ನಿನ್ನೆ ಸಂಜೆ ಟಿ.ವಿ.೯ ನೋಡಿದ್ರಾ ... ?

ನಿನ್ನೆ ಸಂಜೆ ಟಿ.ವಿ.೯ ನೋಡಿದ್ರಾ ... ?

ನಿನ್ನೆ ಅಂದರೆ ೧೮.೦೨.೨೦೦೯ ರ ಸಂಜೆ ೬.೩೦ ಕ್ಕೆ ಟಿವಿ ೯ ರಲ್ಲಿ ಒಂದು ವಿಶೇಷ ಕಾರ್ಯಕ್ರಮ ಪ್ರಸಾರವಾಯ್ತು. ಮೈಸೂರಿನ ಬಳಿಯ ಹಳ್ಳಿಯೊಂದರಲ್ಲಿ ನೆಲೆನಿಂತ ವಿವೇಕ್ ಕಾರ್ಯಪ್ಪ ಮತ್ತು ಜೂಲಿ ಕಾರ್ಯಪ್ಪ ಅವರ ಇಬ್ಬರು ಮಕ್ಕಳೊಂದಿಗೆ ವ್ಯವಸಾಯಕ್ಕೆ ಶರಣಾಗಿದ್ದರ ಕಥೆ. ಮೂಲತಃ ಕೊಡಗಿನವರಾದ ವಿವೇಕ್ ಕಾರ್ಯಪ್ಪ ಮತ್ತು ಇಟಲಿಯವರಾದ (ಮೂಲ ಭಾರತೀಯ) ಜೂಲಿ ಇಬ್ಬರೂ ದೆಹಲಿಯಲ್ಲಿ ಪದವಿ ಪಡೆದರೂ ಐಟಿ ಬಿಟಿ ಗಳಿಗೆ ಮನಸೋಲದೆ, ನಗರದ ಸಹವಾಸವನ್ನು ತೊರೆದು ಬಂದು ಹಳ್ಳಿಯಲ್ಲಿ ನೆಲೆಸಿದ್ದಾರೆ. ನೈಸರ್ಗಿಕ ಕೃಷಿಯಲ್ಲಿ ೩೦ ಕ್ಕೂ ಹೆಚ್ಚು ಫಸಲುಗಳನ್ನು ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. ಗೊಬ್ಬರ ತಯಾರಿಕೆ, ಬಿತ್ತನೆ ಬೀಜ ತಯಾರಿಕೆ ಎಲ್ಲದರಲ್ಲೂ ನೈಸರ್ಗಿಕತೆಯನ್ನೇ ಉಪಯೋಗಿಸುತ್ತಿದ್ದಾರೆ. ಇವತ್ತಿನ ದಿನಮಾನದಲ್ಲಿ ಹಳ್ಳಿಯ ರೈತ ಸಮುದಾಯ ನಗರದ ಮೋಡಿಗೆ ಒಳಗಾಗುತ್ತಿರುವ ಈ ಸನ್ನಿವೇಶದಲ್ಲಿ ಇಂಥವರ ಸಂಖ್ಯೆ ಅಪರೂಪ. ಕಾರ್ಯಕ್ರಮ ವೀಕ್ಷಿಸಿದವರಲ್ಲಿ ಕನಿಷ್ಟ ೧೦ ಜನರಾದರೂ ಹಳ್ಳಿಯನ್ನು ತೊರೆಯದೆ ವ್ಯವಸಾಯವನ್ನು ಮರೆಯದೆ , ನಗರದೆಡೆಗೆ ಓಡದೆ ನೆಲೆನಿಂತರೆ ಅದಕ್ಕಿಂತ ಸಾರ್ಥಕತೆ ಬೇರೊಂದಿಲ್ಲ. ನಿಜವಾದ ಮಣ್ಣಿನ ಮಕ್ಕಳಾಗಿ ವ್ಯವಸಾಯ ಮಾಡುತ್ತಿರುವ ಈ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ.

Rating
No votes yet

Comments