ನಿನ್ನೆ(೧೭-೦೪-೨೦೦೬)ಯ ನನ್ನ ಓದು

ನಿನ್ನೆ(೧೭-೦೪-೨೦೦೬)ಯ ನನ್ನ ಓದು

ನಿನ್ನೆಯ ಪ್ರಜಾವಾಣಿಯಲ್ಲಿ ಗಮನಿಸಿದ ವಿಷಯಗಳು :
೧. ರಾಹುಲ್ ದ್ರಾವಿಡ್ ಮತ್ತು ರಾಬಿನ್ ಉತ್ತಪ್ಪ ಇತ್ತೀಚೆಯ ಕ್ರಿಕೆಟ್ ಪಂದ್ಯವಾಡುವಾಗ ರಾಜ್ ನಿಧನದ ಶೋಕಸೂಚಕವಾಗಿ ಕಪ್ಪು ಬ್ಯಾಂಡ್ ಧರಿಸಿದ್ದರು
೨. ಕನ್ನಡ ಪಠ್ಯಕ್ರಮದಲ್ಲಿ ಕೇಶಿರಾಜನ ಶಬ್ದಮಣಿದರ್ಪಣದ ಅಧ್ಯಯನ ಕೈಬಿಡಲು ಶಿಕ್ಷಣತಜ್ಞರು ಸೂಚಿಸಿದ್ದಾರೆ .
೩. ಕಾಲೇಜುಗಳಲ್ಲಿ ಪದವಿಪೂರ್ವ ತರಗತಿಗಳಲ್ಲಿ ಕನ್ನಡವನ್ನು ಆಡಳಿತಗಾರರು ಕೈಬಿಡುತ್ತಿದ್ದಾರೆ.

ಮೇ ೨೦೦೬ ಕಸ್ತೂರಿಯಲ್ಲಿ ಭಾಷೆಯ ಕುರಿತಾದ ಲೇಖನ ಇರುವದು . ಅದರಲ್ಲಿ ಒಂದು ಭಾಷೆಯ ಜನ ಇನ್ನೊಂದು ಭಾಷೆಯನ್ನು ಬಳಸಲಾರಂಭಿಸಿದಾಗ ತಮ್ಮ ಭಾಷೆಯ ಶೈಲಿಯನ್ನು , ಪಡೆನುಡಿಗಳನ್ನು , ವೈಶಿಷ್ಟ್ಯಗಳನ್ನು ಇನ್ನೊಂದು ಭಾಷೆಯಲ್ಲಿ ಹೇಗೆ ಬಳಕೆಗೆ ತರುತ್ತಾರೆ ಎಂಬ ಕುತೂಹಲಕರ ವಿಷಯವನ್ನು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ.

Rating
No votes yet