ನಿನಾಗಾಗೆ ಕಾದಿದ್ದೇನೆ !!!

ನಿನಾಗಾಗೆ ಕಾದಿದ್ದೇನೆ !!!

ತುಂಬಾ ದಿನಗಳು ಆಯಿತು ಕಣೆ, ಮತ್ತೇನು ಕಾರಣ ಅಂತ ಕೇಳಬೇಕಾಗಿಲ್ಲ ತಾನೆ, ಇನ್ನೇನು ಇರುತ್ತೆ ನನ್ನಂಥವನಿಗೆ ನಿನ್ನದೇ ಧ್ಯಾನ ಬಿಟ್ಟರೆ. ಹೊರಗೆ ಧೋ ಎಂದು ಮಳೆ ಸುರಿಯುತ್ತಿದೆ. ನನ್ನ ಮನಸ್ಸಿನಲ್ಲಿ ನಿನ್ನದೇ ನೆನಪುಗ ಜಡಿ ಮಳೆ ಹಿಡಿದು ಬಿಟ್ಟಿದೆ. ಹೊರಗೆ ಸುರಿವ ಮಳೆ ಇಳೆಯ ಕೊಳೆಯನೆಲ್ಲ ತೊಳೆದು ನವ ವದುವಿನಂತೆ ಕಂಗೊಳಿಸುವಂತೆ ಮಾಡಿದ್ದರೆ, ನಿನ್ನ ಮಧುರ ನೆನಪುಗಳು ನನ್ನೀ ಮನದಲ್ಲಿ ಬೆಚ್ಚನೆಯ ಭಾವ ತಂದಿಟ್ಟುಈ ಜಗತ್ತಿಗೆ ಹೊಸ ಪ್ರೇಮ ಕಾವ್ಯ ಬರೆಯುವಂತೆ ಕಾಡುತ್ತಿವೆ.

ಸರ್ವ ಸಂಗ ಪರಿತ್ಯಾಗಿಯಾಗಲು & ನೂರು ಜನರ್ ಮಧ್ಯೆ ಇದ್ರು ಓಬ೦ಟಿ ಯಾಗಲೂ ಹೊರಟವನಿಗೆ ನೀನೆ ಸರ್ವಸ್ವ ಎನ್ನಿಸುವಂತೆ ಮಾಡಿದೆ. ಅದೇನು ಮೋಡಿ ಅಡಗಿದೆ ಆ ನಿನ್ನ ಕಂಗಳಲ್ಲಿ .ಹುಣ್ಣಿಮೆ ಚಂದ್ರನ ಬೆಳಕಿಗೆ ಸಮುದ್ರದ ಅಲೆಗಳು ಭೋರ್ಗರೆಯುವಂತೆ , ನನ್ನ ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ಸುಪ್ತ ಭಾವನೆಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಬಿರುಗಾಳಿಯಂತೆ ಅಲೆದು ಕೊಂಡಿದವನು ನಾನು, ಎಲ್ಲರು ಇಷ್ಟ ಪಡುವ ತಂಗಾಳಿಯಗಿಸಿದೆಯಲ್ಲ ಎಲ್ಲಿತ್ತೆ ನಿನ್ನಲ್ಲಿ ಆ ಮಾಯಾ ಶಕ್ತಿ.

ಅದೇಕೆ ಇದ್ದಕಿದ್ದ ಹಾಗೆ ನನ್ನ ಒಬ್ಬನ್ನನ್ನೇ ಒಬ್ಬಂಟಿಯಾಗಿ ಬಿಟ್ಟು ದೂರ ಹೋದೆ. ನಾ ಮಾಡಿದ ತಪ್ಪಾದರೂ ಏನು? ನನ್ನ ಬಾಳಿನ ಬೆಳಕಾಗುವೆಯ ಎಂದು ಕೇಳಿದ್ದೆ ತಪ್ಪಯಿತಾ?.

ನೀ ಬರುವ ಹಾದಿಯಲ್ಲಿ ನಿನ್ನದೇ ನೀರಿಕ್ಷೆಯಲ್ಲಿ..... ಹಿಡಿ ಎಷ್ಟು ಹೃದಯದಲ್ಲಿ ಸಾಗರದಸ್ಟು ಪ್ರೀತಿ ತುಂಬಿ ನಿನಾಗಾಗೆ ಕಾದಿದ್ದೇನೆ....

Rating
No votes yet

Comments