ನಿನ್ನೆಗಿಲ್ಲ ಉಳಿಗಾಲ
ಪುನಃ ಮಳೆಗೆ ಒದರಿಕೊಂಡು
ಮೈದಳೆದಿರುವ ರಸ್ತೆಯ ಹೊಂಡಗಳು
ಬದುಕಿಡೀ ಬಳಲಿದ
ಯಾರೋ ಮುದಿಯನ ಗೋಳಿನಂತೆ
ಮತ್ತದೇ ಕಥೆಯನ್ನು ಸಾರುತ್ತಿವೆ
***
ಕಪ್ಪಾಗಿದ್ದ ಕೂದಲುಗಳೆಲ್ಲಾ
ಬಿಳಿಯಾಗಿ ಕೆಂಚಾಗಿ ಕಪ್ಪಾಗಿ
ಗಾರ್ನಿಯರು ಮೆಲ್ಲಗೆ ನಗುತ್ತಿದೆ.
ಅಲ್ಲಲ್ಲಿ ಹೊಂಚು ಹಾಕುತ್ತಿದ್ದ
ಚಿಗುರು ಮೀಸೆಗಳೀಗ ದಪ್ಪಗೆ ಬೆಳೆದಿವೆ.
***
ರೋಡು, ಅಂಗಡಿಗಳಿಂದ
ಕೆಲವು ಪರಿಚಿತ ದೇಹಗಳು ಗುಳೇ ಎದ್ದಿವೆ
ಇನ್ನೂ ಅಂಗಡಿ ರೆಸ್ಟೋರೆಂಟುಗಳಲ್ಲಿ
ನೆಲೆಯಾಗಿರೋ ಕೆಲವು ಮುಖಗಳು
ಮುಂಗಟ್ಟುಗಳಾಗಿ ಸ್ಥಾಪಿತವಾಗಿವೆ
***
ಗುರುತಿನ ಮುಖಗಳಲ್ಲೂ ಇಂದು ಅನುಮಾನ
ಪರಿಚಿತವೆನಿಸುವ ಗೊತ್ತಿರದ ಮುಖಗಳಲ್ಲೂ
ಯಾರು ಯಾರನ್ನೋ ನೆನಪಿಸುವ ನಗುವಿದೆ
ಎದುರಿಗೆ ಬೆಳೆದ ಅಕೇಶಿಯಾ ಮರಗಳ ಮಡುವಿನಲ್ಲಿ
ನಿನ್ನ ಮನೆ ಅನಾಥವಾಗಿ ಬಿದ್ದಿದೆ
***
ಮಳೆಗೆ ಮೈದಳೆದಿರುವ ಹೊಂಡಗಳು
ಯಾರೋ ಮುದಿಯನ ಅಳಲಿನಂತೆ
ಮತ್ತದೇ ಕಥೆಯನ್ನು ಹೇಳುತ್ತಿವೆ,
ಬದಲಾಗುತ್ತಿದೆ ಕಾಲ ಎಂದು ಹೇಳುತ್ತಿವೆ
ನಿನ್ನೆಗಿಲ್ಲ ಉಳಿಗಾಲ ಎಂದು ಗೋಳಿಡುತ್ತಿವೆ
Rating
Comments
ಉ: ನಿನ್ನೆಗಿಲ್ಲ ಉಳಿಗಾಲ
In reply to ಉ: ನಿನ್ನೆಗಿಲ್ಲ ಉಳಿಗಾಲ by ksraghavendranavada
ಉ: ನಿನ್ನೆಗಿಲ್ಲ ಉಳಿಗಾಲ
ಉ: ನಿನ್ನೆಗಿಲ್ಲ ಉಳಿಗಾಲ
In reply to ಉ: ನಿನ್ನೆಗಿಲ್ಲ ಉಳಿಗಾಲ by raghusp
ಉ: ನಿನ್ನೆಗಿಲ್ಲ ಉಳಿಗಾಲ
ಉ: ನಿನ್ನೆಗಿಲ್ಲ ಉಳಿಗಾಲ
In reply to ಉ: ನಿನ್ನೆಗಿಲ್ಲ ಉಳಿಗಾಲ by Chikku123
ಉ: ನಿನ್ನೆಗಿಲ್ಲ ಉಳಿಗಾಲ
ಉ: ನಿನ್ನೆಗಿಲ್ಲ ಉಳಿಗಾಲ
In reply to ಉ: ನಿನ್ನೆಗಿಲ್ಲ ಉಳಿಗಾಲ by vani shetty
ಉ: ನಿನ್ನೆಗಿಲ್ಲ ಉಳಿಗಾಲ