ನಿನ್ನಂತೆ ಜಗವಿಲ್ಲ (ಶ್ರೀ ನರಸಿಂಹ 67)
ಬಯಸದಿರು ಪರರಿಂದ ಏನೊಂದನು ನೀ ಜೀವನದಲಿ
ಬಯಸಿದುದು ಸಿಗದಿರೆ ಕುಗ್ಗುವುದು ಮನ ನೋವಿನಲಿ
ಸತಿಯೂ,ಸಖರು,ಬಂದು,ಮಕ್ಕಳೆಂದೆನುವ ನಿನ್ನವರು
ಕೂಡಿ ಬಾಳಿದರು, ನಿನ್ನಿಚ್ಚೆಯಂತೆ ಅವರಾರು ಇರರು ..
ಜಗವೆಲ್ಲ ನನ್ನಂತೆ ನಡೆಯಬೇಕೆನುವ ಹಂಬಲವೇಕೆ
ನಿನ್ನಂತೆ ಪರರು ಬಯಸುವರೆನುವುದ ತಿಳಿದಿಲ್ಲವೇಕೆ
ಪರ ಮನದ ಭಾವನೆಗಳನು ನೀ ಮೊದಲರಿಯಬೇಕು
ಮಾತನಾಡುವ ಮುನ್ನ ಜಿಹ್ವೆಯ ಹಿಡಿತದಲಿರಿಸಬೇಕು..
ಬಿಟ್ಟು ಹೋಗಬೇಕೆಲ್ಲವನು,ಎಲ್ಲರನು ಕೊಟ್ಟಿರುವ ಈ ಜಗಕೆ
ನಡೆವುದೆಲ್ಲ ಶ್ರೀ ನರಸಿಂಹನಿಚ್ಚೆಯೆಂಬುದರಿವಾಗಲಿ ಮನಕೆ
Rating
Comments
``ಜಗವೆಲ್ಲ ನನ್ನಂತೆ
``ಜಗವೆಲ್ಲ ನನ್ನಂತೆ ನಡೆಯಬೇಕೆನುವ ಹಂಬಲವೇಕೆ ನಿನ್ನಂತೆ ಪರರು ಬಯಸುವರೆನುವುದ ತಿಳಿದಿಲ್ಲವೇಕೆ`` >>
ಸತ್ಯವಾದ ಮಾತು, ಜಗವೆಲ್ಲ ನನ್ನ ಭಾವನೆಗೆ ಸ್ಪ0ದಿಸಲೆ0ದು ಆಶಿಸುತ್ತೇವೆ. ಅದೇ ರೀತಿ ಜಗತ್ತೂ ನಮ್ಮಿ0ದ ಬಯಸುತ್ತದೆ ಎ0ಬುದ ಮರೆತು ಬಿಡಿತ್ತೇವೆ. ಉತ್ತಮ ವಿಚಾರ, ಧನ್ಯವಾದಗಳು ಸತೀಶ್ ಅವರೆ,
ರಾಮೋ.
In reply to ``ಜಗವೆಲ್ಲ ನನ್ನಂತೆ by RAMAMOHANA
ಧನ್ಯವಾದಗಳು ರಾಮಮೋಹನ್ ರವರೇ ....
ಧನ್ಯವಾದಗಳು ರಾಮಮೋಹನ್ ರವರೇ .......ಸತೀಶ್