬೆಳೆದು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ನಿತ್ಯ ಜ್ಯಾಮ ಕಂಡು
ರೋಡಲಿ ಕಾಲ ಕಳೆದು
ಮನದಿ ನೋವು ಇದ್ದರೂ
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಕಾಣದ ಗೆಳೆಯರ ನೆನೆದು
ಕೈಬೆರಳ ಸ್ನೇಹ ಕರೆದು
ಮನಕೆ ಸ್ಫೂರ್ತಿ ಬಂದು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ನಿತ್ಯ ಬಾಸು ಬಂದು
ಮುಗಿಯದ ಕೆಲಸ ತಂದು
ಎಲ್ಲೇ ಕಳೆದು ಹೋದರೂ
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಯಾವುದೋ ಘಟನೆ ಕಂಡು
ಯಾವುದೋ ಲೋಕದಲಿ ಮಿಂದು
ಏನೇ ಆದರೂ ಮನವು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಕಾಲನ ಪರಿಧಿಯಲ್ಲಿ
ನಲಿವೋ ಕಹಿಯೋ ಬಂದು
ಏನೇ ಅಪ್ಪಿ ನಿಂತರೂ
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಯಾವ ಭಾಷೆ ತಿವಿದರೂ
ಯಾರ ಧೂಳು ಸೋಕಿದರೂ
ಕೆಸರಲಿ ಅರಳಿದ ಕಮಲ
ಆಗಲಿ ನಮ್ಮ ಮನವು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

Rating
No votes yet

Comments